ಬೆಂಗಳೂರು: ನಿಲ್ಲಿಸಿದ್ದ ರೈಲಿನಲ್ಲಿ ಬೆಂಕಿ ಅಪಘಾತ
ಬೆಂಗಳೂರು: ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಮೆಜಿಸ್ಟಿಕ್) ನಿಂತಿದ್ದ ರೈಲಿಗೆ ಬೆಂಕಿ ಹತ್ತಿಕೊಂಡಿದ್ದು, ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ. ಇಂದು ಬೆಳಿಗ್ಗೆ ೭.೧೦ರ ವೇಳೆ ಘಟನೆ ನಡೆದಿದೆ. ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್‌ನಿಂದ ಹೊರಟಿದ್ದ ಉದಾನ್ ಎಕ್ಸ್‌ಪ್ರೆಸ್ ರೈಲು ಇಂದು ಬೆಳಿಗ್ಗೆ ೫.೪೫ಕ್ಕೆ ಬೆಂಗಳೂರಿಗೆ ತಲುಪಿದೆ. ೭.೧೦ರ ವೇಳೆ ಎರಡು ಬೋಗಿ ಗಳಲ್ಲಿ ಬೆಂಕಿ ಕಾಣಿಸಿಕೊಂ ಡಿದೆ. ಈ ಕೂಡಲೇ ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದೆ. ರೈಲಿನಲ್ಲಿ ಪ್ರಯಾಣಿಕರು ಇರದಿ ದ್ದ ಕಾರಣ ಯಾವುದೇ …