ಕಾಸರಗೋಡು: ರಾಜ್ಯ ವಿರೋಧ ಪಕ್ಷ ನಾಯಕ ಹಾಗೂ ಸಿಪಿಎಂ ಪೋಲಿಟ್ ಬ್ಯೂರೋ ಸದಸ್ಯರೂ ಆಗಿರುವ ಪಿಣರಾಯಿ ವಿಜಯನ್ ಈ ತಿಂಗಳ 11ರಂದು ಜಿಲ್ಲೆಯಲ್ಲಿ ಹಲವು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅಂದು ಬೆಳಿಗ್ಗೆ 1೦.3೦ಕ್ಕೆ ಚೆರುವತ್ತೂ ರಿನ ಇಎಂಎಸ್ ಓಪನ್ ಆಡಿಟೋರಿ ಯಂನಲ್ಲಿ ಆರಂಭಗೊಳ್ಳಲಿರುವ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಅಸೋಸಿಯೇಶನ್ನ ಸಾಮಾಜಿಕ ನ್ಯಾಯಕ್ಕಾಗಿ ಮಹಿಳಾ ಶಕ್ತಿ ಕಾರ್ಯಕ್ರಮವನ್ನು ಪಿಣರಾಯಿ ವಿಜಯನ್ ಉದ್ಘಾಟಿಸುವರು. ನಂತರ 11.3೦ಕ್ಕೆ ಮಡಿಕೈ ಚತುರ ಕಿನರ್ನಲ್ಲಿ ನಡೆಯುವ ರಾಜಕೀಯ ಸೃಷ್ಟೀಕರಣ ಸಾರ್ವಜನಿಕ ಸಭೆಯ ಉದ್ಘಾಟನೆ ಯನ್ನು ಅವರು ನೆರವೇರಿಸುವರು. ಅಪರಾಹ್ನ 3 ಗಂಟೆಗೆ ಪಡನ್ನಕ್ಕಾಡ್ ಅಸ್ಟೋ ಕನ್ವೆನ್ಶನ್ ಸೆಂಟರ್ನಲ್ಲಿ ವಿ ಆರ್ ಇನ್ ದಿ ಮಾರ್ಚ್ ಎಂಬ ಹೆಸರಲ್ಲಿ ನಡೆಯುವ ಯುವಜನ ವಿದ್ಯಾರ್ಥಿ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸುವರು. ೪ ಗಂಟೆಗೆ ಸಿಪಿಎಂನ ಚಾಲಿಂಗಾಲ್ ಲೋಕಲ್ ಸಮಿತಿ ಕಚೇರಿ ಕಟ್ಟಡ (ಕೊಡಿಯೇರಿ ಭವನ್)ನ ಉದ್ಘಾಟನೆಯನ್ನು ಅವರು ನೆರವೇರಿಸುವರು.





