ಒಂದು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡ ಆರೋಪಿ ಮತ್ತೆ ಕಳವು ಪ್ರಕರಣದಲ್ಲಿ ಸೆರೆ

ಮಂಜೇಶ್ವರ: ಕ್ಷೇತ್ರಕಳವು ಪ್ರಕರಣದಲ್ಲಿ ೮ ತಿಂಗಳ ಕಾಲ ಜೈಲಿನಲ್ಲಿದ್ದು ಒಂದು ತಿಂಗಳ ಹಿಂದೆ ಯಷ್ಟೇ ಬಿಡುಗಡೆಗೊಂಡ ಯುವಕ ಬೇಕರಿ ಕಳವು ಪ್ರಕರಣದಲ್ಲಿ ಸೆರೆಗೀಡಾಗಿದ್ದಾನೆ. ಮಂಜೇಶ್ವರ ಬಳಿಯ ದುರ್ಗಿಪಳ್ಳ ನಿವಾಸಿ ಲಕ್ಷ್ಮೀಶ (೪೦) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ.  ಹೊಸಂಗಡಿ ಪೇಟೆಯಲ್ಲಿರುವ ಅಯ್ಯಂಗಾರ್ ಬೇಕರಿಗೆ ನುಗ್ಗಿ ೧೦ ಸಾವಿರ ರೂಪಾಯಿ ಕಳವುಗೈದ  ಪ್ರಕರಣದಲ್ಲಿ ಇದೀಗ ಈತನನ್ನು ಬಂಧಿಸಲಾಗಿದೆ. ಈ ತಿಂಗಳ ೨ರಂದು ರಾತ್ರಿ ಬೇಕರಿಯ ಶಟರ್‌ನ ಬೀಗ ಮುರಿದು ಒಳನುಗ್ಗಿದ ಆರೋಪಿ ಮೇಜಿನಲ್ಲಿರಿಸಿದ್ದ ೧೦ ಸಾವಿರ ರೂಪಾಯಿ ಕಳವುಗೈದಿ …

ಅಂಗಡಿ ಕಳವು ಆರೋಪಿ ಸೆರೆ

ಕುಂಬಳೆ:  ಬಂದ್ಯೋಡಿನಲ್ಲಿ ಅಂಗಡಿ ಕಳವು ನಡೆಸಿದ ಆರೋಪಿಯನ್ನು ಎಸ್‌ಐ ವಿ.ಕೆ. ಅನೀಶ್ ಸೆರೆಹಿಡಿದಿದ್ದಾರೆ. ಬಂದ್ಯೋಡು ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಖಾಸಿಂ (೪೦) ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಗುರುವಾರ ರಾತ್ರಿ ಬಂದ್ಯೋಡು ಪೇಟೆಯಲ್ಲಿರುವ ಸಿ.ಎ. ಸ್ಟೋರ್‌ನ ಬೀಗ ಮುರಿದು ಒಳನುಗ್ಗಿ ೮೦೦೦ ರೂಪಾಯಿಗಳ  ಸಾಮಗ್ರಿಗಳನ್ನು ಕಳವುಗೈಯ್ಯಲಾಗಿತ್ತು. ಈ ಬಗ್ಗೆ  ಮಾಲಕ ಸುಬೈರ್ ಅಡ್ಕ ಪೊಲೀಸರಿಗೆ ದೂರು ನೀಡಿದ್ದರು.

ಉಪ್ಪಳದಲ್ಲಿ ಪೊಲೀಸರ ಮೇಲೆ ಹಲ್ಲೆ: ಆರೋಪಿಗಳ ಮಾಹಿತಿ ಲಭ್ಯ

ಮಂಜೇಶ್ವರ: ರಾತ್ರಿ ಹೊತ್ತಿನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ಹಲ್ಲೆನಡೆಸಿದ ಪ್ರಕರಣದ ಆರೋಪಿಗಳ ಕುರಿತು ಮಾಹಿತಿ ಲಭ್ಯವಾಗಿದೆ. ತಲೆಮರೆಸಿಕೊಂಡ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಮುಂಜಾನೆ ೩ ಗಂಟೆ ವೇಳೆ ಉಪ್ಪಳ ಹಿದಾಯತ್ ನಗರದಲ್ಲಿ ಮಂಜೇಶ್ವರ ಎಸ್‌ಐ  ಪಿ. ಅನೂಪ್ ಹಾಗೂ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಕಿಶೋರ್‌ರ ಮೇಲೆ ೫ ಮಂದಿ ತಂಡ  ಹಲ್ಲೆ ನಡೆಸಿದೆ. ರಶೀದ್, ಅಪ್ಸಲ್ ಎಂಬಿವರ ನೇತೃತ್ವದಲ್ಲಿರುವ ತಂಡ ಹಲ್ಲೆನಡೆಸಿರುವುದಾಗಿ  ಪೊಲೀಸರು ತಿಳಿಸಿದ್ದಾರೆ.  ಪೊಲೀಸರು ಗಸ್ತು ತಿರುಗುತ್ತಿದ್ದಾಗ ಹಿದಾಯತ್ …

ನೆಲ್ಲಿಕುಂಜೆಯಲ್ಲಿ ರೈಲು ಹಳಿ ಮೇಲೆ ಕಲ್ಲಿರಿಸಿದ್ದು ಇಬ್ಬರು ಮಕ್ಕಳು: ಹೆತ್ತವರನ್ನು ಕರೆದು ತಾಕೀತು ನೀಡಿದ ಪೊಲೀಸರು

ಕಾಸರಗೋಡು: ನಗರದ ನೆಲ್ಲಿಕುಂಜೆಯ ರೈಲು ಹಳಿಯಲ್ಲಿ ಮೊನ್ನೆ ಕಲ್ಲಿರಿಸಿದ ಇಬ್ಬರು ಮಕ್ಕಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನು ಬಳಿಕ ಹೆತ್ತವರ ಜತೆ ಪೊಲೀಸ್ ಠಾಣೆಗೆ ಕರೆಸಿ  ಉಗ್ರ ತಾಕೀತು ನೀಡಿ ನಂತರ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಕಲ್ಲಿರಿಸಿದ್ದು ಮೂರನೇ ಮತ್ತು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಇಬ್ಬರು ಬಾಲಕರಾಗಿದ್ದಾರೆ. ಕಲ್ಲಿರಿಸಿದವರ ಹಳಿ ಪಕ್ಕ ಮನೆಯಲ್ಲಿ ಗೆಟ್‌ಟೂ ಸಮಾರಂಭ ನಡೆದಿತ್ತು. ಕಲ್ಲಿರಿಸಿದವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾಗ, ರೈಲು ಹಳಿ ಬಳಿ ಮೆರೂನ್ ಬಟ್ಟೆ ಧರಿಸಿದ ಓರ್ವ ಬಾಲಕನಯನ್ನು ನಾನು ಕಂಡಿದ್ದೆನೆಂದು …

ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ :ಉದಯನಿಧಿ ಸ್ಟಾಲಿನ್ ವಿರುದ್ಧ ಎಫ್‌ಐಆರ್

ನವದೆಹಲಿ: ತಮ್ಮ ತಂದೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ ನೇತೃತ್ವದ ತಮಿಳುನಾಡು ಸರಕಾರದಲ್ಲಿ ಸಚಿವರಾಗಿ ಸೇವೆ  ಸಲ್ಲಿಸುತ್ತಿರುವ ಡಿಎಂಕೆಯ ಯುವ ನಾಯಕ  ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗಾಗಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಯೊಂದಿಗೆ ಹೋಲಿಸಿದ ಉದಯನಿಧಿ ಸ್ಟಾಲಿನ್ ಅವರು ಅದರ ವಿರುದ್ಧ ಕಿಡಿಕಾರಿದ್ದರು.  ಮಾತ್ರವಲ್ಲ ಇದು ಸಾಮಾಜಿಕ  ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ, ಅದನ್ನು ನಿರ್ಮೂಲನೆ ಮಾಡಬೇಕು ಎಂಬ ರೀತಿಯ ವಿವಾದಾತ್ಮಕ ರೀತಿಯ ಹೇಳಿಕೆ ನೀಡಿದ್ದಾರೆ. …

ಕೋಳಿ ಅಂಕ ಕೇಂದ್ರಕ್ಕೆ ಪೊಲೀಸ್ ದಾಳಿ: ಇಬ್ಬರ ಸೆರೆ, ನಾಲ್ಕು ಹುಂಜ ವಶಕ್ಕೆ

ಕಾಸರಗೋಡು: ಮೊಗ್ರಾಲ್ ಪುತ್ತೂರು ಮಜಾಲ್‌ನಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಕೇಂದ್ರಕ್ಕೆ ಕಾಸರಗೋಡು ಪೊಲೀಸ್ ಠಾಣೆ ಎಸ್‌ಐ ಚಂದ್ರಶೇಖರನ್‌ರ ನೇತೃತ್ವದ ಪೊಲೀಸರು ನಿನ್ನೆ ಸಂಜೆ ದಾಳಿ ನಡೆಸಿ, ನಾಲ್ಕು ಹುಂಜಗಳನ್ನು ಮತ್ತು ೬೦೦ ರೂ. ನಗದು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಕೂಡ್ಲು ಗೋಪಾಲಕೃಷ್ಣ ದೇವಸ್ಥಾನ ಬಳಿಯ ಪ್ರಶಾಂತ್ ಕೆ. ಮತ್ತು ಕಲ್ಲಕಟ್ಟೆಯ ಜಯಶಂಕರ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ದಾಳಿ ನಡೆಸುತ್ತಿದ್ದ ವೇಳೆ ಕೋಳಿ ಅಂಕದಲ್ಲಿ ನಿರತರಾಗಿದ್ದ ಇತರ ಹಲವರು ಪರಾರಿಯಾದರೆಂದು ಪೊಲೀಸರು ತಿಳಿಸಿದ್ದಾರೆ. ಮಾತ್ರವಲ್ಲ …

ಉಪಚುನಾವಣೆ ಪುದುಪಳ್ಳಿ ನಾಳೆ ಮತಗಟ್ಟೆಯತ್ತ

ಕೋಟ್ಟಯಂ:  ಕೋಟ್ಟಯಂ ಜಿಲ್ಲೆಯ ಪುದುಪ್ಪಳ್ಳಿ ವಿಧಾನಸಭೆಗೆ ನಾಳೆ ಉಪಚುನಾವಣೆ ನಡೆಯಲಿದೆ. ನಾಳೆ ಬೆಳಿಗ್ಗೆ ೭ರಿಂದ ಸಂಜೆ ೬ ಗಂಟೆ ತನಕ ಮತದಾನ ನಡೆಯಲಿದೆ. ಚುನಾವಣೆ ಸಾಮಗ್ರಿಗಳ ವಿತgಣೆ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಬಹಿರಂಗ ಪ್ರಚಾರ ನಿನ್ನೆ ಸಂಜೆ ಕೊನೆಗೊಂಡಿದೆ. ಯುಡಿಎಫ್ ಉಮೇದ್ವಾರ ರಾಗಿ ಕಾಂಗ್ರೆಸ್‌ನ ಚಾಂಡಿ ಉಮ್ಮ ನ್, ಎಡರಂಗದ ಉಮೇದ್ವಾರರಾಗಿ ಸಿಪಿಎಂನ ಜೈಕ್ ಥೋಮಸ್ ಮತ್ತು ಎನ್‌ಡಿಎ  ಉಮೇದ್ವಾರರಾಗಿ ಬಿಜೆಪಿಯ ಜಿ. ಲಿಜಿನ್‌ಲಾಲ್ ಸ್ಪರ್ಧಾಕಣದಲ್ಲಿದ್ದಾರೆ. ಇನ್ನು ಆಮ್ ಆದ್ಮಿ ಪಾರ್ಟಿ ಉಮೇದ್ವಾರರಾಗಿ ಲೂಕ್ ಥೋಮಸ್ ಸೇರಿದಂತೆ …

ಮೂವರು ಹೆಣ್ಮಕ್ಕಳ ಕುತ್ತಿಗೆ ಕೊಯ್ದು ಗಾಯಗೊಳಿಸಿ ತಂದೆ ಆತ್ಮಹತ್ಯೆ

ಕೋಟ್ಟಯಂ: ಮೂವರು ಹೆಣ್ಮ ಕ್ಕಳ ಕುತ್ತಿಗೆ ಕೊಯ್ದು  ಕೊಲೆಗೈಯ್ಯ ಲೆತ್ನಿಸಿದ ತಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಲಾ ಸಮೀಪದ ರಾಮಪುರಂ ಎಂಬಲ್ಲಿ ನಡೆದಿದೆ. ರಾಮಪುರಂ ಚೇಟುಕುಳಂ ನಿವಾಸಿ ಜೋಮೋನ್ (೪೦) ಶಾಲಾ ವಿದ್ಯಾರ್ಥಿನಿಯರಾದ ತನ್ನ ಮೂವರು ಹೆಣ್ಮಕ್ಕಳ ಕುತ್ತಿಗೆಯನ್ನು  ಕೊಯ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಮಧ್ಯರಾತ್ರಿ ೧೨.೩೦ರ ವೇಳೆ ಈ ಘಟನೆ ನಡೆದಿದೆ. ಅನನ್ಯಾ (೧೩), ಅಮಯ್ (೧೦), ಅನಾಮಿಕ (೭) ಎಂಬೀ ಹೆಣ್ಮಕ್ಕಳ ಕುತ್ತಿಗೆಯನ್ನು ಜೋಮೋನ್ ಕೊಯ್ದು ಗಂಭೀರ ಗಾಯಗೊಳಿಸಿದ್ದಾನೆನ್ನ ಲಾಗುತ್ತಿದೆ. ಈ …

ಯುವತಿ ಪ್ರಿಯತಮನೊಂದಿಗೆ ಪರಾರಿ

ಪೆರ್ಲ: ಪೆರ್ಲದ ಖಾಸಗಿ ಸಂಸ್ಥೆಯಲ್ಲಿ  ಕೆಲಸ ನಿರ್ವಹಿಸುತ್ತಿದ್ದ ಯುವತಿ ಪ್ರಿಯತಮನೊಂದಿಗೆ ಪರಾರಿಯಾಗಿದ್ದಾಳೆ. ಶೇಣಿ ನಿವಾಸಿಯಾದ ೨೧ರ ಹರೆಯದ ಯುವತಿ ಪೆರ್ಲದ  ಅಂಗಡಿಯೊಂ ದರ ನೌಕರನಾದ ೨೮ರ ಹರೆಯದ ಯುವಕನೊಂದಿಗೆ  ಪರಾರಿಯಾಗಿ ದ್ದಾಳೆ. ಈ ಇಬ್ಬರು  ದೀರ್ಘಕಾಲ ದಿಂದ  ಪ್ರೇಮದಲ್ಲಿದ್ದರೆಂದು ಹೇಳಲಾಗುತ್ತಿದೆ.  ಯುವತಿ ನಿನ್ನೆ ನಾಪತ್ತೆಯಾಗಿದ್ದು, ಈ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಇಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆದ ಸ್ಥಿತಿಯಲ್ಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಟ್ಟಡ ನಿರ್ಮಾಣ ಕಾರ್ಮಿಕನಾದ ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಳ್ಳಿಕೆರೆ ಚೇಟುಕುಂಡಿನ ಅಂಬಾಡಿ- ಮಾಧವಿ ದಂಪತಿಯ ಪುತ್ರ ಮಣಿಕಂಠನ್ (೩೫) ಸಾವನ್ನಪ್ಪಿದ ಯುವಕ. ಚೇಟುಕುಂಡು ತೆಕ್ಕುಪುರಂ ರೈಲ್ವೇ ಹಳಿ ಬಳಿಯ ಶೆಡ್‌ವೊಂದರೊಳಗೆ ಮಣಿಕಂಠನ್ ನಿನ್ನೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೇಕಲ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೃತರು ಸಹೋದರ ಮಹೇಶ್, ಸಹೋದರಿ ಮಾಲಿನಿ ಎಂಬಿವರನ್ನು ಅಗಲಿದ್ದಾರೆ.