ಮುಳ್ಳೇರಿಯದಲ್ಲಿ ಕುಟುಂಬ ಆರೋಗ್ಯ  ಕೇಂದ್ರ ಲ್ಯಾಬ್ ಕಟ್ಟಡ ಉದ್ಘಾಟನೆ 9ರಂದು

ಮುಳ್ಳೇರಿಯ: ಇಲ್ಲಿನ ಕುಟುಂಬ ಆರೋಗ್ಯ ಕೇಂದ್ರದ ನೂತನ ಲ್ಯಾಬ್ ಕಟ್ಟಡವನ್ನು  ಈ ತಿಂಗಳ 9ರಂದು ಸಂಜೆ 4 ಗಂಟೆಗೆ   ಆರೋಗ್ಯ ಇಲಾಖೆ ಸಚಿವ ಕೆ. ಮುರಳೀಧರನ್ ಉದ್ಘಾಟಿಸುವರು.  ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸುವರು. ಲ್ಯಾಬನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಸಭಾಂಗಣವನ್ನು ಶಾಸಕ ಕೆ. ನೀಲಕಂಠನ್ ಉದ್ಘಾಟಿಸುವರು. ಪಾಲಿಯೇಟಿವ್ ಕೊಠಡಿಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಎಂಡೋಸಲ್ಫಾನ್ ಕೊಠಡಿಯನ್ನು ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ಉದ್ಘಾಟಿಸುವರು.

ಕಾರಡ್ಕ ಪಂ. ಅಧ್ಯಕ್ಷೆ ಜನನಿ ಎಂ, ಬ್ಲೋಕ್ ಪಂ. ಅಧ್ಯಕ್ಷ ಬಾಲನ್, ಎನ್.ಎ. ನೆಲ್ಲಿಕುನ್ನು, ಜಿಲ್ಲಾ ಪಂ. ಸದಸ್ಯೆ ವತ್ಸಲ ಒ, ಕಾರಡ್ಕ ಪಂ. ಉಪಾಧ್ಯಕ್ಷ ದಾಮೋದರ ರಾವ್, ಚಂದ್ರನ್ ವಿ, ವಸಂತಿ ಎ. ಸಹಿತ ಹಲವು ಮಂದಿ ಉಪಸ್ಥಿತರಿರುವರು. ಕಾರಡ್ಕ ಬ್ಲೋಕ್ ಎಲ್‌ಎಸ್‌ಜಿಡಿ ಸಬ್ ಡಿವಿಶನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ತುಳಸಿ ಎನ್.ಟಿ. ವರದಿ ಮಂಡಿಸುವರು.

You cannot copy contents of this page