ಕಾಸರಗೋಡು: ಮನೆ ವರಾಂಡದಲ್ಲಿ ಸಂಗ್ರಹಿಸಿಟ್ಟಿದ್ದ ನಾಲ್ಕು ಗೋಣಿ ಒಣ ಅಡಿಕೆಯನ್ನು ಸ್ಕೂಟಿಯಲ್ಲಿ ಸಾಗಿಸ ಲೆತ್ನಿಸಿದ ಯುವಕನನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿ ದ್ದಾರೆ. ಮಡಿಕೈ, ಬೆಳ್ಳಚ್ಚೇರಿ ನಿವಾಸಿಯಾದ ಮಹೇಶ್ ಸೆರೆಯಾದ ವ್ಯಕ್ತಿ. ಈತನನ್ನು ಅಂಬಲತ್ತರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ 12.45ರ ವೇಳೆ ಘಟನೆ ನಡೆದಿದ್ದು, ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ. ‘ತಾಯ ನ್ನೂರು ಆನಕ್ಕುಳಿಯ ಕೃಷಿಕ ವರ್ಗೀಸ್ರ ಮನೆ ವರಾಂಡದಿಂದ ನಾಲ್ಕು ಗೋಣಿ ಅಡಿಕೆ ಕಳವುಹೋಗಿತ್ತು. ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿದ ಬಳಿಕ ಮಹೇಶ್ ನಡೆದುಕೊಂಡು ವರ್ಗೀಸ್ರ ಮನೆ ಅಂಗಳಕ್ಕೆ ತಲುಪಿದ್ದನು. ನಾಲ್ಕು ಬಾರಿ ಹೊತ್ತುಕೊಂಡು ನಾಲ್ಕು ಗೋಣಿ ಅಡಿಕೆಯನ್ನು ಕೊಂಡೊಯ್ದಿದ್ದನು. ಕೊನೆಯ ಬಾರಿ ಕಳವುಗೈಯ್ಯುವ ವೇಳೆ ಶಬ್ದ ಕೇಳಿ ಮನೆ ಮಂದಿ ಎಚ್ಚರಗೊಂಡರು. ಲೈಟ್ ಹಾಕಿ ನೋಡಿದಾಗ ವರಾಂಡದಲ್ಲಿ ತೆಗೆದಿರಿಸಿದ್ದ ಅಡಿಕೆಯ ಗೋಣಿಗಳು ನಾಪತ್ತೆ ಯಾಗಿರುವುದು ತಿಳಿದು ಬಂತು. ಈ ಬಗ್ಗೆ ನೆರೆಮನೆಯವರಿಗೂ ಫೋನ್ ಮೂಲಕ ತಿಳಿಸಲಾಯಿತು. ಆನೆಕುಳಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದವರು ಸ್ಕೂಟರ್ನಲ್ಲಿ ಅಡಿಕೆ ಗೋಣಿಗಳನ್ನಿಟ್ಟು ನಿಂತಿದ್ದ ವ್ಯಕ್ತಿಯನ್ನು ಕಂಡು ಪ್ರಶ್ನಿಸಿದಾಗ ಜಾರಿಕೊಳ್ಳುವ ರೀತಿಯಲ್ಲಿ ಕಂಡುಬಂದಿದ್ದು, ಇದರಿಂದ ಈತ ಕಳ್ಳನಾಗಿರಬೇಕೆಂದು ಶಂಕಿಸಿದರು. ಈ ಮಧ್ಯೆ ವರ್ಗೀಸ್ರ ಮನೆಯವರು ಸಹಿತದ ಹಲವಾರು ಮಂದಿ ಸ್ಥಳಕ್ಕೆ ತಲುಪಿ ಅಡಿಕೆಯ ಗೋಣಿಗಳು ತನ್ನ ಮನೆಯದ್ದೆಂದು ವರ್ಗೀಸ್ ಪತ್ತೆಹಚ್ಚಿದರು’. ಬಳಿಕ ಅಂಬಲತ್ತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಲುಪಿ ಆರೋಪಿ, ಮಾಲು ಹಾಗೂ ಸ್ಕೂಟರ್ನ್ನು ವಶಕ್ಕೆ ತೆಗೆದಿದ್ದಾರೆ.






