ಕಾಞಂಗಾಡ್‌ನ ದ್ವೇಷ ಭಾಷಣ: ಯಾವುದೇ ವಿಭಾಗವಾದರೂ ಕ್ರಮ ಕೈಗೊಳ್ಳಬೇಕು- ಸುಪ್ರೀಂಕೋರ್ಟ್

ದೆಹಲಿ: ಕಾಞಂಗಾಡ್‌ನಲ್ಲಿ ಮುಸ್ಲಿಂ ಯೂತ್ ಲೀಗ್ ರ‍್ಯಾಲಿಯಲ್ಲಿ ಒಂದು ಧರ್ಮದ ವಿರುದ್ಧ ದ್ವೇಷ ಭಾಷಣ ಮೊಳಗಿಸಿದ ಘಟನೆಯಲ್ಲಿ ಸುಪ್ರೀಂಕೋರ್ಟ್ ಶಕ್ತಿಯುತ ಪರಾಮರ್ಶೆ ನಡೆಸಿದೆ. ದ್ವೇಷ ಭಾಷಣ ಯಾರು ನಡೆಸಿದರೂ ಒಂದೇ ರೀತಿಯಲ್ಲಿ ಕಾನೂನು ಪ್ರಕಾರವಾಗಿ ಕ್ರಮ ಸ್ವೀಕರಿಸಬೇಕೆಂದು ನ್ಯಾಯಾಧೀಶರಾದ ಸಂಜೀವ್ ಖನ್ನ, ಎಸ್.ವಿ.ಎನ್. ಭಟ್ಟಿ ಎಂಬಿವರು ಒಳಗೊಂಡ ವಿಭಾಗೀ ಯ ಪೀಠ ಸ್ಪಷ್ಟಪಡಿಸಿದೆ. ದ್ವೇಷ ಭಾಷಣಗಳಲ್ಲಿ ಧರ್ಮ ನೋಡದೆ ದೂರು ಲಭಿಸಲು ಕಾದು ನಿಲ್ಲದೆ ಕೂಡಲೇ ಸ್ವತಃ ಎಫ್‌ಐಆರ್ ದಾಖಲಿಸಬೇಕೆಂದು ಸುಪ್ರೀಂಕೋ ರ್ಟ್ ಎ.೨೮ರಂದು ರಾಜ್ಯಗಳಿಗೆ, ಕೇಂದ್ರಾಡಳಿತ …

ಯುವಮೋರ್ಛಾ ನೇತಾರ, ತಂದೆಯ ನಿಗೂಢ ಸಾವು: ಕ್ರಿಯಾ ಸಮಿತಿ ಪದಾಧಿಕಾರಿಗಳಿಂದ ಹೇಳಿಕೆ ದಾಖಲಿಸಿದ

ಪೊಲೀಸ್: ಆರೋಪಕ್ಕೆಡೆಯಾದವರು ನಾಪತ್ತೆ ಕುಂಬಳೆ: ಯುವಮೋರ್ಛಾ ನೇತಾರ ಹಾಗೂ ತಂದೆಯ ನಿಗೂಢ ಸಾವಿಗೆ ಸಂಬಂಧಿಸಿ ಲಭಿಸಿದ ದೂರಿನ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದರಂಗವಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಚೆಯರ್‌ಮೆನ್ ಪ್ರದೀಪ್ ಆರಿಕ್ಕಾಡಿ, ಕನ್ವೀನರ್ ಮೋಹನ್ ಬಂಬ್ರಾಣ ಎಂಬಿವರಿಂದ ಕುಂಬಳ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ. ಬಂಬ್ರಾಣ ಕಲ್ಕುಳದ  ಮೂಸ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಯುವಮೋರ್ಛಾ ಕುಂಬಳೆ ಮಂಡಲ ಕಮಿಟಿ ಉಪಾಧ್ಯಕ್ಷರಾಗಿದ್ದ ರಾಜೇಶ್ (೩೦) ಕಳೆದ ತಿಂಗಳ ೧೦ರಂದು ನಾಪತ್ತೆಯಾಗಿ ಬಳಿಕ ಉಳ್ಳಾಲ ಬಂಗರ ಸಮುದ್ರದಲ್ಲಿ …

ಕಾರ್ಗಿಲ್‌ನಲ್ಲಿ ಭೀಕರ ಸ್ಫೋಟ:೩ ಸಾವು, ೧೧ ಮಂದಿ ಗಂಭೀರ

ಲೇಹ್: ಜಮ್ಮು-ಕಾಶ್ಮೀರದ ಕಾರ್ಗಿಲ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಇದರಲ್ಲಿ ಮೂವರು ಸಾವ ನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಪೈಕಿ ಹನ್ನೊಂದು ಮಂದಿ ಗಂಭೀರ ಗಾಯ ಗೊಂಡಿದ್ದಾರೆ. ಗಾಯಾಳುಗಳನ್ನು ಕಾರ್ಗಿಲ್ ಜಿಲ್ಲೆಯ ದ್ರಾಸ್‌ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಗಿಲ್ ಜಿಲ್ಲೆಯ ದ್ರಾಸ್‌ನಲ್ಲಿ ರುವ ಕಬಡಿನಲ್ಲಾ ಪ್ರದೇಶದಲ್ಲಿರುವ ಗುಜರಿ ಅಂಗಡಿಯೊಂದರಲ್ಲಿ ಶಂಕಾಸ್ಪದ ರೀತಿಯಲ್ಲಿ ನಿನ್ನೆ ರಾತ್ರಿ ಈ ಸ್ಫೋಟ ನಡೆದಿದೆ. ಗುಜರಿ ಅಂಗಡಿಯಲ್ಲಿ ಅನು ಮಾನಾಸ್ಪದ ವಸ್ತು ಸ್ಫೋಟಗೊಂಡಿದ್ದು, ಈ ಬಗ್ಗೆ  ಸಮಗ್ರ ತನಿಖೆ ನಡೆಸಲಾಗುತ್ತಿದೆಯೆಂದು ಕಾರ್ಗಿಲ್ ಪೊಲೀಸ್ ಉಪ …

ಚಿಲ್ಡ್ರನ್ಸ್ ಹೋಂನಿಂದ ನಾಪತ್ತೆಯಾದ ಬಾಲಕನಿಗೆ ಶೋಧ ತೀವ್ರ

ದೇಳಿ: ಪರವನಡ್ಕ ಸರಕಾರಿ ಚಿಲ್ಡ್ರನ್ಸ್ ಹೋಂನಿಂದ ನಾಪತ್ತೆಯಾ ಗಿರುವ ಬಾಲಕನಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ನ್ಯೂ ದೆಹಲಿ ಶಾಸ್ತ್ರೀ ಪಾರ್ಕ್ ಬುಲಾನ್ ಮಸೀದಿ ಸಮೀಪ ನಿವಾಸಿ ಅರ್ಮಾನ್ ಅನ್ಸಾರಿ (೧೪) ಕಳೆದ ೧೦ರಿಂದ ಪರವನಡ್ಕ ಚಿಲ್ಡ್ರನ್ಸ್ ಹೋಂನಿಂದ ನಾಪತ್ತೆಯಾಗಿದ್ದನು.  ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ತೀವ್ರಗೊಳಿಸಿ ದ್ದಾರೆ.

ನಾಪತ್ತೆಯಾದ ಮಹಿಳೆಯ ಪತ್ತೆಗೆ ತನಿಖೆ ತೀವ್ರ

ಕಾಸರಗೋಡು: ಕಸಬ ಬೆದ್ರೆ ಯಲ್ಲಿ ವಾಸವಾಗಿದ್ದ ಆಯಿಷತ್ ಶಾನಿಬ (೨೬)ರ ಪತ್ತೆಗಾಗಿ ಕಾಸರಗೋಡು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕಳೆದ ಜುಲೈ ೭ರಂದು ಬೆಳಿಗ್ಗೆ ೮.೩೦ಕ್ಕೆ ಶೋರೂಂ ನಲ್ಲಿ ತರಬೇತಿಗೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರು. ಆ ಬಳಿಕ ನಾಪತ್ತೆಯಾಗಿದ್ದು, ಹುಡುಕಾಡಿದರೂ ಮಾಹಿತಿ ಲಭಿಸದ ಕಾರಣ ದೂರ ನೀಡಿದ್ದರು. ಇವರ ಬಗ್ಗೆ ವಿವರ ಲಭಿಸಿದರೆ ಕಾಸರಗೋಡು ಠಾಣೆಯ ಇನ್‌ಸ್ಪೆಕ್ಟರ್‌ರ ೯೪೯೭೯೮೭೨೧೭ರಲ್ಲಿ ತಿಳಿಸಲು ಪೊಲೀಸರು ಸೂಚಿಸಿದ್ದಾರೆ.

ಕ್ವಾರ್ಟರ್ಸ್‌ನ ಮೇಲಿನಿಂದ ಬಿದ್ದು ವಲಸೆ ಕಾರ್ಮಿಕ ಮೃತಪಟ್ಟ ಸ್ಥಿತಿಯಲಿ ಪತ್ತೆ

ಸೀತಾಂಗೋಳಿ: ಕ್ವಾರ್ಟರ್ಸ್‌ನ ಮೇಲಿನಿಂದ ಬಿದ್ದು ವಲಸೆ ಕಾರ್ಮಿಕನೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸೀತಾಂಗೋಳಿಯಲ್ಲಿ ಸಂಭವಿಸಿದೆ. ರಾಜಸ್ತಾನ ಬೋಡಗಾನ್ ನಿವಾಸಿ ಕೇಮ್ರಾಜ್ ಗುಜ್ಜರ್ (೪೩) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಕಳೆದ ೨೦ ವರ್ಷಗಳಿಂದ ಸೀತಾಂಗೋಳಿಯಲ್ಲಿ ಗ್ರಾನೈಟ್ ಮಾರ್ಬಲ್ ಕೆಲಸ ನಿರ್ವಹಿಸುತ್ತಿದ್ದ ಇವರು ಸೀತಾಂಗೋಳಿ ಪೇಟೆಯಲ್ಲಿ ರುವ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ನಿನ್ನೆ ರಾತ್ರಿ ಇವರು ಕ್ವಾರ್ಟರ್ಸ್‌ನ ಮೇಲಿನ ಮಹಡಿಯಲ್ಲಿ ನಿದ್ರಿಸುತ್ತಿದ್ದರು. ಇಂದು ಮುಂಜಾನೆ ಜತೆಗಿದ್ದವರು ಎದ್ದು ನೋಡಿದಾಗ ಕೇಮ್ರಾಜ್ ಗುಜ್ಜರ್  ಕ್ವಾರ್ಟರ್ಸ್‌ನ ಕೆಳಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ರಾತ್ರಿ …

ರೈಲು ಬುಡಮೇಲು ಕೃತ್ಯಕ್ಕೆ ಯತ್ನ: ಫೋರೆನ್ಸಿಕ್ ಪುರಾವೆ ಲಭ್ಯ

ಕಾಸರಗೋಡು: ಕಳನಾಡು ರೈಲು ಸುರಂಗದ ಬಳಿ ರೈಲು ಹಳಿ ಮೇಲೆ ಕ್ಲೋಸೆಟ್‌ನ ತುಂಡುಗಳು ಮತ್ತು ಕಲ್ಲುಗಳನ್ನು ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಫೋರೆನ್ಸಿಕ್ ತಜ್ಞರು ನಡೆಸಿದ  ಸೂಕ್ಷ್ಮ ಪರಿಶೀಲ ನೆಯಲ್ಲಿ ಹಲವು ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಇನ್ನು ಘಟನೆ ನಡೆದ ಸ್ಥಳದಲ್ಲಿ ಪತ್ತೆಯಾದ ಕ್ಲೋಸೆಟ್‌ಗಳ ತುಂಡಿನ ಬೆರಳಚ್ಚುಗಳನ್ನು ಗುರುತಿಸುವ ಯತ್ನವೂ ನಡೆಯುತ್ತಿದ್ದು, ಅದರ ಆಧಾರದಲ್ಲಿ ತನಿಖೆ ಮುಂದುವರಿಸ ಲಾಗುವುದೆಂದು ಪೊಲೀಸರು ತಿಳಿ ಸಿದ್ದಾರೆ. ಅಲ್ಲೇ ಪಕ್ಕದ ಮನೆ ಯೊಂದರ ತ್ಯಾಜ್ಯ ವಸ್ತು ತಂದು ಹಾಕುವ ಸ್ಥಳದಿಂದ …

ಕೆರೆ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಕೆರೆ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಚಿತ್ತಾರಿ ಆಸೀಸಿಯಾ ಅರೇಬಿಕ್ ಕಾಲೇಜಿನ ವಿದ್ಯಾರ್ಥಿ, ಹೊಸದುರ್ಗ ಪಾರಪಳ್ಳಿ ನಿವಾಸಿ ಮುಹಸ್ಸಿದ್ (೧೬) ಸಾವನ್ನಪ್ಪಿದ ದುರ್ದೈವಿ. ಈತ ನಿನ್ನೆ ಸಂಜೆ ಸ್ನೇಹಿತರೊಂದಿಗೆ ಚಿತ್ತಾರಿಯ ಮಸೀದಿ ಕೆರೆಯಲ್ಲಿ ಸ್ನಾನಕ್ಕಿಳಿದಾಗ ದಿಢೀರ್ ನೀರಿನಲ್ಲಿ ಮುಳುಗಿದ್ದಾನೆ. ಅದನ್ನು ಕಂಡ ಇತರರು ತಕ್ಷಣ ಆತನನ್ನು ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾ ಗಲಿಲ್ಲ. ಮೃತದೇಹವನ್ನು ನಂತರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊ ಪಡಿಸಲಾಯಿತು.  ಈ …

ಸ್ಥಳೀಯಾಡಳಿತ ಸಂಸ್ಥೆಗಳನ್ನು ವಿಭಜಿಸಿ ಹೊಸ ಪಂಚಾಯತ್, ನಗರಸಭೆ, ಮಹಾನಗರಪಾಲಿಕೆ ರೂಪೀಕರಿಸಲು ಶಿಫಾರಸು

ಕಾಸರಗೋಡು: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳನ್ನು ವಿಭಜಿಸಿ ಹೊಸ ಗ್ರಾಮ ಪಂಚಾಯತ್, ನಗರಸಭೆ ಹಾಗೂ ಮಹಾ ನಗರಪಾಲಿಕೆ (ಕಾರ್ಪರೇಷನ್)ಗಳಿಗೆ ರೂಪು ನೀಡುವಂತೆ ವಾರ್ಡ್ ವಿಭಜನೆ ಸಂಬಂಧಿಸಿ ಅಧ್ಯಯನ ನಡೆಸಿದ ಉನ್ನತ ಅಧಿಕಾರಿಗಳ ಸಮಿತಿ  ಸರಕಾರಕ್ಕೆ ಶಿಫಾರಸು ಮಾಡಿದೆ. ಈ ಶಿಫಾರಸ್ಸನ್ನು ಸರಕಾರ ಅಂಗೀಕರಿಸಿದ್ದಲ್ಲಿ, ರಾಜ್ಯದಲ್ಲಿ ಈಗಿರುವ ೯೪೧ ಗ್ರಾಮ ಪಂಚಾಯತ್‌ಗಳು, ೮೭ ನಗರಸಭೆಗಳು ಮತ್ತು ೬ ಮಹಾನಗರ ಪಾಲಿಕೆಗಳ ಸಂಖ್ಯೆ ಮುಂದೆ ಹೆಚ್ಚಾಗಲಿದೆ. ಇದರ ಜತೆಗೆ ಜಿಲ್ಲಾ ಪಂಚಾಯತ್‌ಗಳ ವಾರ್ಡ್ ವಿಭಜನೆಯನ್ನೂ ನಡೆಸಬೇಕು. ಆದರೆ ಹೊಸ ಬ್ಲೋಕ್ …

ಸಪ್ಲೈಕೋ, ಅಂಗಡಿಗಳಲ್ಲಿ ಜಿಲ್ಲಾಧಿಕಾರಿ ತಪಾಸಣೆ

ಕಾಸರಗೋಡು: ಸಪ್ಲೈ ಕೋ ಸೂಪರ್ ಮಾರ್ಕೆಟ್, ಮಾವೇಲಿ ಸ್ಟೋರ್, ಖಾಸಗಿ ವ್ಯಾಪಾರ ಸಂಸ್ಥೆಗಳು ಎಂಬೆಡೆಗಳಲ್ಲಿ ಜಿಲ್ಲಾಧಿಕಾರಿ ಕೆ. ಇಂಬಶೇಖರ್‌ರ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ಎಡಿಎಂಕೆ ನವೀನ್ ಬಾಬು, ಜಿಲ್ಲಾ ಸಪ್ಲೈ ಆಫೀಸರ್ ಎ ಸಜಾದ್, ತಾಲೂಕು ಸಪ್ಲೈ ಆಫೀಸರ್, ಲೀಗಲ್ ಮೆಟ್ರೋಲಜಿ ಇನ್ಸ್‌ಪೆಕ್ಟರ್ ಎಂಬಿವರು ಭಾಗವಹಿಸಿದರು. ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದ ಅಂಗಡಿಗಳು, ಹೋಟೆಲ್‌ಗಳು, ಹಣ್ಣು ಹಂಪಲು, ತರಕಾರಿ ಅಂಗಡಿಗಳು, ಪೆರಿಯಾಟಡ್ಕ, ಮಾವೇಲಿ ಸ್ಟೋರ್, ಉದುಮ ಸಪ್ಲೈಕೋ , ಸೂಪರ್ ಮಾರ್ಕೆಟ್ ಎಂಬೆಡೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. …