ಹಾಡಹಗಲೇ ಮನೆಯಿಂದ ಕಳವು

ಕಾಸರಗೋಡು: ಹಾಡಹಗಲೇ ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಮೂರು ಪವನ್‌ನ ಚಿನ್ನದ ಒಡವೆ ಮತ್ತು ೧೫೦೦ ರೂ. ನಗದು ಕಳವುಗೈದಿರುವುದಾಗಿ ವಿದ್ಯಾನಗರ ಪೊಲೀಸರಿಗೆ ದೂರ ನೀಡಲಾಗಿದೆ. ಚೆರ್ಕಳ ಸಂತೋಷ್ ನಗರದ ಹಾಜಿರಾ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಕಳವು ನಡೆಯುವ ವೇಳೆ ಮನೆಯವರು ಸಂಬಂಧಿಕರ ಮನೆಗೆ ಹೋಗಿದ್ದರು. ಅಲ್ಲಿಂದ ಹಿಂತಿರುಗುವುದರ ಮಧ್ಯೆ ಕಳವು ನಡೆದಿದೆ ಎನ್ನಲಾಗಿದೆ.

ಯುಡಿಎಫ್ ಐತಿಹಾಸಿಕ ಗೆಲುವು

ಕೋಟ್ಟಯಂ: ಕೇರಳದ ಜನತೆ ಅತೀ ಕಾತರದಿಂದ ಕಾಯುತ್ತಿದ್ದ ಪುದುಪ್ಪಳ್ಳಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ  ಯುಡಿಎಫ್ ಮತ್ತೆ ಐತಿಹಾಸಿಕ ಗೆಲುವು ಸಾಧಿಸಿದೆ.  ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕಾಂಗ್ರೆಸ್‌ನ  ಚಾಂಡಿ ಉಮ್ಮನ್ ೩೭,೭೧೯ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಎಡರಂಗದ ಅಭ್ಯರ್ಥಿಯಾದ ಸಿಪಿಎಂನ ಜೈಕ್ ಸಿ ಥೋಮಸ್‌ರನ್ನು ಚಾಂಡಿ ಉಮ್ಮನ್ ಪರಾಭವಗೊಳಿಸಿದ್ದಾರೆ. ಚಾಂಡಿ ಉಮ್ಮನ್‌ರಿಗೆ ೮೦.೧೪೪ ಮತಗಳು ಲಭಿಸಿದೆ. ಇದೇ ವೇಳೆ ಜೈಕ್ ಸಿ ಥೋಮಸ್‌ರಿಗೆ ೪೨,೪೨೫ ಮತಗಳು, ಎನ್‌ಡಿಎ ಅಭ್ಯರ್ಥಿ ಬಿಜೆಪಿಯ ಲಿಜಿನ್‌ಲಾಲ್‌ರಿಗೆ ೬೫೫೮ ಮತಗಳು ಲಭಿಸಿದೆ. …

ಸುಳ್ಯಪದವು ಬಳಿ ಮನೆ ಮಂದಿಯ ಕಟ್ಟಿ ಹಾಕಿ ದರೋಡೆ: ತನಿಖೆ ಕಾಸರಗೋಡಿಗೆ

ಸುಳ್ಯಪದವು: ಬದಿ ಯಡ್ಕ ಬಳಿಯ ನಾರಂಪಾಡಿ ನಿವಾಸಿಯಾದ ತಾಯಿ ಹಾಗೂ ಪುತ್ರನನ್ನು ಕಟ್ಟಿ ಹಾಕಿ ಮಾರಕಾಯುಧಗಳನ್ನು ತೋರಿಸಿ ಬೆದರಿಸಿ ಮನೆ ದರೋಡೆಗೈದ ಘಟನೆ ಪುತ್ತೂರು ಗ್ರಾಮದ ಪಡುವನ್ನೂರು ಕುದ್ಕಾಡಿ ತೋಟದ ಮೂಲೆಯಲ್ಲಿ ನಡೆದಿದೆ. ತೋಟದ ಮೂಲೆಯಲ್ಲಿ ವಾಸವಾಗಿರುವ ಬಡಗನ್ನೂರು ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈಯವರ ಮನೆಯಿಂದ ೧೫ ಪವನ್ ಚಿನ್ನಾಭರಣ, ೪೦ ಸಾವಿರ ರೂ.ವನ್ನು ಕಳ್ಳರು ದರೋಡೆಗೈದಿದ್ದಾರೆ. ನಿನ್ನೆ ಮುಂಜಾನೆ ೨ ವೇಳೆ ಮುಸುಕುಧಾರಿಗಳಾದ ಏಳೆಂಟು ಮಂದಿಯ ತಂಡ ಮಾರಕಾಯುಧಗಳಿಂದ ತಲುಪಿ ಬಾಗಿಲು ಮುರಿದು  ಒಳನುಗ್ಗಿ …

ಮನೆಯಲ್ಲಿ ನಿದ್ರಿಸುತ್ತಿದ್ದ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಕಾಮುಕನ ಸೆರೆ

ಕೊಚ್ಚಿ: ಆಲುವಾದ ಕಿಳಾಟ್ ಎಡಪ್ಪಾರ ವೀಟಿಲ್‌ನಲ್ಲಿ ತಾಯಿ ಮತ್ತು ಸಹೋದರರ ಜತೆ ಮಲಗಿ ನಿದ್ರಿಸುತ್ತಿದ್ದ ಬಿಹಾರದ ವಲಸೆ ಕಾರ್ಮಿಕ ದಂಪತಿ ಪುತ್ರಿ ಎಂಟು ವರ್ಷದ ಬಾಲಕಿಯನ್ನು ನಿನ್ನೆ ಮುಂಜಾನೆ ೨ ಗಂಟೆಗೆ ಆಕೆಯ ಮನೆಯೊಳಗಿಂದಲೇ ಅಪಹರಿಸಿ ಸಮೀ ಪದ ಬಯಲಿಗೆ ಒಯ್ದು ಪೈಶಾಚಿಕವಾದ ರೀತಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದ ಆರೋಪಿಯಾದ ಕಾಮುಕನನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ತಿರುವನಂತಪುರ ಚೆಂಗಲ್ ವಂಚಿಕುಳಿ ಕಂಬಾರಕ್ಕೆಲ್ ವೀಟಿಲ್‌ನ ನಿವಾಸಿ ಹಾಗೂ ೧೮ರಷ್ಟು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯೂ ಆಗಿರುವ ಕ್ರಿಸ್ಟಿನ್ ರಾಜನ್ …

ರಸ್ತೆ ನಿರ್ಮಾಣ ಉಪಕರಣಗಳ ಕಳವು: ಮೂವರ ಸೆರೆ

ಬದಿಯಡ್ಕ: ರಸ್ತೆ ನಿರ್ಮಾಣಕ್ಕಾಗಿ ತಂದಿರಿಸಿದ್ದ ಉಪಕರಣಗಳು ಹಾಗೂ ಸಾಮಗ್ರಿಗಳನ್ನು ಕಳವು ನಡೆಸಿದ ಪ್ರಕರಣದಲ್ಲಿ ಮೂರು ಮಂದಿಯನ್ನು ಬದಿಯಡ್ಕ  ಪೊಲೀಸರು ಬಂಧಿಸಿದ್ದಾರೆ. ಬಾಪಾಲಿಪೊನದ ನಿಸಾದ್ (೪೮), ಮೇಲ್ಪರಂಬ ಕಳನಾಡಿನ ಇರ್ಫಾನ್ (೩೬), ಚೆರ್ಕಳ ಕೆಕೆ ಪುರದ ಸುಂದರ (೪೮) ಎಂಬಿವರನ್ನು ಪೊಲೀಸರು ಬಂಧಿಸಿದ್ದಾರೆ.  ಇವರು ಮಾರಾಟ ನಡೆಸಿದ ಕಳವು ಸೊತ್ತುಗಳನ್ನು ಕಾಸರಗೋಡಿನಿಂದ ಪತ್ತೆಹಚ್ಚಲಾಗಿದೆ.    ಕಂದಲ್-ಮುಂಡಿತ್ತಡ್ಕ ರಸ್ತೆ ನಿರ್ಮಾಣಕ್ಕೆ ಅಗತ್ಯಕ್ಕಾಗಿ ತಂದಿರಿಸಿದ್ದ ಉಪಕರಣ ಹಾಗೂ ಸಾಮಗ್ರಿಗಳನ್ನು  ಇತ್ತೀಚೆಗೆ ಕಳವುನಡೆಸಲಾಗಿದೆ.  ಜನವಾಸವಿಲ್ಲದ ಸ್ಥಳದಲ್ಲಿ ಇವುಗಳನ್ನು ಇರಿಸಲಾಗಿತ್ತು. ರಸ್ತೆ ನಿರ್ಮಾಣದ ಗುತ್ತಿಗೆ ಪಡೆದ …

ವರ್ಕಾಡಿಯ ಮನೆಯಿಂದ ಅಡಿಕೆ ಕಳವು: ಇನ್ನೋರ್ವ ಸೆರೆ

ಮಂಜೇಶ್ವರ: ವರ್ಕಾಡಿ ನಲ್ಲೆಂಗಿಪದವಿನ ಸಾಜಿದ್ ಕಂಪೌಂಡ್‌ನ ರೆಹ್ಮಾನ್ ಸಹೀಂ ಎಂಬವರ ಮನೆಯಿಂದ ಅಡಿಕೆ ಕಳವುಗೈದ ಪ್ರಕರಣದಲ್ಲಿ ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಡಾಜೆ ಕಾಜೂರು ನಿವಾಸಿ ಅಬ್ದುಲ್ ನೌಶಾದ್ (೨೦) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.  ಇದೇ ಪ್ರಕರಣದಲ್ಲಿ ಕಡಂಬಾರು ಇಡಿಯಾ ನಿವಾಸಿ ಮುಸ್ತಾಕ್ ಹುಸೈನ್ (೨೨), ಕಾಜೂರು ನಿವಾಸಿ ಅಬ್ದುಲ್ ರಶೀದ್ (೨೧) ಎಂಬಿವರನ್ನು ಮೊನ್ನೆ ಬಂಧಿಸಲಾಗಿತ್ತು.ಈ ತಿಂಗಳ ೫ ಹಾಗೂ ೬ರ ಮಧ್ಯೆ ಕಳ್ಳರು ಮನೆಯಿಂದ ಅಡಿಕೆ ಕಳವು ನಡೆಸಿದ್ದಾರೆ. ಬಾಗಿಲಿನ ಬೀಗ ಮುರಿದು …

ಪೊಲೀಸರಿಗೆ ಆಕ್ರಮಿಸಿದ ಪ್ರಕರಣ: ಜಿಲ್ಲಾ ಪಂ. ಸದಸ್ಯನ ಜಾಮೀನು ಅರ್ಜಿ ಪರಿಗಣನೆ ಮುಂದೂಡಿಕೆ: ಪೊಲೀಸರು ಮುಂಬಯಿಗೆ

ಉಪ್ಪಳ: ಮಂಜೇಶ್ವರ ಎಸ್‌ಐ ಹಾಗೂ ಪೊಲೀಸರ ಮೇಲೆ ಆಕ್ರಮಿಸಿದ ಪ್ರಕರಣದಲ್ಲಿ ರಿಮಾಂಡ್‌ನಲ್ಲಿರುವ ಜಿಲ್ಲಾ ಪಂಚಾಯತ್ ಸದಸ್ಯನೂ, ಮುಸ್ಲಿಂ ಯೂತ್ ಲೀಗ್ ಜಿಲ್ಲಾ  ಜೊತೆ ಕಾರ್ಯದರ್ಶಿಯಾದ ಗೋಲ್ಡನ್ ಅಬ್ದುಲ್ ರಹ್ಮಾನ್ (೩೩)ರ ಜಾಮೀನು ಅರ್ಜಿಯನ್ನು ಪರಿಗಣಿಸುವುದನ್ನು ನ್ಯಾಯಾಲಯ ಮುಂದೂಡಿದೆ. ನಿನ್ನೆ ಪರಿಗಣಿಸಬೇ ಕಾಗಿದ್ದ ಅರ್ಜಿಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಇದೇ ಪ್ರಕರಣದಲ್ಲಿ ಇನ್ನೂ ನಾಲ್ಕು ಮಂದಿ ಆರೋಪಿಗಳನ್ನು ಸೆರೆ ಹಿಡಿಯಲು ಬಾಕಿಯಿದೆ. ಹಾಗಿರುವಾಗ ಜಾಮೀನು ಮಂಜೂರು ಮಾಡಿದರೆ ಇತರ ಆರೋಪಿಗಳನ್ನು ಸೆರೆಹಿಡಿಯಲು ಅಡ್ಡಿಯಾಗಲಿದೆಯೆಂದು ಪ್ರೋಸಿಕ್ಯೂ ಶನ್ ತಿಳಿಸಿದ ಹಿನ್ನೆಲೆಯಲ್ಲಿ ಅರ್ಜಿ …

ಕರ್ನಾಟಕದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಗೆ ತಾತ್ವಿಕ ಒಪ್ಪಿಗೆ ಸೀಟು ಹಂಚಿಕೆ ಬಗ್ಗೆ ಚರ್ಚೆ

ಬೆಂಗಳೂರು: ಲೋಕಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿರುವಂತೆಯೇ ಕರ್ನಾಟಕ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಲೋಕಸಭೆ ಚುನಾವಣೆಗೆ ಪರಸ್ಪರ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ಬಿಜೆಪಿ ಮತ್ತು ಜನತಾದಳ (ಜಾತ್ಯಾತೀಯ) (ಜೆಡಿಎಸ್) ತಾತ್ವಿಕವಾಗಿ ಒಪ್ಪಿಗೊಂಡಿದೆ. ಅದನ್ನು ಅಧಿಕೃತವಾಗಿ  ಇನ್ನಷ್ಟೇ ಪ್ರಕಟಿಸಬೇಕಾಗಿದೆ. ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಮೈತ್ರಿ ರಚನೆ ಕುರಿತು ಚರ್ಚೆ ನಡೆಸಿದ್ದರು. ಕರ್ನಾಟಕದಲ್ಲಿ ತಮಗೆ ಐದು …

ಸಂಭ್ರಮದ ತೆನೆಹಬ್ಬ ಆಚರಣೆ

ಕಾಸರಗೋಡು: ನಾಡಿನಾದ್ಯಂತ ಕ್ರೈಸ್ತ ಬಾಂಧವರು ಇಂದು  ತೆನೆ ಹಬ್ಬ (ಮೊಂತಿ ಫೆಸ್ತ್)ವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದರಂಗವಾಗಿ ಇಗರ್ಜಿಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಕಾಸರಗೋಡು, ಮಂಜೇಶ್ವರ ತಾಲೂಕಿನಲ್ಲಿ  ಪ್ರಧಾನವಾಗಿ ಕಾಸರಗೋಡು, ಬೇಳ, ಕೊಲ್ಲಂಗಾನ, ಮಣಿಯಂಪಾರೆ, ಬೋವಿಕ್ಕಾನ, ಉಕ್ಕಿನಡ್ಕ, ಪೆರ್ಮು ದೆ, ಕುಂಬಳ, ಮಂಜೇಶ್ವರ, ತಲಪಾಡಿ, ಮೀಯಪದವು, ಪಾವೂರು ಮೊದಲಾದೆಡೆಗಳಲ್ಲಿರುವ ಇಗರ್ಜಿಗಳಲ್ಲಿ ಇಂದು ಕಾರ್ಯಕ್ರಮ ನಡೆಯಿತು.

ನಿದ್ರಿಸುತ್ತಿದ್ದ ಎಂಟರ ಹರೆಯದ ಬಾಲಕಿಯ ಅಪಹರಿಸಿ ಲೈಂಗಿಕ ಕಿರುಕುಳ

ಕೊಚ್ಚಿ: ಆಲುವಾದಲ್ಲಿ ತಿಂಗಳುಗಳ ಹಿಂದೆಯಷ್ಟೇ ಬಿಹಾರದ ವಲಸೆ ಕಾರ್ಮಿಕ ದಂಪತಿಯ ಏಳು ವರ್ಷದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಪೈಶಾಚಿಕ ರೀತಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಬಳಿಕ ಆಕೆಯನ್ನು ಕುತ್ತಿಗೆ ಹಿಚುಕಿ ಕೊಲೆಗೈದ ಘಟನೆಯ ಕಹಿ ನೆನಪು ಜನರ ಮನಸ್ಸಿನಿಂದ ಇನ್ನೂ ಮಾಸದಿರುವ ವೇಳೆಯಲ್ಲೇ ಅದಕ್ಕೆ ಸಮಾನವಾದ ರೀತಿಯ ಇನ್ನೊಂದು ಘಟನೆ ಆಲುವಾದಲ್ಲಿ ಇಂದು ಮುಂಜಾನೆ ಮತ್ತೆ ನಡೆದಿದೆ. ಆಲುವಾ ತೊಟ್ಟುಮುಖಂನಲ್ಲಿ ವಾಸಿಸುತ್ತಿರುವ ಬಿಹಾರ ಮೂಲದ ವಲಸೆ ಕಾರ್ಮಿಕ ದಂಪತಿಯ  ಎಂಟು ವರ್ಷದ ಬಾಲಕಿಯನ್ನು ಇಂದು ಮುಂಜಾನೆ  …