ಹೊಯ್ಗೆ ಸಾಗಾಟ ಟಿಪ್ಪರ್ ಲಾರಿ ವಶ: ಚಾಲಕನ ವಿರುದ್ಧ ಕೇಸು

ಉಪ್ಪಳ; ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಮಂಜೇಶ್ವರ ಎಸ್.ಐ. ಪ್ರಶಾಂತ್ ನೇತೃತ್ವದಲ್ಲಿ ವಶಪಡಿಸಿ ಚಾಲಕನನ್ನು ಸೆರೆಹಿಡಿಯಲಾಗಿದೆ. ನಿನ್ನೆ ಸಂಜೆ ಹೊಸಬೆಟ್ಟು ಗುಡ್ಡಕೇರಿ ರಸ್ತೆಯಿಂದ ಟಿಪ್ಪರ್ ಲಾರಿಯನ್ನು ವಶಪಡಿಸಿ ಚಾಲಕ ಕೊಡ್ಲಮೊಗರು ಅಡೆಕ್ಕಳಕಟ್ಟೆ ನಿರೋಳಿಕೆ ನಿವಾಸಿ ಅಬೂಬಕರ್ ಸಮದ್ (೨೯)ನನ್ನು ಸೆರೆಹಿಡಿಯಲಾಗಿದೆ. ಹೊಸಂಗಡಿ ಭಾಗದತ್ತ ಹೊಳೆ ಹೊಯ್ಗೆಯನ್ನು ಸಾಗಿಸಲಾಗುತ್ತಿತ್ತು.

ಎಂಡಿಎಂಎ ಉಪಯೋಗ: ಓರ್ವ ಸೆರೆ

ಉಪ್ಪಳ: ಎಂಡಿಎಂಎ ಉಪ ಯೋಗಿಸುತ್ತಿದ್ದ ವ್ಯಕ್ತಿಯನ್ನು ಮಂಜೇಶ್ವರ ಎಸ್.ಐ ನಿಖಿಲ್ ಸೆರೆಹಿಡಿದಿದ್ದಾರೆ. ಪೈವಳಿಕೆ ಶಿರಂತ್ತಡ್ಕ ನಿವಾಸಿ ಮೊಹಮ್ಮದ್ ಶರೀಫ್ (೩೮) ನಿನ್ನೆ ಶಿರಂತ್ತಡ್ಕ ದಲ್ಲಿ ಎಂಡಿಎಂಎ ಉಪಯೋ ಗಿಸುತ್ತಿದ್ದಾಗ ಸೆರೆಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಶತಮಾನೋತ್ಸವ, ನೂತನ ಕಟ್ಟಡ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ

ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಮತ್ತು ನೂತನ ಕಟ್ಟಡದ ಉದ್ಘಾಟನೆ ನಾಳೆ ನಡೆಯಲಿದೆ. ಬೆಳಿಗ್ಗೆ ೯.೩೦ಕ್ಕೆ ಬ್ಯಾಂಕ್‌ನ ಅಧ್ಯಕ್ಷ ಪ್ರೇಮ್ ಕುಮಾರ್ ಕೆ.ಪಿ. ಧ್ವಜಾರೋಹಣಗೈಯ್ಯುವರು. ೧೦.೩೦ಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೂತನ ಕಟ್ಟಡವನ್ನು ಉದ್ಘಾಟಿಸುವರು. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಭದ್ರತಾ ಕೊಠಡಿಯನ್ನು ಜಾಯಿಂಟ್ ರಿಜಿಸ್ಟ್ರಾರ್ ಲಸಿತಾ ಕೆ. ಉದ್ಘಾಟಿಸು ವರು. ಸಭಾಂಗಣವನ್ನು ಬಿಜೆಪಿ ಅಧಕ್ಷ ಕೆ. ಸುರೇಂದ್ರನ್ ಉದ್ಘಾಟಿಸುವರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು …

ಕೆ.ಎಂ.ಸಿ.ಸಿಯಿಂದ ೧೦ ಲಕ್ಷ ರೂ. ಲೈಫ್ ಸುರಕ್ಷಾ ಚೆಕ್ ಹಸ್ತಾಂತರ

ವರ್ಕಾಡಿ: ಇಂಡಿಯನ್ ಯೂನಿ ಯನ್ ಮುಸ್ಲಿಂ ಲೀಗ್  ಇದರ ಪೋ ಷಕ ಸಂಘಟನೆಯಾದ ಕೆಎಂಸಿಸಿ ಇದರ ಘಟಕದ ವತಿಯಿಂದ ಲೈಫ್ ಸುರಕ್ಷಾ ಸ್ಕೀಂ ಸದಸ್ಯನಾಗಿದ್ದು ಇತ್ತೀಚೆಗೆ ನಿಧನಹೊಂದಿದ ಕೆದುಂಬಾಡಿ ಅಬ್ದುಲ್ ಖಾದರ್ ಇವರ ಕುಟುಂಬಕ್ಕೆ ೧೦ ಲಕ್ಷರೂಪಾಯಿಯ ಸಹಾಯ ಧನದ ಚೆಕ್ ಹಸ್ತಾಂತರ ನಡೆಯಿತು. ಕೆದುಂಬಾಡಿ ಮುಸ್ಲಿಂ ಲೀಗ್ ಕಚೇರಿಯಲ್ಲಿ ಜರಗಿದ ಸಮಾರಂಭವನ್ನು ಮಂಡಲ ಅಧ್ಯಕ್ಷ ಅಜೀಜ್ ಹಾಜಿ ಮರಿಕೆ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಅಯ್ಯೂಬ್ ಉರುಮಿ ಅಧ್ಯಕ್ಷತೆ ವಹಿಸಿದರು. ಲೀಗ್ ವರ್ಕಾಡಿ ಪಂ. ಕಾರ್ಯದರ್ಶಿ ಅಬ್ದುಲ್ …

ಲೈಫ್ ಯೋಜನೆ ಬುಡಮೇಲು ರಾಜ್ಯ ಸರಕಾರದ ಸಾಧನೆ- ಬಿಜೆಪಿ

ವರ್ಕಾಡಿ: ಹಣಕಾಸಿನ ಅಸ್ಥಿರತೆಯಲ್ಲಿ ಪಿಣರಾಯಿ ಸರಕಾರ ರಾಜ್ಯವನ್ನು ದಿವಾಳಿ ಮಾಡಿದೆ. ದಿವಾಳಿ ಆಗಿರುವ ರಾಜ್ಯದಲ್ಲಿ ಜನಪರ ಯೋಜನೆಗಳು ಬುಡ ಮೇಲು ಆಗುತ್ತಿದೆ. ಲೈಫ್ ಯೋಜನೆಯೇ ಹಣವಿಲ್ಲದೆ ಸ್ಥಗಿತ ವಾಗುವ ಹಂತದಲ್ಲಿದೆ. ಮೊದಲ ಕಂತು ನೀಡಿ, ಮನೆ ನಿರ್ಮಾಣಕ್ಕೆ ಆರಂಭವಾದ ಬಳಿಕ ಹಣ ಬಿಡುಗಡೆ ಮಾಡದೆ ಫಲÁನುಭವಿಗಳು ಮನೆ ಕಟ್ಟಲು ಆಗದೆ ಸಂಕಷ್ಟ ಪಡುತ್ತಿದೆ ಎಂದು ಬಿಜೆಪಿ ದೂರಿದೆ. 5 ಲಕ್ಷ ಕಿಂತ ಮೊತ್ತ ಟ್ರೆಷರಿಯಲ್ಲಿ ನಗದು ಮಾಡಲಾಗುತ್ತಿಲ್ಲ.ಉದ್ಯೋಗಸ್ಥರಿಗೆ ಸಂಬಳವೆ ಪೂರ್ತಿ ಸಿಗುತ್ತಿಲ್ಲ. ಕೆಎಸ್Àಆರ್‌ಟಿಸಿ ನಷ್ಟದಲ್ಲಿದೆ ಎಂದು ಬಿಜೆಪಿ …

ಅಗರ್ತಿಮೂಲೆ ಶ್ರೀ ಅಯ್ಯಪ್ಪ ಭಜನಾಮಂದಿರದ ೭ನೇ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ ವಾರ್ಷಿಕ ತಂಬಿಲ ೯ರಂದು

ಉಪ್ಪಳ: ಬೇಕೂರು ಅಗರ್ತಿ ಮೂಲೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಏಳನೇ ಪ್ರತಿಷ್ಟಾ ವರ್ಧಂತಿ ಉತ್ಸವ ಹಾಗೂ ವಾರ್ಷಿಕ ತಂಬಿಲ ಈ ತಿಂಗಳ 9ರಂದು ವಿವಿಧ ಕಾರ್ಯಕ್ರಮಗ ಳೊಂದಿಗೆ ಜರಗಲಿದೆ. ಅಂದು ಬೆಳಿಗ್ಗೆ 5ಕ್ಕೆ ಗಣಹೋಮ, 7ರಿಂದ ಸಂಜೆ 6ರತನಕ ವಿವಿಧ ತಂಡಗಳಿAದ ಭಜನೆ, 7ಕ್ಕೆ ಶ್ರೀ ರಕ್ತೇಶ್ವರೀ ಗುಳಿಗ ಬನದಲ್ಲಿ ತಂಬಿಲ, ಎಂ.ಕೆ ಅಶೋಕ ಕುಮಾರ್ ಹೊಳ್ಳ ರವರಿಂದ ದೀಪ ಪ್ರಜ್ವಲನೆ, ಬೆಳಿಗ್ಗೆ 9ಕ್ಕೆ ಜಾಮ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ …

ಮುಸ್ಲಿಂ ಯೂತ್‌ಲೀಗ್‌ನಿಂದ ಪಾದಯಾತ್ರೆ

ಕಾಸರಗೋಡು: ದ್ವೇಷ ಮೂಡಿಸುವವರ ವಿರುದ್ಧ ಹಾಗೂ ದುರಾಡಳಿತ ವಿರುದ್ಧ ಎಂಬ ಘೋಷಣೆಯೊಂದಿಗೆ ಮುಸ್ಲಿಂ ಯೂತ್ ಲೀಗ್ ರಾಜ್ಯದಾದ್ಯಂತ ನಡೆಸುವ ಅಭಿಯಾನದ ಅಂಗವಾಗಿ ಕಾಸರಗೋಡು ಜಿಲ್ಲಾ ಸಮಿತಿ ತೃಕ್ಕರಿಪುರದಿಂದ ಮಂಜೇಶ್ವರವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ನವೆಂಬರ್ ೨೫ರಂದು ತೃಕ್ಕರಿಪುರದಿಂದ ಉದ್ಘಾಟನೆ ಗೊಳ್ಳುವ ಪಾದಯಾತ್ರೆ ಕಾಞಂಗಾಡ್, ಉದುಮ, ಕಾಸರಗೋಡು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ೩೦ರಂದು ಮಂಜೇಶ್ವರ ಮಂಡಲದ ಉಪ್ಪಳದಲ್ಲಿ ಕೊನೆಗೊಳ್ಳಲಿದೆ. ಕಾಸರಗೋಡು  ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಫಿರೋಸ್ ಈ ಬಗ್ಗೆ  ತಿಳಿಸಿದರು. ಅಧ್ಯಕ್ಷ …

ಉಳುವಾರ್‌ನಲ್ಲಿ ಉರೂಸ್ ವಾರ್ಷಿಕ ಹರಕೆ, ಮಜ್ಲೀಸ್ ನಾಳೆ

ಕುಂಬಳೆ: ಸಮಸ್ತದ ಅಧ್ಯಕ್ಷರಾಗಿದ್ದ  ತಾಜುಲ್ ಉಲಮ ಅಬ್ದುಲ್ ರಹ್‌ಮಾನ್ ಅಲ್ ಬುಖಾರಿ, ನೂರುಲ್ ಉಲಾಮ ಎಂ.ಎ, ಅಬ್ದುಲ್ ಖಾದಿರ್ ಮುಸ್ಲಿಯಾರ್ ಎಂಬಿವರ ಸ್ಮರಣಾರ್ಥ ಕೇರಳ ಮುಸ್ಲಿಂ ಜಮಾಯತ್, ಎಸ್‌ವೈಎಸ್, ಎಸ್‌ಎಸ್‌ಎಫ್ ಉಳುವಾರ್ ಯೂನಿಟ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಉರೂಸ್ ವಾರ್ಷಿಕ ಹರಕೆ ನಾಳೆ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ಈ ಬಗ್ಗೆ ಕುಂಬಳೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪದಾಧಿಕಾರಿಗಳು ತಿಳಿಸಿದ್ದಾರೆ. ಇದರಂಗವಾಗಿ ನಡೆಯುವ ಮಜ್ಲೀಸ್‌ಗೆ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವ ನೀಡುವರು. ಇಂದು ಇಸ್ಮಾಯಿಲ್ ಅಲ್ ಬುಖಾರಿ, …

ಮಸೂದೆಗಳಿಗೆ ಸಹಿ ಹಾಕದ ನಿಲುವು: ರಾಜ್ಯಪಾಲ ವಿರುದ್ಧ ಸುಪ್ರೀಂಕೋರ್ಟ್‌ಗೆ ಸರಕಾರದಿಂದ ರಿಟ್ ಅರ್ಜಿ

ತಿರುವನಂತಪುರ: ರಾಜ್ಯ ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳಿಗೆ ಸಹಿ ಹಾಕದ  ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್‌ರ ನಿಲುವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ಗೆ ರಿಟ್- ಅರ್ಜಿ ಸಲ್ಲಿಸಿದೆ. ರಾಜ್ಯ ಸರಕಾರದ ಪರವಾಗಿ ಸ್ಟ್ಯಾಂಡಿಂಗ್ ಕೋನ್ಸಲ್ ಸಿ.ಕೆ. ಶಶಿ  ಸುಪ್ರೀಂಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದಾರೆ. ವಿಧಾನಸಭೆಯ ಅನುಮೋದನೆ ಪಡೆದ ೮ ವಿಧೇಯಕಗಳನ್ನು ಅಂಕಿತಕ್ಕಾಗಿ ರಾಜ್ಯ ಸರಕಾರ ರಾಜ್ಯಪಾಲರಿಗೆ ಕಳು ಹಿಸಿಕೊಟ್ಟಿತ್ತು. ಆದರೆ ಅವುಗಳಿಗೆ   ಕೆಲವೊಂದು ತಾಂತ್ರಿಕ ಸಮಸ್ಯೆಯ ಹೆಸರಲ್ಲಿ  ರಾಜ್ಯಪಾಲರು ಇನ್ನೂ ಸಹಿ ಹಾಕಿಲ್ಲ.  ಅದು ಸಂವಿಧಾನ ಬಾಹಿರ ಕ್ರಮವಾಗಿದೆ. …

ಹೊಳೆಗೆ ಬಿದ್ದು ನಾಪತ್ತೆಯಾದ ಟೆಲಿಫಿಲ್ಮ್ ನಟನ ಮೃತದೇಹ ಪತ್ತೆ

ಕಾಸರಗೋಡು: ಚಂದ್ರಗಿರಿ ಹೊಳೆಯಲ್ಲಿ ನಾಪತ್ತೆಯಾಗಿದ್ದ ಚೆಂಗಳ ಪಾಣಾಳಂ ನಿವಾಸಿ ಅಬ್ದುಲ್ ಮಜೀರ್ (೫೨)ರ ಮೃತದೇಹ ನಿನ್ನೆ ಮಧ್ಯಾಹ್ನ ಪೆರುಂಬಳ ಹೊಳೆ ಬದಿ ಪತ್ತೆಯಾಗಿದೆ. ಅಬ್ದುಲ್ ಮಜೀದ್ ಮೊನ್ನೆ ರಾತ್ರಿ ತನ್ನ ಮೂವರು ಸ್ನೇಹಿತರೊಂದಿಗೆ ಮನೆ ಸಮೀಪದ ಹೊಳೆ ಬದಿಗೆ ಹೋಗಿದ್ದರು. ಈ ವೇಳೆ ಅಬ್ದುಲ್ ಮಜೀದ್ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದರು. ವಿಷಯ ತಿಳಿದ ಕಾಸರಗೋಡು ಅಗ್ನಿಶಾಮಕದಳ ಮತ್ತು ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಊರವರ ಸಹಾಯದಿಂದ ವ್ಯಾಪಕ ಶೋಧ ಆರಂಭಿಸಿದ್ದರು. ಈ ಮಧ್ಯೆ ನಿನ್ನೆ ಮಧ್ಯಾಹ್ನ ಮೃತದೇಹ …