ಮಂಜೇಶ್ವರ: ಉಪ್ಪಳ ಐಲ ಬೋವಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಚಾಂಪ್ಯನ್ ಪಟ್ಟ ಗಳಿಸಿ ವಾಮಂಜೂರು ಜಿಎಲ್ಪಿಎಸ್ ಶಾಲೆ ವಿದ್ಯಾರ್ಥಿಗಳು ಶಾಲೆಯ ಘನತೆ ಹೆಚ್ಚಿಸಿದ್ದಾರೆ. ವೃತ್ತಿ ಪರಿಚಯ ಮೇಳದ ಒಟ್ಟು ೧೦ ವಿಭಾಗಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ೫ರಲ್ಲಿ ವಿವಿಧ ಬಹುಮಾನಗಳನ್ನು ಪಡೆದಿದ್ದು, ಉಳಿದ ೫ರಲ್ಲಿ ಎ ಗ್ರೇಡ್ ಗಳಿಸಿ ಉಪಜಿಲ್ಲೆಯಲ್ಲೇ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ವಿಜಯದ ಸಂಭ್ರಮ ಹೆಚ್ಚಿಸುವುದಕ್ಕಾಗಿ ವಿಜಯೋತ್ಸವ ಮೆರವಣಿಗೆ ನಡೆಸಲಾಗಿದ್ದು, ಮಂಜೇಶ್ವರ, ಹೊಸಂಗಡಿ ಪೇಟೆ ಮೂಲಕ ಸಾಗಿದ ವಿಜಯೋತ್ಸವದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಭಾಗವಹಿಸಿದರು. ಪಿಟಿಎ ಅಧ್ಯಕ್ಷ ತಾಜುದ್ದೀನ್, ಮುಖ್ಯೋಪಾಧ್ಯಾಯಿನಿ ಝುಹರಾ, ಅಭಿವೃದ್ಧಿ ಸಮಿತಿ ಕೋಶಾಧಿಕಾರಿ ರಾಘವನ್, ನಿವೃತ್ತ ಅಧ್ಯಾಪಿಕೆ ಸುಬೈದ, ಶಿಕ್ಷಕವೃಂದ, ಪಿಟಿಎ ಸಮಿತಿ ಸದಸ್ಯರು ಸಹಕರಿಸಿದರು. ಈ ವೇಳೆ ಪಿಟಿಎ ಅಧ್ಯಕ್ಷ ಹಾಗೂ ಹೊಸಂಗಡಿ ಬ್ರದರ್ಸ್ ಕ್ಲಬ್ ನೇತೃತ್ವದಲ್ಲಿ ತಂಪು ಪಾನೀಯ ವಿತರಿಸಲಾಯಿತು.






