ಮಲಿನಜಲ ಸಾರ್ವಜನಿಕ ಸ್ಥಳಕ್ಕೆ ಹರಿಯಬಿಟ್ಟ ವ್ಯಕ್ತಿಯ ವಿರುದ್ಧ ಕೇಸು

ದೇಲಂಪಾಡಿ: ಕಸಾಯಿಖಾನೆಯ ತ್ಯಾಜ್ಯ ಹಾಗೂ ಮಲಿನ ಜಲವನ್ನು ಸಾರ್ವಜನಿಕ ಸ್ಥಳಕ್ಕೆ  ಹರಿಯಬಿಟ್ಟ ಆರೋಪದಲ್ಲಿ ಓರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ. ದೇಲಂಪಾಡಿ ಮಯ್ಯಳ ಹೌಸ್‌ನ ಜಲಾಲುದ್ದೀನ್ (30) ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಆದೂರು ಎಸ್‌ಐ ವಿನೋದ್ ಕುಮಾರ್ ನಿನ್ನೆ ಮಧ್ಯಾಹ್ನ ನೇರವಾಗಿ ಸ್ಥಳಕ್ಕೆ ತೆರಳಿದಾಗ ಹಟ್ಟಿ ಸಮೀಪದ ಈತನ ಹಿತ್ತಿಲಿನ ಪರಿಸರದಲ್ಲಿ ತ್ಯಾಜ್ಯ ಸಹಿತ ಕಸಾಯಿಖಾನೆಯ ಮಲಿನ ಜಲವನ್ನು ಹರಿಯಬಿಟ್ಟಿರುವುದು ಕಂಡು ಬಂದಿದ್ದು, ಈ ಬಗ್ಗೆ ಆರೋಪಿ ವಿರುದ್ಧ ಕೇಸು ದಾಖಲಿಸಿಲುವುದಾಗಿ ಆದೂರು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಅನಾಹುತ : ಮನೆ ಭಸ್ಮ

ಕಾಸರಗೋಡು: ನಗರದ ತಳಂಗರೆ ಪಡಿಞ್ಞಾರ್‌ನ ಮೊಯ್ದು ಎಂಬವರ ಹೆಂಚು ಹಾಸಿದ ಮನೆಗೆ ರಾತ್ರಿ ಬೆಂಕಿ ತಗಲಿ ಮನೆಯೊಳಗಿನ ಎಲ್ಲಾ ಸಾಮಗ್ರಿಗಳ ಸಹಿತ ಸಂಪೂರ್ಣವಾಗಿ ಭಸ್ಮಗೊಂಡಿದೆ. ಬೆಂಕಿ ತಗಲಿದ ವೇಳೆ ಮನೆಯವರು ತಕ್ಷಣ ಹೊರಗೆ ಓಡಿ ಪ್ರಾಣಾಪಾ ಯದಿಂದ ಪಾರಾಗಿದ್ದಾರೆ.  ವಿಷಯ ತಿಳಿದ ಕಾಸರಗೋಡು ಅಗ್ನಿಶಾಮ ಕದಳ ತಕ್ಷಣ ಸ್ಥಳಕ್ಕಾಗಮಿಸಿ ಊರವರು ಮತ್ತು ಪೊಲೀಸರ ಸಹಾಯದಿಂದ ಬೆಂಕಿ ನಂದಿಸಿದರು. ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಬೆಂಕಿ ತಗಲಿರುವುದಾಗಿ ಶಂಕಿಸಲಾಗು ತ್ತಿದೆ. ಬೆಂಕಿ ತಗಲಿದ ವೇಳೆ ಮನೆಯೊ ಳಗಿದ್ದ ಗ್ಯಾಸ್ ಸಿಲಿಂಡರ್ …

ಗುಳಿಗ ಬನದ ಪರಿಸರ ಮಲಿನಗೊಳಿಸಿದ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಉಪ್ಪಳ: ಗುಳಿಗಬನದ ಪರಿಸರವನ್ನು ಮಲಿನಗೊಳಿಸಿದ ಪ್ರಕರಣದಲ್ಲಿ ತಲೆರೆಸಿಕೊಂಡಿದ್ದ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಉಪ್ಪಳ ಹಿದಾಯತ್ ನಗರ ಆಟೋರಿಕ್ಷಾ ಚಾಲಕ ಮುಹಮ್ಮದ್ ಸಿರಾಜ್ (33) ನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಹಾಗೂ ತಂಡ ಸೆರೆ ಹಿಡಿದಿದೆ. 2012 ನವೆಂಬರ್ 20ರಂದು ಘಟನೆ ನಡೆದಿದೆ. ಉಪ್ಪಳ ಸೋಂಕಾಲ್‌ನ ಗುಳಿಗಬನದ ಪಡಿಪ್ಪಿರೆಯನ್ನು ಮಲಿನಗೊಳಿಸಿದ  ಪ್ರಕರಣದಲ್ಲಿ  ಕೇಸು ದಾಖಲಿಸಲಾಗಿತ್ತು. ಪ್ರಸ್ತುತ ಪ್ರಕರಣದಲ್ಲಿ ನವೆಂಬರ್ ೨೧ರಂದು ಕುಂಬಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನಲ್ಲಿ ಹೊರ ಬಂದ ಈತ ತಲೆಮರೆಸಿಕೊಂಡಿದ್ದು, …

ವ್ಯಾಪಕ ಅಬಕಾರಿ ದಾಳಿ: ಅನಧಿಕೃತ ಮದ್ಯ ವಶ

ಕಾಸರಗೋಡು: ಅಬಕಾರಿ ತಂಡ ಜಿಲ್ಲೆಯ ಹಲವೆಡೆಗಳಲ್ಲಾಗಿ ವ್ಯಾಪಕ ದಾಳಿ ನಡೆಸಿದ್ದು, ಅದರಲ್ಲಿ ಗೋವಾ ಮದ್ಯ ಹಾಗೂ ಅಕ್ರಮ ಮದ್ಯ ತಯಾ ರಿಗಾಗಿ ಸಿದ್ಧಪಡಿಸಲಾಗಿದ್ದ ವಾಶ್ನ್ನು ವಶಪಡಿಸಿಕೊಂಡಿದೆ. ಇದಕ್ಕೆ ಸಂಬA ಧಿಸಿ ಇಬ್ಬರನ್ನು ಸೆರೆಹಿಡಿಯಲಾಗಿದೆ.ಕೂಡ್ಲು ಪಾಯಿಚ್ಚಾಲ್ನ ಆಜಾದ್ನಗರ ರಸ್ತೆ ಬಳಿ ಬಚ್ಚಿಡಲಾಗಿದ್ದ 11.7 ಲೀಟರ್ ಗೋವಾ ನಿರ್ಮಿತ ಮದ್ಯವನ್ನು ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಇನ್ಸ್ಪೆಕ್ಟರ್ ಸೂರಜ್ ಎನ್ ಮತ್ತು ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬA ಧಿಸಿ ಮೊಗ್ರಾಲ್ ಪಾಯಿಚ್ಚಾಲ್ನ ಶರತ್ ಕುಮಾರ್ ಕೆ (44) ಎಂಬಾತನ …

ಎಂಡಿಎಂಎ ಸಹಿತ ಉಪ್ಪಳ ನಿವಾಸಿ ಸೆರೆ

ಬಂದ್ಯೋಡು: ಮಾರಕ ಮಾದಕ ಪದಾರ್ಥವಾದ ಎಂಡಿಎಂಎ ಸಹಿತ ಮಧ್ಯವಯಸ್ಕ ಸೆರೆಯಾಗಿದ್ದಾನೆ. ಉಪ್ಪಳ ಮಣಿಮುಂಡ ಹೌಸ್‌ನ ಮೊಹಮ್ಮದ್ ಹರ್ಷಾದ್ (50)ನನ್ನು ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್‌ರ ನೇತೃತ್ವದ ತಂಡ ಬಂಧಿಸಿದೆ. ಕುಂಬಳೆ ಎಸ್‌ಐ ಕೆ.ಪಿ. ಗಣೇಶ್ ಸಹಕರಿಸಿದರು. ಶನಿವಾರ ಮುಂಜಾನೆ ಬಂದ್ಯೋಡ್‌ನಲ್ಲಿ ಈತನನ್ನು ಬಂಧಿಸಲಾಗಿದೆ. ಕೈಯಲ್ಲಿದ್ದ ೩.೫೩ ಗ್ರಾಂ ಎಂಡಿಎಂಎಯನ್ನು ವಶಪಡಿಸಲಾಗಿದೆ. ಜೀರ್ಣಗೊಂಡ ಕಟ್ಟಡವೊಂದರ ಸಮೀಪದಲ್ಲಿ ಶಂಕಾಸ್ಪದವಾಗಿ ಕಂಡು ಬಂದ ಮೊಹಮ್ಮದ್ ಹರ್ಷಾದ್‌ನನ್ನು ಕಸ್ಟಡಿಗೆ ತೆಗೆದು ತಪಾಸಣೆ ನಡೆಸಿದಾಗ ಮಾದಕ ಪದಾರ್ಥ ಕಂಡು ಬಂದಿದೆ.

ನಾರಾಯಣಮಂಗಲದಲ್ಲಿ ಯುವಕನಿಗೆ ಇರಿತ ಸಹೋದರಿ ಪತಿ ಸೆರೆ

ಕುಂಬಳೆ: ಕುಂಬಳೆ ಕೊಯ್ಪಾಡಿ ನಾರಾಯಣಮಂಗಲದಲ್ಲಿ ಯುವಕನಿಗೆ ಇರಿದ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ವಿ.ವಿ. ಮಧು (46)ರನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆಯಲ್ಲಿ ಸಹೋದರಿಯ ಪತಿ ನಾರಾಯಣ ಮಂಗಲ ನಿವಾಸಿ ಮೋಹನ್‌ನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಬಂಧಿಸಿದ್ದಾರೆ. ಮಧ್ಯದಮಲಿನಲ್ಲಿ ಸಹೋದರಿಗೆ ಹಲ್ಲೆ ನಡೆಸುತ್ತಿದ್ದಾಗ ಅದನ್ನು ಪ್ರಶ್ನಿಸಿದ ದ್ವೇಷದಿಂದ ಇರಿದಿರುವುದಾಗಿ ಕುಂಬಳೆ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ತಿಳಿಸಲಾಗಿದೆ.

ಸರಿಯಾದ ದಾಖಲೆಪತ್ರಗಳಿಲ್ಲದೆ ಸಾಗಿಸುತ್ತಿದ್ದ 9,98,500 ರೂ. ನಗದು ವಶ

ಮಂಜೇಶ್ವರ: ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ಮತ್ತು ಕೆಮು ತಂಡ ಜಂಟಿಯಾಗಿ ನಡೆಸಿದ ಕಾರ್ಯಾ ಚರಣೆಯಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ  ಕರ್ನಾಟಕ ರಾಜ್ಯ ಸರಕಾರಿ ಬಸ್‌ನಿಂದ ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ 9,98,500 ರೂ. ನಗದು ವಶಪಡಿಸಿ ಕೊಂಡಿದೆ. ತಪಾಸಣೆಗಾಗಿ  ಬಸ್‌ನ್ನು  ಅಬಕಾರಿ ತಂಡದವರು ಪರಿಶೀಲಿಸಿದಾಗ ಅದರೊಳಗೆ ಈ ಮಾಲು ಪತ್ತೆಯಾಗಿದೆ.  ಆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮುಳಿಯಾರು ಕಲಂದರ್ ಹೌಸ್‌ನ ಶೇಕ್ ಆರೀಫ್ ಎಂಬಾತನಿಂದ ಈ ಮಾಲು ವಶಪಡಿಸಲಾಗಿದೆ. ಬಳಿಕ ಈ ಹಣವನ್ನು ಮುಂದಿನ ತನಿಖೆಗಾಗಿ ಮಂಜೇಶ್ವರ …

ಅಗತ್ಯದಷ್ಟು ವೈದ್ಯರು, ಸಿಬ್ಬಂದಿಗಳಿಲ್ಲ: ಜನರಲ್ ಆಸ್ಪತ್ರೆಯಲ್ಲಿ ವಿಳಂಬಗೊಳ್ಳುತ್ತಿರುವ ಮರಣೋತ್ತರ ಪರೀಕ್ಷೆ; ತ್ವರಿತ ಕ್ರಮ ಕೈಗೊಳ್ಳಬೇಕು-ಎಂ.ಎಲ್. ಅಶ್ವಿನಿ

ಕಾಸರಗೋಡು: ಜನರಲ್ ಆಸ್ಪತ್ರೆಯಲ್ಲಿ ಅಗತ್ಯದಷ್ಟು ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯಿಂದಾಗಿ  ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ವಿಳಂಬಗೊಳ್ಳುವಂತೆ ಮಾಡತೊ ಡಗಿದೆ ಮಾತ್ರವಲ್ಲ ಆಸ್ಪತ್ರೆಯ ಇತರ ನಿರ್ವಹಣೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರತೊಡಗಿದೆ. ಹೃದಯಾಘಾತದಿಂದ ಸಾವನ್ನಪ್ಪಿದ ಬಿಜೆಪಿ ಮುಳಿಯಾರು ಮಂಡಲ ಸಮಿತಿ ಸದಸ್ಯ ಅಚ್ಯುತನ್ ಚಿಪ್ಲಿಕಯರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ತಂದಾಗ ಅಗತ್ಯದ ವೈದ್ಯರು ಮತ್ತು ಸಿಬ್ಬಂದಿಗಳಿಲ್ಲದ ಕಾರಣ ಮರಣೋತ್ತರ ಪರೀಕ್ಷೆ ವಿಳಂಬಗೊಳ್ಳುವಂತೆ ಮಾಡಿತು. ಅದನ್ನು ಪ್ರತಿಭಟಿಸಿ ಬಿಜೆಪಿ ಕಾರ್ಯಕರ್ತರು  ಭಾರೀ ಪ್ರತಿಭಟನೆ ನಡೆಸಿದರು.  ಬಿಜೆಪಿ ಮಾಜಿ …

ಬುಡಕಟ್ಟು ಜನಾಂಗಕ್ಕೆ ಸೇರಿದ ಯುವತಿಯ ನಿಗೂಢ ಸಾವು: ಆರೋಪಿಯನ್ನು ಮಂಪರು ಪರೀಕ್ಷೆಗೊಳಪಡಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿ ವಜಾ

ಕಾಸರಗೋಡು: ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ  ಯುವತಿಯ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ಯನ್ನು ಮಂಪರು ಪರೀಕ್ಷೆಗೊಳಪಡಿಸ ಬೇಕೆಂದು ಕೋರಿ ಪೊಲೀಸರು ಸಲ್ಲಿಸಿದ ಅರ್ಜಿಯನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ವಜಾ ಗೈದಿದೆ. ಈ ಪ್ರಕರಣದ ಆರೋಪಿ ಪಾಣ ತ್ತೂರು ನಿವಾಸಿ ಬಿಜು ಪೌಲೋಸ್ ಮಂಪರು ಪರೀಕ್ಷೆಗೊಳಗಾಗಲು ಅಸಮ್ಮತಿಸಿದ್ದನು. ಆ ಕಾರಣದಿಂದ ಪೊಲೀಸರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾ ಗೈದಿದೆ. ಆತನನ್ನು ಮಂಪರು ಪರೀಕ್ಷೆಗೊಳಪಡಿಸಬೇಕೆಂದು ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ …

ನಿವೃತ್ತ  ಪಂ. ಕಾರ್ಯದರ್ಶಿ ನಿಧನ

ಮಂಜೇಶ್ವರ: ಮೀಂಜ ಪಂಚಾಯತ್‌ನ ನಿವೃತ್ತ ಕಾರ್ಯದರ್ಶಿ, ಮೀಯಪದವು ಹೊನ್ನಕಟ್ಟೆ ನಿವಾಸಿ ರಾಮ.ಎನ್ (76) ಸ್ವ-ಗೃಹದಲ್ಲಿ ನಿಧನರಾದರು. ಮೀಂಜ ಪಂಚಾಯತ್‌ನಲ್ಲಿ ಹಲವು ವರ್ಷಗಳ ಕಾಲ ಕಾರ್ಯದರ್ಶಿಯಾಗಿದ್ದರು. ಬಳಿಕ ಕಾರಡ್ಕ ಪಂ.ನಲ್ಲಿ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ್ದಾರೆ. ಇದಕ್ಕಿಂತ ಮೊದಲು ವಿವಿಧ ಪಂಚಾಯತ್‌ಗಳಲ್ಲಿ ಸೇವೆಗೈದಿದ್ದರು. ಮೃತರು ಪತ್ನಿ ಸತ್ಯಾವತಿ, ಮಕ್ಕಳಾದ ಶೈಲೇಶ್ (ಪೈವಳಿಕೆ ಪಂಚಾಯತ್ ವಿ.ಇ.ಒ), ರಾಜೇಶ್, ಸೊಸೆಯಂದಿರಾದ ವತ್ಸಲ, ಅಭಿತ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮನೆಗೆ ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಅಬ್ದುಲ್ ರಜಾಕ್ ಚಿಪ್ಪಾರು, ಜುಲ್ಪಿಕರ್ ಅಲಿ, …