ಮಾದಕಪದಾರ್ಥ ಸಹಿತ ಯುವಕ ಸೆರೆ

ಕಾಸರಗೋಡು: ನಾರ್ಕೋಟಿಕ್ ಸೆಲ್‌ನ ಸಹಾಯದೊಂದಿಗೆ ಪನಯಾಲ್ ಕೋಟಪ್ಪಾರದಲ್ಲಿ  ಬೇಕಲ ಪೊಲೀಸರು ನಡೆಸಿದ ದಾಳಿಯಲ್ಲಿ ಯುವಕ ಸೆರೆಯಾಗಿದ್ದಾನೆ. ಕೋಟಿಕುಳಂ ತಿರುವಕ್ಕೋಳಿ ಅಂಗಕಳರಿ ಹೌಸ್‌ನ ಕೆ.ಎಂ. ಅಬ್ದುಲ್ ನವಾಸ್ (28)ನನ್ನು ಬೇಕಲ ಎಸ್‌ಐ ಪಿ.ಆರ್. ಶರತ್ ಹಾಗೂ ತಂಡ ಬಂಧಿಸಿದೆ. ನಿನ್ನೆ ಸಂಜೆ 4.30ರ ವೇಳೆ ಕೋಟಪ್ಪಾರ ಕಾನತ್ತಿಲ್ ಹೌಸ್‌ನಲ್ಲಿ  ನಡೆಸಿದ ತಪಾಸಣೆಯಲ್ಲಿ ಈತ ಸೆರೆಯಾಗಿದ್ದಾನೆ. ಈತನಿಂದ 1.220 ಗ್ರಾಂ ಎಂಡಿಎಂಎ ಪತ್ತೆಹಚ್ಚಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಸೆರೆಯಾದ ನವಾಸ್ ಹಾಗೂ ಕುಟುಂಬ ಫಾತಿಮ ಎಂಬ   ಮಹಿಳೆಯ ಹೆಸರಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಈ ಮನೆಯಲ್ಲಿ ಮಾದಕ ಪದಾರ್ಥವಿರಿಸಲಾಗಿದೆಯೆಂಬ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ  ಅಲ್ಲಿಗೆ ಪೊಲೀಸರು ದಾಳಿ ನಡೆಸಿದ್ದರು.

RELATED NEWS

You cannot copy contents of this page