ಪೊಲೀಸ್ ಠಾಣೆ ಮುಂದೆ ಲೀಗ್ ಧರಣಿ ಆರಂಭ

ಕುಂಬಳೆ: ಮುಹಮ್ಮದ್ ಫರ್ಹಾಸ್‌ನ ಸಾವಿಗೆ ಕಾರಣ ಕರ್ತರಾದ ಪೊಲೀಸರ ವಿರುದ್ಧ ಕೊಲೆಕೃತ್ಯಕ್ಕೆ ಕೇಸು ದಾಖಲಿಸಬೇಕೆಂದು ಒತ್ತಾಯಿಸಿ ಕುಂಬಳೆ ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಲೀಗ್ ನೇತೃತ್ವದಲ್ಲಿ ಧರಣಿ ಆರಂಭಿಸಲಾಗಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ. ಎಕೆಎಂ. ಅಶ್ರಫ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಅಸೀಸ್ ಮರಿಕ್ಕೆ ಅಧ್ಯಕ್ಷತೆ ವಹಿಸಿದರು. ಮಂಡಲ ಕಾರ್ಯದರ್ಶಿ ಎ.ಕೆ. ಹಾರಿಫ್ ಸ್ವಾಗತಿಸಿದರು. ಧರಣಿಯಲ್ಲಿ ಮಹಿಳೆಯರ ಸಹಿತ ನೂರಾರು ಮಂದಿ ಭಾಗವಹಿಸುತ್ತಿದ್ದಾರೆ.

ಕಾರು ಮಗುಚಿ ವಿದ್ಯಾರ್ಥಿ ಮೃತ್ಯು: ಎಸ್.ಐ ಸಹಿತ ಮೂವರ ವರ್ಗಾವಣೆ; ಕೊಲೆ ಕೃತ್ಯಕ್ಕೆ ಕೇಸು ದಾಖಲಿಸಲು ಕುಟುಂಬದ ಒತ್ತಾಯ

ಕುಂಬಳೆ: ಪೊಲೀಸರು ಹಿಂಬಾಲಿಸಿದುದರಿಂದ ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ಮಗುಚಿ ವಿದ್ಯಾರ್ಥಿ ಮೃತಪಟ್ಟ ಘಟನೆಯಲ್ಲಿ ಎಸ್‌ಐ ಸಹಿತ ಮೂವರು ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಕುಂಬಳೆ ಠಾಣೆಯ ಎಸ್‌ಐ ರಜಿತ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ದೀಪು, ರಂಜಿತ್ ಎಂಬಿವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನ ಕಾಞಂಗಾಡ್ ಹೈವೇ ಪೊಲೀಸ್‌ಗೆ ವರ್ಗಾವಣೆ ಮಾಡಿದ್ದಾರೆ. ವಿದ್ಯಾರ್ಥಿಯ ಸಾವಿಗೆ ಕಾರಣ ವಾದ ಅಪಘಾತದ ಕುರಿತು ಡಿಸಿಬಿ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ ಎಂದೂ ಅಪರಾಧಿ ಗಳೆಂದು ಪತ್ತೆಹಚ್ಚಿದಲ್ಲಿ ಇತರ ಕ್ರಮಗಳನ್ನು …

ತಳಂಗರೆಯಲ್ಲಿ ಬೈಕ್‌ಗಳಿಗೆ ಕಿಚ್ಚಿರಿಸಿದ ಆರೋಪಿ ಸೆರೆ

ಕಾಸರಗೋಡು: ತಳಂಗರೆ ಪಳ್ಳಿಕ್ಕಾಲ್ ಮಸೀದಿ ಕ್ವಾರ್ಟರ್ಸ್‌ನ ಮುಂದೆ ನಿಲ್ಲಿಸಲಾಗಿದ್ದ ಅಧ್ಯಾಪಕರ ಬೈಕ್‌ಗಳಿಗೆ  ಕಿಚ್ಚಿರಿಸಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ವಳಾಂಚೇರಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ವಿ.ಪಿ. ಸೈದಲಿ (೫೮) ಬಂಧಿತ ಆರೋಪಿ. ಊರಿನಲ್ಲಿ ತಾನು ಚಿಟ್ ಫಂಡ್ ವ್ಯವಹಾರದಲ್ಲಿ ತೊಡಗಿದ್ದೆನೆಂದೂ ಅದರಿಂದ ನನಗೆ ಸುಮಾರು ೫೦ ಸಾವಿರ ರೂ.ಗಳಷ್ಟು ನಷ್ಟವುಂಟಾಗಿತ್ತು. ಅದರಿಂದ ತೀವ್ರ ದುಃಖಿತನಾದ ನಾನು ಏನು ಮಾಡಬೇಕೆಂದು ತೋಚದೆ ಬೈಕ್‌ಗೆ ಕಿಚ್ಚಿರಿಸಿರುವುದಾಗಿ ಬಂಧಿತನು ಪೊಲೀಸರಲ್ಲಿ ತಿಳಿಸಿದ್ದಾನೆ.  ಬೈಕ್ ಮಾಲಕನಾದ ಅಧ್ಯಾಪಕರೊಂದಿಗೆ ತಾನು ಯಾವುದೇ …

ಕಡಪ್ಪುರದಲ್ಲಿ ಯುವಕರ ಮಧ್ಯೆ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ

ಕಾಸರಗೋಡು: ತಿರುವೋಣಂ ದಿನವಾದ  ಕಾಸರಗೋಡು   ಸಮುದ್ರ ಕಿನಾರೆಯಲ್ಲಿ ನಿನ್ನೆ ಸಂಜೆ ಯುವಕರ ಮಧ್ಯೆ ಪರಸ್ಪರ ಗುಂಪು ಘರ್ಷಣೆ ನಡೆದಿದ್ದು, ಅದನ್ನು ನಿಯಂತ್ರಿಸಲು ಕೊನೆಗೆ ಪೊಲೀಸರಿಗೆ ಲಾಠಿ ಪ್ರಹಾರ ನಡೆಸಬೇಕಾಗಿ ಬಂತು. ಲೈಟ್ ಹೌಸ್ ಸಮುದ್ರ ಕಿನಾರೆಯಲ್ಲಿ ಕೆಲವರು ನಿನ್ನೆ ಸಂಜೆ ಹಾಡು ಇರಿಸಿ  ಡ್ಯಾನ್ಸ್ ಮಾಡುತ್ತಿದ್ದರು. ಆಗ ಯುವಕನೋರ್ವ ತನ್ನ ಮೊಬೈಲ್ ಫೋನ್‌ನಲ್ಲಿ ಅಲ್ಲಿಗೆ ಬಂದಿದ್ದ ಯುವತಿಯೋರ್ವೆಯ ಫೋಟೋ ಕ್ಲಿಕ್ಕಿಸಿದ್ದನು. ಅದನ್ನು ಕಂಡ ಕೆಲವರು ಯುವಕರು ಪ್ರಶ್ನಿಸಿದಾಗ ಅದು ಪರಸ್ಪರ ವಾಗ್ವಾದಕ್ಕೆ ದಾರಿ ಮಾಡಿಕೊಟ್ಟು ನಂತರ  ಘರ್ಷಣೆಗೂ …

ಕಾರು ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು: ವಾಹನ ಪರಾರಿ

ಕಾಸರಗೋಡು: ಅಪರಿಮಿತ ವೇಗದಲ್ಲಿ ಬಂದ ಕಾರು ಢಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ನಡೆದಿದೆ. ಪೆರಿಯ ಬಳಿಯ ಚೇರ್ಕಪ್ಪಾರದಲ್ಲಿ ವಾಸಿಸುವ ಬೀವಿ ಎಂಬವರ ಪುತ್ರ ಉಬೈದ್ (೪೯) ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ ೭.೩೦ರ ವೇಳೆಗೆ ಚೇರ್ಕಪ್ಪಾರದ ಕ್ಲಬ್ ಸಮೀಪ ಅಪಘಾತ ಸಂಭವಿಸಿದೆ. ಪೆರಿಯ ಭಾಗದಿಂದ ಪಾಕಂಭಾಗಕ್ಕೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಅಪಘಾತ ಬಳಿಕ ಕಾರು ನಿಲ್ಲಿಸದೆ ಪರಾರಿಯಾಗಿದೆ. ಗಂಭೀರ ಗಾಯಗೊಂಡ ಉಬೈದ್‌ರನ್ನು ನಾಗರಿಕರು  ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಪಳ್ಳಿಪ್ಪುಳ ನಿವಾಸಿಯಾದ ಉಬೈದ್ ಹಾಗೂ …

ಯುವಕ ನಾಪತ್ತೆ

ಕುಂಡಂಕುಳಿ:  ಕುಂಬಾರತ್ತೋಡ್ ನಿವಾಸಿ ಮಣಿಕಂಠನ್ (೩೨) ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪತ್ನಿ ನೀಡಿದ ದೂರಿನಂತೆ ಬೇಡಗಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ತಿಂಗಳ ೨೪ರಂದು ಕರ್ನಾಟಕದಲ್ಲಿ ಕೆಲಸಕ್ಕೆಂದು ತಿಳಿಸಿ ಮನೆಯಿಂದ ತೆರಳಿದ್ದರು. ಅನಂತರ ಫೋನ್ ಕರೆ ಮಾಡಿದರೂ ಯಾವುದೇ ಮಾಹಿತಿ ಇಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

ಖ್ಯಾತ ಶಿಶುರೋಗ ತಜ್ಞ ನಿಧನ

ಕಾಸರಗೋಡು: ಕಾಸರಗೋ ಡಿನ ಖ್ಯಾತ ಶಿಶುರೋಗ ತಜ್ಞ ಡಾ| ಬಿ.ಎಫ್. ಮುಹಮ್ಮದ್ (೭೬) ನಿಧನ ಹೊಂದಿದರು. ಕುಂಬಳೆ ನಿವಾಸಿಯಾದ ಇವರು ವಿದ್ಯಾನಗರ ಕಾಲೇಜು ಬಳಿ ವಾಸಿಸುತ್ತಿದ್ದರು. ನಿನ್ನೆ ಮುಂಜಾನೆ ಅಸೌಖ್ಯ ಕಾಣಿಸಿ ಕೊಂಡ ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಈ ಹಿಂದೆ ಕಾಸರಗೋಡು ಮಾಲಿಕ್ ದಿನಾರ್ ಆಸ್ಪತ್ರೆ, ಕುಂಬಳೆ ಬಿ.ಎಂ. ಹೆಲ್ತ್ ಸೆಂಟರ್ ಎಂಬೆ ಡೆಗಳಲ್ಲಿ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಆರಿಕ್ಕಾಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಬೀಫಾತ್ತಿಮ, ಮಕ್ಕಳಾದ ಹಾರೂನ್, ಆಮಿರ, ಮುಹಮ್ಮದ್ ಜಾಬಿರ್, …

ಕುಂಬಳೆ: ಶ್ರೀದೇವಿ ಮಠದ ಆಡಳಿತ ಮೊಕ್ತೇಸರ ನಿಧನ

ಕುಂಬಳೆ: ಕುಂಬಳೆ ಶ್ರೀದೇವಿ ಮಠದ ನಿವಾಸಿ ಪ್ರಭಾಕರ ಅನಂತ ಭಟ್ (೫೭) ನಿಧನಹೊಂದಿದರು. ಶ್ರೀದೇವಿ ಮಠದ ಆಡಳಿತ ಮೊಕ್ತೇಸರರಾಗಿದ್ದ ಇವರು ಕುಂಬಳೆ ಪೇಟೆಯಲ್ಲಿ ಪ್ರಸಿದ್ಧ ವ್ಯಾಪಾರಿ, ಸಮಾಜ, ಕುಂಬಳೆ ಜಿಎಸ್‌ಬಿ ಸಮಾಜದ ಗಣ್ಯರೂ ಆಗಿದ್ದರು. ಮೃತರು ಪತ್ನಿ ಪ್ರಭಾವತಿ ಭಟ್, ಮಕ್ಕಳಾದ ಸಂದೇಶ್ ಭಟ್, ಗೌರೀಶ ಭಟ್, ಸಹೋ ದರ-ಸಹೋದರಿಯರಾದ ದಿನೇಶ ಭಟ್,  ಪ್ರಕಾಶ ಭಟ್, ಶಶಿಧರ ಭಟ್, ಸುಧಾ ಪೈ, ವಿದ್ಯಾ ಭಕ್ತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವಿಷ ಸೇವನೆ: ತಾಯಿ, ಇಬ್ಬರು ಮಕ್ಕಳು ಗಂಭೀರ; ತಾಯಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು

ಕಾಸರಗೋಡು: ವಿಷಪ್ರಾಶನಗೈದ ತಾಯಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಗಂಭೀರಾವಸ್ಥೆಯಲ್ಲಿ ಕಣ್ಣೂರು ಸರಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೇಕಲ ಸಮೀಪದ ಮೌವ್ವಲ್‌ನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪಳ್ಳಿಕ್ಕೆರೆ ಪರಯಂಗಾನಂ ನಿವಾಸಿ ಶೆರೀಫ್ ಅರಯಾಲ್ ಎಂಬವರ ಪತ್ನಿ ಸರೀನ ಮತ್ತು ಆಕೆಯ ೭ ಮತ್ತು ೪ ವರ್ಷದ ಇಬ್ಬರು ಗಂಡು ಮಕ್ಕ ಳನ್ನು   ವಿಷಪ್ರಾಶನಗೈದು ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ. ಇವರ ಸ್ಥಿತಿ ಗಂಭೀರವಾಗಿದೆಯೆಂದು  ವೈದ್ಯರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಸುಮಾರು ೮ ಗಂಟೆ ವೇಳೆ ಈ ಘಟನೆ ನಡೆದಿದೆ. …

ಮಧುರೈಯಲ್ಲಿ ರೈಲಿಗೆ ಬೆಂಕಿ: ೯ ಮಂದಿ ಸಾವು; ೨೦ ಮಂದಿಗೆ ಗಂಭೀರ

ಮಧುರೈ: ತಮಿಳುನಾಡಿನ ಮಧುರೈ ರೈಲ್ವೇ ಜಂಕ್ಷನ್‌ನ ಯಾರ್ಡ್‌ನಲ್ಲಿ ನಿಂತಿದ್ದ ಪ್ರವಾಸಿ ರೈಲಿಗೆ ಬೆಂಕಿ ತಗಲಿ ೯ ಮಂದಿ ಸಾವನ್ನಪ್ಪಿ, ಹಲವರು ಗಂಭೀರ ಸುಟ್ಟು ಗಾಯಗೊಂಡ ದಾರುಣ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಈ ರೈಲು ಉತ್ತರಪ್ರದೇಶದ ಲಿಖಿಂಪುರದ ಖೇರಿಯಿಂದ ಪ್ರವಾಸಿಗರನ್ನು  ಹೊತ್ತೊಯ್ಯುತ್ತಿತ್ತು.  ಘಟನೆ ನಡೆದ ಸ್ಥಳದಲ್ಲೇ ಇಬ್ಬರು ಪ್ರಾಣ ಕಳದುಕೊಂಡರು.  ಚಿಕಿತ್ಸೆಗೆ ಸ್ಪಂದಿಸದೆ ಏಳು ಮಂದಿ  ನಂತರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.  ೨೦ರಷ್ಟು ಮಂದಿ ಗಂಭೀರ ಸುಟ್ಟು ಗಾಯಗೊಂಡಿದ್ದು, ಅವರನ್ನು ರಾಜಾಜಿ ಆಸ್ಪತ್ರೆಯಲ್ಲಿ ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ …