ಚಂದ್ರಯಾನ ೩: ಇಸ್ರೋದ ಯಶಸ್ವಿ ಸಾಧನೆಯಲ್ಲಿ ಕಾಸರಗೋಡಿನ ವಿಜ್ಞಾನಿ

ಕಾಸರಗೋಡು: ಭಾರತದ ಚಂದ್ರಯಾನ-೩ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿದೆ. ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಭಾರತ ವಿಶ್ವವನ್ನೇ ತನ್ನತ್ತ ತಿರುಗಿಸಿದೆ. ಇದೀಗ ಭಾರತ ಚಂದ್ರನ ಮೇಲಿದೆ. ಇಸ್ರೋ ಹಾಗೂ ಭಾರತದ ಸಾಧನೆಗೆ ದೇಶ, ವಿದೇಶಗಳಿಂದ ಅಭಿನಂದನೆಗಳು ಹರಿದು ಬರುತ್ತಿವೆ. ಇಡೀ ಜಗತ್ತಿನಲ್ಲೇ ಅತೀ ದೊಡ್ಡ ಸಾಧನೆಗೈದ ಇಸ್ರೋದ ವಿಜ್ಞಾನಿಗಳ ತಂಡದಲ್ಲಿ  ಕಾಸರಗೋಡಿನ ಕೃಷ್ಣ ಮೋಹನ ಶ್ಯಾನುಭೋಗರೂ ಇದ್ದಾರೆ ಎಂಬುವುದು ಹೆಮ್ಮೆಯ ವಿಷಯವಾಗಿದೆ. ಚೆಂಗಳ ಬಳಿಯ ಎರಿ ಯಪಾಡಿ ನಿವಾಸಿ  …

ಅಬಕಾರಿ ಕಚೇರಿಗಳಿಗೆ ವಿಜಿಲೆನ್ಸ್ ದಾಳಿ, ಅನಧಿಕೃತ ದಾಸ್ತಾನು ಪತ್ತೆ

ಕಾಸರಗೋಡು: ಓಣಂ ಹಬ್ಬ ಇನ್ನೇನು ಸಮೀಪಿಸುತ್ತಿರುವಂತೆ ಅದರ ಹೆಸರಲ್ಲಿ ಹೊರಗಿನಿಂದ ರಾಜ್ಯಕ್ಕೆ ಅಕ್ರಮ ಮದ್ಯದ ಹೊಳೆ ಹರಿದು ಬರುತ್ತಿರುವುದನ್ನು ತಡೆಗಟ್ಟಲು ಅಬಕಾರಿ ಇಲಾಖೆ ಆರಂಭಿಸಿರುವ ಕಾರ್ಯಾಚರಣೆಗಳ ಬಗ್ಗೆ ಪರಿಶೀಲನೆ ನಡೆಸಲು ಕಾಸರಗೋಡು ವಿಜಿಲೆನ್ಸ್ (ಜಾಗ್ರತದಳ)ದ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯ ಐದು ಅಬಕಾರಿ ಕಚೇರಿಗಳಿಗೆ ಆಪರೇಷನ್ ಕೋಕ್‌ಟ್ವೆಲ್‌ನಂತೆ ಮಿಂಚಿನ ದಾಳಿ ನಡೆಸಲಾಗಿದೆ. ಈ ದಾಳಿ ಮತ್ತು ತಪಾಸಣೆಯಲ್ಲಿ ಕೆಲವು ಅಬಕಾರಿ ಕಚೇರಿಗಳಲ್ಲಿ ಕೆಲವೊಂದು ಅವ್ಯವಹಾರಗಳು ಪತ್ತೆಹಚ್ಚಲಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೆಲವು ಕಚೇರಿಗಳಲ್ಲಿ ಕೆಲವು ಸಾಮಗ್ರಿಗಳನ್ನು …

ಓಣಂ ಕೊಡುಗೆಯಾಗಿ ಕೇರಳಕ್ಕೆ ಎರಡನೇ ‘ವಂದೇ ಭಾರತ್ ಎಕ್ಸ್‌ಪ್ರೆಸ್’

ಕಾಸರಗೋಡು: ಓಣಂ ಹಬ್ಬದ ಕೊಡುಗೆಯಾಗಿ  ಕೇರಳದಲ್ಲಿ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಲು  ಭಾರತೀಯ ರೈಲ್ವೇ ಇಲಾಖೆ ತೀರ್ಮಾನಿಸಿದೆ. ಆದರೆ  ರೈಲು ಸೇವೆಯನ್ನು ಆರಂಭಿಸುವ ದಿನಾಂಕವನ್ನು ರೈಲ್ವೇ ಇಲಾಖೆ ಇನ್ನೂ ಪ್ರಕಟಿಸಿಲ್ಲ. ಓಣಂ ಹಬ್ಬದ ವೇಳೆಯಲ್ಲೇ ಈ ರೈಲು ಸೇವೆ ಆರಂಭಿಸುವ ಸಾಧ್ಯತೆ ಇದೆ. ಹಾಗೆ ನಡೆದಲ್ಲಿ  ಅದು ರೈಲ್ವೇ ಇಲಾಖೆ ಕೇರಳಕ್ಕೆ ನೀಡಲಿರುವ ಅನಿರೀಕ್ಷಿತ ಓಣಂ ಕೊಡುಗೆಯಾಗಲಿದೆ. ದ್ವಿತೀಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಾಡಿಯ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದ್ದು, ಸೇವೆ ಆರಂಭಿಸುವ …

ರೈಲಿಗೆ ನಿರಂತರ ಕಲ್ಲು: ಮೂವರ ಸೆರೆ 

ಹೊಸದುರ್ಗ: ರೈಲುಗಾಡಿಗೆ ನಿರಂತರ ಕಲ್ಲೆಸೆತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಶಂಕಾಸ್ಪದ ರೀತಿಯಲ್ಲಿ ರೈಲು ಹಳಿಗಳಲ್ಲಿ ಕಂಡುಬಂದ ಮೂವರು ಅನ್ಯರಾಜ್ಯ ಕಾರ್ಮಿಕರನ್ನು ಹೊಸದುರ್ಗ ಪೊಲೀಸರು ಸೆರೆಹಿಡಿದರು. ಪಡನ್ನಕ್ಕಾಡ್ ಕೃಷ್ಣ ಪಿಳ್ಳೆ ನಗರದಲ್ಲಿ ವಾಸಿಸುವ ವೆಸ್ಟ್ ಬಂಗಾಳ್ ನಿವಾಸಿಗಳಾದ ಗೌತಂ ರೋಯ್ (೨೭), ರಾಹುಲ್ ರೋಯ್ (೨೫), ತಾಪ್ಪನ್ ಬರ್ಮನ್ (೪೩) ಎಂಬಿವರನ್ನು ಸೆರೆಹಿಡಿದಿದ್ದಾರೆ.

ರೈಲು ಹಳಿಗಳಲ್ಲಿ ಕಲ್ಲಿರಿಸಿದ ವಿದ್ಯಾರ್ಥಿಗಳಿಬ್ಬರು ವಶಕ್ಕೆ

ಕಾಸರಗೋಡು: ಸಂಚರಿಸು ತ್ತಿರುವ ರೈಲು ಹಳಿಗೆ ಕಲ್ಲಿರಿಸಿದ  ವಿದ್ಯಾರ್ಥಿ ಗಳಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಳಪಟ್ಟಣಂ ರೈಲು ಹಳಿಯಲ್ಲಿ ಕಲ್ಲಿರಿಸಿದ ಘಟನೆಗೆ ಸಂಬಂಧಿಸಿ ಈ ವಿದ್ಯಾರ್ಥಿಗಳು ವಳಪಟ್ಟಣಂ ಪೊಲೀಸರ ವಶಕ್ಕೊಳಗಾಗಿದ್ದಾರೆ. ನಿನ್ನೆ ಇವರು ಮಧ್ಯಾಹ್ನ ೧೨.೧೦ಕ್ಕೆ ರೈಲಿಗೆ ಕಲ್ಲಿರಿಸಿದ್ದರು.  ಆವೇಳೆ ರೈಲುಹಳಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಕಂಡು  ತಕ್ಷಣ ಅವರನ್ನು ಸೆರೆಹಿಡಿದಿದ್ದಾರೆ. ವಳಪಟ್ಟಣಂ ಪ್ರದೇಶದಲ್ಲಿ ಈ ಹಿಂದೆಯೂ ಹಲವು ಬಾರಿ ಹಲವು ರೈಲುಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆಗಳು ನಡೆದಿದ್ದವು. ೨೦೧೨ರಲ್ಲಿ ಉಪ್ಪಳ ರೈಲ್ವೇ ಟ್ರಾಕ್‌ನಲ್ಲಿ ಕಲ್ಲಿಡಲು …

ಈರುಳ್ಳಿ ಚೀಲಗಳಡಿ ಬಚ್ಚಿಟ್ಟು ಸಾಗಿಸಿದ ೫೩ ಚೀಲ ಪಾನ್‌ಮಸಾಲೆ ವಶ: ಇಬ್ಬರ ಸೆರೆ

ಕುಂಬಳೆ: ವಾಹನದಲ್ಲಿ ಈರುಳ್ಳಿ ತುಂಬಿದ ಗೋಣಿ ಚೀಲಗಳ ಅಡಿಭಾಗದಲ್ಲಿ ಬಚ್ಚಿಟ್ಟು ಸಾಗಿಸಲಾಗು ತ್ತಿದ್ದ    ಭಾರೀ ಪ್ರಮಾಣದ ಪಾನ್ ಮಸಾಲೆಯನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.  ಕರ್ನಾಟಕ ಭಾಗದಿಂದ   ಪಿಕ್‌ಅಪ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ೫೩ ಗೋಣಿ ಚೀಲ    ಪಾನ್ ಮಸಾಲೆ ವಶಪಡಿಸಲಾಗಿದೆ. ಇದಕ್ಕೆ ಸುಮಾರು ೭ ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆಯೆಂದು  ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಲಪ್ಪುರಂ ಕೋಟೆಕ್ಕಲ್ ನಿವಾಸಿ ಗಳಾದ ಅಖಿಲ್ ಪಿ.ಕೆ (೩೦), ಸಾಜಿರ್ (೪೩) ಎಂಬಿವರನ್ನು ಬಂಧಿಸಲಾಗಿದೆ. ನಿನ್ನೆ …

ವಿದ್ಯಾರ್ಥಿಗಳ ಮುಂದೆ ನಗ್ನತೆ ಪ್ರದರ್ಶನ: ಆರೋಪಿಗಾಗಿ ಶೋಧ

ಮಂಜೇಶ್ವರ: ಶಾಲಾ ವಿದ್ಯಾರ್ಥಿಗಳ ಮುಂದೆ ಯುವಕನೋರ್ವ ನಗ್ನತೆ ಪ್ರದರ್ಶಿಸಿದ ಬಗ್ಗೆ ದೂರಲಾಗಿದೆ. ಮಂಜೇಶ್ವರ ಠಾಣೆ ವ್ಯಾಪ್ತಿಯ ಶಾಲೆಯೊಂದರ ಸಮೀಪಕ್ಕೆ ನಿನ್ನೆ ಸಂಜೆ ೩.೩೦ರ ವೇಳೆ ಸ್ಕೂಟರ್‌ನಲ್ಲಿ ತಲುಪಿದ ಯುವಕ ಈ ಕೃತ್ಯವೆಸಗಿದ್ದಾನೆ.  ವಿದ್ಯಾರ್ಥಿಗಳು ನೀಡಿದ ಮಾಹಿತಿ ಮೇರೆಗೆ ಶಾಲೆಯ ಪ್ರಾಂಶುಪಾಲರು ಹಾಗೂ ಪಿಟಿಎ ಪದಾಧಿಕಾರಿಗಳು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶಾಲೆ ಸಮೀಪದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋ ಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಜ್ವರ ತಗಲಿ ಚಿಕಿತ್ಸೆಯಲ್ಲಿದ್ದ ಬಾಲಕಿ ನಿಧನ

ಮಂಜೇಶ್ವರ: ಜಿಲ್ಲೆಯಲ್ಲಿ ಜ್ವರ ಬಾಧಿತರ ಸಂಖ್ಯೆ ಹೆಚ್ಚುತ್ತಿರುವಂತೆ ಅಲ್ಲಲ್ಲಿ ಜ್ವರಕ್ಕೆ ಜೀವ ಹಾನಿ ಸಂಭವಿ ಸುತ್ತಿರುವುದು ಆತಂಕಕ್ಕೆ ಕಾರಣವಾ ಗಿದೆ. ಮೀಂಜ ಪಟ್ಟತ್ತಮೊಗರು ಕುದುರು ನಿವಾಸಿ ಛಾಯಾಗ್ರಾಹಕ ದೀಕ್ಷಿತ್‌ರ ಪುತ್ರಿ ಆತ್ಮಿ (೪) ಇಂದು ಮುಂಜಾನೆ ನಿಧನಳಾಗಿದ್ದಾಳೆ. ಕೊಡ್ಡೆ ಅಂಗನವಾಡಿಗೆ ತೆರಳುತ್ತಿದ್ದ ಬಾಲಕಿಗೆ ಎರಡು ಮೂರು ದಿನದ ಹಿಂದೆ ಜ್ವರ ತಗಲಿತ್ತು. ಬಳಿಕ ಸ್ಥಳೀಯ ಆಸ್ಪತ್ರೆಯಿಂ ದ ಚಿಕಿತ್ಸೆ ಪಡೆದಿದ್ದರು. ನಿನ್ನೆ ಬೆಳಿಗ್ಗೆ ಜ್ವರ ಹೆಚ್ಚಾದ ಕಾರಣ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಬಾಲಕಿ …

ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ:ಪೂಕೋಯ ತಂಙಳ್, ಎಂ.ಸಿ. ಖಮರುದ್ದೀನ್‌ರ ಸೊತ್ತು ಮುಟ್ಟುಗೋಲು

ಕಾಸರಗೋಡು: ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣದಲ್ಲಿ ಆರೋಪಿಗಳಾದ ಮುಸ್ಲಿಂ ಲೀಗ್ ನೇತಾರರ ಸೊತ್ತುಗಳನ್ನು ಮುಟ್ಟುಗೋಲು ಹಾಕಿ ಸರಕಾರ ಆದೇಶ ಹೊರಡಿಸಿದೆ. ಕಂಪೆನಿಯ ಎಂ.ಡಿ ಹಾಗೂ ಲೀಗ್ ನೇತಾರನಾಗಿದ್ದ ಚಂದೇರದ ಪೂಕೋಯ ತಂಙಳ್, ಚೆಯರ್ ಮೆನ್ ಮಾಜಿ ಶಾಸಕ ಎಂ.ಸಿ ಖಮರುದ್ದೀನ್ ಎಂಬಿವರ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆ. ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಕಾನೂನು ಪ್ರಕಾರ  ಹೊಣೆಗಾರಿಕೆಯುಳ್ಳ ರಾಜ್ಯ ಮಟ್ಟದ ಅಧಿಕಾರಿಯಾದ ರಾಜ್ಯ ಫಿನಾನ್ಸ್ ಸೆಕ್ರೆಟರಿ ಸಂಜಯ್ ಎಂ. ಕೌಲ್ ಅವರು ಸೊತ್ತುಗಳನ್ನು ಮುಟ್ಟುಗೋಲು ಹಾಕಿ ಆದೇಶ …

ಚಂದ್ರನ ಅಂಗಳದಲ್ಲಿ ಇಂದು ಸಂಜೆ ತ್ರಿವಿಕ್ರಮನ ಪಾದಸ್ಪರ್ಶ

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರನ ಸಮೀಪ ತಲುಪಿದೆ. ೧೪೦ ಕೋಟಿ ಭಾರತೀಯರ ಶುಭ ಹಾರೈಕೆ ಹಾಗೂ ಪ್ರಾರ್ಥನೆ ಯೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಚಂದ್ರಯಾನ-೩ ನೌಕೆ ಇಂದು ಸಂಜೆ ೬:೦೪ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಜ್ಜಾಗಿದ್ದು, ಈ ಐತಿಹಾಸಿಕ ಸಂದರ್ಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಚಂದ್ರಯಾನ-೩ ಲ್ಯಾಂಡರ್ ಮೊಡ್ಯೂಲ್ (ಎಲ್‌ಎಂ) ಭಾರತೀಯ ವಿಜ್ಞಾನಿಗಳ ಜಾಣ್ಮೆ ನಿರ್ಣಯ, ಪ್ರಾಮಾಣಿಕತೆ ಮತ್ತು ಕಟೀಬದ್ದತೆಗೆ ಸಾಕ್ಷಿಯಾಗಿದೆ. ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಒಳಗೊಂಡಿರುವ ಎಲ್.ಎಂ ಚಂದ್ರನ ಭೂ …