ಮಸೂದೆಗಳಿಗೆ ಸಹಿ ಹಾಕದ ನಿಲುವು: ರಾಜ್ಯಪಾಲ ವಿರುದ್ಧ ಸುಪ್ರೀಂಕೋರ್ಟ್‌ಗೆ ಸರಕಾರದಿಂದ ರಿಟ್ ಅರ್ಜಿ

ತಿರುವನಂತಪುರ: ರಾಜ್ಯ ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳಿಗೆ ಸಹಿ ಹಾಕದ  ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್‌ರ ನಿಲುವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ಗೆ ರಿಟ್- ಅರ್ಜಿ ಸಲ್ಲಿಸಿದೆ.

ರಾಜ್ಯ ಸರಕಾರದ ಪರವಾಗಿ ಸ್ಟ್ಯಾಂಡಿಂಗ್ ಕೋನ್ಸಲ್ ಸಿ.ಕೆ. ಶಶಿ  ಸುಪ್ರೀಂಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದಾರೆ. ವಿಧಾನಸಭೆಯ ಅನುಮೋದನೆ ಪಡೆದ ೮ ವಿಧೇಯಕಗಳನ್ನು ಅಂಕಿತಕ್ಕಾಗಿ ರಾಜ್ಯ ಸರಕಾರ ರಾಜ್ಯಪಾಲರಿಗೆ ಕಳು ಹಿಸಿಕೊಟ್ಟಿತ್ತು. ಆದರೆ ಅವುಗಳಿಗೆ   ಕೆಲವೊಂದು ತಾಂತ್ರಿಕ ಸಮಸ್ಯೆಯ ಹೆಸರಲ್ಲಿ  ರಾಜ್ಯಪಾಲರು ಇನ್ನೂ ಸಹಿ ಹಾಕಿಲ್ಲ.  ಅದು ಸಂವಿಧಾನ ಬಾಹಿರ ಕ್ರಮವಾಗಿದೆ. ಮಾತ್ರವಲ್ಲ  ಸಂವಿಧಾನದ ಮೂಲತತ್ವಗಳಿಗೆ ವಿರುದ್ಧವಾಗಿ ರಾಜ್ಯಪಾಲರು ಕಾರ್ಯ ವೆಸಗುತ್ತಿರುವುದಾಗಿಯೂ ರಿಟ್ ಅರ್ಜಿಯಲ್ಲಿ ಆರೋಪಿಸಲಾಗಿದೆ.

ರಾಜ್ಯಪಾಲರು ಸಹಿ ಹಾಕದೆ ಇರುವ ವಿಧೇಯಕಗಳಲ್ಲಿ ಲೋಕಾ ಯುಕ್ತ ಮತ್ತು ವಿಶ್ವವಿದ್ಯಾಲಯ ನೇಮಕಾತಿ ತಿದ್ದುಪಡಿ ಮಸೂದೆಗಳು ಸರಕಾರಕ್ಕೆ ಅತೀ ಪ್ರಧಾನವಾದುದ್ದಾಗಿದೆ. ಇದುವೇ ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿರುವುದರ ಹಿಂದಿನ ಪ್ರಧಾನ ಕಾರಣಗಳಲ್ಲೊಂದಾಗಿದೆ. ಯಾವುದೇ ವಿಧೇಯಕಗಳು ರಾಜ್ಯಪಾಲರ ಅಂಕಿತ ಬಿದ್ದಲ್ಲಿ ಮಾತ್ರವೇ ಅದು ಕಾನೂನು ರೂಪವಾಗಿ ಪರಿವರ್ತನೆ ಗೊಳ್ಳುತ್ತದೆ. ವಿಧೇಯಕಗಳಿಗೆ ಸಹಿ ಹಾಕಲು ತಯಾರಾಗದಿದ್ದಲ್ಲಿ ಅದನ್ನು ಮರುಪರಿಶೀಲನೆಗಾಗಿ ರಾಜ್ಯಪಾಲರು ಸರಕಾರಕ್ಕೆ ಹಿಂತಿರುಗಿಸಬಹುದಾ ಗಿದೆ. ಅದಕ್ಕೆ ವಿಧಾನಸಭೆ ಮತ್ತೆ ಅದಕ್ಕೆ ಅನುಮೋದನೆ ನೀಡಿದ ಬಳಿಕ ಅದನ್ನು ಮತ್ತೆ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಲ್ಲಿ   ರಾಜ್ಯಪಾಲರು ಸಹಿ ಹಾಕಬೇಕಾಗಿ ಬರುತ್ತದೆ. ಮಾತ್ರವಲ್ಲ ಅಂತಹ ವಿಧೇಯಕಗಳನ್ನು ರಾಷ್ಟ್ರಪತಿಯವರ ಪರಿಗಣನೆಗೆ ಬಿಡುವ ಅಧಿಕಾರವನ್ನು ರಾಜ್ಯಪಾಲರು ಹೊಂದಿದ್ದಾರೆ.

ಈ ಹಿಂದೆ ತೆಲಂಗಾನ, ಪಂಜಾಬ್ ಮತ್ತು ತಮಿಳುನಾಡು ಸರಕಾರಗಳೂ ಇದೇ ರೀತಿ ಅಲ್ಲಿನ ರಾಜ್ಯಪಾಲರ ವಿರುದ್ಧ ಸುಪ್ರೀಂಕೋ ರ್ಟ್‌ಗೆ ಅರ್ಜಿಸಲ್ಲಿಸಿದ್ದವು. ಅದರ ಬೆನ್ನಲ್ಲೇ ಈಗ ಕೇರಳ ಸರಕಾರವೂ  ರಾಜ್ಯಪಾಲರ ವಿರುದ್ಧ ಸುಪ್ರೀಂಕೋ ರ್ಟ್ ಸಮೀಪಿಸಿದೆ.

Leave a Reply

Your email address will not be published. Required fields are marked *

You cannot copy content of this page