ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸುವ ಆರೋಪಿ ಕೊನೆಗೂ ಪೊಲೀಸರ ಬಲೆಗೆ: ಎರಡು ವಾಹನ ವಶ

ಕಾಸರಗೋಡು: ದ್ವಿಚಕ್ರ ವಾಹನಗಳಲ್ಲಿ ಬಂದು ರಸ್ತೆಯಲ್ಲಿ ನಡೆದು ಹೋಗುತ್ತಿರುವ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಳ್ಳುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ಬೇಕಲ ಮಾಂಙಾಡ್‌ಗೆ ಸಮೀಪದ ಕೂವತ್ತೊಟ್ಟಿ  ನಿವಾಸಿ ಯಾದ ೩೧ರ ಹರೆಯದ ಯುವಕ ಪೊಲೀಸರ ಬಲೆಗೊಳಗಾದ ಆರೋ ಪಿಯಾಗಿದ್ದಾನೆಂದು ತಿಳಿದು ಬಂದಿದೆ. ಈತ ಉಪಯೋಗಿಸುತ್ತಿದ್ದ ಎರಡು  ದ್ವಿಚಕ್ರ ವಾಹನಗಳನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬೇಕಲ, ಮೇಲ್ಪರಂಬ, ವಿದ್ಯಾನಗರ, ಬೇಡಡ್ಕ, ಹೊಸದುರ್ಗ ಮೊದಲಾದೆಡೆಗಳಲ್ಲಿ ಇತ್ತೀಚೆಗಿನ ಕೆಲವು ತಿಂಗಳಿನಿಂದ ರಸ್ತೆಯಲ್ಲಿ ನಡೆದುಕೊಂಡು …

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಕಿರುಕುಳಕ್ಕೆತ್ನ: ಯುವಕ ಸೆರೆ

ಬದಿಯಡ್ಕ: ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿಯಾಗಿ ಮನೆಗೆ ಮರಳುತ್ತಿದ್ದ ೧೭ರ ಹರೆಯದ ಬಾಲಕಿಗೆ ಬಸ್‌ನಲ್ಲಿ ಕಿರುಕುಳ ನೀಡಲು ಯತ್ನಿಸಿದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಆರೋಪಿಯನ್ನು ಬದಿಯಡ್ಕ   ಪೊಲೀಸರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಪೆರಡಾಲ ಚುಳ್ಳಿಕ್ಕಾನ ನಿವಾಸಿ ಸುದರ್ಶನ (೩೪) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿ ದ್ದಾರೆ.  ಬಾಲಕಿ ನಿನ್ನೆ ಕಾಸರಗೋಡಿನ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿಯಾಗಿ ಮನೆಗೆ ಬಸ್‌ನಲ್ಲಿ ಮರಳಿದ್ದಾಳೆ. ಬಾಲಕಿ ಮಾತ್ರವಿದ್ದ ಸೀಟಿನಲ್ಲಿ ಸುದರ್ಶನ ಕುಳಿತಿದ್ದನೆನ್ನಲಾಗಿದೆ. ಪ್ರಯಾಣ ಮಧ್ಯೆ ಸುದರ್ಶನ ಬಾಲಕಿಯ  ದೇಹ ಸ್ಪರ್ಶಿಸಿದ್ದಾನೆನ್ನಲಾಗಿದೆ. …

ಪೊಸಡಿಗುಂಪೆಯಲ್ಲಿ ಎರಡು ದನದ ಕಳೇಬರ ಪತ್ತೆ: ಸ್ಥಳೀಯರಲ್ಲಿ ರೋಷ

ಪೈವಳಿಕೆ: ಬಾಯಾರು ಬಳಿಯ ಪೊಸಡಿಗುಂಪೆಯ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿ ಎರಡು ದನದ ಕಳೇಬರ ಪತ್ತೆಯಾಗಿದೆ. ನಿನ್ನೆ ಸಂಜೆ ಇದು ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳೀಯರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ತಲುಪಿ ತನಿಖೆಗೆ ಚಾಲನೆ ನೀಡಿದ್ದಾರೆ. ಈ ಪರಿಸರದಲ್ಲಿ ಈ ರೀತಿಯ ದನವನ್ನು ಯಾರು ನೋಡಿಲ್ಲವೆಂದೂ ದೂರದಿಂದ ತಂದು ಇಲ್ಲಿ ಉಪೇಕ್ಷಿಸಿರ ಬೇಕೆಂದೂ ಸ್ಥಳೀಯರು ಶಂಕಿಸಿದ್ದಾರೆ. ದನದ ದೇಹದಲ್ಲಿ ಯಾವುದೇ ಗಾಯಗಳಿಲ್ಲದಿರುವುದೂ ಶಂಕೆಗೆ ಬಲ ನೀಡಿದೆ. ಇಲ್ಲಿನ ಪರಿಸರದ ಜನರ ದನ ಕಾಣೆಯಾದುದಾಗಿ ತಿಳಿದು ಬಂದಿಲ್ಲ.   …

ಮನೆ ಬಳಿಯ ಶೆಡ್‌ನಿಂದ ೧೧,೭೩೩ ಪ್ಯಾಕೆಟ್ ಪಾನ್ ಮಸಾಲೆ ವಶ: ಓರ್ವ ಸೆರೆ

ಉಪ್ಪಳ: ಮನೆ ಬಳಿಯ ಶೆಡ್‌ನಲ್ಲಿ ದಾಸ್ತಾನಿರಿಸಿದ್ದ ೧೧,೭೩೩ ಪ್ಯಾಕೆಟ್ ಪಾನ್ ಮಸಾಲೆಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿ, ಓರ್ವನನ್ನು ಬಂಧಿಸಿದ್ದಾರೆ. ಉಪ್ಪಳ ಪತ್ವಾಡಿ ರಸ್ತೆಯ ಮುಹಮ್ಮದ್ ಕೆ (೪೯) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ಮನೆ ಹಿತ್ತಿಲಿನಲ್ಲಿರುವ ಶೆಡ್‌ನಲ್ಲಿ  ಕೇರಳದಲ್ಲಿ ನಿಷೇಧ ಹೇರಲಾದ ಪಾನ್ ಮಸಾಲೆಗಳನ್ನು ಹದಿನೈದು ಗೋಣಿ ಚೀಲಗಳಲ್ಲಿ  ತುಂಬಿಸಿಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಲಭಿಸಿದ ಎಸ್‌ಐಗಳಾದ ಅನ್ಸಾರ್, ನಿಖಿಲ್, ಸ್ಪೆಷಲ್ ಬ್ರಾಂಚ್‌ನ ಪೊಲೀಸ್ ಅಧಿಕಾರಿ ಪ್ರದೀಶ್ ಗೋಪಾಲ್ ಎಂಬಿವರು ನಿನ್ನೆ ಸಂಜೆ ಕಾರ್ಯಾಚರಣೆ …

ಕೋಟೆಕಣಿ ರಸ್ತೆಯಲ್ಲಿ ಪತ್ತೆಯಾದ ರಕ್ತ ಪ್ರಾಣಿಯದ್ದು

ಕಾಸರಗೋಡು: ನಗರದ ಕೋಟೆ ಕಣಿಯ ರಸ್ತೆಯಲ್ಲಿ ಕಳೆದ ಭಾನುವಾರ ಪತ್ತೆಯಾದ ರಕ್ತದ ಕಲೆಗಳು ಯಾವು ದೋ ಪ್ರಾಣಿಯ ದ್ದಾಗಿದೆಯೆಂದು ಸ್ಪಷ್ಟಗೊಂಡಿದೆ. ಈ ರಕ್ತದ ಸ್ಯಾಂಪಲ್‌ನ್ನು ಪೊಲೀಸರು   ಪರೀ ಕ್ಷೆಗಾಗಿ ಕಣ್ಣೂರಿನ ಲ್ಯಾಬ್‌ಗೆ ಕಳುಹಿಸಿಕೊ ಟ್ಟಿದ್ದರು. ಅದರ ವರದಿ ನಿನ್ನೆ ಕೈಸೇರಿದ್ದು, ಅದರಲ್ಲಿ ರಕ್ತದ ಕಲೆ ಯಾವುದೋ ಪ್ರಾಣಿಯದ್ದಾಗಿದೆಯೆಂ ದು ಸ್ಪಷ್ಟಗೊಂ ಡಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿ ಈ ರಕ್ತದ ಕಲೆಯಿಂದ ಎದ್ದಿದ್ದ ನಿಗೂಢತೆ ಕೊನೆಗೂ ದೂರವಾಗಿದೆ.

ಶಾಸಕ ಎ.ಸಿ. ಮೊಯ್ದೀನ್‌ರ ಮನೆಗೆ ಇ.ಡಿ ದಾಳಿ: ಕೊನೆಗೊಂಡುದು ಇಂದು ಮುಂಜಾನೆ

ತೃಶೂರು: ಕರುವನ್ನೂರು ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣದ ತನಿಖೆಯ ಅಂಗವಾಗಿ ಮಾಜಿ ಸಚಿವ, ಶಾಸಕ ಎ.ಸಿ. ಮೊಯ್ದೀನ್ ಮನೆಯಲ್ಲಿ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ.) ನಡೆಸಿದ ದಾಳಿ ಇಂದು ಮುಂಜಾನೆ ೫ ಗಂಟೆವರೆಗೆ ಮುಂದುವರಿಯಿತು. ನಿನ್ನೆ ಬೆಳಿಗ್ಗೆ ಆರಂಭಗೊಂಡ ದಾಳಿ ೨೨ ಗಂಟೆಗೂ ಹೆಚ್ಚು ಕಾಲ ನಡೆದಿದೆ. ನಿನ್ನೆ ಬೆಳಿಗ್ಗೆ ೭ ಗಂಟೆಗೆ ೧೨ ಮಂದಿ ಅಧಿಕಾರಿಗಳನ್ನೊಳಗೊಂಡ ಇ.ಡಿ. ತಂಡ ಎ.ಸಿ. ಮೊಯ್ದೀನ್‌ರ ಪನಙಾಟುಕರದಲ್ಲಿರುವ ಮನೆಗೆ ತಲುಪಿತ್ತು.

ಹಲವು ಪ್ರಕರಣಗಳ ಆರೋಪಿ ಕಾಪಾ ಪ್ರಕಾರ ಸೆರೆ

ಕಾಸರಗೋಡು: ಮಾದಕದ್ರವ್ಯ ಸಾಗಾಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಯುವಕನ ಮೇಲೆ ಸಮಾಜಘಾತಕ ತಡೆ ಕಾನೂನು (ಕಾಪಾ) ಹೇರಿ ಆತನ ಬಂಧನ ದಾಖಲಿಸಲಾಗಿದೆ. ಮೂಲತಃ ಮುಟ್ಟತ್ತೋಡಿ ಕಲ್ಲಕಟ್ಟೆ ಬೆಳ್ಳೂಲಡ್ಕ ಹೌಸಿನ ನಿವಾಸಿ ಹಾಗೂ ಈಗ ಬೋವಿಕ್ಕಾನಕ್ಕೆ ಸಮೀಪದ ಎಲ್‌ಬಿಎಸ್ ಕಾಲೇಜಿನ ಬಳಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಅಬ್ದುಲ್ ಮುನಾವರ್ ಅಲಿಯಾಸ್ ಮುನಾವರ್ ಅಲಿ (೨೫) ಬಂಧಿತನಾದ ಆರೋಪಿಯಾಗಿದ್ದಾನೆ. ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ಪ್ರಶಾಂತ್ ಕುಮಾರ್ ಅವರು ಈತನನ್ನು ಬಂಧಿಸಿದ್ದಾರೆ.ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ೬ ಮತ್ತು ಕಾಸರಗೋಡು ಪೊಲೀಸ್ …

ಪೂಕಟ್ಟೆಯಲ್ಲಿ ಕಂಡುಬಂದ ಪ್ರಾಣಿ ಕಾಡುಬೆಕ್ಕು: ಚಿರತೆಯೆಂದು ಭಯಗೊಂಡ ಜನತೆ

ಕುಂಬಳೆ: ಕೊಡ್ಯಮ್ಮೆ ಪೂಕಟ್ಟೆಯಲ್ಲಿ ನಿನ್ನೆ ಸಂಜೆ ಕಂಡುಬಂದಿರುವುದು ಕಾಡುಬೆಕ್ಕು ಎಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ನಿನ್ನೆ ಸಂಜೆ ಪೂಕಟ್ಟೆಯ ಕಾಡುಪ್ರದೇಶದಲ್ಲಿ ಚಿರತೆ ಕಂಡುಬಂದಿರುವುದಾಗಿ ಕೆಲವರು ವದಂತಿ ಹರಡಿದ್ದರು. ಅಲ್ಲದೆ ಪ್ರಾಣಿ ನಡೆದುಹೋಗುವ  ದೃಶವನ್ನು ಚಿತ್ರೀಕರಿಸಿದ್ದಾರೆ. ಚಿರತೆ ಕಂಡುಬಂದಿದೆಯೆಂದು ವದಂತಿ ಹರಡಿದುದರಿಂದಾಗಿ ಸ್ಥಳೀಯರು ಆತಂಕಗೊಂಡಿದ್ದರು. ಈ ಬಗ್ಗೆ ಅರಣ್ಯಾಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು. ಅಲ್ಲದೆ ನಾಗರಿಕರು ತೆಗೆದ ದೃಶ್ಯವನ್ನು ಅರಣ್ಯಾಧಿಕಾರಿಗಳಿಗೆ ನೀಡಲಾಗಿತ್ತು. ದೃಶ್ಯ ವೀಕ್ಷಿಸಿದ ಅಧಿಕಾರಿಗಳು ಅದು ಕಾಡುಬೆಕ್ಕು ಎಂದು ತಿಳಿಸಿದ್ದಾರೆ. ಇದರಿಂದ ಜನತೆಯ ಭಯ ದೂರವಾಯಿತು.

ಕಾನತ್ತೂರು ಬಳಿ ಚಿರತೆ ಪ್ರತ್ಯಕ್ಷ ವದಂತಿ

ಬೋವಿಕ್ಕಾನ:  ಕಾನತ್ತೂರು ಬಳಿಯ ಪಯೋಲ ಎಂಬಲ್ಲಿ ಚಿರತೆಯನ್ನು ಹೋಲುವ ಪ್ರಾಣಿಯೊಂದು ಕಂಡು ಬಂದಿರುವುದಾಗಿ ವರದಿಯಾಗಿದೆ.  ಚಿರತೆ ನಿನ್ನೆ ರಸ್ತೆ ದಾಟಿ ಕಾಡಿನತ್ತ ತೆರಳಿರುವುದಾಗಿ ಹೇಳಲಾಗುತ್ತಿದೆ. ವಾಹನಗಳಲ್ಲಿ ತೆರಳುತ್ತಿರುವವರು ಚಿರತೆಯನ್ನು ಕಂಡಿದ್ದಾರೆಂದು ಹೇಳಲಾಗುತ್ತಿದೆ.

ಕೊಲೆಗೈಯ್ಯಲ್ಪಟ್ಟ ಯೂತ್ ಕಾಂಗ್ರೆಸ್‌ನ ಶರತ್‌ಲಾಲ್ ಮನೆಗೆ ಕಲ್ಲೆಸೆದ ಪ್ರಕರಣ: ಕೊಲೆ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಸಿಬಿಐ

ಕಾಸರಗೋಡು: ಪೆರಿಯದ ಕಲ್ಯೋಟ್‌ನಲ್ಲಿ  ರಾಜಕೀಯ ದ್ವೇಷದಿಂದ  ಕೊಲೆಗೈಯ್ಯಲ್ಪಟ್ಟ ಯೂತ್ ಕಾಂಗ್ರೆಸ್ ಕಾರ್ಯ ಕತರಾದ ಕಲ್ಯೋಟ್‌ನ ಶರತ್‌ಲಾಲ್ ಮತ್ತು ಕೃಪೇಶ್‌ನ ಪೈಕಿ ಕೊಲೆಗೆ ಹಲವು ತಿಂಗಳ ಹಿಂದೆ ಶರತ್‌ಲಾಲ್‌ನ ಮನೆಗೆ ಕಲ್ಲು ತೂರಾಟ ನಡೆಸಿದ ಆರೋಪಿಯನ್ನು ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಿಬಿಐ ನಿನ್ನೆ ಹಾಜರುಪಡಿಸಿದೆ. ಕಲ್ಲು ತೂರಾಟ ಪ್ರಕರಣದ ೧೫ನೇ  ಆರೋಪಿಯಾಗಿರುವ ವಿಷ್ಣುಪುರದ ಎ. ಸುರೇಂದ್ರನ್  ನ್ಯಾಯಾಲಯದಲ್ಲಿ ಹಾಜರುಪಡಿಸಲಾದ ವ್ಯಕ್ತಿ. ಈತ ಶರತ್‌ಲಾಲ್ ಮತ್ತು ಕೃಪೇಶ್‌ರನ್ನು ಕೊಲೆಗೈಯ್ಯಲ್ಪಟ್ಟ ಪ್ರಕರಣದಲ್ಲ್ಲೂ ಆರೋಪಿಯಾಗಿದ್ದು ಅದಕ್ಕೆ ಸಂಬಂಧಿಸಿ ಆತನನ್ನುಸಿಬಿಐ ಈ …