ಕಳವಿಗಾಗಿ ಬಂದಿರುವ ಶಂಕೆ: ಕುಂಬಳೆ ನಿವಾಸಿ ಸಹಿತ ಮೂವರು ಕಣ್ಣೂರಿನಲ್ಲಿ ಸೆರೆ

ಕಾಸರಗೋಡು: ಕಳವು ನಡೆಸುವ ಉದ್ದೇಶದಿಂದ ಬಂದಿರುವುದಾಗಿ ಶಂಕೆ ಮೇರೆಗೆ ಕುಂಬಳೆ ನಿವಾಸಿ ಸಹಿತ ಮೂವರನ್ನು ಕಣ್ಣೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ನಾಂಗಿ ಹೌಸಿನ ಕೆ. ಇಬ್ರಾಹಿಂ (೩೯), ಮಂಗಳೂರು ವಾಣಿಮಂಗಲದ ಅಕ್ಕರಂಗಾಡಿ ಕೆ. ಮೊಹಮ್ಮದ್ ಬಶೀರ್ (೩೨) ಮತ್ತು ಮಟ್ಟನ್ನೂರು ನೆಂಜಿಡತ್ತ ಕೆ. ವಿಜೇಶ್ (೩೦) ಬಂಧಿತ ಆರೋಪಿಗಳಾಗಿದ್ದಾರೆ. ಕಣ್ಣೂರು ಜಿಲ್ಲಾ ಆಸ್ಪತ್ರೆಯ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಆ ದಾರಿಯಾಗಿ ಬಂದ ಕಾಸರಗೋಡು ರಿಜಿಸ್ಟ್ರೇಷನ್ ನಂಬ್ರ ಹೊಂದಿದ ಕಾರನ್ನು ಕಂಡು ನಿಲ್ಲಿಸುವಂತೆ ಅದಕ್ಕೆ ಕೈಸನ್ನೆ ಸೂಚಿಸಿದ್ದಾರೆ. …

ಚಂದ್ರಯಾನ್ -೩ ಲ್ಯಾಂಡಿಂಗ್ ಸ್ಥಳಕ್ಕೆ ‘ಶಿವಶಕ್ತಿ’ ಹೆಸರಿಟ್ಟ ಪ್ರಧಾನಿ

ಬೆಂಗಳೂರು: ಚಂದ್ರಯಾನ್ ೩ ಚಂದ್ರನಲ್ಲಿ ಇಳಿದ ಸ್ಥಳವನ್ನು ಇನ್ನು ಮುಂದೆ ಶಿವಶಕ್ತಿ ಎಂದು ಕರೆಯಲಾಗುವುದೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದರು. ಇದೇ ವೇಳೆ ಆಗಸ್ಟ್ ೨೩ರನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸಲಾಗುವುದೆಂದು ಅವರು ತಿಳಿಸಿದರು. ಇನ್ಯಾರಿಗೂ ತಲುಪಲು ಸಾಧ್ಯವಾಗದ ಸ್ಥಳಕ್ಕೆ ನಾವು ತಲುಪಿದ್ದು, ವಿಜ್ಞಾನಿಗಳ ತಿಳುವಳಿಕೆ ಹಾಗೂ ಸಮರ್ಪಣೆಯನ್ನು ದೇಶ ಸ್ಮರಿಸುತ್ತಿದೆ ಎಂದು ಪ್ರಧಾನಮಂತ್ರಿ ನುಡಿದರು. ದೇಶದ ಈ ಸಾಧನೆಯನ್ನು ಇತರರೂ ಅಂಗೀಕರಿಸಿದರೆಂದು ಪ್ರಧಾನಮಂತ್ರಿ ಈ ವೇಳೆ ನುಡಿದರು. ಚಂದ್ರಯಾನ್ ೩ರ ಯಶಸ್ವಿಗೆ ಕಾರಣರಾದ ವಿಜ್ಞಾನಿಗಳನ್ನು ಬೆಂಗಳೂರಿಗೆ …

ಮಾನಂತವಾಡಿಯಲ್ಲಿ ಜೀಪು ಕಂದಕಕ್ಕೆ ಉರುಳಿ ೯ ಮಂದಿ ಮೃತ್ಯು

ವಯನಾಡು: ಮಾನಂತವಾಡಿಯ ಸಮೀಪ ನಿನ್ನೆ ಸಂಜೆ ಸಂಭವಿಸಿದ ಭೀಕರ ವಾಹನ ಅಪಘಾತ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಅಪಘಾತದಲ್ಲಿ ೯ ಮಂದಿ ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ. ಮಾನಂತವಾಡಿ ತವಿಂಞಲ್ ಕಣ್ಣೋತುಮಲ ಎಂಬಲ್ಲಿ ನಿಯಂತ್ರಣ ತಪ್ಪಿದ ಜೀಪು ೨೫ ಮೀಟರ್ ಆಳದ ಕಂದಕಕ್ಕೆ ಉರುಳಿ ಈ ಅಪಘಾತ ಸಂಭ ವಿಸಿದೆ. ಚಹಾ ತೋಟದ ಕಾರ್ಮಿಕ ರಾದ ಮಾನಂತವಾಡಿ ಮಕ್ಕಿಮಲ ನಿವಾಸಿಗಳಾದ ಕುಳನ್‌ತೋಡಿಯಿಲ್ ಲೀಲ (೪೨), ಕುಕ್ಕೋಟಿಲ್ ಶೋಭನ (೫೪), ಕಾಪಿಲ್  ರಾಬಿಯಾ (೫೩), ಪಂಚಮಿ ವೀಟಿಲ್ ಶಾಜ(೪೨), …

ಕಾಳಧನ ಶಂಕೆ : ೪.೬೮ ಲಕ್ಷ ರೂ. ವಶ ಓರ್ವ ಕಸ್ಟಡಿಗೆ

ಕಾಸರಗೋಡು: ಹೊಸ ದುರ್ಗ ಮಾಣಿಕ್ಕೋತ್‌ನಲ್ಲಿ ಹೊಸದುರ್ಗ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾಳಧನವೆಂದು ಶಂಕಿಸ ಲಾಗುತ್ತಿರುವ ೪.೬೮ ಲಕ್ಷ ರೂ.ವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾಸರಗೋಡು ಅಣಂಗೂರು ನಿವಾಸಿ ಬಿ.ಎಂ. ಇಬ್ರಾಹಿಂ (೪೮) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಈತ ಬೈಕ್‌ನಲ್ಲಿ  ಹೊಸದುರ್ಗದಿಂದ ಕಾಸರಗೋಡಿಗೆ ಬರುತ್ತಿದ್ದ ದಾರಿ ಮಧ್ಯೆ ಮಾಣಿಕ್ಕೋತ್‌ನಲ್ಲಿ ಪೊಲೀಸರು ಆತನ ಬೈಕನ್ನು ತಡೆದು ನಿಲ್ಲಿಸಿ ತಪಾಸಣೆಗೊಳ ಪಡಿಸಿದಾಗ ಈ ಹಣ ಪತ್ತೆ ಯಾಗಿದೆ. ಸರಿಯಾದ ದಾಖಲು ಪತ್ರಗಳಿಲ್ಲದೆ ಈ ಹಣ ಸಾಗಿಸಲಾಗಿತ್ತೆಂದು ಪೊಲೀಸರು …

ಯುವಕನಿಗೆ ಹಲ್ಲೆ : ಇಬ್ಬರು ಪೊಲೀಸ್ ವಶಕ್ಕೆ

ಕಾಸರಗೋಡು: ಚೌಕಿಯಲ್ಲಿ ನಿನ್ನೆ ರಾತ್ರಿ ಯುವಕರ ಮಧ್ಯೆ ಘರ್ಷಣೆ ಉಂಟಾಗಿ ಓರ್ವ ಗಾಯಗೊಂಡಿದ್ದಾನೆ. ಚೌಕಿ ಆಜಾದ್ ನಗರದ ಸಮೀರ್  ಗಾಯಗೊಂಡಿದ್ದು, ಆತ ನೀಡಿದ ದೂರಿನಂತೆ ನಿಯಾಜ್ ಮತ್ತ ಅನ್ವರ್ ಎಂಬಿವರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾದಕದ್ರವ್ಯ ವಿಷಯವೇ ಘರ್ಷಣೆಗೆ ಕಾರಣವೆನ್ನಲಾಗಿದೆ.

ಅಡೂರು ಶಾಲೆ: ಹೈಕೋರ್ಟ್ ಆದೇಶಕ್ಕೆ ಕರ್ನಾಟಕ ಸಚಿವರ ಹರ್ಷ

ಬೆಂಗಳೂರು: ಗಡಿನಾಡ ಕಾಸರ ಗೋಡು ಜಿಲ್ಲೆಯ ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ನೇಮಿಸಲಾದ ಕನ್ನಡ ತಿಳಿಯದ ಮಲಯಾಳ ಭಾಷೆಯ ಅಧ್ಯಾಪಿಕೆಯನ್ನು ಬದಲಾಯಿಸಿ, ಕನ್ನಡ ಭಾಷೆ ತಿಳಿದಿರುವ ಶಿಕ್ಷಕರನ್ನು ನೇಮಿಸುವಂತೆ ಕೇರಳ ಹೈಕೋರ್ಟ್ ನೀಡಿದ ತೀರ್ಪಿಗೆ ಕರ್ನಾಟಕ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹರ್ಷ ವ್ಯಕ್ತಪಡಿಸಿದ್ದಾರೆ. ಅಡೂರು ಶಾಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕಿ ಪಾಠ ಮಾಡುವಂ ತಿಲ್ಲ. ಅವರನ್ನು ಬದಲಾಯಿಸಿ ಕನ್ನಡ …

ಜಿಲ್ಲೆಯಲ್ಲಿ ೨೫ ಮತಗಟ್ಟೆಗಳ ಸ್ಥಳಾಂತರ; ೧೪೭ರ ಹೆಸರು ಬದಲಾವಣೆ

ಕಾಸರಗೋಡು: ಲೋಕಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿರುವಂತೆಯೇ ಜಿಲ್ಲೆಯಲ್ಲಿ ೨೫ ಮತಗಟ್ಟೆ (ಪೋಲಿಂಗ್ ಸ್ಟೇಷನ್)ಗಳನ್ನು ಈಗಿರುವ ಸ್ಥಳಗಳಿಂದ ಬೇರೆಡೆ ಸ್ಥಳಾಂತರಿಸಲಾಗುವುದು. ಮಾತ್ರವಲ್ಲ ೮೨ ಮತಗಟ್ಟೆಗಳನ್ನು ಬೇರೆ ಕಟ್ಟಡಗಳಿಗೆ ಬದಲಾಯಿಸಲಾಗುವುದು. ಇದರ ಹೊರತಾಗಿ ೧೪೭ ಮತಗಟ್ಟೆಗಳ ಹೆಸರುಗಳನ್ನು ಬದಲಾಯಿಸಲಾಗುವುದು. ಹೀಗೆ ಮತಗಟ್ಟೆಗಳ ಸ್ಥಳಾಂತರ, ಹೆಸರು ಬದಲಾವಣೆಗೆ ಸಂಬಂಧಿಸಿ ಚುನಾವಣಾ ಅಧಿಕಾರಿಗಳಾದ  ತಹಶೀಲ್ದಾರರು ತಯಾರಿಸಿದ ವರದಿಗೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಬಶೇಖರನ್‌ರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ ಸಭೆ ಅಂಗೀಕರಿಸಿದೆ. ಇದರಂತೆ ಕಾಸರಗೋಡು ವಿಧಾನಸಭಾ …

ಶಾಲಾ ವಾಹನದಿಂದ ಇಳಿದ ನರ್ಸರಿ ವಿದ್ಯಾರ್ಥಿನಿ ಅದೇ ವಾಹನ ಢಿಕ್ಕಿ ಹೊಡೆದು ದಾರುಣ ಮೃತ್ಯು

ಕಾಸರಗೋಡು: ಶಾಲೆಯಿಂದ ಶಾಲಾ ವಾಹನದಲ್ಲಿ ಮನೆ ಬಳಿ ಬಂದಿಳಿದ ನರ್ಸರಿ ಶಾಲೆಯ ವಿದ್ಯಾರ್ಥಿನಿ ಅದೇ ವಾಹನ ಢಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಚೌಕಿ ಸಮೀಪದ ಪೆರಿಯಡ್ಕ ಮರ್ಹಬಾ ಹೌಸ್‌ನ ಮೊಹಮ್ಮದ್ ಝುಬೈರ್-ಶರ್ಬಾನಾ ದಂಪತಿಯ ಪುತ್ರಿ ಆಯಿಷಾ ಸೋಯಾ (೪) ಸಾವನ್ನಪ್ಪಿದ ದುರ್ದೈವಿ ಬಾಲಕಿ.  ಈಕೆ ಕಾಸರಗೋಡು ನೆಲ್ಲಿಕುಂಜೆ ತಂಙಳ್ ಉಪ್ಪಾಪ ನರ್ಸರಿ ಶಾಲೆಯ ನರ್ಸರಿ ವಿದ್ಯಾರ್ಥಿನಿಯಾಗಿದ್ದಾಳೆ. ನಿನ್ನೆ ಮಧ್ಯಾಹ್ನ  ೨ ಗಂಟೆಗೆ ಶಾಲೆ ಬಿಟ್ಟು ಶಾಲಾ ವಾಹನದಲ್ಲಿ  ಮನೆ ಬಳಿ ಬಂದಿಳಿದಾಗ   ಚಾಲಕ  ವಾಹನವನ್ನು …

ಕನ್ನಡ ಪರ ಹೋರಾಟಕ್ಕೆ ಸಂದ ಜಯ: ಅಡೂರು ಶಾಲೆಯ ಭಾಷೆ ತಿಳಿಯದ ಅಧ್ಯಾಪಿಕೆಯ ಬದಲಿಸಲು ನ್ಯಾಯಾಲಯ ಆದೇಶ

ಅಡೂರು: ಗಡಿನಾಡಾದ ಕಾಸರಗೋಡು ಜಿಲ್ಲೆಯ ಕನ್ನಡ ಪ್ರದೇಶದ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸಮಸ್ಯೆಗೆ ನ್ಯಾಯಾಲಯದಿಂದ ಪರಿಹಾರವಾಗಿದೆ. ಅಡೂರು ಶಾಲೆಯ ಕನ್ನಡ ವಿದ್ಯಾರ್ಥಿಗಳಿಗೆ ಪಾಠ ಮಾಡಲು ನೇಮಕಗೊಂಡಿದ್ದ ಕನ್ನಡ ಬಾರದ ಅಧ್ಯಾಪಿಕೆಯನ್ನು ಅಲ್ಲಿಂದ ವರ್ಗಾಯಿಸಿ ಕನ್ನಡ ತಿಳಿದಿರುವ ಅಧ್ಯಾಪಿಕೆಯನ್ನು ನೇಮಕ ಮಾಡಬೇಕೆಂದು ಕೇರಳ ಉಚ್ಚ ನ್ಯಾಯಾಲಯ ಆದೇಶಿಸಿದೆ. ಓಣಂ ಹಬ್ಬದ ರಜೆ ಕಳೆದ ಕೂಡಲೇ ಕನ್ನಡ ಅಧ್ಯಾಪಿಕೆಯನ್ನು ಶಾಲೆಯಲ್ಲಿ ನೇಮಕ ಮಾಡಬೇಕೆಂದು ಆದೇಶಿಸಿದ ನ್ಯಾಯಾ ಲಯ ಅಲ್ಲಿ ಈಗಾಗಲೇ ನೇಮಕಗೊಂ ಡಿರುವ ಮಲಯಾಳಿ ಮಾತೃ ಭಾಷೆಯ ಅಧ್ಯಾಪಿಕೆಯನ್ನು ಬೇರೆ ಶಾಲೆಗೆ …

ದ್ವಿಚಕ್ರ ವಾಹನದಲ್ಲಿ ಬಂದು ಚಿನ್ನದ ಸರ ಎಗರಿಸುವಿಕೆ: ಜಿಲ್ಲೆಯಲ್ಲಿ ಜನವರಿಯಿಂದ ಈ ತನಕ ದಾಖಲುಗೊಂಡಿದ್ದು ೨೦ ಕೇಸುಗಳು; ೧೩ರಲ್ಲೂ ಬಂಧಿತ ಆರೋಪಿ

ಕಾಸರಗೋಡು: ಕಳೆದ ಜನವರಿಯಿಂದ ಆರಂಭಗೊಂಡು ಜಿಲ್ಲೆಯ ವಿವಿಧೆಡೆಗಳಲ್ಲಿ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ೨೦ ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ದಾಖಲು ಗೊಂಡಿವೆ.  ಇದರಲ್ಲಿ ೧೩ರಲ್ಲೂ ನಿನ್ನೆ ಬಂಧಿತನಾದ ಮೂಲತಃ ಮೇಲ್ಪರಂಬ ಕೂವತ್ತೊಟ್ಟಿ ನಿವಾಸಿ ಹಾಗೂ ಈಗ ಕೀಯೂರು ಚೆರಿಯಪಳ್ಳ ಬಳಿಯ ಶಮ್ನಾಸ್ ಮಂಜಿಲ್‌ನ ಮೊಹಮ್ಮದ್ ಶಮ್ನಾಸ್ ಯಾನೆ ಶಮ್ನಾಸ್ (೩೦) ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತನು ಚಿನ್ನದ ಸರ ಎಗರಿಸುವ ಪ್ರಕರಣಗಳಲ್ಲಿ ಮಾತ್ರವಲ್ಲ ಮಾದಕ ದ್ರವ್ಯವಾದ ಎಂಡಿಎಂಎ ಸೇವನೆ  ಮತ್ತು ಕೌಟುಂಬಿಕ ಸಮಸ್ಯೆಯ …