ಕಾಸರಗೋಡು: ನಾಟಕ ನಟ, ಎಲ್‌ಐಸಿ ಏಜೆಂಟ್ ಆಗಿದ್ದ ಓಲ್ಡ್ ಪ್ರೆಸ್ ಕ್ಲಬ್ ಜಂಕ್ಷನ್ ಬಳಿ ನಿವಾಸಿ ಕೆ. ನಾಗರಾಜ (69) ನಿಧನ ಹೊಂದಿದರು. ಕೆನರಾ ಬ್ಯಾಂಕ್‌ನ ಕಲೆಕ್ಷನ್ ಏಜೆಂಟ್ ಆಗಿದ್ದ ಇವರು ಯವನಿಕ ಕಲಾವೇದಿಯ ನಾಟಕ ನಟರೂ ಆಗಿದ್ದರು. ತಂದೆ ಶ್ರೀನಿವಾಸ, ತಾಯಿ ಗಿರೀಜ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಆಶಾ, ಪುತ್ರಿ ಭಾಗ್ಯಶ್ರೀ (ಮಂಗಳೂರು ಎಸ್‌ಡಿಎಂ ಕಾಲೇಜಿನ ಎಂ.ಬಿ.ಎ.ವಿದ್ಯಾರ್ಥಿನಿ), ಸಹೋದರಿ ಚಂದ್ರಾವತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.




