ನಿವೃತ್ತ  ಪಂ. ಕಾರ್ಯದರ್ಶಿ ನಿಧನ

ಮಂಜೇಶ್ವರ: ಮೀಂಜ ಪಂಚಾಯತ್‌ನ ನಿವೃತ್ತ ಕಾರ್ಯದರ್ಶಿ, ಮೀಯಪದವು ಹೊನ್ನಕಟ್ಟೆ ನಿವಾಸಿ ರಾಮ.ಎನ್ (76) ಸ್ವ-ಗೃಹದಲ್ಲಿ ನಿಧನರಾದರು. ಮೀಂಜ ಪಂಚಾಯತ್‌ನಲ್ಲಿ ಹಲವು ವರ್ಷಗಳ ಕಾಲ ಕಾರ್ಯದರ್ಶಿಯಾಗಿದ್ದರು. ಬಳಿಕ ಕಾರಡ್ಕ ಪಂ.ನಲ್ಲಿ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ್ದಾರೆ. ಇದಕ್ಕಿಂತ ಮೊದಲು ವಿವಿಧ ಪಂಚಾಯತ್‌ಗಳಲ್ಲಿ ಸೇವೆಗೈದಿದ್ದರು. ಮೃತರು ಪತ್ನಿ ಸತ್ಯಾವತಿ, ಮಕ್ಕಳಾದ ಶೈಲೇಶ್ (ಪೈವಳಿಕೆ ಪಂಚಾಯತ್ ವಿ.ಇ.ಒ), ರಾಜೇಶ್, ಸೊಸೆಯಂದಿರಾದ ವತ್ಸಲ, ಅಭಿತ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮನೆಗೆ ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಅಬ್ದುಲ್ ರಜಾಕ್ ಚಿಪ್ಪಾರು, ಜುಲ್ಪಿಕರ್ ಅಲಿ, ಜನಪ್ರತಿನಿಧಿಗಳು ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು. ನಿಧನಕ್ಕೆ ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ.ಆರ್.ಶೆಟ್ಟಿ, ಉಪಾಧ್ಯಾಕ್ಷ ಜಯರಾಮ ಬಲ್ಲಂಗುಡೇಲು, ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದ್ದಾರೆ.

You cannot copy contents of this page