ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್‌ಗೆ ನಟಿ ಶೋಭನಾ ಬೆಂಬಲ

ತಿರುವನಂತಪುರ: ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ ಬಿಜೆಪಿ ನೇತಾರ ರಾಜೀವ್ ಚಂದ್ರಶೇಖರ್‌ರಿಗೆ ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಹಾಗೂ ಖ್ಯಾತ ಶಾಸ್ತ್ರೀಯ ನೃತ್ಯಗಾರ್ತಿ ಶೋಭನಾ ಬೆಂಬಲ ವ್ಯಕ್ತಪಡಿಸಿದ್ದಾರೆ.

ತಿರುವನಂತಪುರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ರಾಜೀವ್ ಚಂದ್ರಶೇಖರನ್‌ರಿಗೆ  ವಿದ್ಯುಕ್ತವಾಗಿ ಬೆಂಬಲ ವ್ಯಕ್ತಪಡಿಸಿದರು. ರಾಜೀವ್ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಅವರಿಗೆ ಎಲ್ಲರೂ ಚಲಾಯಿಸುವಂತೆಯೂ ವಿನಂತಿಸಿಕೊಂ ಡಿರುವ ಸೋಭನಾ ಕೇರಳದಲ್ಲಿ ನಡೆಯಲಿರುವ ಮೋದಿಯವರ ಕಾರ್ಯಕ್ರಮಕ್ಕೂ ನನಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದ್ದಾರೆ. ತನಗೆ ಶೋಭನಾ ನೀಡಿದ ಬೆಂಬಲಕ್ಕೆ ರಾಜೀವ್ ಚಂದ್ರಶೇಖರನ್ ಸಂತೋಷ ವ್ಯಕ್ತಪಡಿಸಿ ಅವರ ಬೆಂಬಲ ಸ್ಪೂರ್ತಿದಾಯಕ ಎಂದು ಹೇಳಿದ್ದಾರೆ.

RELATED NEWS

You cannot copy contents of this page