ಎಕೆಎಂ ಅಶ್ರಫ್‌ರ ಪರ್ಯಟನೆ: ವಿವಿಧೆಡೆ ಹೃದಯಸ್ಪರ್ಶಿ ಸ್ವಾಗತ

ಮಂಜೇಶ್ವರ: ವರ್ಕಾಡಿ, ಮಂಜೇಶ್ವರ ಪಂಚಾಯತ್‌ಗಳಲ್ಲಿ ನಿನ್ನೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್ ಮತ ಯಾಚಿಸಿ ಪರ್ಯಟನೆ ನಡೆಸಿದರು. ಅಭ್ಯರ್ಥಿಗೆ ವಿವಿಧ ಕಡೆ ಹೃದಯಸ್ಪರ್ಶಿ ಸ್ವಾಗತ ಲಭಿಸಿದೆ. ನಿನ್ನೆ ಬೆಳಿಗ್ಗೆ ಸೂಪಿಗುರಿಯಿಂದ ಆರಂಭಿಸಿ ಪಾವೂರು ಅಂಚೆಕಚೇರಿ, ಪಾವೂರುಕೋಡಿ, ಕೆದುಂಬಾಡಿ, ತೌಡುಗೋಳಿ, ನೆಚ್ಚಿಲಪದವು, ಬೋರ್ಕಳ, ಆನೆಕಲ್ಲು, ಗುವೆದಪಡ್ಪು, ಕಜೆ, ಪಾತೂರು ಮೂಲಕ ಸಾಗಿ ಬೇಕರಿ ಜಂಕ್ಷನ್‌ನಲ್ಲಾಗಿ ಮೊರತ್ತಣೆಗೆ ಮಧ್ಯಾಹ್ನ ತಲುಪಿತು. ಅಪರಾಹ್ನ ಕಡಂಬಾರು ಶಾಲೆ ಜಂಕ್ಷನ್‌ನಿಂದ ಆರಂಭಿಸಿ ಪಾಪಿಲ, ಮಚ್ಚಂಪಾಡಿ ಮೂಲಕ ಸಾಗಿ ಕುಂಜತ್ತೂರು ಜಂಕ್ಷನ್‌ನಲ್ಲಿ ಸಮಾಪ್ತಿಗೊಂಡಿತು.  ಅಭ್ಯರ್ಥಿ ಜೊತೆಯಲ್ಲಿ ಯುಡಿಎಫ್ ಮಂಡಲ ಅಧ್ಯಕ್ಷ ಅಸೀಸ್ ಮರಿಕೆ, ಸಂಚಾಲಕ ಮಂಜುನಾಥ ಆಳ್ವ, ಟಿ.ಎ. ಮೂಸ, ಎ.ಕೆ. ಆರೀಫ್, ಜೆ.ಎಸ್. ಸೋಮಶೇಖರ್, ಲಕ್ಷ್ಮಣ ಪ್ರಭು, ಹರ್ಷಾದ್ ವರ್ಕಾಡಿ ಸಹಿತ ಹಲವರು ವಿವಿಧ ಕೇಂದ್ರಗಳಲ್ಲಿ ಭಾಗವಹಿಸಿ ಮಾತನಾಡಿದರು. 

RELATED NEWS

You cannot copy contents of this page