ಮತ್ತೆ ಓರ್ವೆ ಮಹಿಳೆಯ ಚಿನ್ನದ ಸರ ಕಸಿತ: ಇನ್ನೋರ್ವೆಯ ಸರ ಎಗರಿಸಲೆತ್ನ

ಕಾಸರಗೋಡು: ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾಗುವ ಕಳ್ಳರ ಹಾವಳಿ ಯಾವುದೇ ರೀತಿಯ ತಡೆಯಿಲ್ಲದೆ ನಿರ್ಭಯವಾಗಿ ಇನ್ನೂ ಮುಂದುವರಿಯುತ್ತಿದ್ದು,   ಇದರಿಂದ ಮಹಿಳೆಯರು ರಸ್ತೆಗಿಳಿಯಲು ಭಯಪಡುವ ಸ್ಥಿತಿ ಉಂಟಾಗಿದೆ. ಪನಯಾಲ್ ಪಾಕಂ ಆಲಿಂಡಡಿ ಕಳಂಜೋತ್ತ್ ವಳಪಿನ ನಂದನನ್‌ರ ಪತ್ನಿ ಪಿ. ಸಾವಿತ್ರಿ (೫೭) ಎಂಬವರು ನಿನ್ನೆ ಮಧ್ಯಾಹ್ನ ಕೆಲಸದ ಸ್ಥಳದಿಂದ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಆಲಿಂಡಡಿಯಲ್ಲಿ ಸ್ಕೂಟರ್‌ನಲ್ಲಿ ಹಿಂದಿನ ಭಾಗದಿಂದ ಬಂದ ಕಳ್ಳ ಅವರ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಯಲ್ಲಿದ್ದ  …

ವೃದ್ಧ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ನೆಲ್ಲಿಕಟ್ಟೆ: ಸಂಪತ್ತಿಲ ನಿವಾಸಿ ರಾಮ ಪಾಟಾಳಿ (೭೯) ಎಂಬವರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಕಳೆದ ಎಂಟು ತಿಂಗಳಿಂದ ಮುಂಡಿತ್ತಡ್ಕ ಬಳಿಯ ಗುಣಾಜೆ ಕುಂಡಕಟ್ಟ ಎಂಬಲ್ಲಿರುವ ಅಣ್ಣನ ಮಗಳ ಮನೆಯಲ್ಲಿದ್ದರೆನ್ನ ಲಾಗಿದೆ. ರಾಮ ಪಾಟಾಳಿ ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಗುರುವಾರ ಮನೆಯವರು ಎಚ್ಚೆತ್ತು ನೋಡಿದಾಗ ಬೆಡ್‌ರೂಂನಲ್ಲಿ ಫ್ಯಾನ್‌ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರಿಗೆ ಅಲ್ಪ ಕಾಲದಿಂದ ತೀವ್ರ ಅಸೌಖ್ಯ ಬಾಧಿಸಿತ್ತೆನ್ನಲಾಗಿದೆ. ಇದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು …

೨೦೦೦ ರೂ.ನ ಫೋಟೋಸ್ಟಾಟ್ ಬ್ಯಾಂಕ್‌ಗೆ ನೀಡಲು ಯತ್ನ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಎರಡು ಸಾವಿರ ಮುಖಬೆಲೆಯ ಫೋ ಟೋಸ್ಟಾಟ್ ನೋಟುಗಳನ್ನು ಬ್ಯಾಂಕ್‌ನಲ್ಲಿ  ಬದಲಾಯಿಸಲು ನೀಡಿದ  ಇಬ್ಬರ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖ ಲಿಸಿದ್ದಾರೆ. ಉದುಮ ನಿವಾಸಿಗಳಾದ ಅಶೋಕ್ ಕುಮಾರ್ ಮತ್ತು ಅನೂಪ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ರಸ್ತೆಯಲ್ಲಿ ಪರ್ಸೊಂದು ಈ ಇಬ್ಬರಿಗೆ ಲಭಿಸಿತ್ತು. ಅದನ್ನು ತೆರೆದು ನೋಡಿದಾಗ ಅದರಲ್ಲಿ ಅಸಲಿ ೨೦೦೦ ರೂ. ನೋಟುಗಳಂತೆ ತೋರುವ ಏಳು ಫೋಟೋ ಸ್ಟಾಟ್ ನೋಟುಗಳು ಒಳಗೊಂ ಡಿತ್ತು. ಅದನ್ನು ಅವರು ಫೆಡರಲ್ ಬ್ಯಾಂಕ್‌ನ ಉದುಮ ಶಾಖೆಗೆ  ನೀಡಿ …

ರಸ್ತೆ ಬದಿಯಲ್ಲಿ ಅನಧಿಕೃತ ವ್ಯಾಪಾರ: ತೆರವುಗೊಳಿಸಿದ ಪೊಲೀಸರು

ಕಾಸರಗೋಡು: ನಗರ ಸಭೆಯ ಕಾರ್ಡ್ ಹೊಂದದೆ ನಗರದ ಹಳೆ ಬಸ್ ನಿಲ್ದಾಣದ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಬೀದಿ ವ್ಯಾಪಾರ ನಡೆಸುತ್ತಿದ್ದ ಇವರನ್ನು ಕಾಸರಗೋಡು ಡಿವೈಎಸ್‌ಪಿ ಪಿ.ಕೆ. ಸುಧಾಕರನ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಪೊಲೀಸರು ತೆರವುಗೊಳಿಸಿದ್ದರು. ನಗರಸಭೆಯ ಕಾರ್ಡ್ ಇಲ್ಲದ ಯಾರಿಗೂ ರಸ್ತೆ ಬಳಿ ವ್ಯಾಪಾರಕ್ಕೆ ಅನುಮತಿ ನೀಡಲಾಗುವುದಿಲ್ಲವೆಂದು ಡಿವೈಎಸ್‌ಪಿ ಸ್ಪಷ್ಟಪಡಿಸಿದ್ದಾರೆ.

ಗಲಭೆಗೆ ಯತ್ನ:  ಓರ್ವ ಸೆರೆ

ಕುಂಬಳೆ: ಮದ್ಯದಮಲಿನಲ್ಲಿ  ಕುಂಬಳೆ ಪೇಟೆಯಲ್ಲಿ ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆರಿಕ್ಕಾಡಿ ಕಡವತ್‌ನ ಫಾರೂಕ್ ಮೊಹಮ್ಮದ್ (೩೬) ಎಂಬಾತನನ್ನು ಬಂಧಿಸಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ಈತ ಮದ್ಯದಮ ಲಿನಲ್ಲಿ ಗಲಭೆ ಸೃಷ್ಟಿಯಾಗುವ ರೀತಿಯಲ್ಲಿ ವರ್ತಿಸಿದ್ದಾನೆಂದು ದೂರಲಾಗಿದೆ. ಈ ಬಗ್ಗೆ ತಿಳಿದು ಎಸ್ ಐ ವಿ.ಕೆ. ಅನೀಸ್ ತಲುಪಿ ಫಾರೂಕ್ ಮೊಹಮ್ಮದ್‌ನನ್ನು ಬಂಧಿಸಿದ್ದಾರೆ.

ಕೀಯೂರು ಕ್ಷೇತ್ರ ಮುಖ್ಯ ಅರ್ಚಕ ನಿಧನ

ಕಾಸರಗೋಡು: ಚಂದ್ರಗಿರಿ ಕೀಯೂರು ಶ್ರೀ ಧರ್ಮಶಾಸ್ತಾ ಕ್ಷೇತ್ರದ ಮುಖ್ಯ ಅರ್ಚಕ ಸಿ.ಎಚ್.  ಜಯಪ್ರಸಾದ್ (೬೦) ಹೃದಯಾ ಘಾತದಿಂದ ನಿಧನಹೊಂದಿದರು. ಕ್ಷೇತ್ರ ಪರಿಸರದಲ್ಲಿರುವ ಮನೆಯಲ್ಲಿ ನಿನ್ನೆ ರಾತ್ರಿ ಹೃದಯಾಘಾತ ವುಂಟಾಗಿತ್ತು. ಕೂಡಲೇ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ನಿಧನ ಸಂಭವಿಸಿದೆ.  ಚಂದ್ರಗಿರಿ  ಕ್ಷೇತ್ರದ ಮಾಜಿ ಮುಖ್ಯ ಅರ್ಚಕ ಸಿ.ಎಚ್. ವಾಸುದೇವ ಅಡಿಗ-ದಿ| ಕಲ್ಯಾಣಿಯಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಹೇಮಲತಾ, ಮಕ್ಕಳಾದ ಅನುಪ್ರಿಯ(ಎನ್.ಜಿ.ಒ ಕಂಪೆನಿ ಚೆನ್ನೈ), ಸಿ.ಎಚ್. ಅಭಿನಯ (ಬೆಂಗಳೂರಿನಲ್ಲಿ ವಿದ್ಯಾರ್ಥಿ), ಸಹೋದರ-ಸಹೋದರಿಯ ರಾದ ರಾಜೇಶ್ (ಗಲ್ಫ್), ಶೋಭನ (ಪೈವಳಿಕೆ), ಸುಮನ …

ಬ್ಯಾಂಕ್ ಮೆನೇಜರ್ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಬ್ಯಾಂಕ್‌ನ ಮೆನೇಜರ್‌ರೊಬ್ಬರು ನೇಣ ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಡನಾಡು  ಸೇವಾ ಸಹಕಾರಿ ಬ್ಯಾಂಕ್‌ನ ಕಳತ್ತೂರು ಬ್ರಾಂಚ್ ಮೆನೇಜರ್ ನಾರಂಪಾಡಿ ಬಳಿಯ ನೆಲ್ಲಿಯಡ್ಕ  ಪಳ್ಳ ನಿವಾಸಿ ರಾಮಚಂದ್ರ (೪೬) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಇವರು ಮನೆಯ ಬಚ್ಚಲು ಕೋಣೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ರಾಮಚಂದ್ರ ನಿನ್ನೆ ಬ್ಯಾಂಕ್‌ಗೆ ರಜೆ ಹಾಕಿದ್ದರೆನ್ನಲಾಗಿದೆ. ಪತ್ನಿ ಮವ್ವಾರಿನಲ್ಲಿರುವ ತಾಯಿ ಮನೆಗೆ, ಪುತ್ರ ಶಾಲೆಗೆ ತೆರಳಿದ್ದರು. ಇದರಿಂದ ಮನೆಯಲ್ಲಿ ರಾಮಚಂದ್ರ ಒಬ್ಬರೇ ಇದ್ದರೆನ್ನಲಾಗಿದೆ. ಸಂಜೆ …

ನಾರಾಯಣಮಂಗಲದಲ್ಲಿ ಕೆಎಸ್‌ಟಿಪಿ ಬಸ್ ತಂಗುದಾಣ ನಿರ್ಮಾಣಕ್ಕೆ ನಾಗರಿಕರ ತಡೆ

ಕುಂಬಳೆ: ಖಾಸಗಿ ಕಾಲೇಜಿನ ಮುಂಭಾಗ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಚಟುವಟಿಕೆಗೆ ನಾಗರಿಕರು ತಡೆಯೊಡ್ಡಿದ್ದಾರೆ. ನಾರಾಯಣಮಂಗಲದ ಖಾಸಗಿ ಕಾಲೇಜು ಸಮೀಪ ರಸ್ತೆ ಬದಿ ಕೆಎಸ್‌ಟಿಪಿ ನಿರ್ಮಿಸುವ ಬಸ್ ತಂಗು ದಾಣ ಕಾಮಗಾರಿಗೆ ತಡೆಯೊಡ್ಡಲಾಗಿದೆ. ನಿನ್ನೆ ಸಂಜೆ ೭ ಗಂಟೆಗೆ ಈ ಘಟನೆ ನಡೆದಿದೆ. ಕಾಲೇಜಿನಿಂದ ಸುಮಾರು ೧೦೦ ಮೀಟರ್ ಅಂತರದಲ್ಲಿ ಇತ್ತೀಚೆಗೆ ಬಸ್ ತಂಗುದಾಣ ನಿರ್ಮಿಸಲು ಕೆಎಸ್‌ಟಿಪಿ ಅಧಿಕಾರಿಗಳು ಕಾಮಗಾರಿ ಆರಂಭಿಸಿದ್ದರು. ಆದರೆ ಅದರ ನಿರ್ಮಾಣವನ್ನು ಅರ್ಧದಲ್ಲೇ ಉಪೇಕ್ಷಿಸಲಾಗಿದೆ.  ಇದು ನಾಗರಿಕರಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಈ …

ಕಾಳುಮೆಣಸು ಬೇರ್ಪಡಿಸುವ ಯಂತ್ರ ಕಂಡು ಹಿಡಿದ ಪಡ್ರೆಯ ಎಸ್. ಗೋಪಾಲಕೃಷ್ಣ ಶರ್ಮರಿಗೆ ರಾಜ್ಯ ಪ್ರಶಸ್ತಿ

ಪೆರ್ಲ: ಹೊಸ ತರದ ಉತ್ತಮ ಕೃಷಿ ಉಪಕರಣವನ್ನು ಕಂಡುಹಿಡಿಯುವ ಮೂಲಕ ರಾಜ್ಯ ಸರಕಾರದ ಪುರಸ್ಕಾರಕ್ಕೆ ಎಣ್ಮಕಜೆ ಪಡ್ರೆ ಸರಯು ಹೌಸ್‌ನ ಎಸ್. ಗೋಪಾಲಕೃಷ್ಣ ಶರ್ಮ ಆಯ್ಕೆಯಾಗಿದ್ದು, ಅವರು ಸಂತೋಷ ಭರಿತರಾಗಿದ್ದಾರೆ. ಕೃಷಿ ಕೆಲಸಗಳಿಗೆ ಕಾರ್ಮಿಕರ ಕೊರತೆ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾರ್ಮಿಕರ ಅಭಾವದಿಂದಾಗಿ ಸಂದಿಗ್ಧತೆ ಎದುರಿಸುವ ಕೃಷಿಕರಿಗೆ ಸಹಾಯ ಮಾಡಬೇಕೆಂಬ ದೀರ್ಘ ಕಾಲದ ಪ್ರಯತ್ನವೇ ಹೊಸ ಯಂತ್ರ ಪತ್ತೆಗೆ ಗೋಪಾಲಕೃಷ್ಣ ಶರ್ಮರಿಗೆ ಹೇತುವಾಗಿರುವುದು. ನಾಲ್ಕು ವರ್ಷದ ಸತತ ಪ್ರಯತ್ನದಿಂದ ಕಾಳುಮೆಣಸು ಬೇರ್ಪಡಿಸುವ ಯಂತ್ರವನ್ನು ೨೦೧೨ರಲ್ಲಿ ಅವರು …

ಮುಂದುವರಿದ ಸರ ಎಗರಿಸುವ ಕೃತ್ಯ: ಯುವತಿ ಬೊಬ್ಬೆ ಹಾಕಿದಾಗ ದುಷ್ಕರ್ಮಿ ಕೃತ್ಯ ಉಪೇಕ್ಷಿಸಿ ಪರಾರಿ

ಕಾಸರಗೋಡು: ರಸ್ತೆಯಲ್ಲಿ ನಡೆದು ಹೋಗುವ ಮಹಿಳೆಯರ ಕುತ್ತಿಗೆಯಿಂದ ಸರ ಎಗರಿಸುವ ಕೃತ್ಯ ಇದೀಗ ನಿತ್ಯ ಘಟನೆಯಾಗಿ ಮಾರ್ಪಾಡುಗೊಂಡಿದೆ. ನಿನ್ನೆ ಸಂಜೆ ಇಂತಹುದೇ ಘಟನೆ ನಡೆದಿದ್ದು, ಆದರೆ ದುಷ್ಕರ್ಮಿ ಪರಾ ಭವಗೊಂಡು ಪರಾರಿಯಾಗಿದ್ದಾನೆ. ನಿನ್ನೆ ಸಂಜೆ ೫.೧೫ರ ವೇಳೆ ಮೇಲ್ಪರಂಬ ಸಮೀಪ ದೇಳಿಯಲ್ಲಿ ಈ ಘಟನೆ ನಡೆದಿದೆ.  ೨೫ರ ಹರೆಯದ ಯುವತಿ ನಡೆದು ಹೋಗುತ್ತಿದ್ದಾಗ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿ ಆಕೆಯ ಕುತ್ತಿಗೆಗೆ ಕೈ ಹಾಕಿ  ಚಿನ್ನದ ಸರ ಎಗರಿಸಲು ಯತ್ನಿಸಿದ್ದಾನೆ. ಇದನ್ನರಿತ ಯುವತಿ ಬೊಬ್ಬೆ ಹಾಕಿದ್ದು, …