೩.೩೮೬ ಕಿಲೋ ಚಿನ್ನ ವಶ: ಮೂವರ ಸೆರೆ

ಕಾಸರಗೋಡು: ಕಣ್ಣೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಏರ್‌ಪೋರ್ಟ್ ಪೊಲೀಸರು ನಡೆಸಿದ ಕಾರ್ಯಾಚರ ಣೆಯಲ್ಲಿ ೩.೩೮೬ ಕಿಲೋ ಅಕ್ರಮ ಚಿನ್ನ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಉದುಮ ಪೊವ್ವಲ್‌ನ ನಿಜಾಮುದ್ದೀನ್ (೪೪) ಎಂಬಾತನ್ನು ಸೆರೆ ಹಿಡಿದು ಆತನಿಂದ ೧.೧೦೦ ಕೆಜಿ ಚಿನ್ನ ಪತ್ತೆಹಚ್ಚಲಾಗಿದೆ. ಇನ್ನೊಂದೆಡೆ ಕಣ್ಣೂರು ಮಾನಂದೇರಿಯ ನೌಫಲ್ (೪೬) ಎಂಬಾತನಿಂದ ೧.೧೫೬ ಕೆಜಿ ಚಿನ್ನ ಪತ್ತೆಹಚ್ಚಲಾಗಿದೆ. ಇವರಿಬ್ಬರೂ ಅಬುದಾಬಿಯಿಂದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಇದೇ ರೀತಿ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಉದುಮದ ಅಬ್ದುಲ್ …

ಪೆರಿಯ ಅವಳಿ ಕೊಲೆ ಪ್ರಕರಣ: ಎರಡು ಸಾಕ್ಷಿದಾರರಿಗೆ ಭದ್ರತೆ ಒದಗಿಸುವಂತೆ ನ್ಯಾಯಾಲಯ ನಿರ್ದೇಶ

ಕಾಸರಗೋಡು: ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ  ಪೆರಿಯ ಯೂತ್ ಕಾಂಗ್ರೆಸ್ ಕಾರ್ಯ ಕರ್ತರಿಬ್ಬರನ್ನು ಬರ್ಬರವಾಗಿ ಕೊಲೆಗೈದ ಪ್ರಕರಣದ ಸಾಕ್ಷಿದಾರರ ಪೈಕಿ ಇಬ್ಬರಿಗೆ ಪೊಲೀಸ್ ಭದ್ರತೆ ಒದಗಿಸುವಂತೆ  ಈ ಪ್ರಕರಣದ ವಿಚಾರಣೆ ನಡೆಸತ್ತಿರುವ  ಕೊಚ್ಚಿಯ ವಿಶೇಷ ಸಿಬಿಐ ನ್ಯಾಯಾಲ ಯ ಪೊಲೀಸರಿಗೆ ನಿರ್ದೇಶ ನೀಡಿದೆ. ಈ ಕೊಲೆ ಪ್ರಕರಣದ ಸಾಕ್ಷಿದಾರರ ಪೈಕಿ ಓರ್ವ ವೈದ್ಯರೂ  ಸೇರಿದಂತೆ ಇಬ್ಬರು ತಮಗೆ ಸಾಕ್ಷಿ ಹೇಳಿಕೆ ನೀಡುವುದರ ವಿರುದ್ಧ ಕೆಲವು ಸಿಪಿಎಂ ಹಿತೈಷಿಗಳಿಂದ ಬೆದರಿಕೆ ಉಂ ಟಾಗಿದೆಯೆಂದು ಅವರು ಸಾಕ್ಷಿ ಹೇಳಿಕೆ ನೀಡುವ …

ನಿರ್ದೇಶಕ ಸಿದ್ದಿಕ್‌ಗೆ ಹೃದಯಾಘಾತ

ಕೊಚ್ಚಿ: ಮಲಯಾಳ ಚಿತ್ರg ಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾ ಪಕರೂ ಆಗಿರುವ ಸಿದ್ದೀಕ್ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಿದ್ದೀಕ್ ಅವರು ನ್ಯುಮೋನಿಯ ಮತ್ತು ಲಿವರ್‌ಗೆ ಸಂಬಂಧಿಸಿದ ಖಾಯಿಲೆಗಳಿಗೆ ಚಿಕಿತ್ಸೆ ಯನ್ನು ಪಡೆಯುತ್ತಿದ್ದರು. ಇದರ ನಡುವೆ ಅವರಿಗೆ ಹೃದಯಾಘಾತ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಓಣಂ ಹಬ್ಬಕಾಲದ ವೆಚ್ಚಗಳಿಗೆ ಹಣ ಹೊಂದಿಸಲು ಸರಕಾರಕ್ಕೆ ತಲೆಬಿಸಿ

ತಿರುವನಂತಪುರ: ೮ ಸಾವಿರ ಕೋಟಿ ರೂ. ಸರಕಾರಕ್ಕೆ ಓಣಂ ಹಬ್ದ ಕಾಲದಲ್ಲಿ ವೆಚ್ಚಕ್ಕೆ ಬೇಕಾಗಿ ಬರುವುದಾದರೂ ಸಾಲ ತೆಗೆಯುವ ಮೂಲಕ ಸಂಗ್ರಹಿಸಲು ಉದ್ದೇಶಿಸಿ ರುವುದು ೩ ಸಾವಿರ ಕೋಟಿ ರೂ. ಮಾತ್ರವಾಗಿದೆ. ಉಳಿದ ಮೊತ್ತವನ್ನು ಎಲ್ಲಿಂದ ಸಂಗ್ರಹಿಸುವುದು ಎಂಬುದರ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಈ ತಿಂಗಳ ೧೫ರಂದು ರಿಸರ್ವ್ ಬ್ಯಾಂಕ್ ಮೂಲಕ ಸಾಲ ತೆಗೆಯಲು ತೀರ್ಮಾನಿಸಲಾಗಿದೆ. ಉಳಿದ ಮೊತ್ತ ಸರಕಾರದ ತೆರಿಗೆ ಆದಾಯದಿಂದ, ತೆರಿಗೇತರ ಆದಾಯದಿಂದ ಸಂಗ್ರಹಿಸಲು ಉದ್ದೇಶಿಸಲಾಗಿದೆಯಾದರೂ, ಅದರಿಂದ ಅಷ್ಟು ಹಣ ಲಭಿಸದೆಂದು ವಿತ್ತ ಇಲಾಕೆ …

ರಾಹುಲ್ ಗಾಂಧಿಯನ್ನು ವಿವಾಹವಾಗಲು ಸಿದ್ಧವೆಂದು ಶರ್ಲಿನ್ ಚೋಪ್ರ

ಮುಂಬೈ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರನ್ನು  ವಿವಾಹವಾಗಲು ಸಿದ್ಧವೆಂದು ಪ್ರಸಿದ್ಧ ಚಲನಚಿತ್ರನಟಿ ಶರ್ಲಿನ್ ಚೋಪ್ರ ನುಡಿದಿದ್ದಾರೆ. ರಾಹುಲ್ ಗಾಂಧಿಯವರ ವಿರುದ್ಧದ ಅಪಮಾನಕರ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆಗೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್ ತೀರ್ಪಿಗೆ ಸಂಬಂಧಿಸಿ  ಪತ್ರಿಕಾ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರ ಹೇಳುತ್ತಿರುವ ಮಧ್ಯೆ ಶರ್ಲಿನ್ ಚೋಪ್ರ ಈ ವಿಷಯ ತಿಳಿಸಿದ್ದಾರೆ. ನ್ಯಾಯಾಲಯದ  ತೀರ್ಪಿನಲ್ಲಿ ಸಂತೋಷವಿದೆಯೆಂದು ಪ್ರತಿಕ್ರಿಯಿಸಿದ ನಟಿ ರಾಹುಲ್‌ರನ್ನು ವಿವಾಹವಾಗುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ  ‘ಹೌದು’ ಎಂದು ಉತ್ತರಿಸಿದರು.  ಮಾತ್ರವಲ್ಲ ಯಾಕಾಗಿ ರಾಹುಲ್ ಗಾಂಧಿಯವರನ್ನು ವಿವಾಹ ಮಾಡಬಾರದು ಎಂದು …

ಉಜಾರು-ಪುಳಿಕುಂಡ್ ರಸ್ತೆ  ಶೋಚನೀಯ: ನಾಗರಿಕರು ಸಂಕಷ್ಟದಲ್ಲಿ

ಕುಂಬಳೆ: ಶಾಲಾ ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ಪ್ರತಿದಿನ  ನಡೆದಾಡುವ ರಸ್ತೆಯೊಂದು ಹೊಂಡಗಳಿಂದ ತುಂಬಿಕೊಂಡು ಕೆಸರುಗದ್ದೆಯಂತಾಗಿದೆ. ಕುಂಬಳೆ ಪಂಚಾಯತ್‌ನ ಕೊಡ್ಯಮ್ಮೆ ವಾರ್ಡ್‌ನಲ್ಲಿರುವ ಉಜಾರು-ಪುಳಿಕ್ಕುಂಡ್ ರಸ್ತೆಯ ಸ್ಥಿತಿ ಇದಾಗಿದೆ. ಕಳೆದ ಎರಡು ವರ್ಷಗಳಿಂದ ರಸ್ತೆಯ ಸ್ಥಿತಿ ಇದಾಗಿದ್ದರೂ ಇದರ ದುರಸ್ತಿಗೆ ಜನ ಪ್ರತಿನಿಧಿಗಳೋ, ಅಧಿಕಾರಿಗಳೋ ಗಮನಹರಿಸುತ್ತಿಲ್ಲವೆಂದು ನಾಗರಿಕರು ದೂರುತ್ತಿದ್ದಾರೆ.  ಹಲವು ವರ್ಷಗಳ ಹಿಂದೆ ಈ ರಸ್ತೆಗೆ ಡಾಮರೀಕರಣ ನಡೆದಿತ್ತು. ಅನಂತರ ಯಾವುದೇ ಅಭಿವೃದ್ಧಿ ನಡೆದಿಲ್ಲ. ಸುಮಾರು ೨೦೦ ಮೀಟರ್ ರಸ್ತೆ ಶೋಚನೀಯಾವಸ್ಥೆಯಲ್ಲಿದೆ. ಕೆಳಗಿನ ಕೊಡ್ಯಮ್ಮೆ, ಛತ್ರಂಪಳ್ಳ, ಕೊಡ್ಯಮ್ಮೆ ಸರಕಾರಿ …

ವಿಧಾನಸಭೆಯಲ್ಲಿ ಬೆಲೆ ಏರಿಕೆಯ ಸದ್ದು

ತಿರುವನಂತಪುರ: ಅವಶ್ಯಕ ಸಾಮಗ್ರಿಗಳ ಬೆಲೆ ಏರಿಕೆ ವಿಷಯ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಇಂದು ಭಾರೀ ಸದ್ದುಗದ್ದಲ ಸೃಷ್ಟಿಸಿತು. ಬೆಲೆಯೇರಿಕೆ ಬಗ್ಗೆ ವಿರೋಧ ಪಕ್ಷಗಳು ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ತುರ್ತು ಗೊತ್ತುವಳಿ ಮಂಡಿಸಿ, ಆ ಬಗ್ಗೆ ಚರ್ಚೆ ನಡೆಸಬೇಕೆಂದು ಆಗ್ರ ಹಿಸಿದರು. ಆದರೆ ಆ ಗೊತ್ತುವಳಿಯನ್ನು ವಿಧಾನಸಭಾ ಅಧ್ಯಕ್ಷರು ತಿರಸ್ಕರಿಸಿದಾಗ ಅದರಿಂದ ಕುಪಿತರಾದ ವಿಪಕ್ಷಿ ಯರು ಸದನದಲ್ಲಿ ಭಾರೀ ಸದ್ದುಗದ್ದಲ ಸೃಷ್ಟಿಸಿ ಪ್ರತಿಭಟನಾ ಸೂಚಕವಾಗಿ ವಿಧಾನಸಭೆಯಿಂದ ಸಭಾತ್ಯಾಗ ನಡೆಸಿದರು.

ಮಂಗಳೂರಿನಿಂದ ತಿರುವನಂತಪುರ ತನಕದ ರೂಟಿನಲ್ಲಿ  ರೈಲುಗಳ ವೇಗ ಮಿತಿ೧೬೦ ಕಿ.ಮೀ.ಗೇರಿಸುವ ಸಮೀಕ್ಷೆ ಪೂರ್ಣ

ಕಾಸರಗೋಡು: ಮಂಗಳೂರಿನಿಂದ ತಿರುವನಂತಪುರ ತನಕದ ರೈಲ್ವೇ ಹಳಿಯಲ್ಲಿ ರೈಲುಗಳ ವೇಗ ಮಿತಿಯನ್ನು ೧೬೦ ಕಿ.ಮೀಗೇರಿಸುವ ಉದ್ದೇಶದಿಂದ ಆರಂಭಿಸಲಾದ ಸರ್ವೇ ಪೂರ್ಣಗೊಂಡಿದೆ. ಹೆಲಿಕಾಫ್ಟರ್ ಬಳಸಿ ಲೈಟ್ ಡಿಜೆಕ್ಷನ್ ಆಂಡ್  ರೇಂಜಿಂಗ್ (ಲೀಡಾರ್) ಸೌಕರ್ಯ ಬಳಸಿ ಸಮೀಕ್ಷೆ ನಡೆಸಲಾಗಿದೆ. ರೈಲ್ವೇಗಾಗಿ ಹೈದರಾಬಾದ್‌ನ ಆರ್ವಿ ಅಸೋಸಿಯೇಟ್ಸ್ ಈ ಸಮೀಕ್ಷೆ ನಡೆಸಿದೆ.    ಸಮೀಕ್ಷೆಯನ್ನು ಪರಿಶೀಲಿಸಿ ಮಂಗಳೂರಿನಿಂದ ತಿರುವನಂತಪುರ ತನಕದ ರೈಲು ದಾರಿಯಲ್ಲಿರುವ  ತಿರುವು ಪ್ರದೇಶಗಳ ಹಳಿಗಳನ್ನು ಬದಲಾಯಿಸಿ ಅವುಗಳನ್ನು ನೇರಗೊಳಿಸಲಾಗುವುದು. ಮಾತ್ರವಲ್ಲ ಅಗತ್ಯದ ಇತರ ಬದಲಾವಣೆಗಳನ್ನು ತರಲಾಗುವುದು. ಲೀಡಾರ್ ಸರ್ವೇಗಾಗಿ ಹೆಲಿಟಾಕ್ಸಿ ಸರ್ವೇಯನ್ನು   …

ರಾಹುಲ್ ಗಾಂಧಿ ಅನರ್ಹತೆ ರದ್ದು

ನವದೆಹಲಿ:  ಮೋದಿ ಉಪನಾಮೆ ಹೇಳಿಕೆ ಪ್ರಕರಣದಲ್ಲಿ ಸೂರತ್ ಚೀಫ್ ಜ್ಯುಡೀಶಿಯಲ್  ಮೆಜಿಸ್ಟ್ರೇಟ್ ನ್ಯಾಯಾಲಯದಿಂದ ೨ ವರ್ಷ ಶಿಕ್ಷೆಗೊಳಗಾಗಿ ಅದರ ಹೆಸರಲ್ಲಿ ವಯನಾಡ್ ಸಂಸದ ಸ್ಥಾನವನ್ನು ಕಳೆದುಕೊಳ್ಳಬೇಕಾಗಿ ಬಂದ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತನವನ್ನು    ಪುನರ್ ಸ್ಥಾಪಿಸಲಾಗಿದೆ. ಸದಸ್ಯತನ ರದ್ದುಪಡಿಸಿದ ಆದೇಶ ವನ್ನು ವಾಪಸು ಪಡೆದು ಲೋಕಸಭಾ ಕಾರ್ಯದರ್ಶಿಯವರು ಇಂದು ಬೆಳಿಗ್ಗೆ  ಹೊಸ ಅಧಿಸೂಚನೆ ಜ್ಯಾರಿಗೊಳಿಸಿ ದ್ದಾರೆ. ಇದರಿಂದ ರಾಹುಲ್ ಗಾಂಧಿಯವರ ಲೋಕಸಭೆಗೆ ರೀ ಎಂಟ್ರಿ ಹಾದಿ ಸುಗಮಗೊಂಡಿದೆ. ಅವರು ಇಂದು ಮಧ್ಯಾಹ್ನವೇ ಲೋಕಸಭೆಯಲ್ಲಿ ಹಾಜರಾಗುವ …

ಕಾರಿಗೆ ಬೆಂಕಿ ತಗಲಿ ಯುವಕ ಮೃತ್ಯು

ಮಾವೇಲಿಕ್ಕರ: ಕಾರು ಬೆಂಕಿ ಗಾಹುತಿಯಾಗಿ ಯುವಕ ಮೃತಪಟ್ಟ ಘಟನೆ ಮಾವೇಲಿಕ್ಕರ ಕಂಡಿಯೂರ್ ಎಂಬಲ್ಲಿ ನಡೆದಿದೆ. ಕಾರು ಚಲಾಯಿಸಿದ ಮಾವೇಲಿಕ್ಕರ ಪುಳಿಮೂಡ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುವ ಕೃಷ್ಣಪ್ರಕಾಶ್ ಯಾನೇ ಕಣ್ಣನ್ (೩೫) ಮೃತ ದುರ್ದೈವಿ. ಇಂದು ಮುಂಜಾನೆ ೧೨.೩೦ರ ವೇಳೆ ಅಪಘಾತ ಉಂಟಾ ಗಿದೆ. ಕಾರನ್ನು ಮನೆಯತ್ತ ಚಲಾಯಿ ಸುತ್ತಿದ್ದಂತೆ ಭಾರೀ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ. ಕೂಡಲೇ ಬೆಂಕಿ ಹತ್ತಿಕೊಂಡಿದ್ದು, ಇದರಿಂದ ಕೃಷ್ಣಪ್ರಕಾಶ್ ಗಂಭೀರ ಸುಟ್ಟು ಗಾಯಗೊಂಡಿದ್ದರು. ಕೂಡಲೇ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದ್ದು, ಆದರೆ …