ಅನಂತಪುರ ಕ್ರಿಯಾಸಮಿತಿ ಮುಷ್ಕರ: ಮಂಜೇಶ್ವರ ಬ್ಲೋಕ್ ಪಂ. ಬೆಂಬಲ

ಕುಂಬಳೆ: ಅನಂತಪುರದ ಕೈಗಾರಿಕಾ ಪ್ರಾಂಗಣದಲ್ಲಿ ಕ್ರಿಯಾ ಸಮಿತಿ ನಡೆಸುತ್ತಿರುವ ಮುಷ್ಕರ ಚಪ್ಪರಕ್ಕೆ ನಿನ್ನೆ ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷೆ ಶಮೀನಾ ಟೀಚರ್, ಮುಸ್ಲಿಂ ಲೀಗ್ ಮುಂಖಂಡ ಎ.ಎಂ. ಆರಿಫ್, ಸೈಫುಲ್ಲಾ ತಂಙಳ್ ಭೇಟಿ ನೀಡಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ಅನಂತಪುರದ ಕೋಳಿ ತ್ಯಾಜ್ಯ ವಿರುದ್ಧ ಕ್ರಿಯಾ ಸಮಿತಿ ಕಳೆದ ಹಲವು ದಿನಗಳಿಂದ ಅನಿರ್ದಿ ಷ್ಟಾವಧಿ ಮುಷ್ಕರ ನಡೆಸುತ್ತಿದೆ.

ಧರ್ಮತ್ತಡ್ಕದಲ್ಲಿ ಉಪಜಿಲ್ಲಾ ಕಲೋತ್ಸವದ ಅಲೋಕನಾ ಸಭೆ

ಧರ್ಮತ್ತಡ್ಕ: ನವಂಬರ್ ೭ರಿಂದ ೧೦ರವರೆಗೆ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ ೬೨ನೇ ಕೇರಳ ರಾಜ್ಯ ಉಪಜಿಲ್ಲಾ ಶಾಲಾ ಕಲೋತ್ಸವದ ಅವಲೋಕನಾ ಸಭೆ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲೋತ್ಸವದ ಯಶಸ್ವಿಗಾಗಿ ರಚಿಸಿದ ೯ ಉಪಸಮಿತಿಗಳ ಕನ್ವೀನರ್ ತಮ್ಮ ಸಮಿತಿಯ ಪ್ರಗತಿಯನ್ನು ಮಂಡಿಸಿದರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್, ಹೈಸ್ಕೂಲ್ ಮುಖ್ಯೋಪಾ ಧ್ಯಾಯ ಗೋವಿಂದ ಭಟ್, ಯುಪಿ ಮುಖ್ಯೋಪಾಧ್ಯಾಯ ಮಹಾಲಿಂಗ ಎಚ್‌ಎಂ, ಫಾಮ್ ಸೆಕ್ರೆಟರಿ ಶಾಮ …

ಉದ್ಯೋಗ ಭರವಸೆಯೊಡ್ಡಿ ಹಲವರಿಗೆ ವಂಚನೆ : ತಲೆಮರೆಸಿಕೊಂಡ ಮಹಿಳೆ ಉಪ್ಪಿನಂಗಡಿಯಲ್ಲಿ ಸೆರೆ

ಕಾಸರಗೋಡು: ಯು.ಕೆ.ಯಲ್ಲಿ ಉದ್ಯೋಗ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಕರ್ನಾಟಕದ ಉಪ್ಪಿನಂಗಡಿಯಿಂದ ಸೆರೆ ಹಿಡಿಯಲಾಗಿದೆ. ಕಣ್ಣೂರು ಪಯ್ಯನ್ನೂರು ವಲಿಯಪರಂಬು ನಿವಾಸಿ ಮಿನಿಮೋಳ್ ಮ್ಯಾಥ್ಯು (೫೮) ಎಂಬಾಕೆ ಸೆರೆಗೀಡಾದ ಆರೋಪಿಯಾಗಿದ್ದಾಳೆ. ಮೂಲತಃ ತೃಶೂರಿನ ಕೂಮಂಜೇರಿ ನಿವಾಸಿಯಾದ ಈಕೆ ಕಣ್ಣೂರು ವಲಯ ಪರಂಬದಲ್ಲಿ ವಾಸಿಸಿ ಹಲವರನ್ನು ಭೇಟಿ ಯಾಗಿ ಅವರಿಗೆ ಕೆನಡಾದಲ್ಲಿ ಉದ್ಯೋಗ ವೀಸಾ ದೊರಕಿಸಿಕೊಡುವುದಾಗಿ ತಿಳಿಸಿ ಲಕ್ಷಾಂತರ ರೂಪಾಯಿ  ಪಡೆದುಕೊಂಡಿ ರುವುದಾಗಿ ಹೇಳಲಾಗುತ್ತಿದೆ. ಒಳಿಕ್ಕಲ್ ಕೂಮಂತೋಟ್‌ನ ಆಶಿದಾ ಜೋನ್ ಎಂಬವರಿಂದ ೧೪ ಲಕ್ಷ …

ಸ್ನಾನಕ್ಕೆಂದು ಹೊಳೆಗೆ ಇಳಿದ ವ್ಯಕ್ತಿ ನಾಪತ್ತೆ: ವ್ಯಾಪಕ ಶೋಧ

ಕಾಸರಗೋಡು: ಹೊಳೆಗೆ ಸ್ನಾನಕ್ಕೆಂದು ಇಳಿದ ವ್ಯಕ್ತಿ ಸೆಳೆತಕ್ಕೆ ನೀರಿನ ಸಿಲುಕಿ ನಾಪತ್ತೆಯಾದ ಘಟನೆ ಚೆಂಗಳ ಬಳಿ ನಡೆದಿದೆ. ಚೆಂಗಳ ಪಾಣಳಂ ನಿವಾಸಿ ಮಜೀದ್ (೫೪) ನಾಪತ್ತೆಯಾದ ವ್ಯಕ್ತಿ. ಅವರು ನಿನ್ನೆ ಸಂಜೆ ಸ್ನಾನಕ್ಕೆಂದು ಮನೆ ಪಕ್ಕದ ಹೊಳೆಗೆ ಇಳಿದಿದ್ದು ಆಗ ನೀರಿನ ಸೆಳೆತಕ್ಕೊಳಗಾಗಿ ನಾಪತ್ತೆಯಾಗಿದ್ದಾರೆ. ಆ ಬಗ್ಗೆ ಮಾಹಿತಿ ಲಭಿಸಿದ ಕಾಸರಗೋಡು ಅಗ್ನಿಶಾಮಕದಳ ಮತ್ತು ವಿದ್ಯಾನಗರ  ಪೊಲೀಸರು ತಕ್ಷಣ  ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಊರವರ ಸಹಾಯದಿಂದ ವ್ಯಾಪಕ ಶೋಧ ಆರಂಭಿಸಿದ್ದಾರೆ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ.

ಬಿಜೆಪಿ ವಿರೋಧದ ಮಧ್ಯೆ ಭಾಸ್ಕರನಗರ ಬಳಿ ಬಸ್ತಂ ಗುದಾಣಕ್ಕೆ ಕುಂಬಳೆ ಪಂ. ಆಡಳಿತ ಸಮಿತಿ ಗೊತ್ತುವಳಿ

ಕುಂಬಳೆ: ಭಾಸ್ಕರನಗರ ಬಳಿ ಬಸ್ ತಂಗುದಾಣ ಮಂಜೂರು ಮಾಡಬೇಕೆಂದು ಕುಂಬಳೆ ಪಂಚಾಯತ್ ಆಡಳಿತ ಸಮಿತಿ ಆರ್‌ಟಿಒರವರಲ್ಲಿ ಆಗ್ರಹಿಸಲು ತೀರ್ಮಾನಿಸಿದೆ. ಈ ಬಗ್ಗೆ ಮಂಡಿಸಿದ ಅಜೆಂಡಾಕ್ಕೆ ಅನುಕೂಲವಾಗಿ ಲೀಗ್ ಕಾಂಗ್ರೆಸ್, ಎಸ್‌ಡಿಪಿಐ, ಮಾರ್ಕಿಸ್ಟ್ ಸದಸ್ಯರು ಮತ ನೀಡಿದರು. ಆದರೆ ಬಿಜೆಪಿಯ ಏಳು ಸದಸ್ಯರೂ ಅದನ್ನು ವಿರೋಧಿಸಿದರು.  ಬಿಜೆಪಿಯ ಇಬ್ಬರು ಸದಸ್ಯರು ಸಭೆಯಲ್ಲಿ ಭಾಗವಹಿಸಿರಲಿಲ್ಲವೆಂದು ಹೇಳಲಾಗಿದೆ.  ಪಂಚಾಯತ್ ಕುಂಬಳೆಯಲ್ಲಿ ಬಸ್ ನಿಲ್ದಾಣ, ಮೀನು ಮಾರುಕಟ್ಟೆ, ಟಾಯ್ಲೆಟ್, ಆಟೋ ಸ್ಟ್ಯಾಂಡ್, ಅನಧಿಕೃತ ಗೂಡಂಗಡಿಗಳ ಸಹಿತ ವಿವಿಧ ನಿರ್ಣಾಯಕ ಸಮಸ್ಯೆಗಳಲ್ಲಿ ಕ್ರಮ  ಕೈಗೊಳ್ಳಲು …

ಕಳಮಶ್ಶೇರಿ ಬಾಂಬ್ ಸ್ಫೋಟ: ಸ್ಕೆಚ್‌ಗೆ ರೂಪು ನೀಡಿದ್ದು ದುಬಾಯಿಯಲ್ಲಿ

ಎರ್ನಾಕುಳಂ: ಕಳಮಶ್ಶೇರಿ ಯಹೋವನ ಸಮಾವೇಶ ನಡೆಯುತ್ತಿದ್ದ ಕನ್ವೆನ್ಶನ್ ಹಾಲ್‌ನಲ್ಲಿ ಕಳೆದ ಭಾನುವಾರ ನಡೆಸಲಾದ ತ್ರಿವಳಿ ಬಾಂಬ್ ಸ್ಫೋಟದ ಸ್ಕೆಚ್‌ಗೆ ರೂಪು ನೀಡಿದ್ದು  ದುಬಾಯಿಯಲ್ಲಾ ಗಿದೆ ಎಂದು ತನಿಖಾ ತಂಡಕ್ಕೆ ಸ್ಪಷ್ಟ ಮಾಹಿತಿ ಲಭಿಸಿದ್ದು, ಅದರಿಂದ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದುಬಾಯಿಗೂ ವಿಸ್ತರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ಚೆಲವನ್ನೂರು ವೇಲಿಕಗತ್ತ ವೀಟಿಲ್‌ನ ಮಾರ್ಟಿನ್ ಡೊಮಿನಿಕ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಬಾಂಬ್ ಸ್ಫೋಟದ ಸ್ಕೆಚ್‌ಗೆ ರೂಪು ನೀಡಿದ್ದು ದುಬಾಯಿಯಲ್ಲಿ ಆಗಿದೆ ಎಂದು …

ಕೇರಳೀಯಂ ಮಹೋತ್ಸವಕ್ಕೆ ಚಾಲನೆ

ತಿರುವನಂತಪುರ: ಕೇರಳ ರಾಜ್ಯ ಸಂಸ್ಥಾಪನಾ ದಿನವಾದ ನವೆಂಬರ್ ೧ನ್ನು ಇಂದು ರಾಜ್ಯದಾದ್ಯಂತವಾಗಿ ಸರಕಾರಿ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಏರ್ಪಡಿಸಲಾದ ಕೇರಳೀಯಂ ಮಹೋತ್ಸವಕ್ಕೆ ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನಲ್ಲಿ ಇಂದು ಬೆಳಿಗ್ಗೆ ನಡೆದ ಅದ್ದೂರಿಯ ಹಾಗೂ ವರ್ಣರಂಜಿತ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿ ಮಾತನಾಡಿದರು. ಇಂದು ಆರಂಭಗೊಂಡ  ಈ ಮಹೋತ್ಸವ ನವೆಂಬರ್ ೭ರ ತನಕ ಮುಂದುವರಿಯಲಿದೆ. ಒಟ್ಟು ೪೨ ವೇದಿಕೆಗಳಲ್ಲಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಇದರಲ್ಲಿ ವಿಚಾರ ಸಂಕಿರಣ, ವಸ್ತುಪ್ರದರ್ಶನಗಳು, …

ಇಲೆಕ್ಷನ್ ಹೀಯರಿಂಗ್ ವೇಳೆ ಡೆಪ್ಯುಟಿ ತಹಶೀಲ್ದಾರ್‌ರ ಮೇಲೆ ಕೈಮಾಡಿದ ಪ್ರಕರಣ: ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸೇರಿದಂತೆ ನಾಲ್ವರಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಕರ್ತವ್ಯದಲ್ಲಿ ನಿರತರಾಗಿದ್ದ ಡೆಪ್ಯುಟಿ ತಹಶೀಲ್ದಾರ್ ಮೇಲೆ ಕೈಮಾಡಿ ಅವರ ಕರ್ತವ್ಯ ನಿರ್ವಹಣೆಗೆ ಚ್ಯುತಿ ಉಂಟುಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸೇರಿದಂತೆ ನಾಲ್ವರಿಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೨) ವಿವಿಧ ಸೆಕ್ಷನ್‌ಗಳಲ್ಲಾಗಿ ತಲಾ ಒಟ್ಟು ಒಂದು ವರ್ಷ ಮೂರು  ತಿಂಗಳ ಸಜೆ ಮತ್ತು ೧೦,೦೦೦ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.  ಎ.ಕೆ.ಎಂ ಅಶ್ರಫ್‌ರ ಹೊರತಾಗಿ ಅಂದು ಮಂಜೇಶ್ವರ ಪಂಚಾಯತ್ ಸದಸ್ಯರಾಗಿದ್ದ ಬಂಗ್ರಮಂಜೇಶ್ವರದ ಅಬ್ದುಲ್ಲ …

೧೨ ಅನಧಿಕೃತ ಹೊಯ್ಗೆ ಕಡವು ನಾಶಗೊಳಿಸಿದ ಪೊಲೀಸ್

ಕುಂಬಳೆ: ಹೊಯ್ಗೆ ಸಾಗಿಸಲು ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಲ್ಲಿ  ಮಾಫಿಯ ತಂಡಗಳು ನಿರ್ಮಿಸಿವೆ ಎನ್ನಲಾದ ೧೨ ಕಡವುಗಳನ್ನು ಪೊಲೀಸರು ನಿನ್ನೆ ಜೆಸಿಬಿ ಬಳಸಿ ನಾಶ ಡಿಸಿದ್ದಾರೆ. ಸರಕಾರಿ ಸ್ಥಳದಲ್ಲೇ ಈ ಕಡವುಗಳನ್ನು ನಿರ್ಮಿಸಲಾಗಿದೆ ಯೆಂದೂ ಪೊಲೀಸರು ತಿಳಿಸಿದ್ದಾರೆ. ಆದುದರಿಂದ ಯಾರ ವಿರುದ್ಧ ಕೇಸು ದಾಖಲಿಸಬೇಕು ಎಂಬ ಕುರಿತು ಆಲೋಚಿಸುತ್ತಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಶಿರಿಯ ವಳಯಂನಲ್ಲಿ ಏಳು ಅನಧಿಕೃತ ಕಡವುಗಳು, ಆರಿಕ್ಕಾಡಿ ಟಿಪಿಕೆ ನಗರದಲ್ಲಿ ಮೂರು ಕಡವುಗಳು ಹಾಗೂ ಮೊಗ್ರಾಲ್‌ನಲ್ಲಿ ಎರಡು ಅನಧಿಕೃತ ಕಡವುಗಳನ್ನು ನಾಶಗೊಳಿಸಲಾಗಿದೆ. ಈ …

ವಯನಾಡು ನಿವಾಸಿಗೆ ಬಂದ್ಯೋಡು ಅಡ್ಕದಲ್ಲಿ ಹಲ್ಲೆ

ಬಂದ್ಯೋಡು: ವಯನಾಡು ನಿವಾಸಿಯಾದ ರಮೇಶನ್ ಎಂಬವರು ತಿರುವನಂತಪುರ ನಿವಾಸಿಯಾದ ಮನು ಎಂಬಾತ ನಿನ್ನೆ ರಾತ್ರಿ ಬಂದ್ಯೋಡು ಅಡ್ಕದಲ್ಲಿ ಹಲ್ಲೆಗೈದ ಘಟನೆ ನಡೆದಿದೆ. ರಾತ್ರಿ ೯ ಗಂಟೆಗೆ ನೀನು ಯಾಕೆ ಇಲ್ಲಿ ನಿಂತಿದ್ದಿ ಎಂದು ಪ್ರಶ್ನಿಸಿ ಹಲ್ಲೆಗೈದಿರುವುದಾಗಿ ರಮೇಶನ್ ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ತಿರುವನಂತಪುರ ನಿವಾಸಿ ಮನು ಯಾಕಾಗಿ ಆ ಹೊತ್ತಿನಲ್ಲಿ ಅಲ್ಲಿಗೆ ಬಂದನೆಂದು ಆತನನ್ನು ಪ್ರಶ್ನಿಸಬೇಕೆಂದು ರಮೇಶನ್ ಪೊಲೀಸರಲ್ಲಿ ಆಗ್ರಹಪಟ್ಟಿದ್ದಾನೆ. ಪೊಲೀಸರು ದೂರು ಸ್ವೀಕರಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಅಡ್ಕ ಕೇಂದ್ರೀಕರಿಸಿ …