ಮಾದರಿ ನೀತಿಸಂಹಿತೆ ಉಲ್ಲಂಘನೆ: ಅಭ್ಯರ್ಥಿಗಳಿಗೆ ನೋಟೀಸ್
ಕಾಸರಗೋಡು: ಲೋಕಸಭಾ ಚುನಾವಣೆಯ ಮಾದರಿ ನೀತಿಸಂಹಿತೆ ಯನ್ನು ಉಲ್ಲಂಘಿಸಿದ ಅಭ್ಯರ್ಥಿಗಳಾದ ಎಂ.ಎಲ್. ಅಶ್ವಿನಿ, ರಾಜ್‌ಮೋಹನ್ ಉಣ್ಣಿತ್ತಾನ್, ಎಂ.ವಿ. ಬಾಲಕೃಷ್ಣನ್ ಮಾಸ್ತರ್‌ರಿಗೆ ನೋಡೆಲ್ ಅಧಿಕಾರಿ ಹಾಗೂ ಉಪ ಜಿಲ್ಲಾ ಅಧಿಕಾರಿಯಾದ ಸೂಫಿಯಾನ್ ಅಹಮ್ಮದ್ ನೋಟೀಸ್ ನೀಡಿದ್ದಾರೆ. ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಚುನಾವಣಾ ಪ್ರಚಾರ ವೇದಿಕೆಯಾಗಿ ಬಳಸಿಕೊಂಡ ಹಿನ್ನೆಲೆ ಯಲ್ಲಿ ಅಭ್ಯರ್ಥಿಗಳಿಗೆ ನೋಟೀಸ್ ನೀಡಲಾಗಿದೆ. ನೋಟೀಸ್ ನೀಡಿದ ೪೦ ಗಂಟೆಯ ಒಳಗೆ ಈ ಬಗ್ಗೆ ಉತ್ತರ ನೀಡ ದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ನೋಡೆಲ್ ಅಧಿಕಾರಿ ತಿಳಿಸಿದ್ದಾರೆ.