ಅಸ್ಸಾಂ, ಪಂ. ಬಂಗಾಳ ಸಹಿತ ೪ ರಾಜ್ಯಗಳಲ್ಲಿ ಪ್ರಬಲ ಭೂಕಂಪ

ನವದೆಹಲಿ: ಈಶಾನ್ಯ ರಾಜ್ಯ ಗಳಾದ ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ ಸಹಿತ ದೇಶದ ನಾಲ್ಕು ರಾಜ್ಯಗಳಲ್ಲಿ ಪ್ರಬಲ ಭೂಕಂಪ ಅನುಭವ ಉಂಟಾಗಿದೆ. ಪಶ್ಚಿಮ ಬಂಗಾಳ ಮತ್ತು ತ್ರಿಪುರದಲ್ಲಿ ನಿನ್ನೆ ರಾತ್ರಿ ಭೂಮಿ ಕಂಪಿಸಿದೆ. ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರದ ಪ್ರಕಾರ ಮೇಘಾಲಯದಲ್ಲಿ ರಿಕ್ಟರ್ ಮಾಪಕದಲ್ಲಿ ೫.೨ರಷ್ಟು ಭೂಕಂಪ ಸಂಭವಿಸಿದೆ. ಇದೇ ಸಮಯದಲ್ಲಿ ಉತ್ತರ ಬಂಗಾಳದ ಕೆಲವು ಭಾಗಗಳಲ್ಲಿಯೂ ಭೂಕಂಪನ ಅನುಭವಾಗಿದೆ. ಸಿಲಿಗುರಿ ಮತ್ತು ಬೆಹಾರ್ನಾದಲ್ಲಿ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಪ್ರಾಣ ಹಾನಿ ಅಥವಾ ಅಸ್ತಿಪಾಸ್ತಿ ನಷ್ಟದ …

೨೩.೭೬ ಲೀಟರ್ ಕರ್ನಾಟಕ ಮದ್ಯ ವಶ

ಕಾಸರಗೋಡು:ಮೊಗ್ರಾಲ್ ಪುತ್ತೂರು ಮಜಲ್‌ನ ಮನೆಯೊಂದರ ಸಮೀಪದ ಪೊದೆಯಲ್ಲಿ ಬಚ್ಚಿಡಲಾಗಿದ್ದ ೨೩.೭೬ ಲೀಟರ್ ಕರ್ನಾಟಕ ನಿರ್ಮಿತ ಮದ್ಯವನ್ನು ಕಾಸರಗೋಡು ಅಬಕಾರಿ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕೂಡ್ಲು ಬೆದ್ರಡ್ಕದ ನರೇಂದ್ರ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಆದರೆ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲವೆಂದು ಅಬಕಾರಿ ತಂಡ ತಿಳಿಸಿದೆ.  ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ರಾಜೀವನ್ ಎ.ವಿ, ಐ.ಬಿ ಪ್ರಿವೆಂಟೀವ್ ಆಫೀಸರ್ ಬಿಜೋಯ್ ಇ.ಕೆ, ಸಿವಿಲ್ ಎಕ್ಸೈಸ್ …

ನವಕೇರಳ ಸದಸ್ಸ್ ಮುಖ್ಯಮಂತ್ರಿ, ಸಚಿವರ ಜನಸಂಪರ್ಕ ಕಾರ್ಯಕ್ರಮ ನ. ೧೮ರಂದು ಮಂಜೇಶ್ವರದಿಂದ

ಮಂಜೇಶ್ವರ: ಎಲ್.ಡಿ.ಎಫ್ ಸರಕಾರ ಜ್ಯಾರಿಗೆ ತಂದ ಜನಪಯೋಗಿ ಯೋಜನೆಗಳ ಕುರಿತು ಜಾಗೃತಿ ಮೂಡಿಸ್ನು, ಸರಕಾರದಿಂದ ಉಂಟಾದ ಕುಂದುಕೊರತಗಳ ಬಗ್ಗೆ ನೇರವಾಗಿ ಸಂವಾದ ನಡೆಸ್ನು ಮುಖ್ಯಮಂತ್ರಿ ಹಾಗೂ ಸಚಿವರು ಕೇರಳದಾದ್ಯಂತ ವಿಧಾನ ಸಭಾ ಕ್ಷೇತ್ರ ಕೇಂದ್ರೀಕರಿಸಿ ನಡೆಸುವ ನವಕೇರಳೀಯ ಸದಸ್ಸ್ ಕಾರ್ಯಕ್ರಮ ನವಂಬರ್ 18 ರಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಆರಂಭಗೊಳ್ಳಲಿದೆ. ಇದನ್ನು ಯಶಸ್ವಿಗೊಳಿಸಲು ಮಂಡಲ ಮಟ್ಟದ ಸ್ವಾಗತ ಸಮಿತಿ ರೂಪೀಕರಣ ಸಭೆ ಅಕ್ಟೋಬರ್ 9 ರಂದು ಅಪರಾಹ್ನ 3 ಗಂಟೆಗೆ ಪೈವಳಿಕೆ ಕುಲಾಲ ಮಂದಿರದಲ್ಲಿ ಜರಗಲಿದೆ. ಅಕ್ಟೋಬರ್ …

ಬಿದ್ದು ಸಿಕ್ಕಿದ ೧೧,೦೦೦ ರೂ. ಮರಳಿಸಿ ವ್ಯಕ್ತಿಯ ಪ್ರಾಮಾಣಿಕತೆ: ಸರ್ವರ ಪ್ರಶಂಸೆ

ಕುಂಬಳೆ: ಬಿದ್ದು ಸಿಕ್ಕಿದ ೧೧ಸಾವಿರ ರೂಪಾಯಿಗಳನ್ನು ಅವರಿಗೆ ಮರಳಿ ನೀಡಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಕುಂಬಳೆ ಕೃಷ್ಣನಗರ ನಿವಾಸಿಯೂ ಕರ್ನಾಟಕದಲ್ಲಿ ಫೈನಾನ್ಸ್ ಶಿವರಾಮ ಎಂಬವರು ಹಣ ಮರಳಿ ನೀಡಿ ಪ್ರಾಮಾಣಿಕತೆ ಮೆರೆದ ವ್ಯಕ್ತಿಯಾಗಿದ್ದಾರೆ. ಕುಂಬಳೆ ಭಾಸ್ಕರ ನಗರ ನಿವಾಸಿಯೂ ಗಲ್ಫ್ ಉದ್ಯೋಗಿಯಾದ ಮೊಹಮ್ಮದ್ ಅಸೀಸ್ ನಿನ್ನೆ ಮಧ್ಯಾಹ್ನ ಕುಂಬಳೆಯ ಡಾಕ್ಟರ್ಸ್ ಆಸ್ಪತ್ರೆಗೆ ಬಂದು ಹಿಂತಿರುಗಿದ್ದರು. ಈ ವೇಳೆ ಅವರು ಕಾರಿಗೆ ಹತ್ತುತ್ತಿದ್ದಾಗ ಪ್ಯಾಂಟ್‌ನ ಜೇಬಿನಿಂದ ೧೧ ಸಾವಿರ ರೂಪಾಯಿ ಕೆಳಕ್ಕೆ ಬಿದ್ದಿತ್ತು. ಅಲ್ಪ ಹೊತ್ತಿನ ಬಳಿಕ ಆಸ್ಪತ್ರೆ …

ರೋಟರಿ ಬದಿಯಡ್ಕ ವತಿಯಿಂದ ಸ್ವಚ್ಛತಾ ಕಾರ್ಯ

ಬದಿಯಡ್ಕ: ಗಾಂ ಧಿಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯದ ಅಂಗವಾಗಿ ರೋಟರಿ ಕ್ಲಬ್ ಬದಿಯಡ್ಕದ ನೇ ತೃತ್ವದಲ್ಲಿ ಬದಿಯಡ್ಕ 14 ನೇ ವಾರ್ಡಿನ ಬೋ ಳುಕಟ್ಟೆಯಲ್ಲಿರುವ ಅಂಗನವಾಡಿ ಕೇಂದ್ರದ ಪರಿಸರವನ್ನು ನಿನ್ನೆ ಶುಚೀಕರಿಸಲಾಯಿತು. ರೋಟರಿ ಕ್ಲಬ್‌ನ ಅಧ್ಯಕ್ಷ ಬಿ ರಾಧಾಕೃಷ್ಣ ಪೈ, ಕೋಶಾಧಿಕಾರಿ ಕೇಶವ ಬಿ., ರೋಟರಿ ಸದಸ್ಯರು ಭಾಗವ ಹಿಸಿದರು. ಮಕ್ಕಳಿಗೆ ಬಿಸ್ಕತ್ತು ವಿತರಿಸಲಾ ಯಿತು. ಅಂಗನವಾಡಿ ಶಿಕ್ಷಕಿ ಸುಜಾತ ಕೃಷ್ಣ ಹಾಗೂ ಸಹಾಯಕಿ ಬೇಬಿ ಜಿ. ಕೃತಜ್ಞತೆ ಸಲ್ಲಿಸಿದರು. ರೋಟರಿ ಕಾರ್ಯ ದರ್ಶಿ ವೈ.ರಾಘವೇಂದ್ರ ಪ್ರಸಾದ್ …

ಮುಳ್ಳೇರಿಯ: ತಲೆಹೊರೆ ಕಾರ್ಮಿಕನಿಗೆ ಬಿಎಂಎಸ್‌ನಿಂದ ಸನ್ಮಾನ, ಬೀಳ್ಕೊಡುಗೆ

ಮುಳ್ಳೇರಿಯ: ಸುದೀರ್ಘ ೨೫ ವರ್ಷಗಳ ಕಾಲ ತಲೆಹೊರೆ ಕಾರ್ಮಿಕ ನಾಗಿ ಕೆಲಸ ನಿರ್ವಹಿಸಿದ ಬಳಿಕ ವೃತ್ತಿಯಿಂದ ನಿವೃತ್ತರಾದ ಮಿಂಚಿಪದವಿನ ರವಿ ಅವರನ್ನು ಬಿಎಂಎಸ್ ಮುಳ್ಳೇರಿಯ ಘಟಕ ತಲೆಹೊರೆ ಕಾರ್ಮಿಕರ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾ ಯಿತು. ಕಾರ್ಯಕ್ರಮವನ್ನು ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಉದ್ಘಾಟಿಸಿದರು. ಪುರುಷೋತ್ತಮ ಕುಂಟಾರು ಅಧ್ಯಕ್ಷತೆ ವಹಿಸಿದರು. ಕಾರಡ್ಕ ಗ್ರಾಮ ಪಂ. ಅಧ್ಯಕ್ಷ ಗೋಪಾಲಕೃಷ್ಣ ಭಟ್, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಅಧ್ಯಕ್ಷ ಗಣೇಶ್ ವತ್ಸ, ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ …

ಪೈವಳಿಕೆಯಲ್ಲಿ ಕೊಡಿಯೇರಿ ಬಾಲಕೃಷ್ಣನ್ ಸಂಸ್ಮರಣೆ

ಪೈವಳಿಕೆ; ಸಿಪಿಎಂ ರಾಜ್ಯ ಕಾರ್ಯದರ್ಶಿಯಾಗಿದ್ದ ಕೊಡಿಯೇರಿ ಬಾಲಕೃಷ್ಣನ್‌ರ ಪ್ರಥಮ ವಾರ್ಷಿಕ ಸಂಸ್ಮರಣೆ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ ನೇತೃತ್ವದ್ಲಲಿ ನಡೆಸಲಾಯಿತು. ಸಿಪಿಎಂ ನೇತಾರ ಶ್ರೀನಿವಾಸ ಭಂಡಾರಿ ಧ್ವಜಾರೋಹಣಗೈದರು. ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸಿಪಿಎಂ ನೇತಾರರಾದ ಅಹಮ್ಮದ್ ಹುಸೈನ್ ಪಿ.ಕೆ., ಚಂದ್ರ ನಾಕ್ ಮಾನಿಪ್ಪಾಡಿ ಮಾತನಾಡಿದರು. ಲೋಕಲ್ ಕಾರ್ಯದರ್ಶಿ ಅಬ್ದುಲ್ಲ ಕೆ. ಸ್ವಾಗತಿಸಿ, ಸದಾನಂದ ಕೋರಿಕ್ಕಾರ್ ವಂದಿಸಿದರು.  ಸಿಪಿಎಂ ಮಾನಿಪ್ಪಾಡಿ ಶಾಖೆ ಸಮಿತಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೈವಳಿಕೆ ಲೋಕಲ್ ಸಮಿತಿ ಸದಸ್ಯ ಚಂದ್ರ ನಾಕ್ ಮಾನಿಪ್ಪಾಡಿ …

ಸಿಐಟಿಯು ತೊರೆದು ಗ್ಯಾಸ್ ಏಜೆನ್ಸಿ ಕಾರ್ಮಿಕರು ಬಿಎಂಎಸ್‌ಗೆ

ಕಾಸರಗೋಡು: ಸಿಐಟಿಯುಗೆ ಗ್ಯಾಸ್  ಏಜೆನ್ಸಿ ಕಾರ್ಮಿಕರು ರಾಜೀನಾಮೆ ನೀಡಿ ಬಿಎಂಎಸ್ ನೇತೃತ್ವದ ಗ್ಯಾಸ್ ಆಂಡ್ ಫ್ಯೂವಲ್ ಮಜ್ದೂರ್ ಸಂಘ್‌ಗೆ ಸೇರಿದರು. ಮಾರುತಿ ಗ್ಯಾಸ್ ಏಜೆನ್ಸಿಯ ಕಾಸರ ಗೋಡು ಘಟಕದ ಎಲ್ಲಾ ಕಾರ್ಮಿ ಕರನ್ನು ಬಿಎಂಎಸ್ ಜಿಲ್ಲಾ ಪದಾಧಿಕಾ ರಿಗಳು  ಸದಸ್ಯತ್ವ ನೀಡಿ ಸಂಘಟನೆಗೆ ಸ್ವಾಗತಿಸಿದರು. ದಿನೇಶ್‌ರ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಅಧ್ಯಕ್ಷ ವಿ.ವಿ. ಬಾಲಕೃಷ್ಣನ್, ಜಿಲ್ಲಾ ಕಾರ್ಯ ದರ್ಶಿ ವಿ. ಗೋವಿಂದನ್, ಪಿ. ಮುರ ಳೀಧರನ್, ಕೆ.ಎ. ಶ್ರೀನಿವಾಸನ್, ಟಿ. ಕೃಷ್ಣನ್, ವಿಶ್ವನಾಥ ಶೆಟ್ಟಿ, ಅನಿಲ್ …

ಕುಂಬಳೆಯಲ್ಲಿ ಕೊಲೆ ಪ್ರಕರಣದ ಆರೋಪಿಯನ್ನು ತಲೆಗೆ ಕಲ್ಲುಹಾಕಿ ಕೊಲೆಗೈದು ಮೃತದೇಹ ಪೊದೆಗಳೆಡೆ ಉಪೇಕ್ಷೆ

ಕುಂಬಳೆ: ಕೊಲೆ ಪ್ರಕರಣದಲ್ಲಿ ಆರೋಪಿಯಾದ ಯುವಕನನ್ನು ತಲೆಗೆ ಕಲ್ಲು ಹಾಕಿ ಕೊಲೆಗೈದು  ಮೃತದೇಹವನ್ನು ಪೊದೆಗಳೆಡೆ ಉಪೇಕ್ಷಿಸಿದ ಘಟನೆ ಕುಂಬಳೆಯಲ್ಲಿ ನಡೆದಿದೆ. ಈ ಹಿಂದೆ ಕುಂಬಳೆ ಬಳಿಯ ಶಾಂತಿಪಳ್ಳ ಲಕ್ಷಂವೀಡ್ ಕಾಲನಿ ನಿವಾಸಿಯೂ ಈಗ ವಿದ್ಯಾನಗರದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿದ್ದ   ಅಬ್ದುಲ್ ರಶೀದ್ ಯಾನೆ ಸಮೂಸ ರಶೀದ್ (೩೮) ಎಂಬಾತ ಕೊಲೆಗೀಡಾದ ವ್ಯಕ್ತಿ. ಕುಂಬಳೆ ಬಳಿಯ ಕುಂಟಂಗೇರಡ್ಕ ಐಎಚ್‌ಆರ್‌ಡಿ ಕಾಲೇಜಿನ ಹಿಂಭಾಗದ ಮೈದಾನದ ಸಮೀಪ ಹಿತ್ತಿಲಿನಲ್ಲಿ ಪೊದೆಗಳೆಡೆ ಇಂದು ಬೆಳಿಗ್ಗೆ ೬.೩೦ರ ವೇಳೆ ಅಬ್ದುಲ್ ರಶೀದ್‌ನ ಮೃತದೇಹ ಪತ್ತೆಯಾಗಿದೆ. ತ್ಯಾಜ್ಯಗಳನ್ನು …

ಬಸ್-ಸ್ಕೂಟರ್ ಢಿಕ್ಕಿ ಇಬ್ಬರಿಗೆ ಗಂಭೀರ ಗಾಯ

ಕುಂಬಳೆ: ಬಸ್ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರರಾದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸೋಂಕಾಲ್ ನಿವಾಸಿ ಇಬ್ರಾಹಿಂ ಖಲೀಲ್ (೨೧), ಮಣಿಮುಂಡ ಮುಹಮ್ಮದ್ ಮಾಹಸಿನ್ (೨೪) ಗಾಯಗೊಂಡವರು. ಇವರನ್ನು ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ೮ ಗಂಟೆಗೆ ನಾರಾಯಣಮಂಗಲದಲ್ಲಿ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ನಾರಾಯಣಮಂಗಲದಲ್ಲಿ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.