ಎನ್ಡಿಎ ಅಭ್ಯರ್ಥಿ ಚುನಾವಣಾ ಪ್ರಚಾರ ಯಾತ್ರೆ
ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವ ರವರ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಪ್ರಚಾರ ಯಾತ್ರೆಯ ಸಭೆ ನಿನ್ನೆ ಸಂಜೆ ಸೋಂಕಾಲಿನಲ್ಲಿ ನಡೆಯಿತು.
ಬಿಜೆಪಿ ಮುಖಂಡರಾದ ಸುಧಾಮ ಗೋಸಾಡ, ಸುನಿಲ್ ಅನಂತಪುರ, ಕೆ.ಪಿ ಅನಿಲ್ ಮಣಿಯಂಪಾರೆ, ಮುರಳೀಧರ ಯಾದವ್, ಅಭ್ಯರ್ಥಿ ಅಶ್ವಿನಿ ಮಾತನಾಡಿದರು. ಅಡ್ವಕೇಟ್ ಬಾಲಕೃಷ್ಣ ಶೆಟ್ಟಿ, ಕೋಳಾರು ಸತೀಶ್ವಂದ್ರ ಭಂಡಾರಿ, ವೇಲಾಯುಧನ್, ವಸಂತ ಕುಮಾರ್ ಮಯ್ಯ, ಪಂಚಾಯತ್ ಸದಸ್ಯೆ ಸುಧಾ ಗಣೇಶ್ ಉಪಸ್ಥಿತರಿದ್ದರು. ಮಾಜಿ ಪಂಚಾಯತ್ ಸದಸ್ಯ ಕೆ.ಪಿ ವಲ್ಸರಾಜ್ ಸ್ವಾಗತಿಸಿ, ವಂದಿಸಿದರು. ಪ್ರತಾಪನಗರದ ಹಲವು ಬೂತ್ ಪದಾಧಿಕಾರಿಗಳು, ಊರಿನ ಹಿರಿಯರು ಅಭ್ಯರ್ಥಿಯನ್ನು ಗೌರವಿಸಿದರು. ಯಾತ್ರೆ ಕುಂಜತ್ತೂರಿನಲ್ಲಿ ಸಮಾಪ್ತಿಗೊಂಡಿತು.