ವಿದ್ಯುತ್ ನಿಯಂತ್ರಣ: ತೀರ್ಮಾನ ಇಂದು

ತಿರುವನಂತಪುರ: ಮುಂಗಾರು ಮಳೆ  ಕೈಕೊಟ್ಟಿರುವ ಪರಿಣಾಮ ರಾಜ್ಯದಲ್ಲಿ ತೀವ್ರ ವಿದ್ಯುತ್ ಸಂದಿಗ್ಧಾವಸ್ಥೆ ಸೃಷ್ಟಿ ಯಾಗಿರುವ ಹಿನ್ನೆಲೆಯಲ್ಲಿ  ವಿದ್ಯುತ್ ನಿಯಂತ್ರಣ ಹೇರಬೇಕೇ ಎಂಬುವುದರ ಬಗ್ಗೆ ಇಂದು ತೀರ್ಮಾನ ಉಂಟಾಗ ಲಿದೆ. ಈ  ತಿಂಗಳು ಸುರಿಯುವ ಮಳೆ ಪ್ರಮಾಣಕ್ಕೆ ಹೊಂದಿಕೊಂಡು ವಿದ್ಯುತ್ ನಿಯಂತ್ರಣ ಏರ್ಪಡಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡರೆ ಸಾಕೆಂಬ ನಿಲುವನ್ನು ವಿದ್ಯುತ್  ಖಾತೆ ಸಚಿವರು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಹೊರಗಿನಿಂದ ಹೆಚ್ಚು ದರಕ್ಕೆ ವಿದ್ಯುತ್  ಖರೀದಿಸುತ್ತಿರುವುದರಿಂದ ಮಂಡಳಿಗೆ ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಸರ್‌ಚಾರ್ಜ್ ಮೂಲಕ ವಿದ್ಯುತ್   ಬಳಕೆದಾರರಿಂದ …

ಐಎಸ್‌ಆರ್‌ಒ ಪರೀಕ್ಷೆಯಲ್ಲಿ ವಂಚನೆ ಪತ್ತೆ

ತಿರುವನಂತಪುರ: ತಿರುವನಂತಪುರ ದಲ್ಲಿ ನಿನ್ನೆ ನಡೆದ  ಐಎಸ್‌ಆರ್‌ಒದ ವಿಎಸ್‌ಎಸ್‌ಸಿ ಟೆಕ್ನೀಶಿಯನ್ ಹುದ್ದೆಗಿರುವ ಪರೀಕ್ಷೆಯಲ್ಲಿ  ಭಾರೀ ವಂಚನೆ, ವ್ಯಕ್ತಿಪಲ್ಲಟ ನಡೆದಿರುವುದಾಗಿ ಪತ್ತೆಹಚ್ಚಲಾಗಿದೆ.  ಈ ಸಂಬಂಧ  ಹರ್ಯಾಣ ನಿವಾಸಿಗಳಾದ ಇಬ್ಬರನ್ನು  ಸೆರೆಹಿಡಿಯಲಾಗಿದೆ.  ಇವರು ಬ್ಲೂ ಟೂತ್ ಮೂಲಕ ಶಬ್ದ ಆಲಿಸಿ ಇವರು ಪರೀಕ್ಷೆ ಬರೆದಿದ್ದಾರೆಂದು ಹೇಳಲಾಗುತ್ತಿದೆ.  ಅನಂತರ ನಡೆಸಿದ ತನಿಖೆಯಲ್ಲಿ ಇನ್ನಷ್ಟು ವಂಚನೆ ಬೆಳಕಿಗೆ ಬಂದಿದೆ. ವ್ಯಕ್ತಿ ಪಲ್ಲಟ ನಡೆಸಿ ಉದ್ಯೋಗಾರ್ಥಿಗಾಗಿ ಬೇರೊಬ್ಬ ಪರೀಕ್ಷೆ ಬರೆದಿರುವುದಾಗಿಯೂ ಪತ್ತೆಹಚ್ಚಲಾಗಿದೆ. ಸೆರೆಗೀಡಾದವರ ವಿಳಾಸ ಪತ್ತೆಹಚ್ಚಲು ಹರ್ಯಾಣ ಪೊಲೀಸರ ಸಹಾಯದಿಂದ ಕೇರಳ ಪೊಲೀಸರು ತನಿಖೆ …

ವಾಹನಗಳ ದಾಖಲು ಪತ್ರಗಳಲ್ಲಿ ಆಧಾರ್ ಕಾರ್ಡ್ ಆಧಾರಿತ ಮೊಬೈಲ್ ನಂಬ್ರ ನೋಂದಾವಣೆ ಕಡ್ಡಾಯಗೊಳಿಸಲು ತೀರ್ಮಾನ

ಕಾಸರಗೋಡು: ವಾಹನಗಳ ಮಾಲಕರ ಅರಿವಿಲ್ಲದೆ ಅವರ ವಾಹನ ಗಳನ್ನು ಇತರರಿಗೆ ಹಸ್ತಾಂತರಿಸುವುದನ್ನು ತಡೆಗಟ್ಟಲು ವಾಹನಗಳ ದಾಖಲು ಪತ್ರಗಳಲ್ಲಿ ಅದರ ಮಾಲಕನ  ಆಧಾರ್ ಕಾರ್ಡ್ ಆಧಾರಿತ ಮೊಬೈಲ್ ಫೋನ್ ನಂಬ್ರಗಳನ್ನು ಮಾತ್ರವೇ ಇನ್ನು ಕಡ್ಡಾಯ ವಾಗಿ ಒಳಪಡಿಸಲು ಮೋಟಾರು ವಾಹನ ಇಲಾಖೆ ತೀರ್ಮಾನಿಸಿದೆ. ಈಗ ವಾಹನಗಳ ನೋಂದಾವಣೆ (ರಿಜಿಸ್ಟ್ರೇಶನ್ ನಡೆಸುವ ವೇಳೆ ಅದ್ಯಾವುದೇ ಮೊಬೈಲ್ ಫೋನ್ ನಂಬ್ರಗಳನ್ನು ಬೇಕಾದರೂ ಅದರಲ್ಲಿ ದಾಖಲಿಸಬಹುದಾಗಿದೆ. ಆ ನಂಬ್ರ ಮಾತ್ರವೇ ಆರ್‌ಸಿ ಪುಸ್ತಕದಲ್ಲಿ ದಾಖ ಲಾಗುತ್ತದೆ. ಇನ್ನು ಇಂತಹ ಸಂಪ್ರದಾ ಯಕ್ಕೆ ವಿದಾಯ …

ರಸ್ತೆಯಲ್ಲಿ ರಕ್ತದ ಕಲೆ ಪತ್ತೆ: ನಿಗೂಢತೆ; ಪೊಲೀಸರಿಂದ ಸಮಗ್ರ ತನಿಖೆ

ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣಕ್ಕೆ ಸಮೀಪದ ವಲಸೆ ಕಾರ್ಮಿಕರು ವಾಸಿಸುತ್ತಿರುವ ಕ್ವಾರ್ಟರ್ಸ್‌ನ ಎದುರುಗಡೆ ಕೋಟೆಕಣಿ ರಸ್ತೆ ಬಳಿ ನಿನ್ನೆ ರಕ್ತದ ಕಲೆಗಳು ಪತ್ತೆಯಾಗಿ ಅದು ಭಾರೀ ಆತಂಕ ಹಾಗೂ ನಿಗೂಢತೆಗಳಿಗೆ ದಾರಿ ಮಾಡಿಕೊಟ್ಟಿದೆ. ವಿಷಯ ತಿಳಿದ ಕಾಸರಗೋಡು ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದರು. ಮಾತ್ರವಲ್ಲ ಶ್ವಾನದಳದವರ ಸಹಾಯದಿಂದಲೂ ತನಿಖೆ ನಡಸಲಾಯಿತು. ಅಲ್ಲಿನ ರಕ್ತದ ಸ್ಯಾಂಪಲ್‌ಗಳನ್ನು ಪೊಲೀಸರು ಅಲ್ಲಿಂದ ಸಂಗ್ರಹಿಸಿದ್ದು, ಅದನ್ನು ರಾಸಾಯನಿಕ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿಕೊಡಲಾ ಗಿದೆ. ಅದರ ಫಲಿತಾಂಶ ಲಭಿಸಿದ ಬಳಿಕ …

ವಾಹನ ಅಪಘಾತ: ಇಬ್ಬರಿಗೆ ಗಾಯ

ಕುಂಬಳೆ: ಪಚ್ಚಂಬಳ ಹಾಗೂ ಕುಡಾಲ್‌ಮೇರ್ಕಳ ಕೊಕ್ಕೆಚ್ಚಾಲ್‌ನಲ್ಲಿ ನಿನ್ನೆ ಸಂಭವಿಸಿದ ಎರಡು ಅಪಘಾv ಗಳಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಪಚ್ಚಂಬಳದಲ್ಲಿ ಸ್ಕೂಟರ್ ಹಾಗೂ ಬೈಕ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಬಂದ್ಯೋಡು ಅಡ್ಕದ ಮೂಸ ಇಬ್ರಾಹಿಂ (೬೩) ಗಾಯಗೊಂಡಿದ್ದಾರೆ.  ಇವರನ್ನು  ಬಂದ್ಯೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕುಡಾಲ್‌ಮೇರ್ಕಳ ಕೊಕ್ಕೆ ಚ್ಚಾಲ್‌ನಲ್ಲಿ ಕಾರು ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಪೆರ್ಮುದೆಯ ಪ್ರಸನ್ನ ಡಿ ಸೋಜ (೩೫) ಗಾಯಗೊಂಡಿದ್ದಾರೆ. ಇವರನ್ನು ಬಂದ್ಯೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸಮುದ್ರಕ್ಕೆ ಬಿದ್ದು ಇಬ್ಬರು ಯುವಕರು ಮೃತ್ಯು

ಕಾಸರಗೋಡು:   ಮೀನು ಗಾರಿಕೆಯಲ್ಲಿ ನಿರತನಾಗಿದ್ದ ಯುವಕಮೋರ್ವ ಸಮುದ್ರಕ್ಕೆ ಬಿದ್ದಿದ್ದು, ಆತನನ್ನು ರಕ್ಷಿಸಲೆತ್ನಿಸಿದ ರಕ್ಷಣಾ ಕಾರ್ಯಕರ್ತನೂ ಸಮುದ್ರದ ಅಲೆಯಲ್ಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ  ನಡೆದಿದೆ.  ನೀಲೇಶ್ವರ ಅಳಿತ್ತಲ ತೆಕ್ಕೇಕಡಪ್ಪುರದಲ್ಲಿ ಈ ದುರ್ಘಟನೆ ಸಂಭವಿಸಿದೆ. ನೀಲೇಶ್ವರ ತೈಕಡಪ್ಪುರದ ಬೋಟ್ ಜೆಟ್ಟಿ ಪರಿಸರ ನಿವಾಸಿಯಾದ   ಪಿ.ವಿ. ರಾಜೇಶ್ (೩೬) ಮತ್ತು ಅವರನ್ನು ರಕ್ಷಿಸಲು ಸಮುದ್ರಕ್ಕೆ ಜಿಗಿದ ಮೀನುಗಾರಿಕೆ ಇಲಾಖೆಯ ಬೋಟ್‌ನ ರೆಸ್ಕ್ಯೂ ಗಾರ್ಡ್ ಎಂ. ಸನೀಶ್ (೩೪)  ಅವಘಡದಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ನಿನ್ನೆ ಸಂಜೆ ಸುಮಾರು ೫ ಗಂಟೆ ವೇಳೆ …

ನಕಲಿ ಚಿನ್ನಾಭರಣ ತಯಾರಿಸಿ ಮಾರಾಟ ಮಾಡುವ ತಂಡ ಸಕ್ರಿಯ: ಮೂವರ ಸೆರೆ

ಕಣ್ಣೂರು: ತಾಮ್ರ ಹಾಗೂ ಸೀಸದ ವಸ್ತುಗಳಿಗೆ ಚಿನ್ನದ ಲೇಪನ ಮಾಡಿ ಚಿನ್ನಾಭರಣಗಳೆಂದು ನಂಬಿಸಿ ಮಾರಾಟಗೈದು ಹಣ ಲಪಟಾಯಿಸುವ ತಂಡವೊಂದು ಕಣ್ಣೂರಿನಲ್ಲಿ ಸೆರೆಗೀಡಾಗಿದೆ. ತಂಡದ ಮೂರು ಮಂದಿಯನ್ನು ಇದೀಗ ಸೆರೆ ಹಿಡಿಯಲಾಗಿದ್ದು, ಈ ದಂಧೆಯಲ್ಲಿ ಇನ್ನಷ್ಟು ಮಂದಿ ಒಳಗೊಂಡಿದ್ದಾರೆಯೇ ಎಂದು ತನಿಖೆ ನಡೆಯುತ್ತಿದೆ. ತಲಶ್ಶೇರಿ ಇಲ್ಲಿಕುನ್ನ್ ರಫಿಯಾಯ್ ಹೌಸ್‌ನ ಎಂ. ಸಿರಾಜುದ್ದೀನ್ (೪೧) ಅಳಿಕ್ಕೋಡ್ ಕಪ್ಪಕಡವು ಎಂ.ಎಂ.. ಹೌಸ್‌ನ ಎಂ. ಸುಜೈಲ್ (೪೦), ಇರಿಕ್ಕೂರ್ ಪೆರುವಳತ್ತ್ ಪರಂಬ್ ಯತೀಂಕಾನ ಸಮೀಪದ ಆಸ್ಯಾಸ್ ಹೌಸ್‌ನ ಶಫೀಕ್ (೩೩) ಎಂಬಿವರು ಬಂಧಿತ …

ಪತಿಯೊಂದಿಗೆ ಸಿಟ್ಟುಗೊಂಡು ಮನೆ ಬಿಟ್ಟ ಯುವತಿ ರೈಲ್ವೇ ನಿಲ್ದಾಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ್ನ

ಕಾಸರಗೋಡು: ಪತಿಯೊಂದಿಗೆ ಸಿಟ್ಟುಗೊಂಡು ಮನೆಯಿಂದ ಹೊರಟು ಹೋದ ಯುವತಿ ರೈಲು ನಿಲ್ದಾಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ರೈಲ್ವೇ ಪೊಲೀಸ್‌ನ ಸಮಯೋಚಿತ ಕಾರ್ಯಾಚರಣೆ ಫಲವಾಗಿ ಯುವತಿಯನ್ನು ಜೀವಾಪಾಯದಿಂದ ರಕ್ಷಿಸಲಾಗಿದೆ. ಕಣ್ಣೂರು ರೈಲ್ವೇ ನಿಲ್ದಾಣದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಬೇಕಲ ಠಾಣೆ ವ್ಯಾಪ್ತಿಯ ಪ್ರದೇಶವೊಂದರ ನಿವಾಸಿಯಾದ ೩೦ರ ಹರೆಯದ ಯುವತಿ ನಿನ್ನೆ ಬೆಳಿಗ್ಗೆ ಪತಿಯೊಂದಿಗೆ ಸಿಟ್ಟುಗೊಂಡು ಮನೆಯಿಂದ ಹೊರ ಟಿದ್ದಾಳೆ. ಕಾಸರಗೋಡು ನಗರಕ್ಕೆ ಬಂದ ಯುವತಿ ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಣ್ಣೂರಿಗೆ ಪ್ರಯಾಣಿಸಿದ್ದಳು. ಅಲ್ಲಿನ ರೈಲ್ವೇ …

ಬಾಲಕೃಷ್ಣ ಮಾಸ್ತರ್ ಅಣಂಗೂರು ನಿಧನ

ಕಾಸರಗೋಡು: ಅಣಂಗೂರು ನಿವಾಸಿ, ನಿವೃತ್ತ ಮುಖ್ಯೋ ಪಾಧ್ಯಾಯ ಬಾಲಕೃಷ್ಣ ಮಾಸ್ತರ್ (೮೭) ನಿಧನಹೊಂದಿದರು. ಧಾರ್ಮಿಕ, ಸಾಮಾಜಿಕ ಮುಂದಾಳು ವಾಗಿದ್ದ ಇವರು ಸಮಾಜ ಚಿಂತ ಕನೂ ಆಗಿದ್ದರು.  ವಯೋಸಹಜ ಅಸೌಖ್ಯ ಬಾಧಿತರಾಗಿದ್ದ ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು. ಮೊನ್ನೆ ರಾತ್ರಿ ಅಲ್ಲಿ ನಿಧನ ಸಂಭವಿಸಿದೆ. ಮೃತರು ಪತ್ನಿ ರಮಾಭಾ, ಮಕ್ಕಳಾದ ಸತೀಶ್ಚಂದ್ರ (ಉದ್ಯಮಿ ಬೆಂಗಳೂರು), ಪ್ರಕಾಶ್ಚಂದ್ರ, ನವೀನ್‌ಚಂದ್ರ, ರಾಜೇಶ್ಚಂದ್ರ, ಸಂಧ್ಯಾರಾಣಿ, ವಿದ್ಯಾವಾಣಿ, ಅಳಿಯ-ಸೊಸೆಯಂದಿರಾದ ವಾಮನ ರಾವ್ ಬೇಕಲ್, ಗಣೇಶ್ ಕುಮಾರ್, ಪದ್ಮಾವತಿ (ಅಧ್ಯಾಪಿಕೆ), ಶೈಲ, ಉಷಾಕಿರಣ, ದಯಾವತಿ, ಸಹೋದರರಾದ …

ನಿವೃತ್ತ ಮುಖ್ಯೋಪಾಧ್ಯಾಯಿನಿ ನಿಧನ

ಕಾಸರಗೋಡು: ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಅಧ್ಯಾಪಿಕೆ ಯಾಗಿ, ಮುಖ್ಯೋಪಾಧ್ಯಾಯಿ ನಿಯಾಗಿ ದುಡಿದ, ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದ ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಶೀಲ (೭೦) ನಿಧನ ಹೊಂದಿದರು. ಎಡನೀರು, ನೆಟ್ಟಣಿಗೆ, ಪೆರಡಾಲ ಶಾಲೆಗಳಲ್ಲಿ ಅಧ್ಯಾಪಿಕೆಯಾಗಿ, ಆರಿಕ್ಕಾಡಿ, ಅಣಂಗೂರು ಶಾಲೆ ಗಳಲ್ಲಿ ಮುಖ್ಯೋಪಾಧ್ಯಾಯಿನಿ ಯಾಗಿದ್ದರು. ಮೃತರು ಪತಿ ಅಪ್ಪಯ್ಯ ರೈ, ಮಕ್ಕಳಾದ ರಾಜೇಶ್ವರಿ ಚೇತನ್, ಹರಿಪ್ರಸಾದ್ ರೈ, ವಸುಂಧರಾ ಹರೀಶ್, ಅಳಿಯಂದಿರು, ಸೊಸೆ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.