ಕಾಸರಗೋಡು: ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಮಂದಿರದಲ್ಲಿ ಮಂಡಲಪೂಜೆ ಹಾಗೂ ಮಕರ ಸಂಕ್ರಮಣದ ತೀರ್ಥ ಯಾತ್ರೆಗೆ ಮಂದಿರದ ಗುರುಸ್ವಾಮಿ ಬಾಲಕೃಷ್ಣ ಭವಾನಿಶಂಕರ, ಕರುಣಾಕರ, ಪುರುಷೋತ್ತಮ, ಅನಂತರಾಜ ಅವರು ಅಯ್ಯಪ್ಪ ಭಕ್ತರಿಗೆ ಮುದ್ರಾ ಧಾರಣೆ ಗೈದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಸುರೇಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಧನಂಜಯ ಮಾನ್ಯ, ಕಾರ್ಯದರ್ಶಿ ಮಹೇಶ್ ಮಾಳವಿಕ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು, ಭಕ್ತರು ಭಾಗವಹಿಸಿದರು.





