ರೈತ ಕಾಂಗ್ರೆಸ್ ಜಿಲ್ಲಾ ಸಮಿತಿ ಸಭೆ

ಕುಂಬಳೆ: ರೈತ ಕಾಂಗ್ರೆಸ್ ಜಿಲ್ಲಾ ಸಮಿತಿ ಕುಂಬಳೆ ಅನಂತ ಪೈ ಸಭಾಭವನದಲ್ಲಿ ನಡೆಯಿತು. ರಾಜ್ಯ ಸಮಿತಿ ಕಾರ್ಯದರ್ಶಿ ಪ್ರೊ. ಅಶೋಕ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಕೇಂದ್ರ ಸರಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಧರಣಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾ ಯಿತು. ಜಿಲ್ಲಾ ಸಮಿತಿ ಅಧ್ಯಕ್ಷ ರಾಜು ಕರ್ಟಯಂ ಉದ್ಘಾಟಿಸಿದರು. ಕೆ.ಎ.ಸಿ.ಸಿ ಕಾರ್ಯದರ್ಶಿ ನ್ಯಾಯವಾದಿ ಸುಬ್ಬಯ್ಯ ರೈ ಮಾತನಾಡಿದರು. ಸಮಿತಿ ಅಧ್ಯಕ್ಷರಾಗಿ ಗಣೇಶ ಭಂಡಾರಿ ಪದಗ್ರಹಣ ನಡೆಸಿದರು. ಸುಂದರ ಆರಿಕ್ಕಾಡಿ, ಜೋಸ್, ಸೋಜಲ್ ಕುನ್ನಿಲ್, ಡಾ. ಟಿಟೊ ಜೋಸಫ್, …

ಕೊಲೆಗಡುಕ ತಂಡದಲ್ಲಿ ಇನ್ನಷ್ಟು ಮಂದಿ? ಯುವಕನನ್ನು ಕರೆದೊಯ್ದಿರುವುದು ನಂಬ್ರ ಪ್ಲೇಟಿಲ್ಲದ ಬೈಕ್‌ನಲ್ಲಿ

ಕುಂಬಳೆ: ಕಾಸರಗೋಡು ನಗರದಲ್ಲಿ ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದರಲ್ಲಿ ಒಂದನೇ ಆರೋಪಿಯಾದ ಯುವಕನನ್ನು ತಲೆಗೆ ಕಲ್ಲು ಹಾಕಿ ಕೊಂದ ಘಟನೆಯಲ್ಲಿ ಇನ್ನಷ್ಟು ಆರೋಪಿಗಳಿರುವುದಾಗಿ ಸೂಚನೆಯಿದೆ. ಕೃತ್ಯದಲ್ಲಿ ತಾನು ಮಾತ್ರವೇ ಭಾಗಿಯಾಗಿರುವುದಾಗಿ  ಸೆರೆಗೀಡಾದ ಆರೋಪಿ ಹೇಳಿಕೆ ನೀಡಿ ದ್ದರೂ ನಾಗರಿಕರು ನೀಡಿದ ಹೇಳಿಕೆ ಪ್ರಕಾರ ಕೊಲೆ ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರ ಬಹುದೆಂಬ ಸಂಶಯ ವನ್ನು ತನಿಖಾ ತಂಡ ವ್ಯಕ್ತಪಡಿಸಿದೆ. ಕಳೆದ ಆದಿತ್ಯವಾರ ರಾತ್ರಿ ಮಾವಿನಕಟ್ಟೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಕುಂಬಳ ಶಾಂತಿಪಳ್ಳದ ಅಬ್ದುಲ್ ರಶೀದ್ ಯಾನೆ ಸಮೂಸ …

ರೋಗಿಯ ಪ್ರಜ್ಞೆ ತಪ್ಪಿಸಲು ೨೦೦೦ ರೂ. ಲಂಚ:  ಡಾಕ್ಟರ್‌ಗೆ ಜೈಲು

ಕಾಸರಗೋಡು: ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿಪಡಿಸಲು ೨೦೦೦ ರೂಪಾಯಿ ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್‌ನ ಸೆರೆಗೀಡಾದ ಡಾಕ್ಟರ್‌ಗೆ ರಿಮಾಂಡ್ ವಿಧಿಸಲಾಗಿದೆ.  ಜನರಲ್ ಆಸ್ಪತ್ರೆಯ ಅನಸ್ತೇಶಿಯ ವಿಭಾಗದ ಡಾಕ್ಟರ್ ಕೆ.ಎಂ. ವೆಂಕಟಗಿರಿಗೆ ರಿಮಾಂಡ್ ವಿಧಿಸಲಾಗಿದೆ. ತಲಶ್ಶೇರಿ ವಿಜಿಲೆನ್ಸ್ ನ್ಯಾಯಾಲಯದ ಮೆಜಿಸ್ಟ್ರೇಟ್ ರಜೆಯಲ್ಲಿರುವುದರಿಂದ ಕಲ್ಲಿಕೋಟೆ ಮೆಜಿಸ್ಟ್ರೇಟರ ವಸತಿಯಲ್ಲಿ ಹಾಜರುಪಡಿಸಿದಾಗ  ರಿಮಾಂಡ್ ವಿಧಿಸಲಾಗಿದೆ. ನಿನ್ನೆ ಸಂಜೆ ನುಳ್ಳಿಪ್ಪಾಡಿಯ ಮನೆಯಲ್ಲಿ ಲಂಚ ಪಡೆಯುತ್ತಿದ್ದಾಗ ವೈದ್ಯರನ್ನು ವಿಜಿಲೆನ್ಸ್ ಡಿವೈಎಸ್ಪಿ ವಿ.ಕೆ. ವಿಶ್ವಂಭರನ್ ನಾಯರ್‌ರ ನೇತೃತ್ವದ ತಂಡ ಸೆರೆಹಿಡಿದಿದೆ. ಮಧೂರು ಪಟ್ಲ ನಿವಾಸಿಯೊಬ್ಬರು ಹರ್ನಿಯ ಚಿಕಿತ್ಸೆಗಾಗಿ ಕಳೆದ ಜೂನ್ …

ಸಿಕ್ಕಿಂನಲ್ಲಿ ಮೇಘ ಸ್ಫೋಟ: ೨೩ ಯೋಧರು ಸಹಿತ ಹಲವರು ನಾಪತ್ತೆ

ಗಾಂಗ್ಟರ್: ಭಾರತದ ಈಶಾನ್ಯ ರಾಜ್ಯವಾದ ಸಿಕ್ಕಿಂನ ಉತ್ತರ ಭಾಗದ ಲೋನಾಕ್‌ನಲ್ಲಿ ಮೇಘ ಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ ಭಾರತೀಯ ಸೇನಾ ಪಡೆಯ ೨೩ ಯೋಧರೂ ಸೇರಿದಂತೆ ಹಲವರು ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಪತ್ತೆಗೆ ವ್ಯಾಪಕ ಶೋಧ ಆರಂಭಿಸಲಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಿಕ್ಕಿಂನಾದ್ಯಂತ ಎಡೆಬಿಡದೆ ಸುರಿಯುತ್ತಿ ರುವ ಭಾರೀ ಮಳೆಯ ಬೆನ್ನಲ್ಲೇ ಮೇಘ ಸ್ಫೋಟ ಉಂಟಾಗಿದೆ. ಇದರಿಂದಾಗಿ ಲಾಚೆನ್ ಕಣಿವೆ ಉದ್ದಕ್ಕೂ ಸ್ಥಾಪಿಸಲಾಗಿದ್ದ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಮೇಘ ಸ್ಫೋಟ …

ವರ್ಕಾಡಿ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ವಿಭಾಗಗಳು ಸಿಪಿಎಂ, ಬಿಜೆಪಿಯೊಂದಿಗೆ

ಸಹಕರಿಸಲು ಸಾಧ್ಯವೆಂದು ಅವರು ಪ್ರಶ್ನಿಸುತ್ತಿದ್ದಾರೆ.  ಇದೇ ವೇಳೆ ಪ್ರಸ್ತುತ ಸಿಪಿಎಂನ ಬೆಂಬಲದೊಂದಿಗೆ ಕಾಂಗ್ರೆಸ್ ಸಹಕಾರಿ ಸಂಘ ಆಡಳಿತ ನಡೆಸುತ್ತಿದೆ ಯೆಂದೂ ಕಾಂಗ್ರೆಸ್‌ಗೆ ಐದು, ಲೀಗ್‌ಗೆ ಮೂರು, ಸಿಪಿಎಂಗೆ ಒಂದು, ಸಿಪಿಐಗೆ ಒಂದು, ಕೇರಳ ಕಾಂಗ್ರೆಸ್ ಮಾಣಿ ಗ್ರೂಪ್‌ಗೆ ಓರ್ವ ಸದಸ್ಯರಿದ್ದಾರೆಂದೂ ಅದರಂತೆ ಈ ಬಾರಿಯೂ ಸ್ಪರ್ಧಿಸಲಾ ಗುತ್ತಿದೆಯೆಂ ದೂ ಆ ಪಕ್ಷದ ಪದಾಧಿಕಾಪರಿಗಳ ಪೈಕಿ ಕೆಲವರು ತಿಳಿಸುತ್ತಿದ್ದಾರೆ. ಇದೇ ವೇಳೆ ಮಂಜೇಶ್ವರದ ಕಾಂಗ್ರೆಸ್ ನೇತಾರರು ಹರ್ಷಾದ್ ವರ್ಕಾಡಿಯ ನೇತೃತ್ವದಲ್ಲಿ ಮತ್ತೊಂದು ಭಾಗದಲ್ಲಿ ಶಕ್ತಿ ತುಂಬುತ್ತಿದ್ದಾರೆ. ಈ ಸಮಸ್ಯೆಯನ್ನು …

ಬಂಧಿತ ಐಸಿಸ್ ಉಗ್ರರು ಕಾಸರಗೋಡು ಕೇಂದ್ರೀಕರಿಸಿ ‘ಇಸ್ಲಾಮಿಕ್ ಸ್ಟೇಟ್ ಮೋಡ್ಯೂಲ್’ ರೂಪೀಕರಿಸಲು ಯೋಜನೆ ಹಾಕಿದ್ದರು

ಕಾಸರಗೋಡು: ರಾಜಸ್ಥಾನ ಮತ್ತು ಉತ್ತರ ಪ್ರದೇಶ ಎಂಬೆಡೆಗಳಿಂದಾಗಿ ದಿಲ್ಲಿಯ ವಿಶೇಷ ಪೊಲೀಸ್ ತಂಡ ಬಂಧಿಸಿದ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್(ಐಸಿಸ್) ಭಯೋತ್ಪಾದಕರಾದ ಜಾರ್ಖಂಡ್ ನಿವಾಸಿ ಮೊಹಮ್ಮದ್ ಶಹನಾಸ್ ಆಲಂ (ಶಾಫಿ ಉಸಾಮ ೩೧), ಮೊಹಮ್ಮದ್ ಅರ್ಶಾದ್ ವಾರ್ಸಿ (೨೮) ಮತ್ತು ಉತ್ತರಪ್ರದೇಶ ಲಕ್ನೋದ ಮೊಹಮ್ಮದ್ ರಿಸ್ವಾನ್ ಅಶ್ರಫ್ (೩೦) ಎಂಬವರು ಕಾಸರಗೋಡನ್ನು ಕೇಂದ್ರೀಕರಿಸಿ ಇಸ್ಲಾಮಿಕ್ ಸ್ಟೇಟ್ ಮೋಡ್ಯೂಲ್ ರೂಪೀಕರಿಸುವ ಯೋಜನೆಯನ್ನೂ ಹಾಕಿಕೊಂಡಿದ್ದರು ಎಂಬ ಕಳವಳಕಾರಿ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ಇದೇ ರೀತಿ ಈ ಹಿಂದೆ …

ರಾಜ್ಯದ ರೈಲುಗಳಲ್ಲಿ ಚಿನ್ನದ ಒಡವೆಗಳನ್ನು ಕಳವುಗೈಯ್ಯುತ್ತಿದ್ದ ತಂಡದ ಇಬ್ಬರ ಸೆರೆ: ೧೬ ಪವನ್ ಚಿನ್ನ ಪತ್ತೆ

ಕಾಸರಗೋಡು: ಕೇರಳದಲ್ಲಿ ರೈಲುಗ ಳನ್ನು ಕೇಂದ್ರೀಕರಿಸಿ ಕಳವು ನಡೆಸುತ್ತಿದ್ದ ತಂಡದ ಇಬ್ಬರನ್ನು ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್)ನ ವಿಶೇಷ ತಂಡ  ಪತ್ತೆ ಹಚ್ಚಿ ಬಂಧಿಸಿದೆ. ಉತ್ತರ ಪ್ರದೇಶ ಮಿಝಾಪುರ್ ನಿವಾಸಿ ಗಳಾದ ಅಭಯ್ ರಾಜ್ ಸಿಂಗ್ (೨೬) ಮತ್ತು ಹರಿಶಂಕರ್ ಗಿರಿ (೨೫) ಬಂಧಿತರಾದ ಆರೋಪಿಗಳು. ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬ್ಯಾಗ್‌ಗಳಿಂದ ಕಳವು ಗೈಯ್ಯಲಾದ ೧೬ ಪವನ್ ಚಿನ್ನದ ಒಡವೆಗಳನ್ನು ಇವರಿಂದ ಆರ್‌ಪಿಎಫ್ ವಶಪಡಿಸಿ ಕೊಂಡಿದೆ. ಸೆಪ್ಟಂಬರ್ ೨ರಂದು ನಿಝಾಮು ದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಣಿಸುತ್ತಿದ್ದ ಯುವತಿ …

ಲೋಕಸಭಾ ಚುನಾವಣೆ: ಸಿದ್ಧತೆ ಆರಂಭಿಸುವಂತೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶ

ಕಾಸರಗೋಡು: ಲೋಕಸಭೆಗೆ ಮುಂದಿನವರ್ಷ ಚುನಾವಣೆ ನಡೆಯಲಿರುವಂತೆಯೇ ಅದಕ್ಕೆ ಅಗತ್ಯದ ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸುವಲ್ಲಿ ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಅಧಿಕಾರಿಗೆ ನಿರ್ದೇಶ ನೀಡಿದೆ. ಅದರಂತೆ ಅಗತ್ಯದ ಕ್ರಮಗಳಲ್ಲಿ ತೊಡಗುವಂತೆ ರಾಜ್ಯ ಚುನಾವಣಾ ಅಧಿಕಾರಿ ರಾಜ್ಯ ಉಪಚುನಾವಣಾ ಆಯುಕ್ತರು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿರುವ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ನಿರ್ದೇಶ ನೀಡಿದ್ದಾರೆ. ಅದರಂತೆ ಅಗತ್ಯದ ಪೂರ್ವಭಾವಿ ಕ್ರಮಗಳಿಗೆ ಈಗಾಗಲೇ  ಚಾಲನೆ ನೀಡಲಾಗಿದೆ. ಮತದಾನ ಯಂತ್ರ ನಿರ್ಮಾಣ ಸಂಸ್ಥೆಯಾದ ಭಾರತ್ ಇಲೆಕ್ಟ್ರೋನಿಕ್ಸ್ ಲಿಮಿಟೆಡ್‌ನ ಇಂಜಿನಿಯರ್‌ಗಳು ಹಾಗೂ ಸಂಬಂಧಪಟ್ಟ ಚುನಾವಣಾ …

ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ: ತಿರುವನಂತಪುರ ನಿವಾಸಿಗಾಗಿ ಶೋಧ

ಕುಂಬಳೆ: ಮನೆಗೆ ಅತಿಕ್ರಮಿಸಿ ನುಗ್ಗಿದ ವ್ಯಕ್ತಿಯೋರ್ವ ಮಹಿಳೆಗೆ ಹಲ್ಲೆಗೈದು ಗಾಯಗೊಳಿಸಿದ ಘಟನೆ ನಡೆದಿದೆ. ಪೆರುವಾಡ್ ಮುಳಿಯಂಗಾನ ನಿವಾಸಿ ಆಮಿನ (೬೩) ಎಂಬಿವರು ಹಲ್ಲೆಯಿಂದ ಗಾಯಗೊಂಡು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ಸಂಜೆ ವೇಳೆ ವ್ಯಕ್ತಿಯೋರ್ವ ಮನೆಗೆ ಅತಿಕ್ರಮಿಸಿ ನುಗ್ಗಿ ಆಮಿನರಿಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಹಲ್ಲೆಗೈದ ವ್ಯಕ್ತಿ ತಿರುವನಂತಪುರ ನಿವಾಸಿಯೆಂದು ಹೇಳಲಾಗುತ್ತಿದೆ. ಈ ಬಗ್ಗೆ ಆಮಿನ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತಿರುವನಂತಪುರ ನಿವಾಸಿಗಾಗಿ ಶೋಧ ನಡೆಸುತ್ತಿದ್ದಾರೆ.

ಸರಕು ಸೇವಾ ತೆರಿಗೆ ಕಚೇರಿಗಳನ್ನು ಕಾಞಂಗಾಡ್ ಭಾಗಕ್ಕೆ ಸ್ಥಳಾಂತರಿಸಲು ಹುನ್ನಾರ: ಕಾಸರಗೋಡು, ಮಂಜೇಶ್ವರದವರಿಗೆ ಸಮಸ್ಯೆ

ಕಾಸರಗೋಡು: ಜಿಲ್ಲಾ ಕೇಂದ್ರವಾದ ಕಾಸರಗೋಡಿನಲ್ಲಿ ಕಾರ್ಯಾಚರಿಸುವ ಕೇರಳ ರಾಜ್ಯ ಸರಕು ಸೇವಾ ತೆರಿಗೆ ಇಲಾಖೆಯ ಕಾರ್ಯಾಲಯಗಳನ್ನು ಸಾಮೂಹಿಕವಾಗಿ ಕಾಞಂಗಾಡ್, ಚೆರ್ವತ್ತೂರು ವಲಯಕ್ಕೆ ಬದಲಿಸಲು ಯತ್ನ ನಡೆಯುತ್ತಿರುವುದಾಗಿ ಆರೋಪಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಕಾರ್ಯಾಚರಿಸಬೇಕಾದ ಇಂಟೆಲಿಜೆನ್ಸ್ ಡೆಪ್ಯುಟಿ ಕಮಿಶನರ್‌ರ ಕಾರ್ಯಾಲಯ ಹಾಗೂ ಕಾಸರಗೋಡು ಇಂಟೆಲಿಜೆನ್ಸ್ ಘಟಕ ಕಚೇರಿಯನ್ನು ಕೆಲವು ಅಧಿಕಾರಿಗಳ ಒತ್ತಾಸೆಗೆ  ಮಣಿದು ಕಾಞಂಗಾಡ್‌ನ ಒಂದು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ೩೦ ಸಾವಿರ ರೂ. ಇಲ್ಲಿ ಪ್ರತಿ ತಿಂಗಳು ಬಾಡಿಗೆ ನೀಡಬೇಕಾಗಿದೆ. ೨೦೧೯ರಲ್ಲಿ ಈ ಕಚೇರಿಯನ್ನು ಕಾಞಂಗಾಡ್‌ಗೆ ಸ್ಥಳಾಂತರಿಸಿದಾಗ ಅಂದಿನ …