ಬಾವಿಗೆ ಹಾರಿದ ವ್ಯಕ್ತಿಯರಕ್ಷಿಸಲು ಹಾರಿದ ಪಂ. ಸದಸ್ಯ ಇಬ್ಬರನ್ನು ಅಗ್ನಿಶಾಮಕದಳ ಮೇಲೆತ್ತಿ ರಕ್ಷಣೆ

ಉಪ್ಪಳ: ಬಾವಿಗೆ ಹಾರಿದ ವ್ಯಕ್ತಿ ಯನ್ನು ರಕ್ಷಿಸಲೆಂದು ಹಾರಿದ ವ್ಯಕ್ತಿ ಕೂಡಾ ಬಾವಿಯಿಂದ ಮೇಲೇರಲಾಗದೆ ಅಗ್ನಿಶಾಮಕದಳ ತಲುಪಿ ಮೇಲೆತ್ತಿದ ಘಟನೆ ಮಂಗಲ್ಪಾಡಿಯಲ್ಲಿ ನಿನ್ನೆ ಸಂಭವಿಸಿದೆ. ಬಂದ್ಯೋಡು ಬಳಿಯ ಚೂಕಿರಿ ಅಡ್ಕ ನಿವಾಸಿ ನಝೀರ್ (೬೦) ಬಾವಿಗೆ ಹಾರಿದ್ದು, ಇವರನ್ನು ರಕ್ಷಿಸಲು ಹಾರಿದ ಮಂಗಲ್ಪಾಡಿ ಪಂ. ಸದಸ್ಯ ಇಬ್ರಾಹಿಂ (ಉಂಬಯಿ) ಪೆರಿಂಗಡಿ ಬಾವಿಯಲ್ಲಿ ಸಿಲುಕಿಕೊಂಡವರು. ಬಳಿಕ ಅಗ್ನಿಶಾಮಕದಳ ತಲುಪಿ ಇವರಿಬ್ಬರನ್ನು ಮೇಲೆತ್ತಿ ನಝೀರ್‌ನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಂದು ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿದೆ. ನಝೀರ್ …

ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ: ಚಿನ್ನ, ಪೆಟ್ರೋಲಿಯಂ ಬೆಲೆ ಗಗನಕ್ಕೆ

ತಿರುವನಂತಪುರ: ಇಸ್ರೇಲ್-ಹಮಾಸ್ ಯುದ್ಧ ಶಮನಗೊಳ್ಳದೆ ಇನ್ನೂ ತೀವ್ರರೂಪದಲ್ಲಿ ಮುಂದು ವರಿಯುತ್ತಿರುವಂತೆ, ಅದರ ಪರಿ ಣಾಮ ಚಿನ್ನ ಮತ್ತು ತೈಲೋತ್ಪನ್ನಗಳ ಬೆಲೆ  ಗಗನಕ್ಕೇರುವಂತೆ ಮಾಡಿದೆ. ಪವನ್ ಒಂದರ ಚಿನ್ನದ ಬೆಲೆ  ಇಂದು ದಿಢೀರ್ ಆಗಿ ೧೧೨೦ ರೂ. ಏರಿಕೆಯುಂಟಾಗಿ ಅದು ಈಗ ೪೪,೩೨೦ಕ್ಕೆ ತಲುಪಿದೆ. ಒಂದು ಗ್ರಾಂ ಚಿನ್ನದ ಬೆಲೆ ೫೫೪೦ ರೂ.ಗೇರಿದೆ. ಇಂದು ಮಾತ್ರವಾಗಿ ೧ ಗ್ರಾಂ ಚಿನ್ನದ ಬೆಲೆಯಲ್ಲಿ ೧೪೦ರೂ.ನಷ್ಟು ಏರಿಕೆಯುಂಟಾಗಿದೆ.  ಕಳೆದ ಅಕ್ಟೋಬರ್ ೧ರಂದು ಚಿನ್ನದ ಬೆಲೆ ಪವನ್‌ಗೆ ೪೨,೬೮೦ ರೂ. ಆಗಿತ್ತು. ಅದು …

ಆನ್‌ಲೈನ್ ವಂಚನೆ ವ್ಯಾಪಕ: ಹೊದಿಕೆ ಖರೀದಿಸಿದ ಶಾಸಕ ಎನ್.ಎ. ನೆಲ್ಲಿಕುನ್ನುರಿಗೆ ಮೋಸ; ಕೇಸು ದಾಖಲಿಸಿಕೊಂಡ ಸೈಬರ್ ಪೊಲೀಸ್

ಕಾಸರಗೋಡು: ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಅವರು ಆನ್‌ಲೈನ್‌ನ ವಂಚನೆಗೀಡಾಗಿದ್ದಾರೆ. ಈಬಗ್ಗೆ ಶಾಸಕ ನೀಡಿದ ದೂರಿನಂತೆ ಸೈಬರ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ೧೨೦೦ ರೂಪಾಯಿಯ ಹೊದಿಕೆ ಖರೀದಿಸಲು ಶಾಸಕ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದರು.  ಅದರಂತೆ ಹೊದಿಕೆ ತಲುಪಿದೆ, ಪಾರ್ಸೆಲ್ ತೆರೆದು ಪರಿಶೀಲಿಸಿದಾಗ ಅದು ತೀರಾ ಗುಣಮಟ್ಟವಿಲ್ಲದ ಹೊದಿಕೆಯಾಗಿದೆಯೆಂದು ಶಾಸಕರಿಗೆ ತಿಳಿಯಿತು. ಅನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆನ್‌ಲೈನ್ ಮೂಲಕ ಖರೀದಿ ಸುವ ಹಲವರು ಸಾಮಗ್ರಿಗಳಿಗೆ ಗುಣಮಟ್ಟ ಇಲ್ಲವೆಂಬ  ದೂರು ಈ ಹಿಂದೆಯೇ ಕೇಳಿಬಂದಿತ್ತು.  …

ಲೌಡ್ ಸ್ಪೀಕರ್ ಉಪಯೋಗಿಸುವ ಆರಾಧನಾಲಯಗಳಿಗೆ ಪೊಲೀಸ್ ನೋಟೀಸು

ಕಾಸರಗೋಡು: ಜಿಲ್ಲೆಯಲ್ಲಿ ನಿಷೇಧಿತ ಲೌಡ್ ಸ್ಪೀಕರ್ ಬಳಸುತ್ತಿ ರುವ ಆರಾಧನಾಲಯಗಳು ಅದನ್ನು ಶೀಘ್ರ ತೆರವುಗೊಳಿಸುವಂತೆ ನಿರ್ದೇಶಿಸಿ ಪೊಲೀಸರು ನೋಟೀಸು ಜ್ಯಾರಿಗೊಳಿ ಸಿದ್ದಾರೆ. ಜಿಲ್ಲೆಯ ಹಲವು ಆರಾಧನಾ ಲಯಗಳ ಆಡಳಿತ ಸಮಿತಿಗಳಿಗೆ ಪೊಲೀಸರು ಈ ನೋಟೀಸು ಜ್ಯಾರಿಗೊಳಿಸಲಾಗಿದೆ. ನಿಷೇಧಿತ ಲೌಡ್ ಸ್ಪೀಕರ್‌ಗಳನ್ನು ಬಳಸಿ ಶಬ್ದ ಮಲಿನೀಕರಣಗೊಳಿ ಸಬಾರದೆಂದೂ ಅದನ್ನು ತೆರವುಗೊಳಿಸುವಂತೆ  ಹೈಕೋರ್ಟ್  ರಾಜ್ಯ ಸರಕಾರಕ್ಕೆ ಈ ಹಿಂದೆಯೇ ನಿರ್ದೇಶಿಸಿತ್ತು. ಆದರೆ ಅದನ್ನು ಪಾಲಿಸದೆ ಕಾನೂನು ವಿರುದ್ಧ ವಾಗಿ ಅಂತಹ ಲೌಡ್ ಸ್ಪೀಕರ್‌ಗಳನ್ನು ಜಿಲ್ಲೆಯ ಹಲವು ಆರಾಧನಾಲಯಗಳು ಈಗಲೂ ಬಳಸುತ್ತಿವೆ. …

ಜಿಲ್ಲಾ ಶಾಲಾ ಕ್ರೀಡಾಕೂಟ ಇಂದು ಸಂಜೆ ಸಮಾಪ್ತಿ

ನೀಲೇಶ್ವರ: ಕಾಸರಗೋಡು ಜಿಲ್ಲಾ ಶಾಲಾ ಕ್ರೀಡಾಕೂಟ ನೀಲೇಶ್ವರ ಇಎಂಎಸ್ ಕ್ರೀಡಾಂಗಣದಲ್ಲಿ ನಡೆಯು ತ್ತಿದ್ದು ಇಂದು ಸಂಜೆ ಸಮಾಪ್ತಿಗೊಳ್ಳಲಿದೆ. ಕ್ರೀಡಾಕೂಟಕ್ಕೆ  ನಿನ್ನೆ ಬೆಳಿಗ್ಗೆ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಎನ್. ನಂದಿ ಕೇಶನ್ ಧ್ವಜಾರೋಹಣ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾ ಟಿಸಿದರು. ಏಷ್ಯನ್ ಯೂತ್ ಚಾಂಪಿ ಯನ್ ಶಿಪ್ ಹಾಗೂ ಕಾಮನ್‌ವೆಲ್ತ್ ಗೇಮ್ ಪದಕ ವಿಜೇತೆ ವಿ.ಎಸ್. ಅನುಪ್ರಿಯಾ ದೀವಟಿಗೆ ಪ್ರಜ್ವಲನೆಗೊಳಿ ಸಿದರು. ಹಲವು ಗಣ್ಯರು ಮಾತನಾಡಿ ದರು. …

ಮೊಗ್ರಾಲ್ ಪುತ್ತೂರು ಪಂಚಾಯತ್ ೧೪ನೇ ವಾರ್ಡ್ ಎಸ್‌ಡಿಪಿಐ ಸದಸ್ಯ ದೀಕ್ಷಿತ್ ಕಲ್ಲಂಗೈ ರಾಜೀನಾಮೆ

ಮೊಗ್ರಾಲ್ ಪುತ್ತೂರು: ಮೊಗ್ರಾಲ್ ಪುತ್ತೂರು ಪಂಚಾಯತ್ ನ ೧೪ನೇ ವಾರ್ಡ್‌ನ ಎಸ್‌ಡಿಪಿಐ ಸದಸ್ಯನಾದ ದೀಕ್ಷಿತ್ ವಿ.ಆರ್. ಕಲ್ಲಂಗೈ  ಅವರು ಮೊಗ್ರಾಲ್ ಪುತ್ತೂರು ಪಂಚಾಯತ್ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈತಿಂಗಳ ೧೨ರಂದು ಅವರು ರಾಜೀನಾಮೆ ಸಲ್ಲಿಸಿದ್ದು, ಅದನ್ನು ಸ್ವೀಕರಿಸಿರುವು ದಾಗಿ  ಕಾರ್ಯದರ್ಶಿ ತಿಳಿಸಿದ್ದಾರೆ. ಮೊಗ್ರಾಲ್ ಪುತ್ತೂರಿನ ಎಲ್ಲಾ ವಾರ್ಡ್‌ಗಳ ಅಭಿವೃದ್ಧಿ ನಡೆ ಯುತ್ತಿದೆ. ಆದರೆ ನಾನು ಪ್ರತಿನಿಧೀ ಕರಿಸಿದ ೧೪ನೇ ವಾರ್ಡ್‌ನಲ್ಲಿ ಯಾವು ದೇ ರೀತಿಯ ಅಭಿವೃದ್ಧಿ ಕೆಲಸ ನಡೆಯು ತ್ತಿಲ್ಲ. ಅದಕ್ಕೆ ಪಕ್ಷವಾಗಲೀ, ಪಂಚಾ …

ಪೊಸೋಟು ಪೆಟ್ರೋಲ್ ಬಂಕ್‌ನಿಂದ ಮತ್ತೆ ಕಳವು ಯತ್ನ: ಶಟರ್ ಮುರಿದ ಸ್ಥಿತಿಯಲ್ಲಿ

ಮಂಜೇಶ್ವರ: ಪೊಸೋಟು ಪೆಟ್ರೋಲ್ ಬಂಕ್‌ನಲ್ಲಿ ಮತ್ತೆ ಕಳವು ನಡೆದಿದೆ. ಪೆಟ್ರೋಲ್ ಬಂಕ್‌ನ ಕಚೇರಿಯ ಶಟರ್ ಕಬ್ಬಿಣದ ಸಲಾಕೆ ಉಪಯೋಗಿಸಿ ಬಗ್ಗಿಸಿದ ಬಳಿಕ ಆ ರಂದ್ರದ ಮೂಲಕ ಒಳಗೆ  ನುಗ್ಗಿದ ಕಳ್ಳ ಮೇಜಿನ ಡ್ರಾವರ್ ತೆರೆದಿದ್ದಾನೆ. ಆದರೆ ಇದರಲ್ಲಿದ್ದ ಸುಮಾರು ೨ ಸಾವಿರ ರೂ. ನಾಣ್ಯವನ್ನು ಕಳವುಗೈದಿಲ್ಲ. ಕೀಲಿ ಕೈ ಬಿಸಾಡಿದ ಸ್ಥಿತಿಯಲ್ಲಿದೆ. ಲಾಕರ್ ಕೆಡವಲು ಯತ್ನಿಸಿದ ಗುರುತು ಕಂಡು ಬಂದಿದ್ದು, ತೆರೆಯಲು ಸಾಧ್ಯವಾಗಿಲ್ಲ.ಇದು ಪಳ್ಳಿಕ್ಕೆರೆ ನಿವಾಸಿ ಹನೀಫ್‌ರ ಮಾಲಕತ್ವದ  ಪೆಟ್ರೋಲ್ ಬಂಕ್ ಆಗಿದೆ. ರಾತ್ರಿ ೮.೩೦ಕ್ಕೆ ಮುಚ್ಚುವ …

ನಕಲಿ ಡ್ರೈವಿಂಗ್ ಲೈಸನ್ಸ್: ಇಬ್ಬರ ವಿರುದ್ಧ ಕೇಸು

ಹೊಸದುರ್ಗ: ನಕಲಿ ಡ್ರೈವಿಂಗ್ ಲೈಸನ್ಸ್ ತಯಾರಿಸಿದ ಇಬ್ಬರ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚೆರ್ವತ್ತೂರಿನ ಎಸ್‌ಎಸ್ ಡ್ರೈವಿಂಗ್ ಸ್ಕೂಲ್‌ನ ಮಾಲಕ ಶ್ರೀಜಿತ್, ತೃಕ್ಕರಿಪುರದ  ಉಸ್ಮಾನ್ ಎಂಬಿವರ ವಿರುದ್ಧ ಕೇಸು ದಾಖಲಿಸಿಕೊಂ ಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಮೋಟಾರು  ವಾಹನ ಇಲಾಖೆಯ ಎನ್‌ಫೋರ್ಸ್ ಮೆಂಟ್ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್ ಪಿ.ವಿ. ವಿಜೇಶ್ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಉಸ್ಮಾನ್ ಹೆಸರಲ್ಲಿ ನಕಲಿ ಡ್ರೈವಿಂಗ್ ಲೈಸನ್ಸ್ ತಯಾರಿಸಿ ಬಳಸಿ ಪೊಲೀಸ್ ಹಾಗೂ ಮೋಟಾರು ವಾಹನ ಇಲಾಖೆಯನ್ನು ವಂಚಿಸಿರುವುದಾಗಿ ದೂರಲಾಗಿದೆ.

ಮಟ್ಕಾ ದಂಧೆ: ವಿವಿಧ ಸ್ಥಳಗಳಿಂದ ೫ ಮಂದಿ ಸೆರೆ

ಉಪ್ಪಳ: ಉಪ್ಪಳ, ಹೊಸಂಗಡಿ ಪರಿಸರಗಳಲ್ಲಿ ವ್ಯಾಪಕ  ರೀತಿಯಲ್ಲಿ ಮಟ್ಕಾ ದಂಧೆ ನಡೆಯುತ್ತಿರುವುದು ಪೊಲೀಸರಿಗೂ, ಸ್ಥಳೀಯರಿಗೂ ತಲೆನೋವಾಗುತ್ತಿದೆ. ಕಳೆದ ಎರಡು ದಿನಗಳಲ್ಲಾಗಿ ೫ ಮಂದಿಯನ್ನು ವಿವಿಧ ಕಡೆಗಳಿಂದ ಮಟ್ಕಾ ದಂಧೆ ಪ್ರಕರಣದಲ್ಲಿ ಸೆರೆಹಿಡಿಯಲಾಗಿದೆ. ನಿನ್ನೆ ಸಂಜೆ ನಯಾಬಜಾ ರ್‌ನಿಂದ ಉಪ್ಪಳ ಅಂಬೇಡ್ಕರ್ ಕ್ಲಬ್ ಪರಿಸರ ನಿವಾಸಿ ಸಂತೋಷ್ ಕುಮಾರ್ (೩೨)ನನ್ನು ಸೆರೆಹಿಡಿಯ ಲಾಗಿದೆ. ಈತನಿಂದ ೩೧೦ ರೂ. ವಶಪಡಿಸಲಾಗಿದೆ. ಉಪ್ಪಳ ಹೋಟೆ ಲ್ ಪರಿಸರದಿಂದ ಶಾಂತಿಗುರಿ ನಿವಾಸಿ ಎಂ.ಎಂ. ಮುಹಮ್ಮದ್ ೪೩)ನನ್ನು ಸೆರೆಹಿಡಿದು ೩೧೦ ರೂ. ವಶಪಡಿಸಲಾಗಿದೆ. ಕೋಟೆಕ್ಕಾರ್ …

ಗೃಹಿಣಿ ನೇಣು ಬಿಗಿದು ಸಾವು

ಹೊಸದುರ್ಗ: ಗೃಹಿಣಿಯೋರ್ವೆ ಮನೆಯೊಳಗೆ ನೇಣು ಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಿಲಿಕ್ಕೋಡ್ ಎರತ್‌ನ ಸಿ. ಅನಿತ (೫೩) ಮೃತಪಟ್ಟ ಗೃಹಿಣಿ. ನಿನ್ನೆ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ದಿ| ಕುಂಞಿ ರಾಮನ್-ದೇವಕಿ ದಂಪತಿ ಪುತ್ರಿಯಾದ ಮೃತರು ಪುತ್ರ ಜಿತಿನ್‌ಬಾಬು (ಮಲೇಷ್ಯಾ), ಸಹೋದ ರರಾದ ಸುಲೇಖ (ಕೂಕಾನಂ), ರಾಜೀವನ್ (ಕೆಎಸ್‌ಇಬಿ ಪಿಲಿಕ್ಕೋ ಡ್), ರಾಜೇಶ್, ಮಹೇಶ್ (ಮಲೇಷ್ಯಾ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.