ಚಿಕಿತ್ಸೆಯಲ್ಲಿದ್ದ ಯುವಕ ನಿಧನ

ಪೆರ್ಲ: ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯ ಲ್ಲಿದ್ದ ಯುವಕ ಮೃತಪ ಟ್ಟರು. ಮಣಿಯಂಪಾರೆ ಶೇಣಿ ಶಾಲೆ ಬಳಿ ನಿವಾಸಿ ಮಾರ್ಸೆಲ್ ಡಿ’ಸೋಜಾರ ಪುತ್ರ ಲವೀನಾ ಪ್ರಸಾದ್ (೩೮) ನಿಧನರಾದರು. ಇವರು ಗುಜರಾತ್‌ನಲ್ಲಿ ಹೋ ಟೆಲ್ ಮೆನೇಜರ್ ಆಗಿದ್ದರು. ಒಂದು ತಿಂಗಳ ಹಿಂದೆ ಅಸೌಖ್ಯ ಹಿನ್ನೆಲೆಯಲ್ಲಿ ಊರಿಗೆ ತಲುಪಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇವರ ತಾಯಿ ಈ ಹಿಂದೆ ನಿಧನರಾಗಿದ್ದಾರೆ. ಅವಿವಾಹಿತರಾದ ಮೃತರು ತಂದೆ, ಸಹೋದರ ಸುಜಿತ್ ಕುಮಾರ್, ಸಹೋದರಿಯರಾದ ಜ್ಯೋತಿ, ಉಷಾಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

೨೦೦೦ ಮುಖಬೆಲೆಯ ಶೇ. ೯೩ರಷ್ಟು  ನೋಟುಗಳು ಬ್ಯಾಂಕ್‌ಗಳಿಗೆ ವಾಪಸು

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ೨೦೦೦ ಮುಖಬೆಲೆಯ ರೂಪಾಯಿ  ನೋಟಿನ ಬಗ್ಗೆ ಹೊಸ ನವೀಕರಣೆಯನ್ನು ಬಿಡುಗಡೆ ಮಾಡಿದೆ. ಈ ಹೊಸ ಅಂಕಿ ಅಂಶಗಳ ಪ್ರಕಾರ ೨೦೦೦ ರೂಪಾಯಿಯ ಒಟ್ಟು  ನೋಟುಗಳಲ್ಲಿ ಶೇ. ೯೩ರಷ್ಟು ಬ್ಯಾಂಕ್‌ಗಳಿಗೆ ವಾಪಸು ಬಂದಿದೆಯೆಂದು ತಿಳಿಸಲಾಗಿದೆ. ಇನ್ನು ಶೇ.೭ರಷ್ಟು ಬಾಕಿ ಉಳಿದುಕೊಂಡಿದೆ. ೨೦೨೩ ಮೇ ೧೯ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ೨೦೦೦ ರೂ. ಮುಖಬೆಲೆಯ ನೋಟುಗಳನ್ನು ಹಿಂತೆದುಕೊಳ್ಳುವ ಘೋಷಣೆ ಮಾಡಿತ್ತು. ೨೦೦೦ ರೂಪಾಯಿ ನೋಟುಗಳನ್ನು ಸೆಪ್ಟಂಬರ್ ೩೦ರೊಳಗಾಗಿ (೨೦೦೦ ರೂಪಾಯಿ …

ಕುಂಬಳೆ ಎಸ್.ಐ, ಕುಟುಂಬಕ್ಕೆ ಕೊಲೆ  ಬೆದರಿಕೆ: ಆರೋಪಿಯ ಮಾಹಿತಿ ಲಭ್ಯ

ಕುಂಬಳೆ: ಕುಂಬಳೆ ಠಾಣೆಯಲ್ಲಿ ಎಸ್.ಐ ಆಗಿದ್ದ ರಜಿತ್ ಹಾಗೂ ಕುಟುಂಬಕ್ಕೆ ಕೊಲೆಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಆರೋಪಿಯ ಮಾಹಿತಿ ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಇದೀಗ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ.  ಅಗೋಸ್ತ್ ೩೦ರಂದು ಸಂಜೆ ಸ್ಕೂಟರ್‌ನಲ್ಲಿ ತಲುಪಿದ ಇಬ್ಬರು ಎಸ್‌ಐ ಹಾಗೂ ಕುಟುಂಬಕ್ಕೆ ಕೊಲೆ ಬೆದರಿಕೆಯೊಡ್ಡಿದ್ದಾರೆ. ಎಸ್‌ಐ ಹಾಗೂ ಕುಟುಂಬ ವಾಸಿಸುವ ಮೊಗ್ರಾಲ್ ಮಾಳಿಯಂಗರದ ಬಾಡಿಗೆ ಮನೆ ಸಮೀಪಕ್ಕೆ ನೀಲಿ ಬಣ್ಣದ ಸ್ಕೂಟರ್‌ನಲ್ಲಿ ತಲುಪಿದ ಇಬ್ಬರು ಯುವಕರು ಗೇಟ್‌ನ ಮುಂಭಾಗದಲ್ಲಿ ಸ್ಕೂಟರ್ ನಿಲ್ಲಿಸಿ ಎಸ್‌ಐ ರಜಿತ್‌ರ ಮನೆಯಲ್ಲವೇ ಎಂದು …

ರಬ್ಬರ್ ಶೀಟ್ ಸೇರಿದಂತೆ ೨.೩೦ ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವು: ಓರ್ವ ಸೆರೆ

ಮುಳ್ಳೇರಿಯ: ನೆಟ್ಟಣಿಗೆ ಗ್ರಾಮದ ಕಿನ್ನಿಂಗಾರುನಲ್ಲಿರುವ ದಾಸ್ತಾನು ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದ್ದ ೧೫ ಕ್ವಿಂಟಾಲ್ ರಬ್ಬರ್ ಶೀಟ್ ಮತ್ತು ಮೂರು ಕ್ವಿಂಟಾಲ್ ಒಟ್ಟುಪಾಲಂ ಕಳವುಗೈದ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ. ಕರ್ನಾಟಕ ಕೊಡಗು ಮೆದಿ ನಾಡು ದೇವರ್‌ಕೊಲ್ಲ ವಡಕ್ಕೇಡತ್ತ್ ಹೌಸಿನ ಕುಂಞಿಮೋನ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ, ಈ ಸಂಬಂಧ ಅಲ್ಲಿನ ಟ್ಯಾಪಿಂಗ್ ಕಾರ್ಮಿಕ ನೆಟ್ಟಣಿಗೆಯ ಜನಾರ್ದನ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ದೂರುಗಾರನ ಮಗನ ಹೆಸರಲ್ಲಿರುವ ಕಟ್ಟಡದಲ್ಲಿ …

ಸೂರ್ಯಮಾನ ಆದಿತ್ಯ ಎಲ್-೧ ಉಡಾವಣೆಗೆ ಕ್ಷಣಗಣನೆ

ಬೆಂಗಳೂರು: ಚಂದ್ರಯಾನ-೩ ಯಶಸ್ಸಿನ ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲು ಮುಂದಾಗಿದ್ದು, ಇಂದು ಬೆಳಿಗ್ಗೆ ೧೧.೫೦ಕ್ಕೆ ಸೂರ್ಯಯಾನ ಆದಿತ್ಯ ಎಲ್-೧ದ ಉಡಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಆ ಮೂಲಕ ಇಸ್ರೋ ಮತ್ತೊಮ್ಮೆ ಇತಿಹಾಸ ಸೃಷ್ಟಿಸುವ ಸಿದ್ಧತೆಯಲ್ಲಿ ತೊಡಗಿದೆ. ವಿಶ್ವದ ಕಣ್ಣು ಈಗ ಇಸ್ರೋದ ಸೂರ್ಯ ಮಿಷನ್ ಆದಿತ್ಯ- ಎಲ್-೧ನ ಮೇಲಿದೆ. ಪಿಎಸ್‌ಎಲ್‌ವಿ- ಎಕ್ಸ್‌ಎಲ್ ರಾಕೆಟ್ ಸಹಾಯದಿಂದ ಇಸ್ರೋ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಈ ಸೂರ್ಯ ಮಿಷನ್ ಆದಿತ್ಯ ಎಲ್-೧ಗೆ ಕೇವಲ ೩೭೮ ಕೋಟಿ …

ಶಬರಿಮಲೆ: ಅರವಣ ಪ್ರಸಾದದಲ್ಲಿ ಕೀಟನಾಶಕ ಅಂಶವಿಲ್ಲ ಸೇವನೆಗೆ ಯೋಗ್ಯ- ಕೇಂದ್ರ ಆಹಾರ ಪ್ರಾಧಿಕಾರ

ತಿರುವನಂತಪುರ: ವಿಶ್ವವಿಖ್ಯಾತ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ ವಿತರಿಸಲಾಗುವ ಅರವಣ ಪಾಯಸ (ಪ್ರಸಾದ)ದಲ್ಲಿ ಕೀಟನಾಶಕದ ಅಂಶವಿಲ್ಲವೆಂದೂ, ಈ ಪ್ರಸಾದ ಸೇವನೆಗೆ ಯೋಗ್ಯವಾಗಿದೆ ಎಂದು ಕೇಂದ್ರ ಆಹಾರ ಸುರಕ್ಷಾ ಪ್ರಾಧಿಕಾರ ಸುಪ್ರಿಂಕೋರ್ಟ್‌ಗೆ ವರದಿ ಸಲ್ಲಿಸಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ದಾಸ್ತಾನು ಮಾಡಲಾಗಿ ರುವ ಅರವಣ ಪ್ರಸಾದದ ವಿತರಣೆಗೆ ನ್ಯಾಯಾಲಯದ ಅನುಮತಿ ಕೋರುವು ದಾಗಿ ತಿರುವಿದಾಂಕೂರ್ ದೇವಸ್ವಂ (ಮುಜರಾಯಿ) ಮಂಡಳಿ ಅಧ್ಯಕ್ಷ ಕೆ. ಅನಂತಗೋಪನ್ ತಿಳಿಸಿದ್ದಾರೆ. ಅರವಣ ಪ್ರಸಾದದಲ್ಲಿ ಕೀಟನಾಶಕ ಮಿಶ್ರಿತ ಏಲಕ್ಕಿ ಬಳಸಲಾಗಿದೆ ಎನ್ನುವ ದೂರು ಈ ಹಿಂದೆ ಕೇಳಿ …

ಬೈಕ್ ಕದ್ದು ಬಿಡಿಭಾಗಗಳನ್ನು ಮಾರಾಟ: ಆರೋಪಿ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಬೈಕ್‌ಗಳನ್ನು ಕದ್ದು ಅವುಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಪ್ರಕರಣದ ಆರೋಪಿ  ಕಾಸರಗೋಡು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ತೃಶೂರು ನಿವಾಸಿಯಾಗಿದ್ದಾನೆ. ಆರು ತಿಂಗಳ ಹಿಂದೆ ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದಿಂದ ಬೈಕ್ ಕದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ.

ಯುವತಿ ನಾಪತ್ತೆ

ಕುಂಬಳೆ: ಕೆಲಸಕ್ಕೆಂದು ತಿಳಿಸಿ ಹೋದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಬಂದ್ಯೋಡು ಬಳಿಯ ಮಳ್ಳಂಗೈಯ ಜಯಕರ ಶೆಟ್ಟಿ ಎಂಬವರ ಪುತ್ರಿ ಶ್ರೇಯ (೨೩) ನಾಪತ್ತೆಯಾಗಿದ್ದಾಳೆನ್ನಲಾಗಿದೆ. ಈ ಬಗ್ಗೆ ತಂದೆ ನೀಡಿದ ದೂರಿನಂತೆ  ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶ್ರೇಯ ಉಪ್ಪಳದ ಅಂಗಡಿಯೊಂ ದರಲ್ಲಿ ನೌಕರೆಯಾಗಿದ್ದಾಳೆ. ನಿನ್ನೆ ಬೆಳಿಗ್ಗೆ ಕೆಲಸಕ್ಕೆಂದು ತಿಳಿಸಿ ಹೋದಾಕೆ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

ರೈಲಿಗೆ ಮತ್ತೆ ಕಲ್ಲೆಸೆತ

ಕುಂಬಳೆ: ರೈಲಿಗೆ ಕಲ್ಲು ತೂರಾಟ ನಡೆಸಿ ದುಷ್ಕರ್ಮಿಗಳ ಅಟ್ಟಹಾಸ ಎಗ್ಗಿಲ್ಲದೆ ಇನ್ನೂ ಮುಂದುವರಿದಿದೆ. ತಿರುವನಂತಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿಗೆ ನಿನ್ನೆ ರಾತ್ರಿ ಸುಮಾರು ೯ ಗಂಟೆ ವೇಳೆ ಕುಂಬಳೆ ಬಳಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ರೈಲಿನ ಬಾಗಿಲಿನ ಗಾಜಿಗೆ ತಗಲಿ ಅದು ಪುಡಿಗೈಯ್ಯಲ್ಪಟ್ಟಿದೆ. ಆದರೆ ಯಾರಿಗೂ ಗಾಯವುಂಟಾಗಿಲ್ಲ.  ಈ ಬಗ್ಗೆ ಕಾಸರಗೋಡು ರೈಲ್ವೇ ಪೊಲೀಸರು, ಕುಂಬಳೆ ಪೊಲೀಸರು ಜಂಟಿಯಾಗಿ ತನಿಖೆ ಆರಂಭಿಸಿದ್ದಾರೆ. ರೈಲುಗಳಿಗೆ ಪದೇ ಪದೇ ಕಲ್ಲು ತೂರಾಟ ನಡೆಸಿ ಪ್ರಯಾಣಿಕರಿಗೆ …

ಕರ್ನಾಟಕದಿಂದ ಕಾಸರಗೋಡಿಗೆ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಮದ್ಯ ವಶ: ಕಾರು ಸಹಿತ ಓರ್ವ ಸೆರೆ

ಮಂಜೇಶ್ವರ: ಮಂಜೇಶ್ವರ ತಪಾಸಣಾ ಕೇಂದ್ರದಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ಆರ್. ರಿನೋಶ್ ನೇತೃತ್ವದ ಅಬಕಾರಿ ತಂಡ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಬೃಹತ್ ಪ್ರಮಾಣದ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮಂಗಳೂರು ಜಪ್ಪಿನಮೊಗರು ಗೋರಿಗುಡ್ಡೆ ಲೋಬೋ ಕಾಂಪೌಂ ಡ್‌ನ ಬಾಲಕೃಷ್ಣ ಎ (೫೦) ಎಂಬಾ ತನನ್ನು ಬಂಧಿಸಿ ಆತನ ವಿರುದ್ಧ ಅಬ ಕಾರಿ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ರಾತ್ರಿ ೯ ಗಂಟೆ ವೇಳೆ ಈ ಕಾರ್ಯಾಚರಣೆ ನಡೆದಿದೆ. ಕರ್ನಾಟಕ ರಾಜ್ಯ ನೋಂದಾವಣೆ ಹೊಂದಿದ ಮಾರುತಿ ಸ್ವಿಫ್ಟ್ …