ಲೋಕಸಭಾ ಚುನಾವಣೆ: ಪೊನ್ನಾನಿಯ ಮತದಾರರ ಚಿತ್ತ ಎತ್ತ!
ಮಲಪ್ಪುರಂ: ಪೊನ್ನಾನಿ ಲೋಕ ಸಭಾ ಕ್ಷೇತ್ರ ಮುಸ್ಲಿಂ ಲೀಗ್ನ ಭದ್ರಕೋ ಟೆಯಾಗಿದೆ. ಕೇರಳ ರಾಜ್ಯ ರೂಪೀಕರ ಣದ ಮೊದಲೇ ಪೊನ್ನಾನಿ ಲೋಕಸಭಾ ಕ್ಷೇತ್ರ ಅಸ್ತಿತ್ವದಲ್ಲಿತ್ತು. ಅಂದು ಅದು ಮ ದ್ರಾಸ್ ರಾಜ್ಯದ ಒಂದು ಭಾಗವಾಗಿತ್ತು.
ಕೇರಳ ರಾಜ್ಯ ರೂಪೀಕರಣಗೊಂಡ ಬಳಿಕ ನಡೆದ ಮೂರು ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಅನುಕ್ರಮವಾಗಿ ವಾಮಪಕ್ಷಗಳ ಉಮೇದ್ವಾರರಾದ ಇ.ಕೆ. ಇಂಬಿಚ್ಚಿಕೋಯ, ಸಿ.ಕೆ. ಚಕ್ರಪಾಣಿ ಮತ್ತು ಎಂ.ಕೆ. ಕೃಷ್ಣ ಕುಮಾರ್ ಗೆದ್ದು ಲೋಕಸಭೆಗೆ ಆಯ್ಕೆಗೊಂಡಿದ್ದರು. ೧೯೭೭ರ ಬಳಿಕ ಈ ಕ್ಷೇತ್ರದ ರಾಜಕೀ ಯ ಚಿತ್ರಣವೇ ಬದಲಾಯಿತು. ಅಂದಿ ನಿಂದ ಆರಂಭಗೊಂಡು ನಂತರದ ೧೨ ಚುನಾವಣೆಗಳಲ್ಲೂ ಸತತವಾಗಿ ಮುಸ್ಲಿಂ ಲೀಗ್ ಗೆಲ್ಲುತ್ತಾ ಬಂದಿದೆ. ಆ ಮೂಲಕ ಈ ಕ್ಷೇತ್ರ ಮುಸ್ಲಿಂ ಲೀಗ್ನ ಭದ್ರಕೋ ಟೆಯೇ ಆಗಿ ಮಾರ್ಪಟ್ಟಿದೆ. ಮುಸ್ಲಿಂ ಲೀಗ್ ನೇತಾರರಾದ ಜಿ.ಎಂ. ಬನಾತ್ವಾಲ, ಇಬ್ರಾಹಿಂ ಸುಲೈಮನ್ ಸೇಠ್, ಇ. ಅಹಮ್ಮದ್ರನ್ನು ಹಲವು ಬಾರಿ ಗೆಲ್ಲಿಸಿದ ಲೋಕಸಭಾ ಕ್ಷೇತ್ರವೂ ಇದಾಗಿದೆ.
೨೦೦೪ರ ಲೋಕಸಭಾ ಚುನಾವಣೆ ಯಲ್ಲಿ ರಾಜ್ಯದ ೨೦ ಲೋಕಸಭಾ ಕ್ಷೇತ್ರಗಳ ಪೈಕಿ ೧೯ನ್ನೂ ಎಲ್ಡಿಎಫ್ ಬಾಚಿಕೊಂಡರೆ, ಪೊನ್ನಾನಿ ಲೋಕಸಭಾ ಕ್ಷೇತ್ರ ಮಾತ್ರ ಯುಡಿಎಫ್ನ್ನು ಕೈಬಿಟ್ಟಿರಲಿಲ್ಲ. ಅಂದು ಗೆದ್ದ ಮುಸ್ಲಿಂ ಲೀಗ್ನ ಇ. ಅಹಮ್ಮದ್ರಿಗೆ ಮುಸ್ಲಿಂ ಲೀಗ್ನ ಮೊದಲ ಕೇಂದ್ರ ಸಚಿವರಾ ಗುವ ಭಾಗ್ಯವೂ ಕೈಗೂಡಿ ಬಂದಿತ್ತು.
೨೦೧೯ರ ಚುನಾವಣೆಯಲ್ಲಿ ಯುಡಿಎಫ್ ಉಮೇದ್ವಾರ ಮುಸ್ಲಿಂ ಲೀಗ್ನ ಇ.ಟಿ. ಮೊಹಮ್ಮದ್ ಬಶೀರ್ ಈ ಕ್ಷೇತ್ರದಲ್ಲಿ ೧,೯೩,೨೭೩ ಮತಗಳ ಅಂತರದಲ್ಲಿ ಎಡರಂಗದ (ಸಿಪಿಎಂ) ವಿ.ಪಿ. ಅನ್ವರ್ರನ್ನು ಪರಾಭವಗೊಳಿ ಸಿದ್ದರು. ಅಂದು ಯುಡಿಎಫ್ಗೆ ೫,೨೧,೮೨೪ ಮತಗಳು ಲಭಿಸಿದರೆ, ಎಡರಂಗಕ್ಕೆ ೩,೨೮,೫೫೧ ಮತಗಳು ಲಭಿಸಿತ್ತು. ಎನ್ಡಿಎ ಉಮೇದ್ವಾರರಾದ ಬಿಜೆಪಿಯ ವಿ.ಟಿ. ರಮ ಅವರಿಗೆ ೧,೧೦,೬೦೩ ಮತಗಳು ಲಭಿಸಿದ್ದವು. ಅಂದರೆ ಕನಿಷ್ಠ ಹೆಸರಿಗೆ ಮಾತ್ರವಾಗಿ ಈ ಹಿಂದೆ ಬಿಜೆಪಿಯೇ ಇಲ್ಲದೇ ಇದ್ದ ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಒಂದು ಪ್ರಬಲ ರಾಜಕೀಯ ಪಕ್ಷವಾಗಿ ತಲೆಯೆತ್ತತೊಡಗಿದೆ ಎಂಬುದನ್ನು ಇದು ಸಾಬೀತುಪಡಿಸಿದೆ.
ತಿರೂರಂಗಾಡಿ, ತಾನೂರು, ಕೋಟೆಕ್ಕಲ್, ತವನ್ನೂರು, ಪೊನ್ನಾನಿ ಮತ್ತು ತೃತಲ ಎಂಬೀ ೭ ವಿಧಾನಸಭಾ ಕ್ಷೇತ್ರಗಳು ಒಳಗೊಂಡ ಲೋಕಸಭಾ ಕ್ಷೇತ್ರವಾಗಿದೆ ಪೊನ್ನಾನಿ. ೨೦೧೯ರ ಚುನಾವಣೆಯಲ್ಲಿ ಇಲ್ಲಿ ಗೆದ್ದ ಮುಸ್ಲಿಂ ಲೀಗ್ನ ಇ.ಟಿ. ಮೊಹಮ್ಮದ್ ಬಶೀರ್ರನ್ನು ಅವರ ಆಗ್ರಹ ಪ್ರಕಾರ ಈ ಬಾರಿ ಮಲಪ್ಪುರಂ ಲೋಕಸಭಾ ಕ್ಷೇತ್ರದ ಉಮೇದ್ವಾರರನ್ನಾಗಿಸಲಾಗಿದೆ. ಅವರ ಬದಲು ಕಳೆದ ಬಾರಿ ಮಲಪ್ಪುರಂ ಲೋಕಸಭಾ ಕ್ಷೇತ್ರದ ಉಮೇದ್ವಾರ ರಾಗಿದ್ದ ಲೀಗ್ನ ಹಿರಿಯ ನಾಯಕ ಹಾಗೂ ಖ್ಯಾತ ವಾಗ್ಮಿಯೂ ಆಗಿರುವ ಅಬ್ದುಸಮದ್ ಸಮದಾನಿಯ ವರನ್ನು ಲೀಗ್ ಈ ಬಾರಿ ಪೊನ್ನಾನಿ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಇನ್ನೊಂದೆಡೆ ಇತ್ತೀಚೆ ಗಷ್ಟೇ ಮುಸ್ಲಿಂ ಲೀಗ್ನಿಂದ ವಜಾ ಗೈಯ್ಯಲಾಗಿದ್ದ, ಈ ಹಿಂದೆ ಮುಸ್ಲಿಂ ಲೀಗ್ನ ರಾಜ್ಯ ಕಾರ್ಯದರ್ಶಿಯೂ ಆಗಿದ್ದ ಕೆ.ಎಸ್. ಹಂಸರನ್ನು ಎಡರಂಗ(ಸಿಪಿಎಂ) ಅಚ್ಚರಿಯಾಗಿ ಈ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ.
ಇನ್ನೊಂದೆಡೆ ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಹಾಗೂ ಛಾವಕ್ಕಾಡ್ ಬಾರ್ನ ಹಿರಿಯ ವಕೀಲೆ ನಿವೇದಿತಾ ರನ್ನು ಎನ್ಡಿಎ ಉಮೇದ್ವಾರರನ್ನಾಗಿ ಬಿಜೆಪಿ ಈ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಪೊನ್ನಾನಿಯಲ್ಲಿ ಬಿಜೆಪಿ ಇತ್ತೀಚೆಗಿನಿಂದ ಒಂದು ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆಯತೊಡಗಿದೆ. ೨೦೧೯ರ ಚುನಾವಣೆ ಯಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ವಿ.ಟಿ. ರಮರಿಗೆ ಶೇ. ೧೦.೮೭ ಮತ ಲಭಿಸಿದ್ದು, ಅದು ಬಿಜೆಪಿಯ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ. ದೇಶದಲ್ಲಿ ಈಗ ಬಿಜೆಪಿ ಪರ ಅಲೆ ಎದ್ದಿರುವುದರಿಂದ ಈ ಕ್ಷೇತ್ರ ಈ ಬಾರಿ ತನಗೆ ಅನುಕೂಲವಾಗಲಿ ದೆಯೆಂದು ನಿವೇದಿತಾ ಹೇಳುತ್ತಿದ್ದಾರೆ.
ಪೊನ್ನಾನಿ ಮುಸ್ಲಿಂ ಲೀಗ್ನ ಭದ್ರಕೋಟೆ. ಆದ್ದರಿಂದ ನನ್ನ ಗೆಲುವನ್ನು ತಡೆಯುವವರು ಯಾರೂ ಇಲ್ಲ. ಗೆಲುವು ನನ್ನದೇ ಎಂದು ಅಬ್ದುಸಮದ್ ಸಮದಾನಿ ತುಂಬು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ ಪೊನ್ನಾನಿಯಲ್ಲಿ ಈಗ ಎಲ್ಡಿಎಫ್ ಪರ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದ ಈ ಬಾರಿ ಇಲ್ಲಿ ನನ್ನ ಗೆಲುವು ಸುನಿಶ್ಚಿತ ಎಂದು ಎಡರಂಗ ಉಮೇದ್ವಾರ ಸಿಪಿಎಂನ ಕೆ.ಎಸ್. ಹಂಸ ಹಕ್ಕುವಾದ ಮಂಡಿಸಿದ್ದಾರೆ.