ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ೯೭ ವರ್ಷ ಸಜೆ, ೮.೫ ಲಕ್ಷ ರೂ. ಜುಲ್ಮಾನೆ

ಕಾಸರಗೋಡು: ಬಾಲಕಿಗೆ ಮೂರು ವರ್ಷಗಳ ತನಕದ ಅವಧಿಯಲ್ಲಿ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಮಂಜೇಶ್ವರ, ಕುಂಜತ್ತೂರು ಉದ್ಯಾವರದ ಸಯ್ಯಿದ್ ಮೊಹ ಮ್ಮದ್ ಬಶೀರ್ (೪೧) ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶರಾದ ಎ. ಮನೋಜ್ ಪೋಕ್ಸೋ ಕಾನೂನು ಸೇರಿದಂತೆ ವಿವಿಧ ಸೆಕ್ಷನ್‌ಗಳ ಪ್ರಕಾರ ಒಟ್ಟು ೯೭ ವರ್ಷ ಕಠಿಣ ಸಜೆ ಮತ್ತು ೮.೫ ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಮೊತ್ತವನ್ನು ಕಿರುಕು ಕ್ಕೊಳಗಾದ ಬಾಲಕಿಗೆ …

ಯುವಮೋರ್ಛಾ ನೇತಾರ, ತಂದೆ ನಿಗೂಢ ಸಾವು: ಶಬ್ಧ ಸಂದೇಶ ಕುರಿತು ತನಿಖೆ

ಕುಂಬಳೆ: ಯುವಮೋರ್ಛಾ ನೇತಾರ ಹಾಗೂ ಆತನ ತಂದೆ ನಿಗೂಢ ರೀತಿಯಲ್ಲಿ ಸಾವಿಗೀಡಾದ ಘಟನೆಗೆ ಸಂಬಂಧಿಸಿ ಪ್ರಚಾರ ಮಾಡಲಾದ ಶಬ್ದ ಸಂದೇಶದಲ್ಲಿ ಆರೋಪಿಸಲ್ಪಟ್ಟ ವ್ಯಕ್ತಿಗಳು ಯಾರು? ಈ ಇಬ್ಬರ ಸಾವಿನಲ್ಲಿ ಶಬ್ದ ಸಂದೇಶದಲ್ಲಿ ತಿಳಿಸಲಾದ ನಾಲ್ಕು ಮಂದಿಯ ಪಾತ್ರವೇನು? ಈ ಪ್ರಶ್ನೆಗಿರುವ ಉತ್ತರ ಏನೆಂಬ ಬಗ್ಗೆ ಸಿಗದೆ ಸಂಬಂಧಿಕರು ಹಾಗೂ ನಾಗರಿಕರು ಗೊಂದಲಕ್ಕೀಡಾದ ಬೆನ್ನಲ್ಲೇ ಗುಪ್ತಚರ ವಿಭಾಗಗಳು ತನಿಖೆ ಆರಂಭಿಸಿರುವುದಾಗಿ ಸೂಚನೆಯಿದೆ. ಬಂಬ್ರಾಣ ಕಲ್ಕುಳದ ಮೂಸ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಲೋಕನಾಥ (೫೧) ಎರಡು ದಿನಗಳ ಹಿಂದೆ ಉಳ್ಳಾಲ ಸೋಮೇಶ್ವರ …

ವಂದೇ ಭಾರತ್ ರೈಲಿಗೆ ಮತ್ತೆ ಕಲ್ಲುತೂರಾಟ

ಕಾಸರಗೋಡು: ಕಾಸರಗೋಡು-ತಿರುವನಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ನಿನ್ನೆ ಮತ್ತೆ ಕಲ್ಲು ತೂರಾಟ ನಡೆದಿದೆ. ಈ ರೈಲು ನಿನ್ನೆ ಮುಂಜಾನೆ ೨.೩೦ಕ್ಕೆ ಕಾಸರಗೋಡಿನಿಂದ ತಿರುವನಂತಪುರದತ್ತ ಪ್ರಯಾಣ ಆರಂಭಿಸಿತ್ತು. ಅದು ತಲಶ್ಶೇರಿ ಕಳೆದು ಮಾಹಿಯತ್ತ ಸಾಗುತ್ತಿರುವ ದಾರಿ ಮಧ್ಯೆ ನಿನ್ನೆ ಅಪರಾಹ್ನ ೩.೪೩ರ ವೇಳೆ ಅದರ ಮೇಲೆ ಕಲ್ಲು ತೂರಾಟ ನಡೆದಿದೆ. ಇದ ರಿಂದ ರೈಲಿನ ಒಂದು ಹವಾ ನಿಯಂತ್ರಣ ಬೋಗಿಯ ಗಾಜು ಹಾನಿಗೊಂಡಿದೆ. ಆದರೆ ಯಾರಿಗೂ ಗಾಯ ಉಂಟಾಗಿಲ್ಲ. ಬಳಿಕ  ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹಾನಿ ಗೊಂಡ …

ರಾಜ್ಯದಲ್ಲಿ ವಿದ್ಯುತ್ ಸಂದಿಗ್ಧತೆ ತೀವ್ರ ನಿಯಂತ್ರಣ ಸಾಧ್ಯತೆ: ಸರ್ಚಾರ್ಜ್ ಪರಿಗಣನೆಯಲ್ಲಿ

ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ಸಂದಿಗ್ಧತೆ ತೀವ್ರಗೊಂಡಿದೆ ಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಓಣಂ ಬಳಿಕ ಉತ್ತಮ ಮಳೆ ಸುರಿಯದಿದ್ದಲ್ಲಿ ವಿದ್ಯುತ್ ನಿಯಂತ್ರಣ ಬೇಕಾಗಿ ಬರಲಿದೆ. ಅಲ್ಲದೆ ಸರ್ಚಾರ್ಜ್ ಹೇರುವ ಬಗ್ಗೆಯೂ ಪರಿಗಣೆಯಲ್ಲಿದೆ ಎನ್ನಲಾಗಿದೆ. ಇದೀಗ ಹೊರಗಿನಿಂದ ಹೆಚ್ಚಿನ ಬೆಲೆಗೆ ವಿದ್ಯುತ್  ಖರೀದಿಸಿ ರಾಜ್ಯದಲ್ಲಿ ಬಳಸಲಾಗುತ್ತಿದೆ. ಈ ಮೂಲಕ ಪ್ರತಿದಿನ ೧೦ ಕೋಟಿ ರೂಪಾಯಿಗಳ ನಷ್ಟ ಉಂಟಾಗುತ್ತಿದೆಯೆಂದು  ಕೆ.ಎಸ್. ಇ.ಬಿ ತಿಳಿಸುತ್ತಿದೆ. ಮಳೆ ಕಡಿಮೆ ಯಾಗಿರುವುದು ಹಾಗೂ ಹೊರಗಿನ ಮೂರು ಕಂಪೆನಿಗಳಿಂದ ವಿದ್ಯುತ್ ಖರೀದಿಸಲಿರುವ ಗುತ್ತಿಗೆ ರದ್ದುಪಡಿಸಿ ರುವುದು …

ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಆರೋಪಿಗೆ ರಿಮಾಂಡ್

ಕುಂಬಳೆ: ಮೈದಾನದಲ್ಲಿ ಆಟವಾಡುತ್ತಿದ್ದ ಹತ್ತರ ಹರೆಯದ ಬಾಲಕಿಯನ್ನು ಕಿರುಕುಳ ಉದ್ದೇಶ ದಿಂದ ಪುಸಲಾಯಿಸಿ ಕರೆದೊಯ್ದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ವೀರನಗರದ ಪವಿತ್ರ ಕುಮಾರ್ (೫೫) ಎಂಬಾತನಿಗೆ ರಿಮಾಂಡ್ ವಿಧಿಸಲಾಗಿದೆ. ಮೊನ್ನೆ ಸಂಜೆ ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಆರೋಪಿ ಕಟ್ಟಡದೊಳಗೆ ಕರೆದೊಯ್ಯು ತ್ತಿರುವುದನ್ನು ಕಂಡ ನಾಗರಿಕರು ಆತನನ್ನು ಹಿಡಿದು ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಿದ್ದರು. ಇದರಂತೆ ಆರೋಪಿ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದರು.

ವರದಕ್ಷಿಣೆಗಾಗಿ ಯುವತಿಗೆ ಕಿರುಕುಳ: ಪತಿ ಸಹಿತ  ಮೂವರ ವಿರುದ್ಧ ಕೇಸು

ಕುಂಬಳೆ: ವರದಕ್ಷಿಣೆಗಾಗಿ ಒತ್ತಾಯಿಸಿ ಯುವತಿಗೆ ಕಿರುಕುಳ ನೀಡಿದ ಆರೋಪದಂತೆ ನ್ಯಾಯಾ ಲಯದ ನಿರ್ದೇಶ ಮೇರೆಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪುತ್ತಿಗೆ ಎ.ಕೆ.ಜಿ ನಗರದ ಉದಯ ಶಂಕರ ಭಟ್‌ರ ಪುತ್ರಿ ಶ್ರೀದೇವಿ(೨೯) ನೀಡಿದ ದೂರಿನಂತೆ ಆಕೆಯ ಪತಿ ಪೆರ್ಮುದೆ ಮಾಣಿ ಹೌಸ್‌ನ ಪ್ರದೀಪ್ (೩೩), ಈತನ ತಂದೆ  ಕೇಶವ ಭಟ್ (೬೫), ತಾಯಿ ಸುಗೇಶಿನಿ (೬೦) ಎಂಬಿವರ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶ್ರೀದೇವಿ ಹಾಗೂ ಪ್ರದೀಪರ ಮದುವೆ ೨೦೧೨ರಲ್ಲಿ ನಡೆದಿತ್ತು. ಇದೀಗ ವರದಕ್ಷಿಣೆಗಾಗಿ ಒತ್ತಾಯಿಸಿ …

ಅನಧಿಕೃತ ಹೊಯ್ಗೆ ವಶ

ಕುಂಬಳೆ: ಅನಧಿಕೃತವಾಗಿ ಸಾಗಿಸುತ್ತಿದ್ದ  ಒಂದು ಲೋಡ್ ಹೊಯ್ಗೆಯನ್ನು ಕುಂಬಳೆ ಎಸ್‌ಐ ಗಣೇಶ್ ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಟಿಪ್ಪರ್ ಲಾರಿ ಚಾಲಕ ಮೊಗ್ರಾಲ್ ಕೆ.ಕೆ ಪುರದ ಮೊಹಮ್ಮದ್ ನೌಶಾದ್ (೨೧) ವಿರುದ್ಧ ಕೇಸು ದಾಖಲಿಸಲಾಗಿದೆ. ಕೆ.ಕೆ. ಪುರದ ಅನಧಿಕೃತ ಕಡವಿನಿಂದ ಹೊಯ್ಗೆ ಸಾಗಿಸಲಾಗುತ್ತಿತ್ತೆನ್ನಲಾಗಿದೆ.

ಇಲಿ ವಿಷ ಮಾರಾಟ ವೇಳೆ ಜಾಗ್ರತೆ ವಹಿಸಲು ಜಿಲ್ಲಾಧಿಕಾರಿ ಕರೆ

ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಒಂದು ವರ್ಷದೊಳಗೆ ೨೫ ಮಂದಿ ಇಲಿ ವಿಷ ಸೇವಿಸಿ ಮೃತಪಟ್ಟ ಬಗ್ಗೆ ತಿಳಿದುಬಂದಿದೆ. ಜಿಲ್ಲೆಯ ಸುಪರ್ ಮಾರ್ಕೆಟ್‌ಗಳಲ್ಲಿ, ಗ್ರೋಸರಿ ಅಂಗಡಿಗಳಲ್ಲೂ, ಇತರ ಸಣ್ಣ ಅಂಗಡಿ ಗಳಲ್ಲೂ ಇಲಿ ವಿಷ ಸುಲಭವಾಗಿ ಲಭಿಸುವ ಕಾರಣ ಸಣ್ಣ ಸಮಸ್ಯೆ ಗಳಿಗೂ  ಇಲಿ ವಿಷದಂತ ಹವುಗಳನ್ನು ಖರೀದಿಸಿ ಸೇವಿಸಿ ಆತ್ಮಹತ್ಯೆ ನಡೆಸಲು ಕಾgಣವಾಗತ್ತಿದೆ. ಈ ರೀತಿಯ ವಿಷಗಳನ್ನು  ಮಾರಾಟ ಮಾಡುವ ವೇಳ ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿ ಕರೆ ನೀಡಿದ್ದಾರೆ.

ಬಾಳೆ ಕಡಿದು ತೆರವುಗೊಳಿಸಿದ ಪ್ರಕರಣ ಕೃಷಿಕನಿಗೆ ನಷ್ಟ ಪರಿಹಾರ

ಕೋದಮಂಗಲಂ: ಇಲ್ಲಿನ ವಾರ ಪೆಟ್ಟಿಯಲ್ಲಿ ಕೆಎಸ್‌ಇಬಿ ನೌಕರರು ಬಾಳೆ ತೋಟವನ್ನು ಕಡಿದು ನಾಶ ಗೊಳಿಸಿದ ಘಟನೆಯಲ್ಲಿ ಕೃಷಿಕ ಥೋಮಸ್‌ರಿಗೆ ನಷ್ಟ ಪರಿಹಾರ ನೀಡಲಾಯಿತು. ಶಾಸಕ ಆಂಟನಿ ಜೋನ್ ನೇರವಾಗಿ ತಲುಪಿ ಮೂರೂವರೆ ಲಕ್ಷ ರೂ.ವನ್ನು ಹಸ್ತಾಂತರಿಸಿದ್ದಾರೆ. ನಷ್ಟ ಪರಿಹಾರ ಲಭಿಸಿರುವುದರಿಂದಾಗಿ ಸಂತೋಷ ವಾಗಿದೆ ಎಂದು ಥೋಮಸ್ ಪ್ರತಿಕ್ರಿಯಿಸಿದ್ದಾರೆ. ಅಪಾಯ ಸಾಧ್ಯತೆ ಇದೆ ಎಂದು ಕೃಷಿಕರಿಗೆ ಮುಂದಾಗಿ ತಿಳಿಸುವುದರಲ್ಲಿ ಲೋಪವುಂಟಾಗಿದೆ. ಬಾಳೆಯನ್ನು ಕಡಿದು ತೆರವುಗೊಳಿಸಿದ ಕಾರಣ ಭಾರೀ ಆರ್ಥಿಕ ನಷ್ಟ ಕೃಷಿಕನಿಗೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ನಷ್ಟ್ಟ ಪರಿಹಾರ …

ಓಣಂ ಕಿಟ್ ಹಳದಿ ರೇಶನ್ ಕಾರ್ಡ್‌ನವರಿಗೆ ಮಾತ್ರ

ತಿರುವನಂತಪುರ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿರುವ ರಾಜ್ಯ ಸರಕಾರ ಈ ಬಾರಿಯ ಓಣಂ ಕಿಟ್ ವಿತರಣೆಯನ್ನು ಹಳದಿ ರೇಶನ್ ಕಾರ್ಡ್‌ಗಳಿಗೆ ಮಾತ್ರ ಸೀಮಿತಗೊಳಿಸಿದೆ. ಇದರಂತೆ ರಾಜ್ಯದಲ್ಲಿ ಎ.ಐ.ವೈ (ಅಂತ್ಯೋದಯ ಅನ್ನ ಯೋಜನಾ) ವಿಭಾಗಕ್ಕೆ ಸೇರಿದ ೫,೮೭,೬೯೧ ಕಾರ್ಡ್‌ದಾರರಿಗೆ ಮಾತ್ರ ಈ ಬಾರಿ ರೇಶನ್ ಓಣಂ ಕಿಟ್ ಲಭಿಸಲಿದೆ. ಇದರ ಹೊರತಾಗಿ ಕಲ್ಯಾಣ ಸಂಸ್ಥೆಗಳು ನಡೆಸುತ್ತಿರುವ ವೃದ್ಧಸದನ, ಅನಾಥಾಲಯಗಳಲ್ಲಿ ಕಳೆಯುತ್ತಿರುವ ೨೦,೦೦೦ ಮಂದಿಗೂ ಓಣಂ ಕಿಟ್ ಲಭಿಸಲಿದೆ. ಪ್ರತೀ ಓಣಂ ಕಿಟ್‌ನಲ್ಲಿ ೧೩ ವಿವಿಧ ಸಾಮಗ್ರಿಗಳು ಒಳಗೊಳ್ಳಲಿದೆ. …