ಕೂಲಿ ಕಾರ್ಮಿಕ ನೇಣುಬಿಗಿದು ಆತ್ಮಹತ್ಯೆ

ಮಂಜೇಶ್ವರ: ಕರ್ನಾಟಕ ನಿವಾಸಿ ಕೂಲಿ ಕಾರ್ಮಿಕ ವಾಸಸ್ಥಳದಲ್ಲಿ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಹತ್ತಿಮತ್ತೂರು ನಿವಾಸಿ ಭೀಮಪ್ಪ [40] ಮೃತಪm್ಟ ವರು. ಇವರು ಕಳೆದ ಹಲವು ತಿಂಗಳಿAದ ಮಂಜೇಶ್ವರ ಕಟ್ಟೆಬಜಾರ್ ಬಾಡಿಗೆ ಕ್ವಾರ್ಟರ್ಸ್ನಲ್ಲಿ ಕುಟುಂಬ ದೊಂದಿಗೆ ವಾಸಿಸುತ್ತಿದ್ದರು. ಶುಕ್ರವಾರ ಸಂಜೆ ಯಾರು ಇಲ್ಲದ ವೇಳೆ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಊರಿಗೆ ಕೊಂಡೊ ಯ್ಯಲಾಗಿದೆ. ಮೃತರು ಪತ್ನಿ ಗೀತಾ, ಮಕ್ಕಳಾದ …

ಶೇಂದಿ ಅಂಗಡಿ ಕಾರ್ಮಿಕ ಕುಸಿದುಬಿದ್ದು ಮೃತ್ಯು

ಮಂಜೇಶ್ವರ: ಮಂಜೇಶ್ವರ ಡಾನ್‌ಬಾಸ್ಕೋ ಶಾಲಾ ಬಳಿಯ ನಿವಾಸಿ ದಿ ಬೌತೀಸ್ ಡಿ ಸೋಜಾ ರ ಪುತ್ರ ಹೆಂಡ್ರಿ ಡಿ ಸೋಜಾ [46] ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಚಿಗುರುಪಾದೆಯಲ್ಲಿ ಶೇಂದಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶುಕ್ರವಾರ ಸಂಜೆ ಕೆಲಸದ ಮಧ್ಯೆ ಕುಸಿದು ಬಿದ್ದಿದ್ದು, ಕೂಡಲೇ ಉಪ್ಪಳ ಆಸ್ಪತ್ರೆಗೆ ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ತಾಯಿ ಎಲಿಝ ಫರಾವೋ, ಪತ್ನಿ ವಿನಿತ ವೇಗಸ್, ಪುತ್ರ ವಿನೀಶ್, ಇಬ್ಬರು ಸಹೋದರರು, ನಾಲ್ಕು ಮಂದಿ ಸಹೋದರಿಯರು ಹಾಗೂ ಅಪಾರ …

ಫ್ಲೈಓವರ್ ಕಾಮಗಾರಿ ಪ್ರಗತಿಯಲ್ಲಿ : ಬದಲಾಗುತ್ತಿದೆ ನಗರದ ಮುಖಛಾಯೆ

ಕಾಸರಗೋಡು: ಕಾಸರಗೋಡು ನಗರದ ಹೃದಯ ಭಾಗದಲ್ಲಿ ಫ್ಲೈಓವರ್ ನಿರ್ಮಾಣ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ತಲಪಾಡಿ ಚೆಂಗಳ ರೀಚ್‌ನಲ್ಲಿ ಬರುವ ಅತ್ಯಂತ ಉದ್ದದ ಫ್ಲೈಓವರ್ ರಸ್ತೆ ಈಗಾಗಲೇ ಕೆಲವು ಕಡೆ ಪೂರ್ಣತೆಯತ್ತ ಸಾಗಿದೆ. ಕರಂದಕ್ಕಾಡ್‌ನಿಂದ ಆರಂಭಿಸಿ ನುಳ್ಳಿಪ್ಪಾಡಿವರೆಗಿರುವ ಫ್ಲೈಓವರ್ ರಾಜ್ಯದಲ್ಲೇ ಏಕ ಕಂಬದಲ್ಲಿ ನಿರ್ಮಿಸುವ ಅತ್ಯಂತ ಉದ್ದದ ಫ್ಲೈಓವರ್ ಆಗಿದೆ. ಮಧ್ಯದಲ್ಲಿ ಒಂದು ಕಂಬ ನಿರ್ಮಿಸಿ ಅದರ ಮೇಲೆ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಲಿದೆ. ಕರಂದಕ್ಕಾಡಿನಲ್ಲಿ ಸ್ವಲ್ಪ ದೂರ ಕೆಲಸ  ಪೂರ್ಣಗೊಂಡಿದೆ. ಈ ಫ್ಲೈಓವರ್ ಸಂಪೂರ್ಣವಾದಾಗ …

ಇಸ್ರೋದ ಮಾನವರಹಿತ ಗಗನಯಾನ ನೌಕೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಹೈದರಾಬಾದ್: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ಧವನ್ ಬಾಹ್ಯಾಕಾಶ ಕೇಂದ್ರದಿಂದ, ಇಸ್ರೋದ ಮಾನವರಹಿತ ಗಗನಯಾನ ಯೋ ಜನೆಯ ಪರೀಕ್ಷಾ ಪ್ರಯೋಗ ಅತ್ಯಂತ ಯಶಸ್ವಿಗೊಂಡಿದೆ. ಇಸ್ರೋ ಮುಖ್ಯಸ್ಥ ಸೋಮನಾಥ ಅವರು ಈ ಬಗ್ಗೆ ಮಾಹಿತಿ ನೀಡಿದ್ದು,  ಟೆಸ್ಟ್ ವೆಹಿಕಿಲ್ ಲಿಫ್ಟ್ ಅಪ್ ಯಶಸ್ವಿ ಯಾಗಿದ್ದು, ವಾಹನ ಸುರಕ್ಷಿತವಾಗಿದೆ. ಮಾತ್ರವಲ್ಲ ನಿರೀಕ್ಷಿತ ರೀತಿಯಲ್ಲೇ ಇದರ ಉಡಾವಣೆ ಯಶಸ್ವಿಗೊಂಡಿದೆ ಎಂದಿದ್ದಾರೆ. ಇಂದು ಬೆಳಿಗ್ಗೆ ೧೦ ಗಂಟೆಗೆ ಮಾನವರಹಿತ ಗಗನ ಯೋಜನೆಯ ನೌಕೆ ಪ್ರಯೋಗ ನಡೆಸಿದ್ದು, ರಾಕೆಟ್ ನಿಂದ ೨ ಮೋಡ್ಯೂಲ್‌ಗಳು ಪ್ರತ್ಯೇಕ ಗೊಂಡಿದೆ. ಭಾರತೀಯ …

ಕುಡಿಯುವ ನೀರಿನ ಬದಲು ಪೆಟ್ಟು: ಪಂ. ಸದಸ್ಯನ ವಿರುದ್ಧ ಕೇಸು ದಾಖಲು

ಬದಿಯಡ್ಕ: ಕುಡಿಯುವ ನೀರು ವಿತರಣೆ ಮೊಟಕುಗೊಂಡಿರುವುದರ ಕುರಿತು ದೂರು ನೀಡಲು ಹೋದ ಕೂಲಿ ಕಾರ್ಮಿಕನಿಗೆ ಹಲ್ಲೆಗೈದ ಆರೋಪದಂತೆ ಬದಿಯಡ್ಕ ಪಂಚಾಯತ್  ಸದಸ್ಯನೂ, ಮುಸ್ಲಿಂ ಲೀಗ್ ನೇತಾರನಾದ ಹಮೀದ್ ಪಳ್ಳತ್ತಡ್ಕ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಪಳ್ಳತ್ತಡ್ಕದ ಕೃಷ್ಣ (೫೬) ಎಂಬವರ ದೂರಿನಂತೆ ಈ ಕೇಸು ದಾಖಲಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಕೃಷ್ಣ ಚಿಕಿತ್ಸೆ ಪಡೆದಿದ್ದರು. ಪತ್ನಿ ಚಿಕಿತ್ಸೆಯಲ್ಲಿದ್ದು ದರಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿ ಲ್ಲವೆಂದು ಕೃಷ್ಣ ತಿಳಿಸಿದ್ದಾರೆ.  ಇದೇ ವೇಳೆ ಕೃಷ್ಣರಿಂದ ದೂರನ್ನು …

೪೬ ಲಕ್ಷ ರೂ.ಗಳ ಚಿನ್ನ ದೇಹದಲ್ಲಿ ಬಚ್ಚಿಟ್ಟು ಸಾಗಾಟ: ಕಾಸರಗೋಡು ನಿವಾಸಿ ಸೆರೆ

ಕಾಸರಗೋಡು: ೪೬ ಲಕ್ಷ ರೂಪಾಯಿಗಳ ಚಿನ್ನವನ್ನು ದೇಹದೊಳಗೆ ಬಚ್ಚಿಟ್ಟು ಸಾಗಿಸಿದ ಕಾಸರಗೋಡು ನಿವಾಸಿಯನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಸ್ಟಂಸ್ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಕಾಸರಗೋಡು ನಿವಾಸಿಯಾದ ಹಂಸ ಆಶಿಫ್ ಎಂಬಾತನಿಂದ ಚಿನ್ನ ವಶಪಡಿ ಸಲಾಗಿದೆ. ಈತ ಇಂದು ಮುಂಜಾನೆ ೪.೩೦ಕ್ಕೆ ಶಾರ್ಜಾದಿಂದ ಬಂದು ಕಣ್ಣೂರು ವಿಮಾನ ನಿಲ್ದಾಣಕ್ಕೆ ತಲುಪಿದ ವಿಮಾನದ ಪ್ರಯಾ ಣಿಕನಾಗಿದ್ದಾನೆ. ಈತನ ದೇಹವನ್ನು ಕಸ್ಟಂಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ೮೬೨ ಗ್ರಾಂ ಚಿನ್ನವನ್ನು ಮೂರು ಮಾತ್ರೆಗಳ ರೂಪದಲ್ಲಾಗಿಸಿ ಗುದದ್ವಾರದಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದೆಯೆಂದು ತಿಳಿಯಲಾಗಿದೆ.

ನಿಲುಗಡೆ ಸ್ಥಳದಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿಲ್ಲವೆಂದು ಆರೋಪಿಸಿ ವಿದ್ಯಾರ್ಥಿನಿಯರಿಂದ ಬಸ್‌ಗಳಿಗೆ ತಡೆ

ಕುಂಬಳೆ: ನಿಲು ಗಡೆ ಸ್ಥಳದಲ್ಲಿ ಬಸ್ ನಿಲ್ಲಿಸುವು ದಿಲ್ಲ ವೆಂದು ಆರೋಪಿಸಿ ವಿದ್ಯಾರ್ಥಿನಿಯರು ಬಸ್‌ಗಳಿಗೆ ತಡೆ ಯೊಡ್ಡಿದ ಘಟನೆ ನಡೆದಿದೆ. ಈ ಘಟನೆ ಕುಂಬಳೆ ಪೇಟೆಯಲ್ಲಿ ಕೂಡಾ ಪುನರಾವರ್ತಿಸಿದ್ದು, ಇದರಿಂದ ಪೊಲೀ ಸರು ಮಧ್ಯೆ ಪ್ರವೇ ಶಿಸಿ ಸಮಸ್ಯೆಗೆ ಪರಿ ಹಾರ ಕಾಣು ವುದಾಗಿ  ಭರವಸೆ ನೀಡಿದ್ದಾರೆ. ಕುಂಬಳೆ ಭಾಸ್ಕರನಗರ ಸಮೀಪ  ಖಾಸಗಿ ಮಹಿಳಾ ಕಾಲೇಜಿನ ಮುಂದೆ ಆರ್‌ಟಿಒ ನಿಲುಗಡೆ ಮಂಜೂರು ಮಾಡಿರುವುದಾಗಿ ಹೇಳಲಾಗುತ್ತಿದೆ. ಪ್ರಸ್ತುತ ಸ್ಥಳದಲ್ಲಿ ರಸ್ತೆ ಅಭಿವೃದ್ಧಿ ನಡೆದು ಕೆಎಸ್‌ಟಿಪಿ ಅಧಿಕಾರಿಗಳು ವೈಟಿಂಗ್ ಶೆಡ್ …

ಮುಖ್ಯಮಂತ್ರಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಹೇಳಿಕೆಯಿಂದ ಯು-ಟರ್ನ್ ಹೊಡೆದ ದೇವೇಗೌಡ

ಬೆಂಗಳೂರು: ಕರ್ನಾಟಕದಲ್ಲಿ ಜೆಡಿ ಎಸ್- ಬಿಜೆಪಿ ಮೈತ್ರಿ ಮುಂದುವರಿಯಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂಪೂರ್ಣ ಒಪ್ಪಿಗೆ ನೀಡಿ ದ್ದರು ಎಂದು ಹೇಳುವ ಮೂಲಕ ರಾಜಕೀ ಯ ಬಿರುಗಾಳಿಯನ್ನು ಹುಟ್ಟುಹಾಕಿದ ಕೆಲವೇ ಗಂಟೆಗಳ ನಂತರ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ತಮ್ಮ ಆ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದಾರೆ. ಬಿಜೆಪಿ- ಜೆಡಿಎಸ್ ಮೈತ್ರಿಗೆ ಕೇರಳ ಮುಖ್ಯಮಂತ್ರಿ ಬೆಂಬಲಿಸಿದ್ದಾರೆ ಮತ್ತು ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದು ನಾನು ಎಂದಿಗೂ ಹೇಳಿಲ್ಲ. ಎಂದು ಹೇಳುವ ಮೂಲಕ ದೇವೇಗೌಡರು ಮೊನ್ನೆ ಸಂಜೆ ನೀಡಿದ ತಮ್ಮ …

ಪೈವಳಿಕೆ ಸಹಕಾರಿ ಬ್ಯಾಂಕ್ ಚುನಾವಣೆ: ಸಿಪಿಐ-ಸಿಪಿಎಂ ಮಧ್ಯೆ ಪರಸ್ಪರ ಸ್ಪರ್ಧೆ

ಪೈವಳಿಕೆ: ಜೊತೆಗೆ ನಿಲ್ಲಿಸಿಕೊಂಡು ಹಿಂಡಿಹಿಪ್ಪೆ ಮಾಡಲಿರುವ ಸಿಪಿಎಂನ ರಹಸ್ಯ ನಡೆಯನ್ನು ಪೈವಳಿಕೆಯಲ್ಲಿ ಸಿಪಿಐ ವಿರೋಧಿಸಿದೆ.  ಈ ಹಿನ್ನೆಲೆ ಯಲ್ಲಿ ನವಂಬರ್ ನಾಲ್ಕರಂದು ನಡೆಯುವ ಪೈವಳಿಕೆ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಪರಸ್ಪರ ಸ್ಪರ್ಧಿಸಲು  ಸಹೋದರರು ತೀರ್ಮಾನಿಸಿದ್ದಾರೆ. ಚುನಾವಣೆಗೆ ನಾಮಪತ್ರಿಕೆ ಹಿಂತೆಗೆಯಬೇಕಾಗಿದ್ದ ನಿನ್ನೆ ಸಂಜೆ ಎರಡು ಪಕ್ಷಗಳು ತಾವು ನೀಡಿದ ನಾಮಪತ್ರಿಕೆ ಹಿಂತೆಗೆಯಲಿಲ್ಲ.  ಸಹಕಾರಿ  ಬ್ಯಾಂಕ್ ಚುನಾವಣೆಯಲ್ಲಿ ಈಗಿರುವ ಸ್ಥಿತಿಯನ್ನು ಮುಂದುವರಿಸ ಬೇಕೆಂದಾಗಿದೆ ಎಡರಂಗದ  ಜಿಲ್ಲಾ ನೇತೃತ್ವ ದೃಢವಾಗಿ ತಿಳಿಸಿದೆ. ಕಳೆದ ಚುನಾವಣೆಯ ಬಳಿಕ ಸಿಪಿಎಂನೊಂ ದಿಗಿರುವ ಕಾಂಗ್ರೆಸ್ ಹಾಗೂ …

ರಾತ್ರಿ ಗಸ್ತು ನಡೆಸುತ್ತಿದ್ದ ಎಸ್‌ಐ.ಗೆ ಹಲ್ಲೆ: ಯುವಕ ಸೆರೆ

ಸೀತಾಂಗೋಳಿ: ರಾತ್ರಿ ಹೊತ್ತಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಎಸ್‌ಐಗೆ ಹಲ್ಲೆಗೈದ ಆರೋಪದಂತೆ ಯುವಕನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿ ದ್ದಾರೆ.  ಪುತ್ತಿಗೆ ನಿವಾಸಿ ಅಬ್ದುಲ್ ಬಾಸಿತ್ (೩೦) ಬಂಧಿತ ಆರೋಪಿ ಯಾಗಿದ್ದಾನೆ. ಬದಿಯಡ್ಕ ಎಸ್‌ಐ ಅನ್ಸಾರ್‌ಗೆ ನಿನ್ನೆ ರಾತ್ರಿ ಕಟ್ಟತ್ತಡ್ಕದಲ್ಲಿ ಹಲ್ಲೆಗೈದ ಪ್ರಕರಣ ನಡೆದಿತ್ತು. ಪೊಲೀಸರು ನಿನ್ನೆ ರಾತ್ರಿ ೧೨ ಗಂಟೆಗೆ ಕಟ್ಟತ್ತಡ್ಕಕ್ಕೆ ತಲುಪಿದಾಗ ಅಬ್ದುಲ್   ಬಾಸಿತ್ ನಿಂತಿರುವುದು ಕಂಡುಬಂ ದಿದೆ. ಯಾಕಾಗಿ ಇಲ್ಲಿ ನಿಂತಿರುವು ದೆಂದು ಆತನನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಆತ ಅಸಭ್ಯವಾಗಿ ಮಾತನಾಡಿ ಎಸ್‌ಐಯ ಕೈ …