ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ

ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ 7ನೇ ಪ್ರತಿಷ್ಠಾ ವಾರ್ಷಿಕ ಉತ್ಸವ ನಿನ್ನೆ ರುಧ್ರಾಭಿಷೇಕ, ಕ್ಷೀರಾಭಿಷೇಕ, ನವಕಾಭಿಷೇಕ, ವಿಶೇಷ ಮಹಾಪೂಜೆ ಜರಗಿತು. ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನಿರ್ದೇಶ ನೀಡಿದರು. ಸಂಜೆ ದೀಪಾರಾಧನೆ, ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳಿಂದ ಭಜನೆ ಹಾಗೂ ಕುಣಿತ ಭಜನೆ, ಮಹಾಪೂಜೆ ಜರಗಿತು.
ಕ್ಷೇತ್ರದ ಮುಖ್ಯ ಅರ್ಚಕ ಶಿವಶಂಕರ ಅಡಿಗ ಪ್ರಾರ್ಥನೆಗೈದರು. ಈ ಸಂಧರ್ಭದಲ್ಲಿ ಬಾಲ ಗೋಕುಲದ ಅಧ್ಯಾಪಿಕೆ ಶ್ರೀಲತಾ ಟೀಚರ್, ಪ್ರಮುಖರಾದ ಎಕ್ಸ್ ಟ್ರಸ್ಟೀ ಕೆ.ಎನ್. ವೆಂಕಟ್ರಮಣ ಹೊಳ್ಳ, ನಗರಸಭಾ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ, ಕಿಶೋರ್ ಎಸ್.ವಿ.ಟಿ, ಶಂಕರ ನಾರಾಯಣ ಹೊಳ್ಳ, ರವಿ ಕೇಸರಿ, ವಸಂತ್ ಕೆರೆಮನೆ, ಸವಿತಾ, ಪ್ರೇಮಾ, ಶ್ರೀವಳ್ಳಿ, ಭಕ್ತರು ಭಾಗವಹಿಸಿದರು.

You cannot copy contents of this page