ಬಿದ್ದು ಸಿಕ್ಕಿದ ಚಿನ್ನಾಭರಣ ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ವ್ಯಾಪಾರಿ ಸಹಿತ ಇಬ್ಬರಿಗೆ ಅಭಿನಂದನೆ

ಉಪ್ಪಳ: ಬಿದ್ದು ಸಿಕ್ಕಿದ ಚಿನ್ನಾಭರಣ ವನ್ನು ಅದರ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ  ವ್ಯಾಪಾರಿ ಸಹಿತ ಇಬ್ಬರು  ಪ್ರಾಮಾಣಿಕತೆ ಮೆರೆದಿ ದ್ದಾರೆ.  ಹೊಸಂಗಡಿಯಲ್ಲಿ ಬೇಕರಿ ಮಾಲಕನಾಗಿರುವ ಸಮೀರ್ ಹಾಗೂ ವಾಮಂಜೂರು ಕಜೆ ನಿವಾಸಿ ಅಹಮ್ಮದ್ ಮೋಣು ಎಂಬಿವರು ಪ್ರಾಮಾಣಿಕತೆ ಮೆರೆದಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 ಹೊಸಂಗಡಿಯಲ್ಲಿರುವ ಸಮೀರ್‌ರ ಬೇಕರಿಗೆ ಮೊನ್ನೆ ಸಂಜೆ ಬಂದಿದ್ದ ಅಹಮ್ಮದ್ ಮೋಣು ಅವರಿಗೆ ಚಿನ್ನಾಭರಣ ಒಳಗೊಂಡ ಪ್ಯಾಕೆಟೊಂ ದು ಅಲ್ಲಿ ಬಿದ್ದು ಸಿಕ್ಕಿತ್ತು.   ಅದನ್ನು ಅವರು  ಸಮೀರ್‌ರಿಗೆ ನೀಡಿದ್ದರು. ಸಮೀರ್ ಅದನ್ನು ಮಂಜೇಶ್ವರ ಪೊಲೀಸ್ ಠಾಣೆಗೆ ತಲುಪಿಸಿದ್ದರು. ಬಳಿಕ ಚಿನ್ನಾಭರಣದ ವಾರಸುದಾರರು ಯಾರೆಂದು ಶೋಧ ನಡೆಸಿದಾಗ ಅದು ಉಪ್ಪಳದ ಫೌಸಿಯರದ್ದೆಂದು ತಿಳಿದು ಬಂತು. ಇದರಂತೆ ಫೌಸಿಯರನ್ನು ನಿನ್ನೆ ಸಂಜೆ ಪೊಲೀಸ್ ಠಾಣೆಗೆ ಕರೆಸಿ ಅಹ ಮ್ಮದ್ ಮೋಣು ಅವರ ಮುಖಾಂತರ ಚಿನ್ನಾಭರಣವನ್ನು ಹಸ್ತಾಂತರಿಸಲಾ ಯಿತು. ಈ ವೇಳೆ ಎಸ್‌ಐಗಳಾದ ಜಿಇಒ ಸದಾನಂದನ್,ಗಿರೀಶ್ ಬಾಬು ಮೊದಲಾದವರು ಉಪಸ್ಥಿತರಿದ್ದರು. ಚಿನ್ನಾಭರಣ ಮರಳಿ ವಾರಸುದಾರರಿಗೆ ಲಭಿಸಲು ಸಹಾಯವಾದ ಅಹಮ್ಮದ್ ಮೋಣು ಹಾಗೂ ಸಮೀರ್‌ರನ್ನು ಪೊಲೀಸರು ಹಾಗೂ ವಾರಸುದಾರರು ಅಭಿನಂದಿಸಿದ್ದಾರೆ.

You cannot copy contents of this page