ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ  ತೆಂಗಿನಗರಿಯ ಪ್ರಚಾರ ಫಲಕ ಸ್ಥಾಪನೆ

ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ನ.೨ರಿಂದ ೪ರ ತನಕ ಜರಗಲಿದ್ದು, ಇದ ರಂಗವಾಗಿ ತೆಂಗಿನಗರಿಯ ನಾಮಫಲಕ ಗಳನ್ನು ಬದಿಯಡ್ಕ ಪೇಟೆಯಲ್ಲಿ ಸ್ಥಾಪಿಸ ಲಾಯಿತು. ಪ್ರಚಾರ ಸಮಿತಿ ಹಾಗೂ ಗ್ರೀನ್ ಪ್ರೊಟೋಕೋಲ್ ಸಮಿತಿ ನೇತೃತ್ವದಲ್ಲಿ ಪ್ರಚಾರ ಫಲಕಗಳನ್ನು ಸ್ಥಾಪಿಸಲಾಗಿದೆ. ಪ್ರಾಂಶುಪಾಲ ಎಂ. ಶ್ರೀಕೃಷ್ಣ, ಶ್ಯಾಮ್ ಪ್ರಸಾದ್ ಮಾನ್ಯ, ಹಮೀದ್ ಕೆಡೆಂಜಿ, ಆನಂದ ಮವ್ವಾರ್, ಶಾಫಿ ಚೂರಿಪಳ್ಳ, ಅಪ್ಪುರಾಜ್ ಬದಿಯಡ್ಕ, ಲತೀಫ್ ಮಾರ್ಪನಡ್ಕ, ಚಂದ್ರನ್ ಪೊಯ್ಯೆಕಂಡ, ಉಣ್ಣಿಕೃಷ್ಣನ್ ಮಾಸ್ತರ್, ರಾಜೇಶ್ ಮಾಸ್ತರ್, ಪ್ರಸಾದ್ ಮಾಸ್ತರ್, ನಿರಂಜನ ರೈ ಪೆರಡಾಲ, ಅಧ್ಯಾ ಪಕರಾದ ನಾರಾಯಣ ಮುರಿಯಂಕೂಡ್ಲು, ನಟರಾಜ ಪಟ್ಟಾಜೆ ಉಪಸ್ಥಿತರಿದ್ದರು.

You cannot copy contents of this page