ಐಲ ಕ್ಷೇತ್ರ ರಸ್ತೆ ಪುನರ್ ನಿರ್ಮಾಣಕ್ಕೆ ಪಂಚಾಯತ್ ಅಧ್ಯಕ್ಷರಿಗೆ ಮನವಿ

ಉಪ್ಪಳ: ಐಲ ಕ್ಷೇತ್ರಕ್ಕೆ ಸಂಚರಿಸುವ ಮಂಗಲ್ಪಾಡಿ ಪಂಚಾಯತ್‌ನ ಎದುರಲ್ಲೇ ಇರುವ ರಸ್ತೆಯ ಶೋಚನೀಯಾವಸ್ಥೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ವೀರಪ್ಪ ಅಂಬಾರ್ ನೇತೃತ್ವದಲ್ಲಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್‌ರಿಗೆ ಮನವಿ ಸಲ್ಲಿಸಲಾಯಿತು.

ಐಲ ಕ್ಷೇತ್ರ, ಪೆರಿಂಗಡಿ ಮಸೀದಿ, ಅಂಗನವಾಡಿ, ಪಾರೆಕಟ್ಟೆ ಮಾರ್ಗವನ್ನು ಸಂಪರ್ಕಿಸಲು ಇದೇ ರಸ್ತೆಯನ್ನು ಉಪಯೋಗಿಸಬೇಕಾಗಿದ್ದು, ಈ ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿ ಕೆಸರು ತುಂಬಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಮನವಿಗೆ ಸ್ಪಂದಿಸಿದ ಅಧ್ಯಕ್ಷರು ಸೂಕ್ತ ಪರಿಹಾರ ಭರವಸೆ ನೀಡಿದ್ದಾರೆ. ಪಂಚಾಯತ್ ಸದಸ್ಯರಾದ ವಸಂತ ಕುಮಾರ್ ಮಯ್ಯ, ಪ್ರೇಮ್ ಕುಮಾರ್ ಐಲ, ಮೋಹನ್‌ದಾಸ್ ಐಲ, ಜಯೇಂದ್ರ ಐಲ, ಅನಿಲ್ ಕುಮಾರ್ ಬತ್ತೇರಿ, ಹರೀಶ ಅಂಬಾರ್, ರಾಘವೇಂದ್ರ ರಾವ್ ಐಲ, ಸಚಿನ್ ಐಲ, ದೀಕ್ಷಿತ್ ಹೊಳ್ಳ ಪೆರಿಂಗಡಿ ಈ ವೇಳೆ ಉಪಸ್ಥಿತರಿದ್ದರು.

RELATED NEWS

You cannot copy contents of this page