ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್‌ರಿಗೆ ಸೋಲಿನ ಭೀತಿ- ಎಂ.ಎಲ್. ಅಶ್ವಿನಿ

ಕಾಸರಗೋಡು: ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್‌ರಿಗೆ ಮುಂದಿನ ಚುನಾವಣೆಯಲ್ಲಿ ಸೋಲಬಹುದೆಂಬ ಭೀತಿ ಉಂಟಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದ್ದಾರೆ. ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತ್ತಿದ್ದರು. ಎಕೆಎಂ ಅಶ್ರಫ್ ಸೋಲನ್ನು ಖಚಿತಪಡಿಸಿದುದರಿಂದ ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಸೋಲಿನ ಭೀತಿಯಲ್ಲಿ ರುವ ಅವರು ದೊಡ್ಡ ನಾಟಕಗಳನ್ನು ಆಡತೊಡಗಿದ್ದಾರೆ. ಟೋಲ್ ಬೂತ್ ನಲ್ಲಿ ನಡೆಸಿದ ನಾಟಕಗಳೆಲ್ಲ ವಿಫಲ ಗೊಂಡಿದೆ. ಮಂಜೇಶ್ವರ ಮಂಡಲದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿದು ಭಾರೀ ಆತಂಕಗಳನ್ನು ಅವರು ಸೃಷ್ಟಿಸುತ್ತಿದ್ದಾರೆಂದೂ ಅಶ್ವಿನಿ ಆರೋಪಿಸಿದ್ದಾರೆ.

ಅಭಿವೃದ್ಧಿಯ ಕುರಿತು ಶಾಸಕರು ಚರ್ಚೆಗೆ ಮುಂದಾಗಬೇಕಾಗಿದೆ. ಪ್ರಜಾಪ್ರಭುತ್ವಕ್ಕೆ ಸವಾಲೆಸೆಯುವುದು ಸರಿಯಲ್ಲ. ಅಧಿಕಾರಿಗಳ ಮೇಲೆ ವಿನಾ ಕಾರಣ ಅವರು ಒತ್ತಡ ಹೇರುತ್ತಿರು ವುದಾಗಿಯೂ ಅಶ್ವಿನಿ ಆರೋಪಿಸಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಉಪಾಧ್ಯಕ್ಷ ಪಿ. ರಮೇಶನ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

You cannot copy contents of this page