ನಿರ್ಮಾಣ ಕಾರ್ಮಿಕರ ನಿವೃತ್ತಿ ಸವಲತ್ತು, ಪಿಂಚಣಿ ಲಭ್ಯಗೊಳಿಸಲು ಎಐಟಿಯುಸಿ ಒತ್ತಾಯ

ಮಂಜೇಶ್ವರ: ನಿರ್ಮಾಣ ಕಾರ್ಮಿಕರ ಒಕ್ಕೂಟ ಮಂಜೇಶ್ವರ ಮಂಡಲ ಸಮಾವೇಶ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಸಭಾಂಗ ಣದಲ್ಲಿ ನಡೆಯಿತು. ನಿರ್ಮಾಣ ಕಾರ್ಮಿಕರ ಕ್ಷೇಮನಿಧಿ ಬೋರ್ಡ್ ನಿಂದ 2025 ಎಪ್ರಿಲ್‌ನಿಂದ ಕಾರ್ಮಿ ಕರಿಗೆ ಲಭಿಸದ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಕೂಡಲೇ ಪಾವತಿಸಲು ಸರಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಲಾ ಯಿತು. ನಿರ್ಮಾಣ ಕಾರ್ಮಿಕರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಬಿಜು ಉಣ್ಣಿತ್ತಾನ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಚಂದ್ರಶೇಖರ ಸಿಂತಾಜೆ ಅಧ್ಯಕ್ಷತೆ ವಹಿಸಿದರು. ಹಿರಿಯ ನಾಯಕ ಸಂಜೀವ ಶೆಟ್ಟಿಯವರನ್ನು ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಗೌರವಿಸಿದರು.  ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯರಾದ ಜಯರಾಮ ಬಲ್ಲಂಗುಡೇಲು, ರಾಮಚಂದ್ರ, ಮೋಟಾರು ಯೂನಿಯನ್ ಜಿಲ್ಲಾಧ್ಯಕ್ಷ ಮುಸ್ತಫ ಕಡಂಬಾರು, ಈಶ್ವರ ನಾಯ್ಕ್ ಮಾತನಾಡಿದರು. ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ, ಮಂಡಲ ಕಾರ್ಯದರ್ಶಿ ರಾಮದಾಸ್ ಕಡಂಬಾರು ಸ್ವಾಗತಿಸಿದರು. ನೂತನ ಪದಾಧಿಕಾರಿಗಳಾಗಿ ಚಂದ್ರಶೇಖರ ಸಿಂತಾಜೆ (ಅಧ್ಯಕ್ಷ), ಈಶ್ವರ ನಾಯ್ಕ್ (ಉಪಾಧ್ಯಕ್ಷ), ರಾಮದಾಸ್ ಕಡಂಬಾರು (ಕಾರ್ಯದರ್ಶಿ), ಕೊರಗಪ್ಪ (ಜೊತೆ ಕಾರ್ಯದರ್ಶಿ) ಹಾಗೂ ೧೩ ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

RELATED NEWS

You cannot copy contents of this page