ಯುವತಿಗೆ ಚುಂಬಿಸಲೆತ್ನ:ಯುವಕ ಸೆರೆ

ಮಂಜೇಶ್ವರ: ಯುವತಿಯ ಹೆಗಲಿಗೆ ಕೈಯಿರಿಸಿ ಚುಂಬಿಸಲೆತ್ನಿಸಿದ ಆರೋಪದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕುಂಜ ತ್ತೂರು ಜಲಾಲಿಯ ಮಸೀದಿ ಸಮೀ ಪದ ಸಣ್ಣಡ್ಕ ಹೌಸ್‌ನ  ಸುನಿಲ್ ಕುಮಾರ್ (38) ಎಂಬಾತನನ್ನು ಮಂ ಜೇಶ್ವರ ಎಸ್.ಐ ವೈಷ್ಣವ್ ರಾಮಚಂದ್ರನ್ ಸೆರೆಹಿಡಿದಿದ್ದಾರೆ. ಜನವರಿ 26 ಹಾಗೂ  ಫೆಬ್ರವರಿ ೮ರಂದು  ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.  ಕುಂಜತ್ತೂರು ಮಾಸ್ಕೋ ಹಾಲ್ ಸಮೀಪದ ಬಸ್ ನಿಲ್ದಾಣದಲ್ಲಿ ಜನವರಿ ೨೬ರಂದು ಮೊದಲ ಘಟನೆ ನಡೆದಿದೆ.  ಈತ ಯುವತಿಯ ಕೈಹಿಡಿದು ಚುಂಬಿಸಲೆತ್ನಿ ಸಿರುವುದಾಗಿ ದೂರಲಾಗಿದೆ.

ಎರಡನೇ ಘಟನೆ ಫೆ. 8ರಂದು ರಾತ್ರಿ 11.30ಕ್ಕೆ ಬದಿಯಡ್ಕ ಠಾಣೆ ವ್ಯಾಪ್ತಿಯ ತರವಾಡು ಮನೆಯಲ್ಲಿ ನಡೆದಿರುವುದಾಗಿ ದೂರಲಾಗಿದೆ.  ಸೆರೆಗೀಡಾದ ಸುನಿಲ್ ಕುಮಾರ್ ದೂರುದಾತೆಯಾದ ಯುವತಿಯನ್ನು ನಿರಂತರ ಬೈಕ್‌ನಲ್ಲಿ ಹಿಂಭಾಲಿಸಿ ಮಗನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿರುವು ದಾಗಿಯೂ  ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page