ಮಂಜೇಶ್ವರದಲ್ಲಿ ಟ್ರಾಲಿ ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದ 12.640 ಕಿಲೋ ಗಾಂಜಾ ಸಹಿತ ಓರ್ವ ಸೆರೆ

ಮಂಜೇಶ್ವರ: ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಬೃಹತ್ ಗಾಂಜಾ ಬೇಟೆ ನಡೆಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾಗಿಸುತ್ತಿದ್ದ 12.640 ಕಿಲೋ ಗ್ರಾಂ ಗಾಂಜಾ ಸಹಿತ ಯುವಕನನ್ನು ಸೆರೆ ಹಿಡಿಯಲಾಗಿದೆ. ಮಹಾರಾಷ್ಟ್ರ ನಿವಾಸಿಯಾದ ರಾಕೇಶ್ ಪ್ರಕಾಶ್ ಡೋಗ್ರಾ (37)ನನ್ನು ಸೆರೆ ಹಿಡಿಯಲಾಗಿದ್ದು, ಮಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈತ ಪ್ರಯಾಣಿಸುತ್ತಿದ್ದನು. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ನಡೆದ ವಾಹನ ತಪಾಸಣೆ ಮಧ್ಯೆ ಗಾಂಜಾ  ವಶಪಡಿಸಲಾಗಿದೆ.  ಅಬಕಾರಿ ಇನ್ಸ್‌ಪೆಕ್ಟರ್ ಕೆ.ಕೆ. ಶಿಜಿನ್ ಕುಮಾರ್ ಹಾಗೂ ತಂಡ ನಡೆಸಿದ ತಪಾಸಣೆಯಲ್ಲಿ ಟ್ರೋಲಿ ಬ್ಯಾಗ್‌ನಲ್ಲಿ ಸಾಗಿಸಿದ ಗಾಂಜಾ ವಶಪಡಿಸಲಾಗಿದೆ. 13 ಸಣ್ಣ ಕಟ್ಟಗಳಾಗಿ ಗಾಂಜಾವನ್ನು ಬ್ಯಾಗ್‌ನಲ್ಲಿರಿಸಲಾಗಿತ್ತು. ಅಬಕಾರಿ ತಂಡದಲ್ಲಿ ಇನ್ಸ್‌ಪೆಕ್ಟರ್ ಜಿ. ಆದರ್ಶ್, ಶ್ರೀನಿವಾಸನ್ ಪತ್ತಿಲ್, ಪ್ರಮೋದ್ ಕುಮಾರ್, ಪ್ರಿವೆಂಟಿವ್ ಆಫೀಸರ್‌ಗಳಾದ ಪ್ರಜಿತ್ ಕುಮಾರ್, ಮಧು ಎಂಬಿವರು ಕಾರ್ಯಾಚರಣೆ ನಡೆಸಿದ್ದರು. ಆರೋಪಿಯನ್ನು ಹಾಗೂ ಮಾಲನ್ನು ಕುಂಬಳೆ ಎಕ್ಸೈಸ್‌ಗೆ ಹಸ್ತಾಂತರಿಸಲಾಗಿದೆ.

You cannot copy contents of this page