ಕಾಸರಗೋಡಿನ ಅಭಿವೃದ್ಧಿಗೆ ಎನ್‌ಡಿಎ ಗೆಲುವು ಅನಿವಾರ್ಯ-ಲಕ್ಷ್ಮಿಪ್ರಿಯ

ಕಾಸರಗೋಡು: ಅಭಿವೃದ್ಧಿಗೆ ಎಲ್ಲಾ ಸಾಧ್ಯತೆಗಳಿದ್ದರೂ ಕಾಸರಗೋಡು ಜಿಲ್ಲೆ ಅಭಿವೃದ್ಧಿಯಲ್ಲಿ ಭಾರೀ   ಹಿಂದುಳಿದಿದೆ. ಬಾಲ್ಯವನ್ನು ಇಲ್ಲಿ ಕಳೆದ ತನಗೆ ಈಗ ಇಲ್ಲಿನ ಪರಿಸ್ಥಿತಿ ಭಾರೀ ನೋವುಂಟು ಮಾಡಿದೆ ಯೆಂದು ಸಿನಿಮಾ, ಸೀರಿಯಲ್ ನಟಿ  ಲಕ್ಷ್ಮಿ ಪ್ರಿಯ ತಿಳಿಸಿದ್ದಾರೆ. ಮಾನ್ಯದಲ್ಲಿ ಇಂದು ಬೆಳಿಗ್ಗೆ ನಡೆದ  ಎನ್‌ಡಿಎ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು. ಎಂಡೋಸಲ್ಫಾನ್ ಸಂತ್ರಸ್ತರು ಸಹಿತ ಹಲವು ಮಂದಿ ಉತ್ತಮ ಚಿಕಿತ್ಸೆ, ಉದ್ಯೋಗ, ಶಿಕ್ಷಣ ಲಭಿಸದೆ  ಭಾರೀ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಿರುವಾಗ ಇಲ್ಲಿನ ಅಭಿವೃದ್ಧಿಗಾಗಿ ಈ ಬಾರಿ ಮತದಾರರು ಕಾಸರಗೋಡಿನ ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಅವರಿಗ ಮತ ಚಲಾಯಿಸಿ ಗೆಲ್ಲಿಸಬೇಕೆಂದು ಅವರು ಕರೆನೀಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ  ಎಂ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ, ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆಯಾದ ಅಶ್ವಿನಿ ಕೆ.ಎಂ, ಜಿಲ್ಲಾ ಸೆಲ್ ಕೋ ಆರ್ಡಿನೇಟರ್ ಸುಕುಮಾರ ಕುದ್ರೆಪ್ಪಾಡಿ, ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಗಳಾದ ರವೀಂದ್ರ ರೈ ಗೋಸಾಡ, ಶ್ರೀಧರ ಬೆಳ್ಳೂರು, ಬದಿಯಡ್ಕ ವೆಸ್ಟ್ ಏರಿಯಾ  ಅಧ್ಯಕ್ಷ  ಮಹೇಶ್ ವಳಕ್ಕುಂಜ  ಮೊದಲಾದವರು ಮಾತನಾಡಿದರು.

RELATED NEWS

You cannot copy contents of this page