ಜಾನುವಾರು ಸಾಗಾಟಗಾರರು- ನಾಗರಿಕರ ಮಧ್ಯೆ ಘರ್ಷಣೆ: ಎರಡು ಕೇಸು ದಾಖಲು

ಮಂಜೇಶ್ವರ: ಅಕ್ರಮವಾಗಿ ಕರ್ನಾಟಕದಿಂದ ಕೇರಳಕ್ಕೆ ಜಾನುವಾರು ಸಾಗಾಟ ನಡೆಸುತ್ತಿದ್ದ  ತಂಡಕ್ಕೆ ನಾಗರಿಕರ ತಂಡವೊಂದು  ತಡೆಯೊಡ್ಡಿದ್ದು, ಈ ವೇಳೆ ಘರ್ಷಣೆ ಉಂಟಾದ ಬಗ್ಗೆ ವರದಿಯಾಗಿದೆ. ನಿನ್ನೆ ಮುಂಜಾನೆ ಕುದ್ದುಪದವು- ಪೆರುವಾಯಿ ಮೂಲಕ ತಂಡವೊಂದು ಗೂಡ್ಸ್ ವಾಹನದಲ್ಲಿ ಐದು ಜಾನುವಾರುಗಳನ್ನು ಸಾಗಿಸುತ್ತಿತ್ತು. ಈ ವೇಳೆ ಮುಳಿಯ ಎಂಬಲ್ಲಿ ನಾಗರಿಕರ ತಂಡ ವಾಹನಕ್ಕೆ ತಡೆಯೊಡ್ಡಿದೆ. ಈ ವೇಳೆ ಜಾನುವಾರು ಸಾಗಾಟಗಾರರು ಹಾಗೂ ತಡೆದ ತಂಡದ ಮಧ್ಯೆ ಘರ್ಷಣೆ ನಡೆದಿದ್ದು, ವಿಷಯ ತಿಳಿದು ಸ್ಥಳಕ್ಕೆ ತಲುಪಿದ ವಿಟ್ಲ ಪೊಲೀಸರು ಎರಡು ತಂಡಗಳ ವಿರುದ್ಧ …

ಅಗ್ನಿಶಾಮಕ ದಳದಿಂದ ಬಾವಿಯೊಳಗೆ ಸಿಲುಕಿದ ವ್ಯಕ್ತಿಯ ರಕ್ಷಣೆ

ಕಾಸರಗೋಡು: ಶುಚೀ ಕರಣಕ್ಕಾಗಿ ಐವತ್ತು ಅಡಿ ಆಳದ ಬಾವಿಗೆ ಇಳಿದು ಕೆಲಸ ಮುಗಿಸಿದ ಬಳಿಕ ಮೇಲಕ್ಕೇರುವ ವೇಳೆ ಜಾರಿ ನೀರಿಗೆ ಬಿದ್ದು ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಕಾಸರಗೋಡು ಅಗ್ನಿಶಾಮಕ ದಳ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ನಗರದ ಅಣಂಗೂರಿನಲ್ಲಿ ನಡೆದಿದೆ. ಅಣಂಗೂರು ಆರಾಫಾ ರಸ್ತೆಯ ಕೊಲ್ಲಂಪಾಡಿ ಹೌಸಿನ ಅಶ್ರಫ್ (೪೦) ಎಂಬವರು ನಿನ್ನೆ ಬೆಳಿಗ್ಗೆ ತಮ್ಮ ಮನೆಯ ೫೦ ಅಡಿ ಆಳದ ಬಾವಿ ಶುಚೀಕರಿಸಲೆಂದು ಇಳಿದಿದ್ದರು. ನಂತರ ಮೇಲ ಕ್ಕೇರುವಾಗ ಹಗ್ಗದಿಂದ ಕೈ ಜಾರಿ ಕೆಳಕ್ಕೆ ಬಿದ್ದು ಬಾವಿಯೊಳಗೆ ಸಿಲುಕಿಕೊಂಡರು. …

ತುರ್ತು ಪರಿಸ್ಥಿತಿ ಹೋರಾಟಗಾರ ಆರ್.ಎಸ್.ಎಸ್‌ನ ಹಿರಿಯ ಘೋಷ್ ಪ್ರಮುಖ್ ಕೆ. ಸುಧಾಕರ ಪ್ರಭು ನಿಧನ

ಕಾಸರಗೋಡು: ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಗಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಸರಗೋಡು ಘಟಕದ ಘೋಷ್ ಪ್ರಮುಖ್ ಹಾಗೂ ಶಾರೀರಿಕ್ ಪ್ರಮುಖ್ ಆಗಿ ದೀರ್ಘ ಕಾಲಸೇವೆ ಸಲ್ಲಿಸಿದ್ದ ಹಿರಿಯ ಸ್ವಯಂ ಸೇವಕ ಹಾಗೂ ನಗರದಲ್ಲಿ ವ್ಯಾಪಾ ರಿಯೂ ಆಗಿರುವ ಕಾಸರಗೋಡು ರೈಲು ನಿಲ್ದಾಣ ಬಳಿಯ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನ ರಸ್ತೆಯ  ಪ್ರಭು ನಿವಾಸದ ಕೆ. ಸುಧಾಕರ ಪ್ರಭು (೭೦) ನಿಧನಹೊಂದಿದರು. ದಿ| ರಾಮ ಪ್ರಭು-ಶಾಂಭವಿ ಪ್ರಭು ದಂಪತಿ ಪುತ್ರರಾಗಿದ ಮೃತ ಸುಧಾಕರ ಪ್ರಭು ಅವರು ಕೆಲವು …

ಭಜನಾ ಮಂದಿರದಿಂದ ಕಳವು

ಕುಂಬಳೆ: ಬಂಬ್ರಾಣ ಬತ್ತೇರಿ ಶಿವಾಜಿನಗರದ ಶ್ರೀ ವೀರಾಂಜ ನೇಯ ಭಜನಾ ಮಂದಿರದಲ್ಲಿ ಕಳವು ನಡೆದಿದೆ. ಮಂದಿರದ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯನ್ನು ದೋ ಚಿದ್ದಾರೆ.  ಹುಂಡಿಯಲ್ಲಿ ಸುಮಾರು ೫೦ ಸಾವಿರ ರೂಪಾಯಿಗಳಿದಿ ರಬಹುದೆಂದು ಅಂದಾಜಿಸಲಾಗಿದೆ. ಮೊನ್ನೆ ರಾತ್ರಿ ಈ ಕಳವು ನಡೆದಿದೆ  ಎನ್ನಲಾಗುತ್ತಿದೆ. ನಿನ್ನೆ ಬೆಳಿಗ್ಗೆ ಇದು ಅರಿವಿಗೆ ಬಂದಿದೆ. ಈ ಬಗ್ಗೆ ಕುಂಬಳ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಲಾಗಿದೆ. ಕೋಲ್ಲಾಪುರದಲ್ಲಿ ಪ್ರಬಲ ಭೂಕಂಪ ಮುಂಬೈ: ಮಹಾರಾಷ್ಟ್ರದ ಕೋಲ್ಲಾಪುರದಲ್ಲಿ ಇಂದು ಬೆಳಿಗ್ಗೆ …

ಸ್ವಾತಂತ್ರ್ಯೋತ್ಸವ ನಾಡಿನಾದ್ಯಂತ ಸಂಭ್ರಮದ ಆಚರಣೆ

ಹೊಸದಿಲ್ಲಿ: ದೇಶದ ೭೭ನೇ ಸ್ವಾತಂತ್ರ್ಯೋತ್ಸವವನ್ನು ದೇಶಾದ್ಯಾಂತ ಸಂಭ್ರಮದಿಂದ ಆಚರಿಸಲಾಯಿತು. ಹೊಸದಿಲ್ಲಿಯಲ್ಲಿ ಪ್ರಧಾನಮಮಂತ್ರಿ ನರೇಂದ್ರ ಮೋದಿ, ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು, ಜಿಲ್ಲಾ ಕೇಂದ್ರಗಳಲ್ಲಿ ಸಚಿವರು ರಾಷ್ಟ್ರ ಧ್ವಜಾರೋಹಣ ನಡೆಸಿದರು. ಬಳಿಕ ನಡೆದ ಪಥ ಸಂಚಲನದ ವಂದನೆ ಸ್ವೀಕರಿಸಿದರು. ಸಶಸ್ತ್ರ ಸೇನೆಗಳು, ಅರೆ ಸೈನಿಕ ವಿಭಾಗಗಳು, ಪೊಲೀಸ್ ವಿಭಾಗಗಳು, ಎನ್‌ಸಿಸಿ-ಸ್ಕೌಟ್ಸ್, ಸ್ಟುಡೆಂಟ್ ಪೊಲೀಸ್ ವಿಭಾU ಗಳು ಎಂಬಿವುಗಳ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಿಂದ ಜರಗಿತು. ಕಲಾ-ಕ್ರೀಡಾ-ಸಾಂಸ್ಕೃತಿಕ ಸಂಘಟನೆಗಳ ನೇತೃತ್ವದಲ್ಲಿ ನಾಡಿನಾದ್ಯಂತ ಸ್ವಾತಂತ್ರೋತ್ಸವ ಆಚರಿಸಲಾಯಿತು. ಶುಚೀಕರಣ, ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳು ಆಚರಣೆಗೆ ಹೆಚ್ಚಿನ …

ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಮದ್ಯ ಬೇಟೆ: ಕಾರಿನಲ್ಲಿ ಸಾಗಿಸಿದ ೩೦೨ ಲೀಟರ್ ಮದ್ಯ ವಶ

ಮಂಜೇಶ್ವರ: ಓಣಂ ಸ್ಪೆಷಲ್ ಡ್ರೈವ್‌ನ ಅಂಗವಾಗಿ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ೩೦೨ ಲೀಟರ್ ಮದ್ಯ ವಶಪಡಿಸಿದರು. ಪೆಟ್ಟಿಗೆಗಳಲ್ಲಿ ಹಾಕಿ ಸಾಗಿಸುತ್ತಿದ್ದ ೧೬೮೦ ಟೆಟ್ರಾ ಪ್ಯಾಕೆಟ್ ಮದ್ಯವನ್ನು ವಶಪಡಿಸಲಾಗಿದೆ. ಈ ಪ್ರಕರಣದಲ್ಲಿ ಪನಯಾಲ್ ದೇವನ್ ಪೊಡಿಚ್ಚಪಾರ ಬಂಗೋಟ್ ನಿವಾಸಿ ಭರತ್ ರಾಜ್ (೩೬)ನನ್ನು ಸೆರೆಹಿಡಿಯಲಾಗಿದೆ. ಓಣಂ ಹಬ್ಬದ ವೇಳೆಯ ವ್ಯಾಪಾರಕ್ಕಾಗಿ ಟ್ಯಾಕ್ಸಿ ಕಾರಿನಲ್ಲಿ ಮದ್ಯ ಸಾಗಿಸಲಾಗಿದೆ. ಇದಕ್ಕೂ ಮೊದಲು ಕಾರಿನಲ್ಲಿ ಸಾಗಿಸುತ್ತಿದ್ದ ೭೨ ಲೀಟರ್ ಮದ್ಯವನ್ನು ವಶಪಡಿಸಲಾಗಿತ್ತು.  ಅಬಕಾರಿ ಇನ್‌ಸ್ಪೆಕ್ಟರ್ ಎಂ. ಯೂನುಸ್‌ರ ನೇತೃತ್ವದಲ್ಲಿ …

ವಾಹನ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಅನಿವಾಸಿ ಕೇರಳೀಯ ಮೃತ್ಯು

ಕಾಸರಗೋಡು: ಸ್ಕೂಟರ್ ಮತ್ತು ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಕಲ್ಲಿಕೋಟೆ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದ ಅನಿವಾಸಿ ಕೇರಳೀಯ ತೃಕ್ಕನ್ನಾಡು ತ್ರಯಂಬಕೇಶ್ವರ ದೇವಸ್ಥಾನ ಬಳಿಯ ಶಿವಕೃಪಾ ನಿವಾಸಿ ಕೆ. ಶ್ರೀಧರ ಅರಳಿತ್ತಾಯ (೫೧) ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಶ್ರೀಧರನವರು ಕಳೆದ ಆದಿತ್ಯವಾರ ಬೆಳಿಗ್ಗೆ ತಳಿಪರಂಬದಿಂದ ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ವೆಳ್ಳೂರು ಕಣಿಯೇರಿ ಮುತ್ತಪ್ಪನ್ ಕ್ಷೇತ್ರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಶ್ರೀಧರರನ್ನು ಮೊದಲು ಕಣ್ಣೂರು ವೈದ್ಯಕೀಯ ಕಾಲೇಜು …

ಚಂದ್ರನ ಕಕ್ಷೆ ತಲುಪಿದ ಬಾಹ್ಯಾಕಾಶ ನೌಕೆ

ಬೆಂಗಳೂರು: ಚಂದ್ರನತ್ತ ೪೦ ದಿನಗಳ ಪ್ರಯಾಣದಲ್ಲಿ ೩೧ ದಿನಗಳನ್ನು ಪೂರ್ಮಗೊಳಿಸಿರುವ ಇಸ್ರೋದ ಚಂದ್ರಯಾನ-೩  ಬಾಹ್ಯಾಕಾಶ ನೌಕೆ ಚಂದ್ರನ ವೃತ್ತಾಕಾರದ  ಕಕ್ಷೆಗೆ (ಮೇಲ್ಮೈ) ತಲುಪಿದೆ.ಇಂದು ಬೆಳಿಗ್ಗೆ ನಾಲ್ಕನೇ ಬಾರಿಗೆ ದೂರವನ್ನು ಮತ್ತಷ್ಟು ಕಡಿಮೆ ಮಾಡಿ ಚಂದ್ರನ ೧೦೦ ಕಿ.ಮಿ. ಸನಿಹಕ್ಷೆ ತಲುಪಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇಂದು ಬೆಳಿಗ್ಗೆ ೮.೩೦ಕ್ಕೆ ನಡೆಸಿದ ನಿಖರವಾದ ಕುಶಲತೆಯು ೧೦೦ ಕಿ.ಮೀ. ವೃತ್ತಾಕಾರದ ಕಕ್ಷೆಯನ್ನು ನೌಕೆ ಪ್ರವೇಶಿಸಿದೆ. ಮೂಲಕ ವೃತ್ತಾಕಾರದ ಹಂತಕ್ಕೆ ಚಾಲನೆ ನೀಡಲಾಗಿದೆ ಎಂದು ಇಸ್ರೋ ತಿಳಿಸಿದೆ. ಚಂದ್ರಯಾನ-೩ನ ಇಸ್ರೋದ …

ನಿಗೂಢ ಸ್ಥಿತಿಯಲ್ಲಿ ಸಾವಿಗೀಡಾದ ಯುವಮೋರ್ಛಾ ನೇತಾರನ ತಂದೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಕುಂಬಳೆ: ನಿಗೂಢ ರೀತಿ ಯಲ್ಲಿ ಸಾವಿಗೀಡಾದ ಯುವ ಮೋರ್ಛಾ ನೇತಾರನ ತಂದೆ  ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದ ದಾರುಣ ಘಟನೆ ನಡೆದಿದೆ. ಬಂಬ್ರಾಣ ಕಲ್ಕುಳದ  ಮೂಸ ಕ್ವಾರ್ಟರ್ಸ್‌ನಲ್ಲಿ  ವಾಸಿಸುತ್ತಿದ್ದ ಲೋಕನಾಥ್ (೫೧) ಎಂಬವರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಕಳೆದ ಸೋಮವಾರ ಬೆಳಿಗ್ಗೆ ೯ ಗಂಟೆ ವೇಳೆ ಇವರು ಮನೆಯಿಂದ ಹೊರಗೆ ತೆರಳಿದ್ದರು. ತೆರಳುವಾಗ ಅವರ ಮೊಬೈಲ್ ಫೋನ್ ನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು. ಮಧ್ಯಾಹ್ನ  ೧೨ ಗಂಟೆ ವೇಳೆ ಅವರ ಮೃತದೇಹ ಉಳ್ಳಾಲ ಸಮುದ್ರದಲ್ಲಿ ಪತ್ತೆಯಾಗಿದೆ. …

ಹೆಣ್ಮಕ್ಕಳ ಮುಂದೆ ನಗ್ನತಾ ಪ್ರದರ್ಶನ:ಆರೋಪಿ ಸೆರೆ

ಕುಂಬಳೆ: ಹೆಣ್ಮಕ್ಕಳ ಮುಂದೆ ನಗ್ನತಾ ಪ್ರದರ್ಶನ ನಡೆಸಿದ ಆರೋಪದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಭಾಸ್ಕರನಗರ ನಿವಾಸಿ ಫ್ಲೋಯಿಡ್ ರುಬಿನ್ ಡಿಸೋಜಾ (೨೦) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಈತ ನಾಲ್ಕು ದಿನಗಳ ಹಿಂದೆ ಶಾಲೆ ಬಿಟ್ಟು ಮನೆಗೆ ನಡೆದು ಹೋಗುತ್ತಿದ್ದ ಹೆಣ್ಮಕ್ಕಳ ಮುಂದೆ ನಗ್ನತಾ ಪ್ರದರ್ಶನ ನಡೆಸಿದ್ದಾನೆಂದು ದೂರಲಾಗಿದೆ. ಮಕ್ಕಳು ಈ ವಿಷಯವನ್ನು ಮನೆಯವರಲ್ಲಿ ತಿಳಿಸಿದ್ದಾರೆ. ಮನೆಯವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಸಿಸಿ ಕ್ಯಾಮರಾ ಗಳನ್ನು ಪರಿಶೀಲಿಸಿದಾಗ ಆರೋ ಪಿಯ ಗುರುತು …