ಗೂಂಡಾ ಆಕ್ಟ್ ಪ್ರಕಾರ ಹಲವು ಪ್ರಕರಣಗಳ ಆರೋಪಿ ಬಂಧನ

ಕಾಸರಗೋಡು: ಗೂಂಡಾ ಆಕ್ಟ್ ಪ್ರಕಾರ ಹಲವು ಪ್ರಕರಣಗಳ ಆರೋಪಿಯನ್ನು ವಿದ್ಯಾನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎಸ್. ಅನೂಬ್ ಬಂಧಿಸಿದ್ದಾರೆ.

ಮಧೂರು ಶಿರಿಬಾಗಿಲು ಬಿ.ಆರ್.ಎಂ. ಹೌಸ್‌ನ ಅಬೂಬಕರ್ ಸಿದ್ದಿಕ್ ಬಿ.ಎ (31) ಬಂಧಿತ ಆರೋಪಿ. ವಿದ್ಯಾನಗರ, ಕಾಸರಗೋಡು, ಬದಿಯಡ್ಕ ಮತ್ತು ಆದೂರು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಹಲವು ಕೇಸುಗಳಿವೆ. ಇದರಲ್ಲಿ ಮಾದಕದ್ರವ್ಯ ಪ್ರಕರಣಗಳೂ  ಒಳಗೊಂಡಿವೆಯೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿ ಈ ಹಿಂದೆ ಬಂಧಿತನಾಗಿ ಆರೋಪಿ ಕಾಸರಗೋಡು ಸಬ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ವೇಳೆ ಯಲ್ಲೇ ಆತನ ವಿರುದ್ಧ  ಗೂಂಡಾ ಆಕ್ಟ್ ಹೇರಿ ಅದಕ್ಕೆ ಸಂಬಂಧಿಸಿ ಆತನನ್ನು ಪೊಲೀಸರು ಬಂಧಿಸಿದ್ದು, ನಂತರ ಆತನನ್ನು ಕಾಸರಗೋಡು ಸಬ್ ಜೈಲಿನಿಂದ ಕಣ್ಣೂರು ಸೆಂಟ್ರಲ್ ಜೈಲಿಗೆ ಸಾಗಿಸಲಾಗಿದೆ.

RELATED NEWS

You cannot copy contents of this page