ಕಾಸರಗೋಡು: ಪ್ರೀ ಮೆಟ್ರಿಕ್ ಹಾಸ್ಟೆಲ್ ಮತ್ತು ಟ್ರೈಬಲ್ ಎಕ್ಸ್‌ಟೆನ್‌ಶನ್ ಕಚೇರಿಯಲ್ಲಿ ನಡೆದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿ ಮಾಜಿ ಟ್ರೈಬಲ್ ಎಕ್ಸ್‌ಟೆನ್‌ಷಲ್ ಆಫೀಸರ್ ಆಗಿದ್ದು, ಈಗ ಕುಂಡಂಗುಳಿ ಸರಕಾರಿ ಸಾವಿತ್ರಿ ಬಾಯಿ ಫುಲೆ ಮೆಮೋರಿಯಲ್ ಆಶ್ರಮ ಶಾಲೆಯ ಮೆನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಶಾಂತ್ ಕುಮಾರ್ ಕುಟ್ಟಪ್ಪನೆರನ್ನು ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ನಿರ್ದೇಶಕ ಡಾ. ಬಿನು ಫ್ರಾನ್ಸಿಸ್ ತನಿಖಾ ವಿಧೇಯವಾಗಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಸಪ್ಲೈಕೋದಿಂದ ಸಾಮಗ್ರಿಗಳನ್ನು ಖರೀದಿಸಿದ ವತಿಯಿಂದ ಅಪರಿಮಿತವಾದ ರೀತಿಯಲ್ಲಿ ಆಟೋರಿಕ್ಷಾ ಬಾಡಿಗೆ ಮೊತ್ತ ದಾಖಲಿಸಿಕೊಳ್ಳುವಿಕೆ, ಕೊಟೇಶನ್ ಇಲ್ಲದೆ ಯೂನಿಫಾಂಗಾಗಿ ಗುತ್ತಿಗೆ ನೀಡುವಿಕೆ ಅಪರಿಮಿತ ಯಾತ್ರಾ ವೆಚ್ಚ ದಾಖಲಿಸಿಕೊಳ್ಳುವಿಕೆ ಇತ್ಯಾದಿ ಅವ್ಯವಹಾರ ನಡೆದಿರುವುದಕ್ಕೆ ಸಂಬಂಧಿಸಿ ಇವರನ್ನು ಅಮಾನತುಗೊಳಿಸಲಾಗಿದೆ. ಪರಿಶಿಷ್ಟ ಅಭಿವೃದ್ಧಿ ಇಲಾಖೆಯ ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಈ ಬಗ್ಗೆ ನೇರವಾಗಿ ತನಿಖೆ ನಡೆಸಿ ಅಗತ್ಯದ ದಾಖಲುಪತ್ರಗಳನ್ನು ಪರಿಶೀಲಿಸಿದ ಬಳಿಕ ಆ ಬಗ್ಗೆ ಸಲ್ಲಿಸಿದ ವರದಿಯ ಆಧಾರದಲ್ಲಿ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ಅವ್ಯವಹಾರದಿಂದ ಸರಕಾರಕ್ಕೆ ೩೮,೦೪೫ ರೂ.ನಷ್ಟು ನಷ್ಟ ಉಂಟಾಗಿದೆ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿತ್ತು.






