ಬದಿಯಡ್ಕ: ವಿಶ್ವ ಹಿಂದು ಪರಿಷತ್, ಬಜರಂಗ ದಳ ಬದಿಯಡ್ಕ ಪ್ರಖಂಡ ಸಮಿತಿಯ ಆಶ್ರಯದಲ್ಲಿ ಗೋಪೂಜಾ ಕಾರ್ಯಕ್ರಮ ನ. 8ರಂದು ಜರಗಲಿದೆ. ಸಾಯಂಕಾಲ ೩.೩೦ ಕ್ಕೆ ಬೋಳುಕಟ್ಟೆ ಮೈದಾನದಿಂದ ಬೃಹತ್ ಶೋಭಾಯಾತ್ರೆ ಹೊರಡಲಿದ್ದು, ಬದಿಯಡ್ಕ ಬಸ್ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಗೊಳ್ಳಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮವನ್ನು ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಕೇಂದ್ರ ಮಾಜಿ ಸಚಿವ ಬಸವನ ಗೌಡ ಆರ್ ಪಾಟೀಲ್ ದಿಕ್ಸೂಚಿ ಭಾಷಣ ಮಾಡುವರು. ಹರಿಪ್ರಸಾದ್ ರೈ ಪುತ್ರಕಳ ಅಧ್ಯಕ್ಷತೆ ವಹಿಸುವರು. ಡಾ. ಕೇಶವ ಮೂರ್ತಿ ಟಿ.ಆರ್, ಸಂತೋಷ್ ಕುಮಾರ್ ರೈ, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಸುರೇಶ್ ಶೆಟ್ಟಿ ಪರಂಕಿಲ, ಶಿವರಾಯ ಭಟ್, ಸುನಿಲ್ ಕಿನ್ನಿಮಾಣಿ, ರೂಪೇಶ್ ಶೆಟ್ಟಿ ವಳಮಲೆ, ಪ್ರಕಾಶ್ ಸಿ.ಎಚ್., ಇಂದುಶೇಖರ ಉಪಸ್ಥಿತರಿರುವರು. ವಿವಿಧ ಭಜನಾ ಸಂಘಗಳಿAದ ಭಜನೆ, ವಿವಿಧ ಕುಣಿತ ಭಜನಾ ಸಂಘಗಳಿAದ ಕುಣಿತ ಭಜನೆ ನಡೆಯಲಿದೆ.





