ಲೀಗ್ ಸದಸ್ಯೆ ರಾಜೀನಾಮೆ ಹಿಂದೆ ಸಿಪಿಎಂ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರ-ಸಿಪಿಎಂ

ಪೈವಳಿಕೆ: ಪೈವಳಿಕೆ ಪಂಚಾಯತ್‌ನ ೨ನೇ ವಾರ್ಡ್ ಸದಸ್ಯೆಗೆ ಸಿಪಿಎಂ ಆಮಿಷವೊಡ್ಡಿ ಲೀಗ್ ಸದಸ್ಯೆ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ  ಹೇಳಿಕೆ ಸತ್ಯಕ್ಕೆ ದೂರ ಎಂದು ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ  ತಿಳಿಸಿದೆ. ಮುಸ್ಲಿಂ ಲೀಗ್ ಇಂತಹ ಆಮಿಷಕ್ಕೆ ಕೈ ಚಾಚುವ ಅಗ್ಗದ ಪಕ್ಷವೇ? ಬಿಜೆಪಿ ಆ ಪಕ್ಷದ ಮೌಲ್ಯಕ್ಕೆ ಅಪಮಾನ ಮಾಡಿದೆ. ಇದಕ್ಕೆ ತಕ್ಕ ಉತ್ತರ ಮುಸ್ಲಿಂ ಲೀಗ್ ಕೊಡಬೇಕಾಗಿದೆ. ಲೀಗ್ ಸದಸ್ಯೆಯ ರಾಜೀನಾಮೆಗೆ ಲೀಗ್ ನಾಯಕತ್ವದ ಭಿನ್ನಾಭಿಪ್ರಾ ಯವೇ ಕಾರಣವೆಂದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಸಿಪಿಎಂ …

ಪಾರೆಸ್ಥಾನ ಶ್ರೀ ಭಗವತಿ ಕ್ಷೇತ್ರ ಜೀರ್ಣೋದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆ

ಕುಂಬಳೆ: ಆರಿಕ್ಕಾಡಿ ಪಾರೆ ಶ್ರೀ ಭಗವತೀ ಆಲಿಚಾಮುಂಡಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಪೂರ್ವಭಾವಿಯಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಕ್ಷೇತ್ರದಲ್ಲಿ ಜರಗಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಕುಮಾರ ಎಂ. ಕುಂಬಳೆ ಅಧ್ಯಕ್ಷತೆ ವಹಿಸಿದ್ದು, ಬ್ರಹ್ಮಶ್ರೀ ಅರವತ್ ಕೆ.ಯು. ಪದ್ಮನಾಭ ತಂತ್ರಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಬ್ರಹ್ಮಶ್ರೀ ಕಲ್ಕುಳಬೂಡು ಶಂಕರನಾರಾಯಣ ಕಡಮಣ್ಣಾಯ, ಬ್ರಹ್ಮಶ್ರೀ ಲಕ್ಷ್ಮೀನಾರಾಯಣ ತಂತ್ರಿ ಕಾವುಮಠ ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಅಡ್ಕ ಶ್ರೀ ಭಗವತಿ ಕ್ಷೇತ್ರದ ಕಾರ್ನವರಾದ ಕೃಷ್ಣ, ಪಾಡಾಂಗರೆ ಭಗವತೀ ಕ್ಷೇತ್ರದ ನಾರಾಯಣ ಭಗವತೀ ಪೂಜಾರಿ …

ನೀರ್ಚಾಲಿನಲ್ಲಿ ಸೇವಾಭಾರತಿ ರಕ್ತದಾನ ಶಿಬಿರ

ಬದಿಯಡ್ಕ: ಸೇವಾಭಾರತಿ ನೀರ್ಚಾಲು ಹಾಗೂ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ವಠಾರದಲ್ಲಿ ರಕ್ತದಾನ ಶಿಬಿರ ಜರಗಿತು. ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಉದ್ಘಾಟಿಸಿದರು. ಸೇವಾಭಾರತಿಯ ಸದಾಶಿವ ಮಾಸ್ತರ್, ಪ್ರದೀಪ್ ಮಾಸ್ತರ್, ಬಾಲಕೃಷ್ಣ ಏಣಿಯರ್ಪು, ಬಾಲಸುಬ್ರಹ್ಮಣ್ಯ ಭಟ್ ಮಲ್ಲಡ್ಕ, ಸತೀಶ ಏಣಿಯರ್ಪು, ಶಶಿಧರ, ಗಂಗಾಧರ ಓಣಿಯಡ್ಕ, ಶ್ರೀಜಿತ್, ಮಹೇಶ್ ವಳಕ್ಕುಂಜ, ಅಜಿತ್ ಬೇಳ ನೇತೃತ್ವ ನೀಡಿದ್ದರು. ವಿವಿಧ ಸಂಘಸAಸ್ಥೆಗಳ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ರಕ್ತದಾನದಲ್ಲಿ ಪಾಲ್ಗೊಂಡಿದ್ದರು.

ಉಬ್ರಂಗಳದಲ್ಲಿ ಬಾಲಗೋಕುಲ ಶುಭಾರಂಭ ಅ.೧ರಂದು

ಬದಿಯಡ್ಕ: ಗ್ರಾಮವಿಕಾಸ ಸಮಿತಿ ಉಬ್ರಂಗಳ ಇದರ ಆಶ್ರಯದಲ್ಲಿ ಉಬ್ರಂಗಳ ಬಡಗು ಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾ ಸನ್ನಿದಿ ವಠಾರದಲ್ಲಿ ಶ್ರೀ ಭಾರ್ಗವರಾಮ ಬಾಲಗೋಕುಲ ಅಕ್ಟೋಬರ್ 1ರಂದು ಬೆಳಗ್ಗೆ 10 ಗಂಟೆಗೆ ಶುಭಾರಂಭ ಗೊಳ್ಳಲಿದೆ. ಉಬ್ರಂಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ| ಕಿಶೋರ್ ಕುಮಾರ್ ಅಧ್ಯಕ್ಷತೆಯಲ್ಲಿ ಅಗಲ್ಪಾಡಿ ಶಾಲಾ ಅಧ್ಯಾಪಕ ಹರಿನಾರಾಯಣ ಮಾಸ್ತರ್ ಉದ್ಘಾಟಿಸುವರು. ವಿ.ಕೆ.ಸತೀಶನ್ ಮಾಸ್ತರ್ ಮÁತನಾಡÀÄವರು. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಾಲಗೋಕುಲ ಜಿಲ್ಲಾಧ್ಯಕ್ಷ ನಾರಾಯಣ ಮಾಸ್ಟರ್ ಬಿಡುಗಡೆ ಗೊಳಿಸಿದರು.

ಮೂವರು ಸಹೋದರಿಯರು ಸೇರಿದಂತೆ ಐವರ ಪ್ರಾಣ ಅಪಹರಿಸಿದ ದಾರುಣ ಘಟನೆ: ಮರಣ ನಡೆದ ಮನೆಗೆ ಆಟೋ ರಿಕ್ಷಾದಲ್ಲಿ ತೆರಳುವಾಗ ನಡೆದ ಭೀಕರ ಅಪಘಾತ; ಬಸ್ ವಶಕ್ಕೆ, ಚಾಲಕ ಸೆರೆ

ಬದಿಯಡ್ಕ: ಬದಿಯಡ್ಕ  ಸಮೀಪದ ಪಳ್ಳತ್ತಡ್ಕದಲ್ಲಿ ನಿನ್ನೆ ಸಂಜೆ   ಭೀಕರ ವಾಹನ ಅಪಘಾತ ಸಂಭವಿಸಿದೆ. ಇದರಲ್ಲಿ  ಮೂವರು ಸಹೋದರಿಯರೂ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ.  ಈ ಐವರು   ಮರಣ ನಡೆದ   ಸಂಬಂಧಿಕ ರೋರ್ವರ ಮನೆಗೆ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ  ಪಳ್ಳತ್ತಡ್ಕಕ್ಕೆ ಸಮೀಪದ ಚೆರ್ಕಳ-ಕಲ್ಲಕಟ್ಟ ರಾಜ್ಯ ಹೆದ್ದಾರಿಯ  ಎಸ್ ತಿರುವಿನಲ್ಲಿ  ಆಟೋ ರಿಕ್ಷಕ್ಕೆ ಖಾಸಗಿ ಸ್ಕೂಲ್ ಬಸ್ ಢಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ  ಆಟೋ ರಿಕ್ಷಾ ಚಾಲಕ ಮೂಲತಃ ಮೊಗ್ರಾಲ್ ಪುತ್ತೂರು ಮೊಗರು ಎರಿಯಾಲ್ …

ಕಾಸರಗೋಡು ಆರ್.ಟಿ. ಕಚೇರಿಗೆ ಮಿಂಚಿನ ವಿಜಿಲೆನ್ಸ್ ದಾಳಿ: ನಗದು ವಶ

ಕಾಸರಗೋಡು: ಕಾಸರಗೋಡು ವಿದ್ಯಾನಗರದ ಸಿವಿಲ್ ಸ್ಟೇಷನ್‌ನಲ್ಲಿ ಕಾರ್ಯವೆಸಗುತ್ತಿರುವ ಕಾಸರಗೋಡು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗೆ ಕಾಸರಗೋಡು ವಿಜಿಲೆನ್ಸ್ (ಜಾಗೃತದಳ) ಡಿವೈಎಸ್‌ಪಿ ವಿ.ಕೆ. ವಿಶ್ವಂಭರನ್‌ರ ನೇತೃತ್ವದ ತಂಡ ನಿನ್ನೆ ಮಿಂಚಿನ ದಾಳಿ ನಡೆಸಿದೆ. ದಾಳಿಯಲ್ಲಿ ಆರ್‌ಟಿ ಕಚೇರಿಯ ಸಿಬ್ಬಂದಿಗಳು ಮತ್ತು ಏಜೆಂಟರುಗಳ ನಡುವಿನ ಅವ್ಯವಹಾರವನ್ನು ಪತ್ತೆಹಚ್ಚಲಾಗಿದೆ. ಆರ್‌ಟಿ ಕಚೇರಿಯ ಕೆಲವು ಸಿಬ್ಬಂದಿಗಳಿಗೆ ಲಂಚ ರೂಪದಲ್ಲಿ ನೀಡಲೆಂದು ತರಲಾಗಿರುವುದಾಗಿ ಸಂಶಯಿಸಲಾಗುತ್ತಿರುವ ೩೪,೪೧೦ ರೂ. ನಗದನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಇದು ಪ್ರಸ್ತುತ ಕಚೇರಿಯಲ್ಲಿ ನಡೆಯುತ್ತಿರುವ ಲಂಚಗುಳಿತನದ ಒಂದು ಧ್ಯೋತಕವಾಗಿದೆ ಎಂದು ವಿಜಿಲೆನ್ಸ್ …

ಕಲ್ಲಾಪುನಲ್ಲಿ ಸ್ಕೂಟರ್‌ನಿಂದ ಎಸೆಯಲ್ಪಟ್ಟು ಉಳಿಯ ನಿವಾಸಿ ಗೃಹಿಣಿ ಮೃತ್ಯು

ತಲಪ್ಪಾಡಿ: ವಿವಿಧ ಸಂಘ-ಸಂಸ್ಥೆಗ ಳಲ್ಲಿ ಸಕ್ರಿಯರಾಗಿದ್ದ ಮಧೂರು ಉಳಿಯ ನಿವಾಸಿ ಸುಮಾ ನಾರಾಯಣ ಗಟ್ಟಿ (೫೧)ರ ನಿಧನ ಉಳಿಯ ಪರಿಸರದಲ್ಲಿ ಶೋಕಸಾಗರ ಸೃಷ್ಟಿಸಿದೆ. ನಿನ್ನೆ  ಮಧ್ಯಾಹ್ನ ತೊಕ್ಕೊಟ್ಟು ಕಲ್ಲಾಪು ಸಮೀಪದ ನಾಗನ ಕಟ್ಟೆ ಬಳಿ ಸ್ಕೂಟರ್‌ನಿಂದ ರಸ್ತೆಗೆಸೆ ಯಲ್ಪಟ್ಟು ಸುಮಾ ಮೃತಪಟ್ಟಿದ್ದಾರೆ. ಸೋಮೇಶ್ವರ ಪಿಲಾರು ಅರಮನೆ ಕುಟುಂಬ ಮನೆಯಲ್ಲಿ  ವಾರ್ಷಿಕ ಪೂಜೆ ಕಾರ್ಯಕ್ರಮಗಳಲ್ಲಿ ಭಾಗವ ಹಿಸಿ ಸಂಜೆ ವೇಳೆ ಜಪ್ಪಿನಮೊಗರು ನಲ್ಲಿರುವ ದೊಡ್ಡಮ್ಮನ ಮನೆಗೆ ತೆರಳಿ ವಾಪಸು ಕೋಟೆಕಾರು ಬೀರಿ ಕಡೆಗೆ ಸಹೋದರನ ಜೊತೆ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ …

೧೫ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ : ಮಾವನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಮುಳ್ಳೇರಿಯ: ಹದಿನೈದರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ೪೫ ವರ್ಷದ ವ್ಯಕ್ತಿಯ ವಿರುದ್ಧ ಆದೂರು ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದೂರು ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶದ ೧೫ರ ಹರೆಯದ ಬಾಲಕಿಗೆ ಕಳೆದ ಜೂನ್ ೨೩ರಂದು ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಆಕೆ ನೀಡಿದ ದೂರಿನಂತೆ ಆಕೆಯ ಮಾವನ ವಿರುದ್ಧ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆನ್‌ಲೈನ್ ಉದ್ಯೋಗ ಆಮಿಷ: ಇಬ್ಬರು ಮಹಿಳೆಯರ ೪ ಲಕ್ಷದ ೭೦ ಸಾವಿರ ರೂ. ನಷ್ಟ; ಕೇಸು ದಾಖಲು

ಕುಂಬಳೆ: ಆನ್‌ಲೈನ್ ಉದ್ಯೋಗದ ಆಮಿಷವೊಡ್ಡಿ ಹಣ ಲಪಟಾಯಿಸುವ ಮಂದಿಗೆ ಜಿಲ್ಲೆಯ ಇಬ್ಬರು ಮತ್ತೆ ತುತ್ತಾಗಿದ್ದಾರೆ. ಕುಂಬಳೆ ಬಳಿಯ ಕೊಡ್ಯಮ್ಮೆ ನಿವಾಸಿ ರುಕ್ಸಾನ (೩೦), ಖದೀಜತ್ ತಸ್ಮಿಯ (೨೬) ವಂಚನೆಗೆ ಬಲಿಯಾದವರು. ಅಹಮ್ಮದ್ ಸೂಫಿಯಾನ್‌ರ ಪತ್ನಿಯಾದ ರುಕ್ಸಾನರ ೧.೩೯ಸಾವಿರ ರೂ. ಮೊಯ್ದೀನ್ ಸಾಹದ್‌ರ ಪತ್ನಿ ಖದೀಜತ್ ತಸ್ಮಿಯರ ೩.೩೧ಸಾವಿರ ರೂ. ನಷ್ಟಗೊಂಡಿದೆ.ಆನ್‌ಲೈನ್ ಉದ್ಯೋಗಕ್ಕಾಗಿ ವಾಟ್ಸಪ್ ಮೂಲಕ ಕರೆ ಮಾಡಿ ಮೊದಲು ೫೦೦ ರೂ.ವನ್ನು ವಂಚಕರ ಖಾತೆಗೆ ಕಳುಹಿಸಿದ್ದರು. ಬಳಿಕ ಸಾವಿರ, ೧೦ ಸಾವಿರ ರೂ.ವರೆಗೆ ರುಕ್ಸಾನ ಕಳುಹಿಸಿದ್ದರು. ಇದಕ್ಕೆ …

೧೦ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ೮೧ ವರ್ಷ ಸಜೆ, ೩.೫ ಲಕ್ಷ ರೂ. ಜುಲ್ಮಾನೆ

ಕಾಸರಗೋಡು: ಹತ್ತು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದ ಆರೋಪಿಗೆ ಹೊಸದುರ್ಗ ಸ್ಪೆಷಲ್ ಫಾಸ್ಟ್ ಟ್ರಾಕ್ ನ್ಯಾಯಾಲಯದ ನ್ಯಾಯಧೀಶರಾದ ಸಿ. ಸುರೇಶ್ ಕುಮಾರ್ ಅವರು ಪೋಕ್ಸೋ ಮತ್ತು ಭಾರತೀಯ ಶಿಕ್ಷಾ ಸಂಹಿತೆಯ ವಿವಿಧ  ಸೆಕ್ಷನ್‌ಗಳಲ್ಲಾಗಿ ಒಟ್ಟು ೮೧ ವರ್ಷ ಸಜೆ ಮತ್ತು ೩,೬೫,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಹೊಸದುರ್ಗ ಪುಲ್ಲೂರು ಅಂಬಲತರ ಪುತ್ತನ್ ಪುರಕ್ಕಲ್ ಪಿ.ಟಿ. ಸನ್ನಿ (೫೮) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ …