ಮಂಜೇಶ್ವರ ತಾಲೂಕು ಕಚೇರಿ ದಾರಿಯಲ್ಲಿ ತ್ಯಾಜ್ಯರಾಶಿ: ಸಾರ್ವಜನಿಕರಿಗೆ ಸಮಸ್ಯೆ

ಉಪ್ಪಳ: ಉಪ್ಪಳ ಪೇಟೆಯ ಹೃದಯ ಭಾಗದಲ್ಲಿ ಖಾಸಗಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಮಂಜೇಶ್ವರ ತಾಲೂಕು ಕಚೇರಿಗೆ ತೆರಳುವ ಮೆಟ್ಟಿಲು ಹಾಗೂ ಪರಿಸರದಲ್ಲಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯ ರಾಶಿಯಿಂದ ಸಾರ್ವಜನಿಕರು ಸಮಸ್ಯೆಗೀಡಾಗಿದ್ದಾರೆ. ಕಚೇರಿ ಸಹಿತ ಈ ಪರಿಸರದ ವ್ಯಾಪಾರ ಸಂಸ್ಥೆಗಳಿಗೆ ತೆರಳಲು ಜನರು ಸಂಕಷ್ಟ ಪಡಬೇಕಾದ ಅವಸ್ಥೆಯಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕಳೆದ ಹಲವು ದಿನಗಳಿಂದ ತ್ಯಾಜ್ಯ ರಾಶಿ ಕಂಡು ಬರುತ್ತಿದ್ದರೂ ತೆರವುಗೊಳಿಸಲು ಮುಂದಾಗಲಿಲ್ಲ. ಸುಮಾರು 12 ವರ್ಷಗಳಿಂದಲೂ ತಾಲೂಕು ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಎರಡನೇ ಅಂತಸ್ತಿನಲ್ಲಿ ಕಾರ್ಯಾಚರಿಸುವ ತಾಲೂಕು ಕಚೇರಿಗೆ ಮಹಿಳೆಯರು, ವೃದ್ದರಿಗೆ ಮೆಟ್ಟಲು ಹತ್ತಿ ಹೋಗುವುದೇ ಸಮಸ್ಯೆಯಾಗಿದೆ. ತಾಲೂಕು ಕಚೇರಿ ಸಹಿತ ಪರಿಸರ ಶುಚಿತ್ವದ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You cannot copy contents of this page