ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನೂತನ ಸಮಿತಿ ಅಧಿಕಾರ ಸ್ವೀಕಾರ: ಮೊಹಮ್ಮದ್ ಹನೀಫ್ ಅಧ್ಯಕ್ಷ, ಸತ್ಯನಾರಾಯಣ ಭಟ್ ಉಪಾಧ್ಯಕ್ಷ

ವರ್ಕಾಡಿ:  ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಆಡಳಿತ ಸಮಿತಿ ಅಧಿಕಾರ ಸ್ವೀಕರಿಸಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಮೊಹಮ್ಮದ್ ಹನೀಫ್, ಉಪಾಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಆಯ್ಕೆಯಾದರು. ಬ್ಯಾಂಕ್ ಕಾರ್ಯದರ್ಶಿ ಶ್ರೀವತ್ಸ ಭಟ್ ಸ್ವಾಗತಿಸಿ, ಚುನಾವಣಾಧಿಕಾರಿಯಾಗಿದ್ದ ಬೈಜುರಾಜ್ ಪದಾಧಿಕಾರಿಗಳ ಆಯ್ಕೆ ನಡೆಸಿದರು. ನಿರ್ದೇಶಕರಾಗಿ ವಿನೋದ್ ಕುಮಾರ್ ಪಾವೂರು, ಸತೀಶ್ ಕೂಟತ್ತಜೆ, ನಿಕೋಲಸ್ ಮೊಂತೇರೋ, ಜಗದೀಶ್ ಚೇಂಡ್ಲ,  ಸುನಿತಾ  ಡಿ’ಸೋಜಾ, ಪ್ರವೀಣ್, ಮೂಸಾಕುಂಞಿ, ತುಳಸಿ ಕುಮಾರಿ, ರಾಬಿಯಾ ಇಸ್ಮಾಯಿಲ್ ಪ್ರಮಾಣವಚನ ಸ್ವೀಕರಿಸಿದರು. ಕಳೆದ ೮ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಸಿಪಿಎಂ-ಲೀಗ್ …

ಉತ್ತಮ ಠಾಣೆ ಬೇಕಲ್: ಉತ್ತಮ ಅಧಿಕಾರಿ ಡಿವೈಎಸ್‌ಪಿ ಸುನಿಲ್ ಕುಮಾರ್

ಕಾಸರಗೋಡು: ಕಾಸರಗೋಡು ಜಿಲ್ಲೆಯ ಆಗಸ್ಟ್ – ಸೆಪ್ಟೆಂಬರ್ ತಿಂಗಳ ಉತ್ತಮ ಪೊಲೀಸ್ ಠಾಣೆಯಾಗಿ ಬೇಕಲ ಠಾಣೆಯನ್ನು ಆಯ್ಕೆ ಮಾಡಲಾಗಿದೆ. ಬೇಕಲ ಠಾಣೆ ವ್ಯಾಪ್ತಿ ಯಲ್ಲಿ ಆರರಷ್ಟು ಸರ ಕಳವು ಪ್ರಕರಣಗಳಲ್ಲಿ ಆರೋಪಿಗಳಾದ ಇಬ್ಬರನ್ನು ಸಾಹಸಿಕ ರೀತಿಯಲ್ಲಿ ಸೆರೆ ಹಿಡಿಯಲು ಸಾಧ್ಯವಾಗಿರುವುದು ಬೇಕಲ ಠಾಣೆಯನ್ನು ಉತ್ತಮ ಠಾಣೆಯಾಗಿ ಆಯ್ಕೆ ಮಾಡಲು ಸಹಕಾರಿಯಾಗಿದೆ. ಈ ಆರೋಪಿಗಳ ಪತ್ತೆಗಾಗಿ ನೇತೃತ್ವ ವಹಿಸಿದ ಬೇಕಲ ಡಿವೈಎಸ್‌ಪಿ ಸುನಿಲ್ ಕುಮಾರ್ ಉತ್ತಮ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಔಟ್ ಸ್ಟಾಂಡಿಂಗ್ ಪರ್ಫೋರ್ಮರ್ ಆಗಿ ಕಾಸರಗೋಡು ಪೊಲೀಸ್ ಠಾಣೆಯ …

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸ್ಟ್ರೆಚ್ಚರ್ ವ್ಯವಸ್ಥೆ

ಕಾಸರಗೋಡು:  ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸೆಚ್ಚರ್ ಅಳವಡಿಸಿ ಪ್ರಥಮ ಚಿಕಿತ್ಸೆಗಿರುವ ವ್ಯವಸ್ಥೆ ಏರ್ಪಡಿಸಲಾಗುವುದು. ಕೆಎಸ್‌ಆರ್‌ಟಿಸಿ ಕೇರ್ ಎಂಬ ಯೋಜನೆಗೆ ಸಚಿವ ಆಂಟನಿ ರಾಜು ಅ. ೧೯ರಂದು ಚಾಲನೆ ನೀಡುವರು. ಮೊದಲ ಹಂತದಲ್ಲಿ ಎರ್ನಾಕುಳಂ, ಕೊಚ್ಚಿ, ಕಲ್ಲಿಕೋಟೆ, ಪಾಲಕ್ಕಾಡ್ ಡಿಪ್ಪೋಗಳಿಂದ ಸಂಚಾರ ನಡೆಸುವ ೫೦ ಸೂಪರ್ ಕ್ಲಾಸ್ ಬಸ್‌ಗಳಲ್ಲಿ ಇದನ್ನು ಜ್ಯಾರಿಗೆ ತರಲಾಗುವುದು.

ಅಂಗಡಿಗೆ ಅಕ್ರಮವಾಗಿ ನುಗ್ಗಿ ಯುವಕನನ್ನು ಅಪಹರಿಸಿ ಹಲ್ಲೆಗೈದ ಪ್ರಕರಣ: ನಾಲ್ವರ ಸೆರೆ, ಕಾರು ವಶ

ಕಾಸರಗೋಡು: ನಗರದ ಚಕ್ರಬಜಾರ್‌ನಲ್ಲಿ ಮೊಬೈಲ್ ಫೋನ್ ಅಂಗಡಿ ನಡೆಸುತ್ತಿರುವ ಶಮ್ನ ಮಂಜಿಲ್‌ನ ಸವಾದ್ (೨೫) ಎಂಬವರನ್ನು ಕಾರಿನಲ್ಲಿ ಅಪಹರಿಸಿ ಅಣಂಗೂರಿಗೆ ಸಾಗಿಸಿ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಕಾಸರಗೋಡು ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ  ಸವಾದ್‌ರನ್ನು ಅಪಹರಿಸಲು ಬಳಸಲಾದ ಕಾರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಣಂಗೂರು ಕೊಲ್ಲಂಪಾಡಿಯ ಎ. ಶಾನವಾಜ್ ಅಲಿಯಾಸ್ ಶಾನು (೩೮), ತಳಂಗರೆ ಬಾಂಗೋಡಿನ ಅಬ್ದುಲ್ ಮನಾಫ್ ಎ.ಎಂ. (೨೧), ಅಣಂಗೂರಿನ ಎ.ಎ. …

ನೌಕರರ ಕೊರತೆಯಿಂದ ಸಮಸ್ಯೆ: ಮಂಗಲ್ಪಾಡಿ ಪಂಚಾಯತ್‌ಗೆ ಬೀಗ ಹಾಕಿದ ಬಿಜೆಪಿ ಸದಸ್ಯರು

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನಲ್ಲಿ ಕಳೆದ ಹಲವು ತಿಂಗಳುಗಳಿAದ ಸಾಕಷ್ಟು ನೌಕರರು ಇಲ್ಲದಿರುವುದರಿಂದ ವಿವಿಧ ಅರ್ಜಿಗಳಿಗಾಗಿ ತುಲುಪುವ ಜನರು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಪಂಚಾಯತ್‌ನ ಕೆಲಸಗಳು ನಡೆಯುತ್ತಿಲ್ಲ, ಇದ್ದ ನೌಕರರಿಗೆ ಅನುಭವಿಲ್ಲದಿರುವುದರಿಂದ ಪಂಚಾಯತ್‌ಗೆ ತಲುಪುವ ಜನರು ನಿರಾಶರಾಗಿ ಮರಳ¨ÀೆÃಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂಚಾಯತ್‌ನ ಬಿಜೆಪಿ ಸದಸ್ಯರು ಬುಧವಾರ ಮಧ್ಯಾಹ್ನ ಪಂಚಾಯತ್ ಕಚೇರಿಗೆ ಬೀಗ ಹಾಕಿ ಸುಮರು 45 ನಿಮಿಷಗಳ ಕಾಲ ಪಂಚಾಯತ್ ಕಾರ್ಯದರ್ಶಿ ಹಾಗೂ ನೌಕರರನ್ನು ದಿಗ್ಬಂಧನಗೊಳಿಸಿ ದ್ದಾರೆ. ಇತ್ತೀಚೆಗೆ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಆಶ್ರಯದಲ್ಲಿ ಪಂಚಾಯತ್ ಕಚೇರಿಗೆ …

ಮೊಬೈಲ್ ಫೋನ್ ಬಳಕೆ ಪ್ರಶ್ನಿಸಿದ ತಾಯಿಯ ತಲೆಗೆ ಹೊಡೆದು ಕೊಲೆಗೆ ಯತ್ನ

ಹೊಸದುರ್ಗ: ಮಧ್ಯರಾತ್ರಿ ಕಳೆದರೂ ಮೊಬೈಲ್ ಫೋನ್‌ನಲ್ಲೇ ತಲ್ಲೀನನಾ ದುದನ್ನು ಪ್ರಶ್ನಿಸಿದ ತಾಯಿಯನ್ನು  ಮಗ ಮರದ ಹಲಗೆಯಿಂದ ತಲೆಗೆ ಹೊಡೆದು ಕೊಲೆಗೈಯ್ಯಲೆತ್ನಿಸಿದ ಘಟನೆ ನಡೆದಿದೆ.  ನೀಲೇಶ್ವರ ಬಳಿಯ ಕಣಿಚ್ಚಿರಕಾವು ಎಂಬಲ್ಲಿಗೆ ಸಮೀಪದ ರಾಜನ್‌ರ ಪತ್ನಿ ರುಕ್ಮಿಣಿ (೬೪) ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಪರಿ ಯಾರಂ ಮೆಡಿಕಲ್ ಕಾಲೇಜು ಆಸ್ಪ ತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖ ಲಿಸಲಾಗಿದೆ.  ಈ ಘಟನೆಗೆ ಸಂಬಂಧಿಸಿ  ಹತ್ಯೆಯತ್ನ ಕೇಸು ದಾಖಲಿಸಿಕೊಂಡ ಪೊಲೀಸರು ಪುತ್ರ ಸುಜಿತ್‌ನನ್ನು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ಇಂದು ಮುಂಜಾನೆ …

ಮದ್ಯ ಮಾರಾಟ ಪ್ರಶ್ನಿಸಿದ ಯುವಕನಿಗೆ ಇರಿತ

ಕುಂಬಳೆ: ಮದ್ಯ ಮಾರಾಟವನ್ನು ಪ್ರಶ್ನಿಸಿದ ದ್ವೇಷದಿಂದ ವ್ಯಕ್ತಿಯೋರ್ವ ಯುವಕನ ಕುತ್ತಿಗೆಗೆ ಬ್ಲೇಡ್‌ನಿಂದ ಗೀರಿ ಗಾಯಗೊಳಿಸಿದ ಘಟನೆ ಇಂದು ಬೆಳಿಗ್ಗೆ ಕುಂಬಳೆಯಲ್ಲಿ ನಡೆದಿದೆ. ಕೊಯಿಪ್ಪಾಡಿ ಕಡಪ್ಪುರ ನಿವಾಸಿ  ಮುಬೀನ್ (೪೧) ಎಂಬವರು ಇರಿತದಿಂದ ಗಾಯ ಗೊಂ ಡಿದ್ದು,  ಅವರನ್ನು ಕಾರಗೋಡು ಜನ ರಲ್  ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸದನ್ ಎಂಬಾತ ಇರಿದು ಗಾಯಗೊ ಳಿಸಿರುವುದಾಗಿ ಮುಬೀನ್ ದೂರಿದ್ದಾರೆ. ಕುಂಬಳೆ ಮಾರುಕಟ್ಟೆ ರಸ್ತೆ ಸಹಿತ ವಿವಿಧೆಡೆ ವ್ಯಾಪಕವಾಗಿ  ಅನಧಿಕೃತ ಮದ್ಯ ಮಾರಾಟ ನಡೆಸುತ್ತಿರುವುದಾಗಿ  ದೂರಲಾಗಿದೆ. ಮದ್ಯ ಮಾರಾಟವನ್ನು ಮುಬೀನ್ ವಿರೋಧಿಸಿದ್ದರೆಂದು ಹೇಳಲಾಗುತ್ತಿದೆ. …

ವರ್ಕಾಡಿಯಲ್ಲಿ ಕಾಂಗ್ರೆಸ್ ಯಾರೊಂದಿಗೆ? ಕಾರ್ಯಕರ್ತರ ಪ್ರಶ್ನೆ

ಮಂಜೇಶ್ವರ: ವರ್ಕಾಡಿಯಲ್ಲಿ ಕಾಂಗ್ರೆಸ್ ನಾಯಕತ್ವ ಸಿಪಿಎಂನೊಂ ದಿಗೋ, ಅಥವಾ ಬಿಜೆಪಿಯೊಂದಿಗೋ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿ ದ್ದಾರೆ. ಇತ್ತೀಚೆಗೆ ನಡೆದ ವರ್ಕಾಡಿ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ವಿಭಾಗ ಸಿಪಿಎಂ ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಅದನ್ನು ಪ್ರತಿಭಟಿಸಿ ಮತ್ತೊಂದು ವಿಭಾಗ ಕಾಂಗ್ರೆಸ್‌ನವರು ಬಿಜೆಪಿಯೊಂದಿಗೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಮಾತ್ರವಲ್ಲದೆ, ಕಾಂಗ್ರೆಸ್- ಸಿಪಿಎಂ ಒಕ್ಕೂಟದ ೧೧ ಮಂದಿ ಅಭ್ಯರ್ಥಿಗಳನ್ನು ೫೦೦ರಷ್ಟು ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು. ಚುನಾವಣೆಯ ಅಲ್ಪ ಮುಂಚೆ ಬಿಜೆಪಿಯೊಂದಿಗೆ ಒಕ್ಕೂಟ ರಚಿಸಿ ಸ್ಪರ್ಧಿಸಿದ ನಾಲ್ವರು ಕಾಂಗ್ರೆಸ್ ಸದಸ್ಯ …

ಗಾಜಾ ಪಟ್ಟಿಯನ್ನು ಸ್ಮಶಾನ ಸದೃಶಗೊಳಿಸಿದ ಇಸ್ರೇಲ್‌

ನವದೆಹಲಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಗೆ ಪ್ರತಿದಾಳಿ ಆರಂಭಿಸಿರುವ ಇಸ್ರೇಲ್ ಗಾಜಾಪಟ್ಟಿ ನಗರವನ್ನು ಸತತ ಬಾಂಬ್ ದಾಳಿಯಿಂದ ಸ್ಮಶಾನಸದೃಶ್ಯಗೊಳಿಸಿದೆ. ೨೦೦ ಬಾರಿ ಇಸ್ರೇಲ್ ಯುದ್ಧ ವಿಮಾನ ಗಾಜಾಪಟ್ಟಿ ಮೇಲೆ ಬಾಂಬ್ ಗಳ ಸುರಿಮಳೆಗರೆದಿದೆ.  ಸುಮಾರು ೧೨ ಸಾವಿರ ಕಟ್ಟಡಗಳನ್ನು ಧ್ವಂಸಗೊಳಿಸಿದೆ.  ಈ ಯುದ್ಧದಲ್ಲಿ ಸುಮಾರು ೩೫೦೦ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿ ದ್ದಾರೆ. ಲಕ್ಷಾಂತರ ಮಂದಿ ಗಾಯಗೊಂ ಡಿದ್ದಾರೆ. ಹಮಾಸ್ ಮೇಲೆ  ಇಸ್ರೇಲ್ ಪ್ರತಿದಾಳಿ ಆರಂಭಿಸಿರುವಂತೆಯೇ  ಇತ್ತ ಲೆಬನಾನ್ ಮತ್ತು ಸಿರಿಯಾ  ಇಸ್ರೇಲ್ ಮೇಲೆ …

ಮುಳ್ಳೇರಿಯ ಅರಮನಡ್ಕ ತೋಟದಲ್ಲಿ ಆನೆ

ಮುಳ್ಳೇರಿಯ: ಕಣ್ಣೂರು ಉಳಿಕ್ಕಲ್ ಪೇಟೆಗೆ ಕಾಡಾನೆ ತಲುಪಿ ರುವುದರಿಂದ ಜನರು  ಆತಂಕಗೊಂಡಿರುವಾಗಲೇ ಮುಳ್ಳೇರಿಯ ಪೇಟೆ ಸಮೀಪದಲ್ಲೂ ಇಂದು ಬೆಳಿಗ್ಗೆ ಕಾಡಾನೆ ಕಂಡು ಬಂದಿದೆ. ಅರಮನಡ್ಕದ ಶ್ಯಾಮ್ ಎಂಬವರ ತೋಟಕ್ಕೆ ಇಂದು ಬೆಳಿಗ್ಗೆ ಆನೆ ತಲುಪಿದ್ದು, ಅದು ಅಲ್ಲೇ ಠಿಕಾಣಿ ಹೂಡಿದೆ. ತೋಟದ ಕೆಲಸಕ್ಕೆಂದು ತೆರಳಿದಾಗ ಆನೆ ಕಂಡು ಬಂದಿದ್ದು, ಸ್ಥಳೀಯರಲ್ಲಿ ಇದೀಗ ಭೀತಿ ಸೃಷ್ಟಿಯಾಗಿದೆ. ಆನೆಯನ್ನು ಓಡಿಸಲು ಸಿದ್ಧತೆ ನಡೆಸಲಾಗುತ್ತಿದೆ.